Viral Video :ತಳ್ಳು ನೂಕು ಐಸಾ.. ಕೆಟ್ಟುನಿಂತ ವಿಮಾನವನ್ನೇ ತಳ್ಳಿದ ಪ್ರಯಾಣಿಕರು

Nepal Airport: ಲ್ಯಾಂಡಿಂಗ್ ಸಮಯದಲ್ಲಿ ಟೈಯರ್ ಸ್ಪೋಟಗೊಂಡಿದ್ದರು ಸಹ ತಾರಾ ಏರ್ಲೈನ್ ಪೈಲೆಟ್ ವಿಮಾನವನ್ನ ಸುರಕ್ಷಿತವಾಗಿ ಲ್ಯಾಂಡ್ ಮಾಡಿ ಪ್ರಯಾಣಿಕರ ಜೀವ ಉಳಿಸಿದ್ದಾನೆ. ಆದ್ರೆ ಪ್ರಯಾಣಿಕರು ವಿಮಾನವನ್ನು ತಳ್ಳುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ವೈರಲ್ ವಿಡಿಯೋ ದೃಶ್ಯ

ವೈರಲ್ ವಿಡಿಯೋ ದೃಶ್ಯ

  • Share this:
    ಬಸ್, (Bus) ಕಾರು(Car), ಲಾರಿ, ಬೈಕ್(Bike) ಕೆಟ್ಟು ನಿಂತಾಗ ಸಾಮಾನ್ಯವಾಗಿ ತಳ್ಳಲು, ರಸ್ತೆಯಲ್ಲಿ(Road) ಹೋಗುವ ಸಹಪ್ರಯಾಣಿಕರ(passengers) ಸಹಾಯ ಪಡೆದುಕೊಂಡು ತಳ್ಳಿಕೊಂಡು ಹೋಗುವ ಪ್ರಸಂಗಗಳು ಸರ್ವೇಸಾಮಾನ್ಯ.. ಈ ರೀತಿಯ ಸುದ್ದಿ ಅಷ್ಟಾಗಿ ನಮ್ಮ ಗಮನಸೆಳೆಯುವುದಿಲ್ಲ.. ಆದ್ರೆ ಪ್ರತಿನಿತ್ಯ ಜೀವನದಲ್ಲಿ ಒಂದು ಒಬ್ಬರಲ್ಲ ಒಬ್ಬರು ಈ ಸಮಸ್ಯೆಯನ್ನು ಎದುರಿಸುತ್ತಾರೆ.. ಇನ್ನು ಒಂದು ವೇಳೆ ವಿಮಾನ ಅಥವಾ ರೈಲು(Train) ಕೆಟ್ಟು ನಿಂತಾಗ ಏನಾಗಬಹುದು ಅನ್ನೋ ಕುತೂಹಲ ಇಂಥ ಸಮಯದಲ್ಲಿ ನಮ್ಮ ಮುಂದೆ ಬರುತ್ತೆ.. ಆದ್ರೆ ಇದೆಲ್ಲ ಅಪರೂಪದಲ್ಲಿ ಅಪರೂಪ ಘಟನೆಗಳು ಮಾತ್ರ.. ಸದ್ಯ ಕೆಟ್ಟುನಿಂತ ವಿಮಾನವನ್ನು(Flight) ತಳ್ಳಿರುವ ಘಟನೆ ನೇಪಾಳದಲ್ಲಿ(Nepal) ನಡೆದಿದೆ.. ಇದನ್ನ ಕೇಳಿದ್ರೆ ನಿಮಗೆ ಆಶ್ಚರ್ಯ ಆಗಬಹುದು ಆದರೆ ಇದು ಖಂಡಿತವಾಗಿಯೂ ಸತ್ಯ.. ನೇಪಾಳದ ಬಾಜುರಾ ವಿಮಾನ ನಿಲ್ದಾಣದಲ್ಲಿ ಈ ವಿಲಕ್ಷಣ ಘಟನೆ ನಡೆದಿದೆ

    ಪ್ರಯಾಣಿಕರ ಜೊತೆ ಸೇರಿ ವಿಮಾನ ತಳ್ಳಿದ ಸಿಬ್ಬಂದಿ..

    ನೇಪಾಳದ ಬಾಜುರಾ ವಿಮಾನ ನಿಲ್ದಾಣದಲ್ಲಿ ತಾರಾ ಏರ್ ಲೈನ್ಸ್ ಗೆ ಸೇರಿದ ವಿಮಾನದ ಟೈಯರ್ ಲ್ಯಾಡಿಂಗ್ ವೇಳೆಯಲ್ಲಿ ಸ್ಫೋಟಗೊಂಡು ಏರ್ ಸ್ಟ್ರಿಪ್ ನಲ್ಲಿ ಸಿಲುಕಿಕೊಂಡಿತ್ತು. ಈ ನಡುವೆ, ಇದೇ ನಿಲ್ದಾಣದಲ್ಲಿ ಲ್ಯಾಂಡ್ ಆಗಲು ಇನ್ನೊಂದು ವಿಮಾನ ಕೂಡಾ ಬಂದಿದ್ದರಿಂದ ಲ್ಯಾಂಡಿಂಗ್‌ಗೆ ತೊಂದರೆ ಎದುರಾಗಿತ್ತು. ಟೈರ್ ಸ್ಫೋಟಗೊಂಡು ಟ್ಯಾಕ್ಸಿ ವೇಯಲ್ಲಿ ತಾರಾ ವಿಮಾನ ನಿಂತಿದ್ದರಿಂದ ಇದನ್ನು ರನ್‌ವೇ ನಿಂದ ಆಚೆ ಕೊಂಡೊಯ್ಯಬೇಕಾದ ಅನಿವಾರ್ಯತೆ ಎದುರಾಗಿತ್ತು. ಹೀಗಾಗಿ, ಭದ್ರತಾ ಸಿಬ್ಬಂದಿ ಜತೆ ಪ್ರಯಾಣಿಕರು ಕೂಡಾ ಕೈಜೋಡಿಸಿದ್ದರು. ಹೀಗೆ ಎಲ್ಲರೂ ಸೇರಿ ಈ ವಿಮಾನವನ್ನು ಮುಂದಕ್ಕೆ ತಳ್ಳಿದ್ದಾರೆ.

    ಇದನ್ನೂ ಓದಿ: ಈ ದೇಶದ ಜನರಿಗೆ ಶ್ವಾನಗಳೇ ದೇವರು; ದೀಪಾವಳಿ ಹಬ್ಬದಲ್ಲಿ ಅವುಗಳಿಗೆ ಸಲ್ಲುತ್ತೆ ವಿಶೇಷ ಪೂಜೆ!

    ಇನ್ನು ಲ್ಯಾಂಡಿಂಗ್ ಸಮಯದಲ್ಲಿ ಟೈಯರ್ ಸ್ಪೋಟಗೊಂಡಿದ್ದರು ಸಹ ತಾರಾ ಏರ್ಲೈನ್ ಪೈಲೆಟ್ ವಿಮಾನವನ್ನ ಸುರಕ್ಷಿತವಾಗಿ ಲ್ಯಾಂಡ್ ಮಾಡಿ ಪ್ರಯಾಣಿಕರ ಜೀವ ಉಳಿಸಿದ್ದಾನೆ.. ಆದ್ರೆ ಪ್ರಯಾಣಿಕರು ವಿಮಾನವನ್ನು ತಳ್ಳುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ..

    ಇನ್ನು ಒಂದು ಲಕ್ಷಕ್ಕೂ ಅಧಿಕ ಜನರು ವಿಡಿಯೋ ಗಾನ ವೀಕ್ಷಣೆ ಮಾಡಿದ್ದು ದೃಶ್ಯ ಕಂಡು ಅಚ್ಚರಿಗೊಂಡರೆ, ಇನ್ನು ಕೆಲವರು ತಮಾಷೆಯ ಪ್ರತಿಕ್ರಿಯೆ ನೀಡಿದ್ದಾರೆ. ಇನ್ನೊಂದಷ್ಟು ಮಂದಿ ಪ್ರಯಾಣಿಕರ ಸುರಕ್ಷತೆಯ ಬಗ್ಗೆಯೂ ಕಳವಳ ವ್ಯಕ್ತಪಡಿಸಿದ್ದಾರೆ.ಇನ್ನು ಕೆಲವರು ಈ ರೀತಿಯ ವಿಲಕ್ಷಣ ಘಟನೆಗಳು ಆಗುವುದು ಬಹುಶಹ ನೇಪಾಳದಲ್ಲಿ ಮಾತ್ರ ಇರಬೇಕು ಎಂದು ನೇಪಾಳವನ್ನು ಅಣಕಿಸಿ ಕೊಳ್ಳುತ್ತಿದ್ದಾರೆ..

    ಇತ್ತ ನೇಪಾಳ ವಿಮಾನಯಾನ ಇಲಾಖೆ ಟೈಯರ್ ಬ್ಲಾಸ್ಟ್ ಆಗಿ ರನ್ ವೇಯಲ್ಲಿ ನಿಂತಿದ್ದ ವಿಮಾನವನ್ನ ಪ್ರಯಾಣಿಕರು ತಳ್ಳಿದ ಘಟನೆಯ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಸುವುದಾಗಿ ಹೇಳಿದೆ..

    ಇದನ್ನೂ ಓದಿ: ಭಾರತದಿಂದ ನೇಪಾಳ ಆಮದು ಮಾಡಿಕೊಂಡ ತರಕಾರಿಗಳಲ್ಲಿ ವಿಷ..!

    ರಷ್ಯಾದಲ್ಲೂ ನಡೆದಿದ್ದ ಈ ವಿಲಕ್ಷಣ ಘಟನೆ

    ಇನ್ನು ಈ ರೀತಿ ಮಾನವನ ತಳ್ಳುತ್ತಿರುವುದು ಇದೇ ಮೊದಲೇನಲ್ಲ.. ಈ ಹಿಂದೆ 2014ರಲ್ಲಿ ಮಾಸ್ಕೋದ ಇಗಾರ್ಕ ವಿಮಾನ ನಿಲ್ದಾಣದಲ್ಲಿ ಕೊರೆಯುವ ಚಳಿಯನ್ನು ಲೆಕ್ಕಿಸದೆ ಪ್ರಯಾಣಿಕರು ಹಾಗೂ ಸಿಬ್ಬಂದಿಗಳು ಸೇರಿ ವಿಮಾನವನ್ನು ರನ್ ವೇಯಿಂದ ದೂರಕ್ಕೆ ಸರಿಸಿದರು.ಇಗಾರ್ಕ ವಿಮಾನ ನಿಲ್ದಾಣದಿಂದ 73 ಪ್ರಯಾಣಿಕರನ್ನು ಹೊತ್ತು ಸೈಬೀರಿಯಾಗೆ ಟೇಕಾಫ್ ಆಗಬೇಕಿದ್ದ ವಿಮಾನದ ಪಾರ್ಕಿಂಗ್ ಬ್ರೇಕ್ ತೆಗೆಯಲು ಪೈಲೆಟ್ ಮರೆತಿದ್ದ ಕಾರಣ, ವಿಮಾನದ ಚಾರ್ಸಿ ಸ್ಥಗಿತಗೊಂಡಿತ್ತು..

    ಆ ಬಳಿಕ ವಿಮಾನದಿಂದ ಕೆಳಗಿಳಿದಿದ್ದ ಪ್ರಯಾಣಿಕರು ರಸ್ತೆಯಲ್ಲಿ ಕೆಟ್ಟುನಿಂತ ಆಟೋ ಬಸ್ಸು-ಕಾರು ಬೈಕ್ ತಳ್ಳುವಂತೆ ರೈನ್ ವೇಯಿಂದ ವಿಮಾನವನ್ನು ತಳ್ಳಿ ಮತ್ತೊಂದು ವಿಮಾನ ಹಾರಾಟಕ್ಕೆ ಅನುಕೂಲ ಮಾಡಿಕೊಟ್ಟಿದ್ದರು.. ಸದ್ಯ ರಷ್ಯಾದಲ್ಲಿ ನಡೆದಿದ್ದ ಈ ಹಳೆಯ ಘಟನೆ ಹಾಗೂ ನೇಪಾಳದಲ್ಲಿ ನಡೆದಿರುವ ಈ ಹೊಸ ಘಟನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ
    Published by:ranjumbkgowda1 ranjumbkgowda1
    First published: