• Home
  • »
  • News
  • »
  • trend
  • »
  • Viral Video: ಈ ಆಟೋ ಡ್ರೈವರ್ ಜ್ಞಾನ ನೋಡಿದ್ರೆ ಮೂಗಿನ ಮೇಲೆ ಬೆರಳು ಇಟ್ಕೊತ್ತೀರಿ ; ವಿಡಿಯೋ ವೈರಲ್

Viral Video: ಈ ಆಟೋ ಡ್ರೈವರ್ ಜ್ಞಾನ ನೋಡಿದ್ರೆ ಮೂಗಿನ ಮೇಲೆ ಬೆರಳು ಇಟ್ಕೊತ್ತೀರಿ ; ವಿಡಿಯೋ ವೈರಲ್

ಆಟೋ ಡ್ರೈವರ್

ಆಟೋ ಡ್ರೈವರ್

ನಾನು ಯುರೋಪ್‌ ದೇಶ ಅಂತ ಹೇಳಿದ ತಕ್ಷಣ ಆಟೋ ಚಾಲಕ ರಾಮದೇವ್‌ ಎಲ್ಲಾ 44 ಯುರೋಪಿಯನ್ ರಾಷ್ಟ್ರಗಳ ಹೆಸರನ್ನು ವರ್ಣಮಾಲೆಯ ಕ್ರಮದಲ್ಲಿ ಹೇಳಿದರು

  • Trending Desk
  • 3-MIN READ
  • Last Updated :
  • Share this:

ಇಂದು ಸೋಶಿಯಲ್‌ ಮೀಡಿಯಾಗಳು (Social Media) ಸೂಪರ್‌ ಫಾಸ್ಟ್‌ (Super Videos) ಆಗಿ ಬೆಳೆಯುತ್ತಲೇ ಇವೆ. ಈ ಕ್ಷಣ ಏನೋ ಒಂದು ಸನ್ನಿವೇಶ ಸಂಭವಿಸಿತು ಅಂದ್ರೆ ಅದರ ವಿಡಿಯೋ ಮರುಕ್ಷಣವೇ ಅಪ್‌ಲೋಡ್‌ ಆಗಿರುತ್ತೆ. ಅಷ್ಟರ ಮಟ್ಟಿಗೆ ಈ ಸೋಶಿಯಲ್‌ ಮೀಡಿಯಾಗಳು ನಮ್ಮನ್ನು ಆಳುತ್ತಿವೆ ಅಂತಾನೇ ಹೇಳಬಹುದು. ಇವುಗಳಿಂದಾನೇ ಸಾಮಾನ್ಯ ಮನುಷ್ಯನೂ ಕೂಡ ಸೂಪರ್‌ ಹೀರೋ (Super Hero) ಆಗುತ್ತಿರುವ ಉದಾಹರಣೆಗಳು ಎಲ್ಲೆಡೆ ಜಾಸ್ತಿ ಆಗುತ್ತಿವೆ. ಈಗ ನಾವೂ ಕೂಡ ಅಂತಹ ಒಬ್ಬ ಹೀರೋ ಬಗ್ಗೆ ಇಂದು ಹೇಳಲು ಹೊರಟಿದ್ದೇವೆ. ಈ ವ್ಯಕ್ತಿಗಿರುವ ಜ್ಞಾನಕ್ಕೂ ಹಾಗೂ ಇವರು ಮಾಡುವ ಕೆಲಸಕ್ಕೂ ಯಾವುದೇ ಸಂಬಂಧವಿಲ್ಲ. ಇವರ ಜ್ಞಾನಕ್ಕೆ ಡಿಗ್ರಿ ಓದಿದವರೂ ಕೂಡ ತಲೆಬಾಗಬೇಕು.


ಅಂತಹವರ ಬಗ್ಗೆ ಇಂದು ಸೋಷಿಯಲ್‌ ಮೀಡಿಯಾದಲ್ಲಿ ವಿಡಿಯೋ ಒಂದು ಸಖತ್‌ ವೈರಲ್‌ ಆಗ್ತಿದೆ. ಅದೇನು ವಿಷಯ ಅಂತ ನೋಡೋಣ ಬನ್ನಿ.


ಆಟೋರಿಕ್ಷಾ ಚಾಲಕನ ಜ್ಞಾನಕ್ಕೆ ಮಾರುಹೋಗಿರುವ ಸೋಶಿಯಲ್‌ ಮೀಡಿಯಾ


ರಾಜೀವ್‌ ಕೃಷ್ಣ ಎಂಬ ಪ್ರಯಾಣಿಕ ಆಟೋದಲ್ಲಿ ಪ್ರಯಾಣ ಮಾಡುತ್ತಿರುವಾಗ, ಟ್ರಾಫಿಕ್‌ ಜಾಮ್‌ನಲ್ಲಿ ಸಿಲುಕಿದ್ದಾರೆ. ಅದು ಬರೋಬ್ಬರಿ ಒಂದು ಗಂಟೆ. ಆಗ ಸಮಯ ಕಳೆಯಲು ಆಟೋ ರಿಕ್ಷಾ ಚಾಲಕ ರಾಮ್‌ದೇವ್‌ ಅವರನ್ನು ಮಾತಿಗೆಳೆಯುವ ಮೂಲಕ ಅವರಲ್ಲಿನ ಜ್ಞಾನದ ಬಗ್ಗೆ ತಿಳಿದು ಆಶ್ಚರ್ಯಚಕಿತರಾಗಿದ್ದಾರೆ.


ರಾಮದೇವ್‌ ಅವರಿಗೆ ಭಾರತ, ಯುರೋಪ್‌ ಮತ್ತು ಇನ್ನು ಅನೇಕ ದೇಶಗಳ ಬಗ್ಗೆ ಇರುವ ಅಪಾರ ಜ್ಞಾನಕ್ಕೆ ರಾಜೀವ್‌ ಕೃಷ್ಣ ಅವರು ಮಾರು ಹೋಗಿದ್ದಾರೆ.


ರಾಮ್​ದೇವ್ ಸೋಶಿಯಲ್ ಮೀಡಿಯಾಗೆ ಅಪ್ಲೋಡ್​


ಅವರ ಮಾತುಕತೆಯನ್ನು ವಿಡಿಯೋ ಮಾಡಿ ಸೋಶಿಯಲ್‌ ಮೀಡಿಯಾದಲ್ಲಿ ಅಪ್‌ಲೋಡ್‌ ಮಾಡುವ ಮೂಲಕ ಆ Instagram ಪೋಸ್ಟ್‌ ಅನ್ನು ರಾಮ್‌ದೇವ್‌ ಅವರಿಗೆ ಅರ್ಪಿಸಿದ್ದಾರೆ.


ಇದನ್ನೂ ಓದಿ:  Viral Video: ವಿದೇಶಿ ಮಹಿಳೆಗೆ ನಡುರಸ್ತೆಯಲ್ಲಿ ಕೈ ಹಿಡಿದು ಎಳೆದಾಡಿ ಮುತ್ತು ಕೊಟ್ಟ!


ರಾಜೀವ್‌ ಕೃಷ್ಣ ಅವರು “ತನ್ನ ಆಟೋ ಡ್ರೈವರ್ ತನ್ನನ್ನು ಸಂಭಾಷಣೆಯಲ್ಲಿ ತೊಡಗಿಸಿಕೊಂಡಾಗ ತಾನು ಮುಂಬೈನ ಕೆಟ್ಟ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿಕೊಂಡಿದ್ದೇನೆ ಎಂದು ಹೇಳಿದಾಗ, ರಾಮ್‌ದೇವ್‌ ಅವರು ನಾನು ಯಾವ ದೇಶಗಳಿಗೆ ಹೋಗಿದ್ದೇನೆ ಎಂದು ಕೇಳುವ ಮೂಲಕ ಅವರು ತಮ್ಮ ಮಾತನ್ನು ಪ್ರಾರಂಭಿಸಿದರು.

View this post on Instagram


A post shared by Rajiv Krishna (@krish_rajiv)

ನಾನು ಅವರಿಗೆ ಜೋಕ್‌ ಮಾಡ್ತಾ, ನಾನು ಇಂತಹ ದೇಶಗಳಿಗೆ ಹೋಗಿದ್ದೇನೆ ಎಂದು ಕೆಲವು ಸ್ಥಳಗಳನ್ನು ಹೆಸರಿಸಿದೆ ”ಎಂದು ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.


ʼಅಂತರಾಷ್ಟ್ರೀಯ ಜ್ಞಾನ ಹೆಚ್ಚುʼ


“ನಾನು ಯುರೋಪ್‌ ದೇಶ ಅಂತ ಹೇಳಿದ ತಕ್ಷಣ ಆಟೋ ಚಾಲಕ ರಾಮದೇವ್‌ ಎಲ್ಲಾ 44 ಯುರೋಪಿಯನ್ ರಾಷ್ಟ್ರಗಳ ಹೆಸರನ್ನು ವರ್ಣಮಾಲೆಯ ಕ್ರಮದಲ್ಲಿ ಹೇಳಿದರು. ಅದರ ಜೊತೆಗೆ ಅವರು ಕೆಲವು ಪ್ರಮುಖ ಯುರೋಪಿಯನ್ ರಾಷ್ಟ್ರಗಳ ನಾಯಕರ ಹೆಸರನ್ನು ಸಹ ಹೇಳಿದರು” ಎಂದು ಆಶ್ಚರ್ಯಚಕಿತರಾಗಿ ರಾಜೀವ್‌ ಕೃಷ್ಣ ಪೋಸ್ಟ್‌ನಲ್ಲಿ ಬರೆದಿದ್ದಾರೆ.


ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯವರಾದ ರಾಮ್‌ದೇವ್ ಅವರು ತಮ್ಮ ತವರು ರಾಜ್ಯದ ಎಲ್ಲಾ 35 ಜಿಲ್ಲೆಗಳ ಹೆಸರುಗಳನ್ನು ತಿಳಿದುಕೊಂಡಿದ್ದರು. ಅದರ ಜೊತೆಗೆ ಗುಜರಾತ್ ಮತ್ತು ಉತ್ತರ ಪ್ರದೇಶದಂತಹ ಇತರ ರಾಜ್ಯಗಳ ಕುರಿತೂ ತಿಳಿದಿದ್ದರು.


ಇದನ್ನೂ ಓದಿ: Viral Video: ಅಬ್ಬಬ್ಬಾ! ಇಂಥಾ ಮಹಿಳೆಯರು ಕೂಡ ಇರ್ತಾರಾ? ಈ ವಿಡಿಯೋ ನೋಡಿದ್ರೆ ನೀವೂ ಬೈಯ್ತೀರಿ!


ಡಿಗ್ರಿ ಓದಿದವರನ್ನು ಮೀರಿಸುತ್ತೆ ಜ್ಞಾನ


ಇಷ್ಟೆ ಅಲ್ಲದೇ ಈ ಆಟೋ ಚಾಲಕನು +ನೋಟು ಅಮಾನ್ಯೀಕರಣ, 2ಜಿ ಹಗರಣ ಮತ್ತು ಪನಾಮಾ ಪೇಪರ್‌ಗಳ ಮುಖ್ಯಾಂಶಗಳ ಬಗ್ಗೆ ತನ್ನ ಪ್ರಯಾಣಿಕರಿಗೆ ತಿಳಿಸಲು ಮುಂದಾದಾಗ ಅವನ ಜ್ಞಾನ ಡಿಗ್ರಿ ಓದಿದವರನ್ನು ಮೀರಿಸುತ್ತೆ ಅನ್ನುವುದು ಸ್ಪಷ್ಟವಾಯಿತು.


ಶಿಕ್ಷಣದ ಪಡೆಯದ ವ್ಯಕ್ತಿ ಈ ಆಟೋ ಚಾಲಕ


ಆದರೆ ರಾಜೀವ್‌ ಕೃಷ್ಣನಿಗೆ, ಮತ್ತಷ್ಟು ಆಶ್ಚರ್ಯವಾಗಿದ್ದು ಏನೆಂದರೆ, ರಾಮ್‌ದೇವ ಅವರು ಸ್ವತಃ ಹೇಳಿಕೊಂಡಿರುವಂತೆ ಯಾವುದೇ ಔಪಚಾರಿಕವಾಗಿ ಶಿಕ್ಷಣ ಪಡೆದವರಲ್ಲ. ಅವರಿಗೆ ಈಗ ತಿಳಿದಿರುವ ಎಲ್ಲ ಜ್ಞಾನ ಸ್ವತಃ ಅವರೇ ಕಲಿತಿರುವುದಾಗಿದೆ.


"ಅವರಿಗೆ ಔಪಚಾರಿಕವಾಗಿ ಶಿಕ್ಷಣ ನೀಡಲು ಅವರ ಕುಟುಂಬಕ್ಕೆ ಎಂದಿಗೂ ಸಾಧ್ಯವಾಗಲಿಲ್ಲ. ಆಗೀನ ಪರಿಸ್ಥಿತಿಗಳು ಹೇಗಿತ್ತು ಅಂದ್ರೆ ರಾಮದೇವ್‌ ಮತ್ತು ಅವರ ಕುಟುಂಬದವರು ಎರಡು ದಿನಕ್ಕೊಮ್ಮೆ ಊಟವನ್ನು ಮಾಡುತ್ತಿದ್ದರು. ಇನ್ನು ಶಾಲೆಗೆ ಕಳಿಸಲು ಹೇಗೆ ಸಾಧ್ಯ ಎನ್ನುತ್ತಾರೆ ರಾಮದೇವ್‌.


ಸ್ವಯಂ ಅಧ್ಯಯನದಿಂದ ಸಾಧ್ಯ


ಅವರು ಗಳಿಸಿದ ಜ್ಞಾನವೆಲ್ಲವೂ ಸ್ವಯಂ ಅಧ್ಯಯನದ ಮೂಲಕವೇ ಎಂಬುದು ನಿಜಕ್ಕೂ ಆಶಾದಾಯಕ ಬೆಳವಣಿಗೆ. ಅವರಿಗೆ ಓದುವ ಇಚ್ಛೆ ಎಷ್ಟಿತ್ತು ಎಂಬುದಕ್ಕೆ ಅವರ ಜ್ಞಾನವೇ ಸಾಕ್ಷಿ” ಎಂದು ಕೃಷ್ಣ ತಮ್ಮ ಪೋಸ್ಟ್‌ ನಲ್ಲಿ ಬರೆದುಕೊಂಡಿದ್ದಾರೆ.

Published by:Mahmadrafik K
First published: