ಯಾವುದೋ ಲಸಿಕೆ ಕೊಟ್ಟ Homeopathy ವೈದ್ಯ; ಪಾಪಾ... ರೋಗಿಯ ಜೀವವೇ ಹೋಯಿತು...!

ವೈದ್ಯರು ತಪ್ಪಾದ ಚುಚ್ಚುಮದ್ದನ್ನು ನೀಡಿದ 2 ದಿನಗಳ ನಂತರ ರೋಗಿಯು ಸೋಂಕಿಗೆ ಒಳಗಾಗಿ,  ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಾಂದರ್ಭೀಕ ಚಿತ್ರ

ಸಾಂದರ್ಭೀಕ ಚಿತ್ರ

  • Share this:
ಮಧ್ಯಪ್ರದೇಶದ ಖಾಂಡ್ವಾ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬನಿಗೆ ತಪ್ಪು ಚುಚ್ಚುಮದ್ದು ನೀಡಿ ಸಾವಿಗೆ ಕಾರಣವಾದ ಆರೋಪದ ಮೇಲೆ ಹೋಮಿಯೋಪತಿ ವೈದ್ಯರನ್ನು(Homeopathic Doctor) ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಖಾಂಡ್ವಾ ಜಿಲ್ಲೆಯ ಸಿಂಧಿ ಕಾಲೋನಿಯಲ್ಲಿ ಕ್ಲಿನಿಕ್ ನಡೆಸುತ್ತಿರುವ ದೀಪಕ್ ವಿಶ್ವಕರ್ಮ(Deepak Vishwakarma) ಎಂಬ ಆರೋಪಿ ಹೋಮಿಯೋಪತಿ ವೈದ್ಯರನ್ನು ಐಪಿಸಿ ಮತ್ತು ಸಂಸದ ಆಯುರ್ವಿಜ್ಞಾನ ಪರಿಷತ್ (Ayurveda Parishad Act) ಅಧಿನಿಯಂನ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಬಂಧಿಸಲಾಗಿದೆ ಎಂದು ನಗರ ಪೊಲೀಸ್ ವರಿಷ್ಠಾಧಿಕಾರಿ (CSP) ಲಲಿತ್ ಗಾತ್ರೆ(Lalit Gotra) ತಿಳಿಸಿದ್ದಾರೆ.

ಕ್ಲಿನಿಕ್ ಸೀಲ್
ವ್ಯಾಪಾರಿಗೆ ತಪ್ಪು ಚುಚ್ಚುಮದ್ದನ್ನು ನೀಡಿದ್ದಕ್ಕಾಗಿ ಅವರ ವಿರುದ್ಧ ದೂರು ದಾಖಲಿಸಿದ ನಂತರ ಹೋಮಿಯೋಪತಿ ವೈದ್ಯರ ಕ್ಲಿನಿಕ್ ಅನ್ನು ಸಹ ಸೀಲ್ ಮಾಡಲಾಗಿದೆ ಎಂದು ಅಧಿಕಾರಿ ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ. ತನಿಖೆಯ ಸಮಯದಲ್ಲಿ, ಹೋಮಿಯೋಪತಿ ವೈದ್ಯರಾದ ವಿಶ್ವಕರ್ಮ ಅವರು ತಮ್ಮ ರೋಗಿ ದೀಪಕ್ ಆರತಾನಿಗೆ ಅಲೋಪತಿ ಔಷಧಿಗಳನ್ನು ನೀಡಿದ್ದರು ಎಂದು ಪೊಲೀಸರು ಕಂಡುಕೊಂಡಿದ್ದಾರೆ ಎಂದು ಮಧ್ಯಪ್ರದೇಶದ ಖಾಂಡ್ವಾದ ಮೊಘಾಟ್ ರೋಡ್ ಪೊಲೀಸ್ ಠಾಣೆಯ ಈಶ್ವರ್ ಸಿಂಗ್ ಚೌಹಾಣ್ ಹೇಳಿದ್ದಾರೆ.

ವೈದ್ಯರು ತಪ್ಪಾದ ಚುಚ್ಚುಮದ್ದನ್ನು ನೀಡಿದ 2 ದಿನಗಳ ನಂತರ ರೋಗಿಯು ಸೋಂಕಿಗೆ ಒಳಗಾಗಿ,  ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಸರಿಯಾದ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ ಎಂಬುದನ್ನು ಜನರು ಒತ್ತಾಯಿಸಿದ್ದಾರೆ. ಈ ಪ್ರಕರಣದ ತನಿಖೆ ನಡೆಯುತ್ತಿರುವುದರಿಂದ ಯಾವ ಕ್ರಮ ಕೈಗೊಳ್ಳಲಾಗುತ್ತದೆ ಎಂಬುದನ್ನು ಸದ್ಯಕ್ಕೆ ಜನರಲ್ಲಿ ಕುತುಹಲ ಮೂಡಿದೆ.

ಇದನ್ನೂ ಓದಿ: Rare Disease: ದಿನಕಳೆದಂತೆಲ್ಲಾ ಕಲ್ಲಾಗುತ್ತಿದೆ 5 ತಿಂಗಳ ಮಗುವಿನ ದೇಹ, ಇದೆಂಥಾ ಖಾಯಿಲೆ ?

ಮಹಾರಾಷ್ಟ್ರದಲ್ಲಿ ತಪ್ಪು ಇಂಜೆಕ್ಷನ್‌ಗೆ ಬಲಿಯಾದ ಮಗು..!
ಮಹಾರಾಷ್ಟ್ರದ ಗೋವಂಡಿಯ ಬೈಗನವಾಡಿಯಲ್ಲಿ ನರ್ಸಿಂಗ್ ಹೋಮ್‌ನ ಕಸ ಗುಡಿಸುವ ಅಪ್ರಾಪ್ತ ಬಾಲಕಿ ತಪ್ಪಾದ ಚುಚ್ಚುಮದ್ದನ್ನು ನೀಡಿದ್ದರಿಂದ 2 ವರ್ಷದ ಮಗು ಮೃತಪಟ್ಟಿದೆ ಎಂದು ಗುರುವಾರ ವರದಿಯಾಗಿದೆ. ಈ ಪ್ರಕರಣ ಸಂಬಂಧ ಶಿವಾಜಿ ನಗರ ಪೊಲೀಸರು ಕಸ ಗುಡಿಸುವ ಸಿಬ್ಬಂದಿ, ವೈದ್ಯರು, ನಿವಾಸಿ ವೈದ್ಯಕೀಯ ಅಧಿಕಾರಿ (RMO) ಮತ್ತು ನರ್ಸ್ ಸೇರಿ ನಾಲ್ವರು ಸಿಬ್ಬಂದಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಕಸಗುಡಿಸುವ ಬಾಲಕಿ ಅಪ್ರಾಪ್ತೆಯಾಗಿದ್ದು, ಆಕೆಗೆ ಕೇವಲ 17 ವರ್ಷ ವಯಸ್ಸಾಗಿದೆ, ಆದ್ದರಿಂದ ಪೊಲೀಸರು ಆಕೆಯ ವಿರುದ್ಧ ಬಾಲನ್ಯಾಯ ಕಾಯ್ದೆಯಡಿ ಮೊಕದ್ದಮೆ ಹೂಡಿದ್ದಾರೆ. ಆದರೆ, ಈ ಪ್ರಕರಣ ಸಂಬಂಧ ಈವರೆಗೂ ಯಾರನ್ನೂ ಬಂಧಿಸಿರಲಿಲ್ಲ.

ಬದಲಾದ ಔಷಧ
ಈ ಘಟನೆಯ ಸಂಬಂಧ ಮಾಹಿತಿ ನೀಡಿದ ಸ್ಥಳೀಯ ಪೊಲೀಸರು, ಜನವರಿ 12 ರಂದು, 2 ವರ್ಷದ ಬಾಲಕ ತಹಾ ಖಾನ್‌ಗೆ ಜ್ವರ ಬಂದಿದೆಯೆಂದು ಬಾಲಕನನ್ನು ಬೈಗನವಾಡಿಯ ನೂರ್ ನರ್ಸಿಂಗ್ ಹೋಂಗೆ ದಾಖಲಿಸಲಾಗಿತ್ತು. ಆದರೆ, ವೈದ್ಯರು, ಮನೆಗೆ ತೆರಳುವ ಮೊದಲು, ಮತ್ತೊಬ್ಬ ರೋಗಿಗೆ, ಅಂದರೆ 16 ವರ್ಷದ ಬಾಲಕನಿಗೆ ಅಜಿತ್ರೋಮೈಸಿನ್ ಔಷಧವನ್ನು ಚುಚ್ಚುಮದ್ದು ಮಾಡಲು RMO ಅನ್ನು ಕೇಳಿದ್ದರು. ಆದರೆ, RMO ಲಭ್ಯವಿರಲಿಲ್ಲ ಮತ್ತು ಅವರು ಪ್ರತಿಯಾಗಿ, ಹದಿಹರೆಯದ ರೋಗಿಗೆ ಔಷಧವನ್ನು ನೀಡಲು ನರ್ಸ್ ಅನ್ನು ಕೇಳಿದರು. ಆದರೆ, ನರ್ಸ್ ಈ ಬಗ್ಗೆ ಯಾವುದೇ ಗಮನ ಕೊಡಲಿಲ್ಲ.

ಇದನ್ನೂ ಓದಿ: Explained: ಕೋವಿಡ್ ಸಂದರ್ಭದ ಸಂಜೀವಿನಿ‌ Dolo650 ವಿಶೇಷತೆ ಏನು? ಡೀಟೆಲ್ಸ್

ಈ ಕಾರಣಕ್ಕೆ ಕಸ ಗುಡಿಸುವ ಬಾಲಕಿ, ತಾನು ಚುಚ್ಚುಮದ್ದು ನೀಡಬಹುದೇ ಎಂದು ಕೇಳಿದಳು. ಆದರೆ, 16 ವರ್ಷದ ಬಾಲಕಿಗೆ ಇಂಜೆಕ್ಷನ್‌ ನೀಡುವ ಬದಲು ಆಕೆ 2 ವರ್ಷದ ಬಾಲಕನಿಗೆ ನೀಡಿದ್ದಾಳೆ. ಆ ಚುಚ್ಚುಮದ್ದು ನೀಡಿದ ಕೆಲವೇ ನಿಮಿಷಗಳಲ್ಲಿ ಬಾಲಕ ಮೃತಪಟ್ಟಿದ್ದಾನೆ ಎಂದು ಶಿವಾಜಿ ನಗರ ಪೊಲೀಸ್ ಠಾಣೆಯ ಹಿರಿಯ ಇನ್ಸ್‌ಪೆಕ್ಟರ್ ಅರ್ಜುನ್ ರಾಜನ್ ತಿಳಿಸಿದ್ದಾರೆ. ಈ ಹಿನ್ನೆಲೆ ಪೊಲೀಸರು ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 304 (II) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.
Published by:vanithasanjevani vanithasanjevani
First published: