Compensation: ಆಸ್ಪತ್ರೆ ಎಡವಟ್ಟಿನಿಂದ ಗರ್ಭಿಣಿ ಸಾವು, 1 ಕೋಟಿ ಪರಿಹಾರ ನೀಡಲು ಕೋರ್ಟ್ ಆದೇಶ!

ಕಾನೂನು ಬಾಹಿರ ಗರ್ಭಪಾತ ಹಾಗೂ ಕಾಳಜಿ ಹಾಗೂ ನುರಿತ ವೈದ್ಯರ ಕೊರತೆಯಿಂದ ದೂರುದಾರರು ಎರಡು ಜೀವಗಳನ್ನು 32 ರ ಹರೆಯದ ತಾಯಿ ಹಾಗೂ ಹಸುಗೂಸನ್ನು ಕಳೆದುಕೊಂಡಿರುವುದಾಗಿ ಆಪಾದಿಸಿದ್ದಾರೆ. ನ್ಯಾಯಪೀಠವು ಆಸ್ಪತ್ರೆ ಹಾಗೂ ಪ್ರಸೂತಿ ತಜ್ಞರಿಗೆ ರೂ 1 ಕೋಟಿ ಪರಿಹಾರವನ್ನು ಮೃತಳ ಮಗಳಿಗೆ ನೀಡಬೇಕೆಂದು ತೀರ್ಪಿತ್ತಿದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಶ್ರೀ ಮೂಲ್‌ಚಂದ್ ಕೈರಾಟಿ ರಾಮ್ ಆಸ್ಪತ್ರೆ ಹಾಗೂ ಆಯುರ್ವೇದಿಕ್ ರೀಸರ್ಚ್ ಇನ್‌ಸ್ಟಿಟ್ಯೂಟ್ ಹಾಗೂ ಸಂಸ್ಥೆಯ ಪ್ರಸೂತಿ ತಜ್ಞರು 2003 ನೇ ಇಸವಿಯಲ್ಲಿ ಗರ್ಭಾವಸ್ಥೆಯ 26 ನೇ ವಾರದಲ್ಲಿ MTP (ಔಷಧದ ಮೂಲಕ ಗರ್ಭಾವಸ್ಥೆಯನ್ನು ಕೊನೆಗೊಳಿಸುವ ಪ್ರಕ್ರಿಯೆ) ಕೈಗೊಂಡಿದ್ದು ಈ ಪ್ರಕ್ರಿಯೆಯ ಸಮಯದಲ್ಲಿ ಗರ್ಭಿಣಿ (pregnant) ಹಾಗೂ ಶಿಶು (Baby) ಕೊನೆಯುಸಿರೆಳೆದಿದ್ದು, ರಾಷ್ಟ್ರೀಯ ಗ್ರಾಹಕ ವಿವಾದಗಳ ಪರಿಹಾರ ನ್ಯಾಯಾಲಯ ಆಸ್ಪತ್ರೆ, ವೈದ್ಯರು ಹಾಗೂ ರೀಸರ್ಚ್ ಇನ್‌ಸ್ಟಿಟ್ಯೂಟ್ ಅನ್ನು ದೋಷಿಗಳೆಂದು ತೀರ್ಪು ಹೊರಡಿಸಿದೆ. ಉನ್ನತ ನ್ಯಾಯಾಲಯವು ಗಮನಿಸಿರುವಂತೆ ರೋಗಿ (patient) ಹಾಗೂ ರೋಗಿಯ ಸಂಬಂಧಿಕರು ಭ್ರೂಣದ (embryo) ಸಂಭಾವ್ಯ ಅಸಹಜತೆಗಳ ಕಾರಣಗಳನ್ನು ನೀಡಿ ಗರ್ಭಪಾತಕ್ಕೆ ಮನಸ್ಸು ಮಾಡಿದ್ದರು.

ನ್ಯಾಯಾಲಯ ಗಮನಿಸಿರುವಂತೆ ರೋಗಿ ಇಲ್ಲವೇ ಅವರ ಸಂಬಂಧಿಕರು ಗರ್ಭಾವಸ್ಥೆಯನ್ನು ಕೊನೆಗೊಳಿಸಲು ಒತ್ತಾಯಿಸುತ್ತಿದ್ದಲ್ಲಿ MTP ಕಾಯ್ದೆ 1971 ರ ಪ್ರಕಾರ ಆಸ್ಪತ್ರೆಯು ಪ್ರಕ್ರಿಯೆಗೆ ಬದ್ಧವಾಗಿದೆ ಆದರೆ ಗರ್ಭಾವಸ್ಥೆಯ 26/28 ನೇ ವಾರದಲ್ಲಿ ಗರ್ಭಪಾತವನ್ನು ಕೊನೆಗೊಳಿಸುವಂತಿಲ್ಲ ಎಂದಾಗಿದೆ.

ಮೃತಳ ಮಗಳಿಗೆ  1 ಕೋಟಿ ರೂ ಪರಿಹಾರ
ಈ ಹೇಳಿಕೆಗೆ ಅನುಗುಣವಾಗಿ ನ್ಯಾಯಪೀಠವು ಆಸ್ಪತ್ರೆ ಹಾಗೂ ಪ್ರಸೂತಿ ತಜ್ಞರಿಗೆ ರೂ 1 ಕೋಟಿ ಪರಿಹಾರವನ್ನು ಮೃತಳ ಮಗಳಿಗೆ ನೀಡಬೇಕೆಂದು ತೀರ್ಪಿತ್ತಿದೆ. ಪ್ರಕರಣವು ಡಾ. ರೂಪ ದತ್ತಾರಿಗೆ ಸಂಬಂಧಿಸಿದ್ದು, ಶ್ರೀ ಮೂಲ್ ಚಂದ್ ಕೈರಾಟಿ ರಾಮ್ ಆಸ್ಪತ್ರೆ ಹಾಗೂ ಆಯುರ್ವೇದಿಕ್ ರೀಸರ್ಚ್ ಇನ್‌ಸ್ಟಿಟ್ಯೂಟ್‌ನ ಡಾ. ರಾಜ್ ಬೊಕರಿಯಾ ಅವರ ಸುಪರ್ದಿಯಲ್ಲಿ ರೂಪ 2003 ರಲ್ಲಿ ತಮ್ಮ ಎರಡನೇ ಗರ್ಭಾವಸ್ಥೆಗಾಗಿ ಚಿಕಿತ್ಸೆ ಪಡೆಯುತ್ತಿದ್ದರು.

ಘಟನೆ ಏನು
ರೂಪ ಅಸ್ತಮಾ ರೋಗಿಯಾಗಿದ್ದರೂ ಆರೋಗ್ಯವಾಗಿದ್ದರು. ಭ್ರೂಣದ ಇಕೋ ಕಾರ್ಡಿಯೋಗ್ರಫಿ ಮಾಡಿದ ನಂತರ ಹೊಕ್ಕುಳಿನ ನಾಡಿ ಅಳಿಸಿದಂತೆ ಕಂಡಿದ್ದರೂ ಯಾವುದೇ ಅಭಿವೃದ್ಧಿ ವೈಪರೀತ್ಯಗಳಿರಲಿಲ್ಲ. ಅಂತೆಯೇ ಭ್ರೂಣದ ಗರ್ಭಾಶಯದ ಬೆಳವಣಿಗೆಯಲ್ಲಿ (IUGR) ಕುಂಠಿತವಿರಲಿಲ್ಲ. ಈ ವರದಿಗಳನ್ನು ಆಧರಿಸಿ ಸಂಬಂಧ ಪಟ್ಟ ಪ್ರಸೂತಿ ತಜ್ಞರು ಭ್ರೂಣದ ಪರೀಕ್ಷೆಯನ್ನು ಶ್ರೀ ಗಂಗಾ ರಾಮ್ ಆಸ್ಪತ್ರೆಯಲ್ಲಿ ಮಾಡಿಸುವಂತೆ ಹೇಳಿದರು.

ಯಾವುದೇ ವಿಳಂಬವಿಲ್ಲದೆ ಪರೀಕ್ಷೆ ಮಾಡಿಸಲಾಯಿತು ಹಾಗೂ ಎರಡು ವಾರಗಳ ನಂತರ ವರದಿ ಲಭ್ಯವಾಗುತ್ತದೆ ಎಂಬುದನ್ನು ತಿಳಿಸಲಾಯಿತು. ಇದರ ನಡುವೆಯೇ ರೇಡಿಯೋಲಜಿಸ್ಟ್ ಡಾ. ಕುರಾನಾ ನೇತೃತ್ವದಲ್ಲಿ ಮೂರನೇ ಯುಎಸ್‌ಜಿಯನ್ನು ಮಾಡಲಾಯಿತು ವರದಿಯ ಅನ್ವಯ ಹೊಕ್ಕುಳ ಬಳ್ಳಿಯು ಒಂದೇ ಹೊಕ್ಕುಳ ನಾಡಿಯನ್ನು ತೋರಿಸಿದ್ದು ಯಾವುದೇ ನ್ಯೂನತೆಯ ಅಸಂಗತತೆಯನ್ನು ವಿವರಿಸಿಲ್ಲ ಎಂದಾಗಿದೆ.

ಇದನ್ನೂ ಓದಿ: Shocking News: ಛೇ! ಬೆಕ್ಕಿನ ಕೂಗಿಗೆ ಅಮಾಯಕ ಬಲಿ! ದಾರುಣ ಘಟನೆ ಬಯಲಿಗೆ

ಇನ್ನು ದೂರುದಾರರು (ಮೃತ ವೈದ್ಯೆಯ ಸಂಬಂಧಿಕರು) ಹೇಳಿರುವಂತೆ ಪ್ರಸೂತಿ ತಜ್ಞರು ವಿಚಾರ ವಿಮರ್ಶೆ ಮಾಡದೆಯೇ ಭ್ರೂಣದಲ್ಲಿ ವರ್ಣತಂತು 22ಪಿಎಸ್+ ಕಂಡುಬಂದಿದೆ ಹಾಗೂ ಭ್ರೂಣದ IUGR ಒಂದೇ ಹೊಕ್ಕುಳ ನಾಭಿಯನ್ನು ತೋರಿಸಿದ್ದು ಶಿಶುವಿಗೆ ಆರೋಗ್ಯ ಸಮಸ್ಯೆಗಳನ್ನು ತಂದೊಡ್ಡಬಹುದು ಎಂದು ತಿಳಿಸಿ ಗರ್ಭಾಸ್ಥೆಯನ್ನು ಕೂಡಲೇ ಕೊನೆಗೊಳಿಸಬೇಕೆಂದು ಹೇಳಿರುವುದಾಗಿ ದೂರಿದ್ದಾರೆ.

ಬ್ರಾಂಕೋಸ್ಪಾಸ್ಮ್‌ನಿಂದ ಬಳಲುತ್ತಿದ್ದ ಯುವತಿ
ವೈದ್ಯರ ಸಲಹೆಯ ಮೇರೆಗೆ ಗರ್ಭಿಣಿಯನ್ನು 6.10.2003 ರಂದು ಮೂಲ್‌ಚಂದ್ ಆಸ್ಪತ್ರೆಯಲ್ಲಿ ದಾಖಲಿಸಲಾಯಿತು. ಹೊಕ್ಕುಳ ಬಳ್ಳಿ ಹೊರಹಾಕದೇ ಇದ್ದುದರಿಂದ ಹೊಕ್ಕುಳ ಬಳ್ಳಿಯನ್ನು ಸರ್ಜರಿಯ ಮೂಲಕ ತೆಗೆಯುವ ನಿಟ್ಟಿನಲ್ಲಿ ಆಕೆಯನ್ನು ಆಪರೇಶನ್ ಥಿಯೇಟರ್‌ಗೆ ವರ್ಗಾಯಿಸಲಾಯಿತು. ಅರಿವಳಿಕೆಯನ್ನು ನೀಡುವ ಮುನ್ನವೇ ರೋಗಿಯು ವಾಂತಿ ಹಾಗೂ ಉಸಿರನ್ನು ಎಳೆದುಕೊಳ್ಳುವುದರೊಂದಿಗೆ ಬ್ರಾಂಕೋಸ್ಪಾಸ್ಮ್‌ನಿಂದ (ಶ್ವಾಸನಾಳವನ್ನು ಜೋಡಿಸುವ ಸ್ನಾಯುಗಳು ಬಿಗಿಯಾದಾಗ ಉಂಟಾಗುತ್ತದೆ) ಬಳಲಿದರು. ರೋಗಿಗೆ ತುರ್ತು ಚಿಕಿತ್ಸೆಗಳನ್ನು ನೀಡುವ ಪ್ರಕ್ರಿಯೆಯನ್ನು ಕೂಡಲೇ ಕೈಗೊಂಡರೂ ರೋಗಿಯು ಬದುಕಲಿಲ್ಲ

ವೈದ್ಯರ ವಿರುದ್ದ 2012 ರಲ್ಲಿ ಎಫ್‌ಐಆರ್ ದಾಖಲು
ಕಾನೂನು ಬಾಹಿರ ಗರ್ಭಪಾತ ಹಾಗೂ ಕಾಳಜಿ ಹಾಗೂ ನುರಿತ ವೈದ್ಯರ ಕೊರತೆಯಿಂದ ದೂರುದಾರರು ಎರಡು ಜೀವಗಳನ್ನು 32 ರ ಹರೆಯದ ತಾಯಿ ಹಾಗೂ ಹಸುಗೂಸನ್ನು ಕಳೆದುಕೊಂಡಿರುವುದಾಗಿ ಆಪಾದಿಸಿದ್ದಾರೆ.

ಇದನ್ನೂ ಓದಿ:  Lumpy Skin Disease: ಜಾನುವಾರುಗಳಿಗೆ ಚರ್ಮ ಗಂಟುರೋಗದ ಕಂಟಕ! ಭಾರತದಲ್ಲಿ ಹೈನುಗಾರಿಕೆಯ ಭವಿಷ್ಯವೇನು?

ಈ ಆಪಾದನೆಗಳಿಗೆ ಅನುಸಾರವಾಗಿ ಮೃತರ ಪತಿ ಹಾಗೂ ಮಗಳು ಮತ್ತು ಸಂಬಂಧಿಕರು 3 ಕೋಟಿ ಪರಿಹಾರವನ್ನು ಕೋರಿ NCDRC ಅನ್ನು ಸಂಪರ್ಕಿಸಿದರು. ವೈದ್ಯರ ವಿರುದ್ದ 2012 ರಲ್ಲಿ ಎಫ್‌ಐಆರ್ ಅನ್ನು ದಾಖಲಿಸಲಾಯಿತು. ಇನ್ನು ನಿರ್ಲಕ್ಷ್ಯದ ಆಪಾದನೆಯನ್ನು ಅಲ್ಲಗೆಳೆದಿರುವ ವೈದ್ಯರು ರೋಗಿಯು ವೃತ್ತಿಪರ ಸಹೋದ್ಯೋಗಿಯಾಗಿರುವುದರಿಂದ ಯಾವುದೇ ಶುಲ್ಕಗಳನ್ನು ಪಡೆದಿಲ್ಲ ಎಂದು ತಿಳಿಸಿದ್ದಾರೆ. ದಂಪತಿಗಳ ಒಪ್ಪಿಗೆಯನ್ನು ಪಡೆದುಕೊಂಡು ಹಾಗೂ ಮುಂದೊದಗಬಹುದಾದ ಅಪಾಯಗಳನ್ನು ತಿಳಿಸಿಯೇ ಗರ್ಭಪಾತ ಪ್ರಕ್ರಿಯೆಯನ್ನು ಕೈಗೊಂಡಿರುವುದಾಗಿ ವೈದ್ಯರು ಆಪಾದಿಸಿದ್ದಾರೆ.
Published by:Ashwini Prabhu
First published: