ಸಾಮಾನ್ಯವಾಗಿ ನಾವೆಲ್ಲಾ ರೈಲಿನಲ್ಲಿ (Train) ಪ್ರಯಾಣಿಸುತ್ತಿದ್ದಾಗ ಒಂದು ಕಪ್ ಟೀ (Tea) ಅಥವಾ ಕಾಫಿ (Coffee) ಕುಡಿದರೆ, ಅಬ್ಬಬ್ಬಾ ಎಂದರೆ 10 ರಿಂದ 15 ರೂಪಾಯಿ ಬಿಲ್ ಆಗಬಹುದು. ಆದರೆ ಇಲ್ಲೊಬ್ಬ ಪ್ರಯಾಣಿಕನು (Traveler) ಕುಡಿದಿದ್ದ ಒಂದು ಕಪ್ ಟೀ ಗೆ 70 ರೂಪಾಯಿಯ ಬಿಲ್ ಅನ್ನು ನೀಡಿದ್ದಾರೆ ನೋಡಿ. ಅಬ್ಬಬ್ಬಾ..ಇದೆಂಥಾ ಅನ್ಯಾಯ ಅಂತೀರಾ? ಬನ್ನಿ ಹಾಗಾದರೆ ಇದರ ಹಿಂದಿನ ಕಥೆ ಏನು ಅಂತ ತಿಳಿದುಕೊಂಡು ಬರೋಣ. ಈ ಪ್ರಯಾಣಿಕನು ರೈಲಿನಲ್ಲಿ ಚಹಾವನ್ನು ಖರೀದಿಸಿದಾಗ, ಅವನು 20 ರೂಪಾಯಿಗಳ ಒಂದು ಕಪ್ ಗೆ 50 ರೂಪಾಯಿಗಳ ಸೇವಾ ಶುಲ್ಕವನ್ನು ಪಾವತಿಸಬೇಕಾಗಿದೆ.
ರೈಲ್ವೆಯ ಈ ಹೈ-ಫೈ ಸೇವೆಯ ಪುರಾವೆಯಾಗಿ, ಆ ವ್ಯಕ್ತಿಯು ಆ ಚಹಾದ ಬಿಲ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾನೆ, ಅದು ಈಗ ಸಿಕ್ಕಾಪಟ್ಟೆ ವೈರಲ್ ಸಹ ಆಗಿದೆ. ಆದಾಗ್ಯೂ, ರೈಲ್ವೆ ಅಧಿಕಾರಿಗಳು ಇದಕ್ಕೆ ಸೂಕ್ತವಾದ ಕಾರಣವನ್ನು ನೀಡಿದ್ದಾರೆ.
ಒಂದು ಚಹಾದ ಬೆಲೆ 70 ರೂಪಾಯಿ ಬಿಲ್
ಜೂನ್ 28 ರಂದು ದೆಹಲಿ ಮತ್ತು ಭೋಪಾಲ್ ನಡುವೆ ಚಲಿಸುತ್ತಿದ್ದ ಭೋಪಾಲ್ ಶತಾಬ್ದಿ ರೈಲಿನಲ್ಲಿ ಈ ಪ್ರಯಾಣಿಕ ಪ್ರಯಾಣಿಸುತ್ತಿದ್ದರು. ತಮ್ಮ ಟ್ವಿಟ್ಟರ್ ಖಾತೆಯಲ್ಲಿ ತಲಾ ಒಂದು ಚಹಾದ ಎರಡು ರೀತಿಯ ಬೇರೆ ಬೇರೆ ಬಿಲ್ ಗಳನ್ನು ಹೊಂದಿರುವ ಫೋಟೋಗಳನ್ನು ಹಂಚಿಕೊಂಡಿದ್ದು, ಈ ಪೋಸ್ಟ್ ಅನ್ನು ನೋಡಿ ಈಗ ನೆಟ್ಟಿಗರು ಬೆಚ್ಚಿ ಬಿದ್ದಿದ್ದಾರೆ. "20 ರೂಪಾಯಿ ಬೆಲೆಯ ಒಂದು ಕಪ್ ಚಹಾದ ಮೇಲೆ 50 ರೂಪಾಯಿ ಜಿಎಸ್ಟಿ ವಿಧಿಸಲಾಗಿದೆ. ಒಟ್ಟಾರೆಯಾಗಿ, ಒಂದು ಚಹಾದ ಬೆಲೆ 70 ರೂಪಾಯಿ ಎಂದು ಬಿಲ್ ನೀಡಿದ್ದಾರೆ. ಇದೊಂದು ಅದ್ಭುತವಾದ ಲೂಟಿ ಅಲ್ಲವೇ?" ಅಂತ ತಮ್ಮ ಪೋಸ್ಟ್ ನೊಂದಿಗೆ ಬರೆದು ಕೊಂಡಿದ್ದಾರೆ.
ಇದನ್ನೂ ಓದಿ: Viral Video: ಮಲಾಲಾ ಯೂಸುಫಾಯ್ಗೆ 'ಮಿಸ್ ಯೂ' ಎಂದ ಗೆಳತಿಯ ವೀಡಿಯೋ ಈಗ ಫುಲ್ ವೈರಲ್
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಕಾಫಿ ಬಿಲ್
ರೈಲ್ವೆಯಲ್ಲಿ ಕೇಟರಿಂಗ್ ಸೇವೆಯನ್ನು ಒದಗಿಸುವ ಐಆರ್ಸಿಟಿಸಿ ಬಗ್ಗೆ ಇಂತಹ ಅನೇಕ ದೂರುಗಳು ಪದೇ ಪದೇ ಕೇಳಿ ಬರುತ್ತಲೇ ಇವೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಆದಾಗ್ಯೂ, ಈ ದೂರುಗಳಿಗೆ ಇಲಾಖೆಯವರು ಹೆಚ್ಚಾಗಿ ತಲೆ ಕೆಡೆಸಿಕೊಂಡವರಂತೆ ಕಾಣಿಸುತ್ತಿಲ್ಲ. ಅದರ ನಂತರ, ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು ಅವರನ್ನು ಸರಿಪಡಿಸಿದರು ಮತ್ತು ಇದು ಜಿಎಸ್ಟಿ ಅಲ್ಲ, ಸೇವಾ ಶುಲ್ಕವನ್ನು ಮಾತ್ರ ವಿಧಿಸಲಾಗಿದೆ ಎಂದು ಹೇಳಿದರು. ಅದೇ ಸಮಯದಲ್ಲಿ, ಅನೇಕ ಬಳಕೆದಾರರು ಒಂದು ಕಪ್ ಚಹಾಕ್ಕೆ 50 ರೂಪಾಯಿಗಳ ಸೇವಾ ಶುಲ್ಕವು ತುಂಬಾ ಹೆಚ್ಚಾಗಿದೆ ಎಂದು ಹೇಳಿದರು.
ಈ ಬಗ್ಗೆ ರೈಲ್ವೆ ಅಧಿಕಾರಿಗಳು ಹೇಳಿದ್ದೇನು
ರೈಲ್ವೆ ಅಧಿಕಾರಿಗಳ ಪ್ರಕಾರ, ಗ್ರಾಹಕರ ಮೇಲೆ ಯಾವುದೇ ಹೆಚ್ಚುವರಿ ಹಣವನ್ನು ವಿಧಿಸಲಾಗಿಲ್ಲ. 2018 ರಲ್ಲಿ ಭಾರತೀಯ ರೈಲ್ವೆ ಹೊರಡಿಸಿದ ಸುತ್ತೋಲೆಯಲ್ಲಿ, ರಾಜಧಾನಿ ಅಥವಾ ಶತಾಬ್ದಿಯಂತಹ ರೈಲುಗಳಲ್ಲಿ ಕಾಯ್ದಿರಿಸುವಾಗ ಪ್ರಯಾಣಿಕರು ಊಟವನ್ನು ಕಾಯ್ದಿರಿಸದಿದ್ದರೆ, ಪ್ರಯಾಣದ ಸಮಯದಲ್ಲಿ ಚಹಾ, ಕಾಫಿ ಅಥವಾ ಆಹಾರವನ್ನು ಆರ್ಡರ್ ಮಾಡಿದರೆ, ಅದನ್ನು ಪ್ರಯಾಣಿಕರಿಗೆ ತಲುಪಿಸಲು 50 ರೂಪಾಯಿಗಳ ಸೇವಾ ಶುಲ್ಕವನ್ನು ಪಾವತಿಸಬೇಕಾಗುತ್ತದೆ ಎಂದು ಸೂಚಿಸುತ್ತದೆ. ಅದು ಕೇವಲ ಒಂದು ಕಪ್ ಚಹಾವಾಗಿದ್ದರೂ ಸಹ ಇದು ಅನ್ವಯವಾಗುತ್ತದೆ ಎಂದು ತಿಳಿಸಿದರು.
ಇದನ್ನೂ ಓದಿ: Neeraj Chopra: ಹಿರಿಯ ಅಭಿಮಾನಿಯ ಕಾಲುಮುಟ್ಟಿ ನಮಸ್ಕರಿಸಿದ ನೀರಜ್! ಚಿನ್ನದ ಹುಡುಗನ ಚಿನ್ನದಂಥಾ ಗುಣಕ್ಕೆ ನೆಟ್ಟಿಗರು ಫಿದಾ
ರಾಜಧಾನಿ ಅಥವಾ ಶತಾಬ್ದಿಯಂತಹ ರೈಲುಗಳಲ್ಲಿ ಈ ಮೊದಲು ಆಹಾರ ಸೇವೆ ಕಡ್ಡಾಯವಾಗಿತ್ತು, ಆದರೆ ನಂತರ ಅದನ್ನು ಐಚ್ಛಿಕಗೊಳಿಸಲಾಯಿತು. ಅಂದರೆ, ಪ್ರಯಾಣಿಕರು ಬಯಸಿದರೆ ಮಾತ್ರ ಅವರು ಆ ರೈಲುಗಳಲ್ಲಿ ಆಹಾರ ಮತ್ತು ಉಪಾಹಾರವನ್ನು ತೆಗೆದುಕೊಳ್ಳಬಹುದು, ಇಲ್ಲವಾದರೆ ಅದನ್ನು ನಿರಾಕರಿಸಬಹುದು. ಅಂತಹ ಪರಿಸ್ಥಿತಿಯಲ್ಲಿ, ಅವರು ಟಿಕೆಟ್ ಗಾಗಿ ಮಾತ್ರ ಪಾವತಿಸಬೇಕಾಗುತ್ತದೆ, ಆಹಾರ ಸೇವೆಗಾಗಿ ಅಲ್ಲ. ಒಂದು ವೇಳೆ ಅವರು ಟಿಕೆಟ್ ಕಾಯ್ದಿರಿಸುವಾಗ ಊಟ ತಿಂಡಿಯನ್ನು ನಿರಾಕರಿಸಿ, ನಂತರ ಅದನ್ನು ಆರ್ಡರ್ ಮಾಡಿದರೆ ಅದರ ಮೇಲೆ ಸೇವಾ ಶುಲ್ಕವನ್ನು ವಿಧಿಸಲಾಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ