Viral Video: ವ್ಯಕ್ತಿಯ ಮೊಬೈಲ್ ಕಸಿದುಕೊಂಡು ಎತ್ತರಕ್ಕೆ ಹಾರಿದ ಗಿಳಿ..!

Parrot Flies With Phone: ಮನೆಯ ಆವರಣದಲ್ಲಿ ನಿಂತಿರುವ ಒಬ್ಬ ವ್ಯಕ್ತಿಯ ಮೊಬೈಲ್ ಫೋನ್ ಕಸಿದುಕೊಂಡು ತುಂಬಾ ದೂರ ಹಾರಿಹೋಗಿದ್ದು, ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ತುಂಬಾನೇ ವೈರಲ್ ಆಗಿದೆ.

ಮೊಬೈಲ್ ಕಸಿದು ಹಾರಿದ ಗಿಳಿ

ಮೊಬೈಲ್ ಕಸಿದು ಹಾರಿದ ಗಿಳಿ

  • Share this:

ತಮ್ಮ ಮನೆಯ ಆವರಣದಲ್ಲಿ, ಉದ್ಯಾನವನದಲ್ಲಿ ಯಾವುದಾದರೂ ಒಂದು ಮುದ್ದಾದ ಪಕ್ಷಿ ಅಥವಾ ಪ್ರಾಣಿ ಕಂಡಾಗ ನಾವು ತಕ್ಷಣವೇ ನಮ್ಮ ಜೇಬಿಗೆ ಕೈ ಹಾಕಿ ಮೊಬೈಲ್ ಫೋನ್ ಹೊರತೆಗೆದು ವಿಡಿಯೋ ಮಾಡಲು ಅಥವಾ ಫೋಟೋ ತೆಗೆಯಲು ಶುರು ಮಾಡುತ್ತೇವೆ.ಅದರಲ್ಲೂ ನಾವು ಕೆಲ ಪಕ್ಷಿಗಳನ್ನು ತುಂಬಾ ಇಷ್ಟ ಪಡುತ್ತೇವೆ, ಅದರಲ್ಲಿ ಗಿಳಿ ಬಹುತೇಕರು ಇಷ್ಟಪಡುವ ಪಟ್ಟಿಯಲ್ಲಿ ಮೊದಲನೆಯದು ಆಗಿರುತ್ತದೆ. ಕೆಲವೊಮ್ಮೆ ಕೋತಿಗಳ ಫೋಟೋ ಅಥವಾ ವಿಡಿಯೋ ಮಾಡಲು ಹೋದಾಗ ಅವು ಕೋಪಗೊಂಡು ನಮ್ಮ ಮೇಲೆ ಹಾರಿ ಮೊಬೈಲ್ ಫೋನ್ ಕೆಳಗೆ ಬಿಳಿಸಲು ಅಥವಾ ಕಸಿದುಕೊಳ್ಳಲು ಪ್ರಯತ್ನಿಸುವುದನ್ನು ನಾವೆಲ್ಲ ನೋಡಿರುತ್ತೇವೆ.


ಆದರೆ ಇಲ್ಲೊಂದು ವಿಭಿನ್ನ ಘಟನೆಯ ವೀಡಿಯೋ ತುಣುಕಿನಲ್ಲಿ ಒಂದು ಗಿಳಿ ತನ್ನ ಮನೆಯ ಆವರಣದಲ್ಲಿ ನಿಂತಿರುವ ಒಬ್ಬ ವ್ಯಕ್ತಿಯ ಮೊಬೈಲ್ ಫೋನ್ ಕಸಿದುಕೊಂಡು ತುಂಬಾ ದೂರ ಹಾರಿಹೋಗಿದ್ದನ್ನು ಕಾಣಬಹುದು. ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ತುಂಬಾನೇ ವೈರಲ್ ಆಗಿದ್ದು, ಗಿಳಿಯು ತುಂಬಾ ದೂರ ವೇಗವಾಗಿ ಹಾರಿ ಹೋಗಿದೆ. ಆ ಮೊಬೈಲ್‌ನಲ್ಲಿ ವಿಡಿಯೋ ರೆಕಾರ್ಡಿಂಗ್ ಆನ್ ಆಗಿದ್ದು, ಗಿಳಿಯು ಎಷ್ಟು ಎತ್ತರಕ್ಕೆ ಹಾರಿದೆ, ಅಷ್ಟೇ ಸುಂದರವಾಗಿ ಕೆಳಗಿನ ವಿಹಂಗಮ ನೋಟವನ್ನು ಡ್ರೋನ್ ಕ್ಯಾಮರಾದಂತೆ ಸೆರೆ ಆಗಿದ್ದನ್ನು ಕಾಣಬಹುದಾಗಿದೆ.


ಈ 1 ನಿಮಿಷ 49 ಸೆಕೆಂಡುಗಳ ವಿಡಿಯೊದಲ್ಲಿ ತನ್ನ ಮೊಬೈಲ್ ಫೋನ್ ಕಸಿದುಕೊಂಡು ಹಾರಿ ಹೋದ ಗಿಳಿಯ ಹಿಂದೆ ಆ ವ್ಯಕ್ತಿಯು ಓಡುತ್ತಿರುವುದನ್ನು ಗಮನಿಸಬಹುದು. ಮೊಬೈಲ್‌ನಲ್ಲಿ ವೀಡಿಯೋ ರಿಕಾರ್ಡಿಂಗ್ ಆನ್ ಇರುವುದರಿಂದ ಪಕ್ಷಿಯು ಸುಮಾರು ಒಂದು ನಿಮಿಷದವರೆಗೆ ಸಂಪೂರ್ಣ ನೆರೆಹೊರೆಯ ವಿಹಂಗಮ ನೋಟವನ್ನು ಮೇಲಿಂದ ಸೆರೆಹಿಡಿದಂತೆ ಕಂಡಿದೆ. ಮನೆಗಳು, ಮೇಲ್ಛಾವಣಿಗಳು, ಮರಗಳು ಮತ್ತು ರಸ್ತೆಗಳು ಸೇರಿದಂತೆ ಎಲ್ಲವನ್ನೂ ಈ ವಿಡಿಯೋದಲ್ಲಿ ನೋಡಬಹುದಾಗಿದೆ.

ತುಂಬಾ ಹೊತ್ತು ಹಾರಿ ಸುಸ್ತಾಗಿ ಗಿಳಿಯು ಒಂದು ಮನೆಯ ಮಹಡಿಯ ಮೇಲೆ ಒಂದು ಕ್ಷಣ ಕುಳಿತುಕೊಂಡಿತು. ಆದರೆ ಜನರು ಕೂಗುವುದನ್ನು ಕೇಳಿಸಿಕೊಂಡು ಮತ್ತೆ ಅಲ್ಲಿಂದ ಹಾರಿಹೋಯಿತು. ಮತ್ತೆ ಗಿಳಿಯು ಅಲ್ಲೇ ಇದ್ದ ಕಾರಿನ ಮೇಲೆ ಕುಳಿತಿದ್ದರಿಂದ ವಿಡಿಯೋ ಕೊನೆಗೊಂಡಿತು.


ಈ ವಿಡಿಯೋವನ್ನು ಫ್ರೆಡ್ ಶುಲ್ಡ್ಸ್ ಎಂಬಾತ ತನ್ನ ಟ್ವಿಟ್ಟರ್ ಖಾತೆಯಲ್ಲಿರುವ ಪುಟದಲ್ಲಿ ಹಂಚಿಕೊಂಡಿದ್ದು, ಅದಕ್ಕೆ “ಗಿಳಿಯು ಮೊಬೈಲ್ ಫೋನ್ ಅನ್ನು ಒಂದು ಉತ್ತಮ ಪ್ರವಾಸಕ್ಕೆ ತೆಗೆದುಕೊಂಡು ಹೋಗಿದೆ” ಎಂದು ಶೀರ್ಷಿಕೆಯಲ್ಲಿ ಬರೆದಿದ್ದಾರೆ. ಈ ವಿಡಿಯೋವನ್ನು ಈಗಾಗಲೇ 4 ಲಕ್ಷಕ್ಕೂ ಅಧಿಕ ಜನರು ವೀಕ್ಷಿಸಿದ್ದು, ನೆಟ್ಟಿಗರಿಂದ ಅನೇಕ ರೀತಿಯ ಪ್ರತಿಕ್ರಿಯೆಗಳನ್ನು ಪಡೆದಿದೆ.


ಈ ವಿಡಿಯೋವನ್ನು ನೋಡಿದ ನೆಟ್ಟಿಗರು “ಇಂತಹ ಒಂದು ಪರಿಸರ ಸ್ನೇಹಿ ಗಿಳಿ ಇದ್ದರೆ ಸಾಕು ಈ ಡ್ರೋನ್ ಕ್ಯಾಮರಾ ಏಕೆ ಬೇಕು” ಎಂದು ಬರೆದಿದ್ದಾರೆ. ಇನ್ನೊಬ್ಬರು “ಗಿಳಿಯು ತುಂಬಾ ವೇಗವಾಗಿ ಹಾರಿ ಎಲ್ಲವನ್ನೂ ತೋರಿಸಿದೆ, ನಮಗೂ ರೆಕ್ಕೆಗಳಿರಬೇಕಿತ್ತು” ಎಂದು ಬರೆದಿದ್ದಾರೆ. “ಡ್ರೋನ್‌ಗಿಮತಲೂ ಗಿಳಿಯು ವೇಗವಾಗಿದೆ”, ಎಂದೂ ಅನೇಕರು ಪ್ರತಿಕ್ರಿಯಿಸಿದ್ದಾರೆ.
ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.

 
Published by:Sandhya M
First published: