Viral Video: ಕಾರಿನ ವಿಂಡೋ ಮೇಲೆ ಗಿಳಿಯ ಜಾಲಿ ರೈಡ್! ವಿಡಿಯೋ ವೈರಲ್

ಗಿಳಿಯು ತೆರೆದ ಕಾರಿನ ಕಿಟಕಿಯ ಮೇಲೆ ಕುಳಿತು ಕಾರು ಸವಾರಿಯನ್ನು ಆನಂದಿಸುವುದನ್ನು ನಾವು ನೋಡಬಹುದಾಗಿದೆ. ಈ ವೀಡಿಯೋವನ್ನು ಮೂಲತಃ ಫೆಬ್ರವರಿ ತಿಂಗಳಲ್ಲಿ ಹಂಚಿಕೊಳ್ಳಲಾಗಿದೆ, ಆದರೆ ಈ ದಿನಗಳಲ್ಲಿ ಮತ್ತೆ ಇದು ಸಾಮಾಜಿಕ ಮಾಧ್ಯಮದಲ್ಲಿ ಜನರನ್ನು ತನ್ನತ್ತ ಸೆಳೆಯುತ್ತಿದೆ ಎಂದು ಹೇಳಬಹುದು.

ಕಾರು ಸವಾರಿಯನ್ನು ಆನಂದಿಸುವ ಗಿಳಿ

ಕಾರು ಸವಾರಿಯನ್ನು ಆನಂದಿಸುವ ಗಿಳಿ

  • Share this:
ನಾವು ಸಾಮಾನ್ಯವಾಗಿ ಈ ಬಿಳಿ ಬಣ್ಣದ ಜೂಲಿ, ಟಾಮಿ, ಮೋತಿ, ಜಿಮ್ಮಿ ನಾಯಿಗಳನ್ನು (Dog) ಜನರು ತಮ್ಮ ಕಾರಿನ ಮುಂದಿನ ಸೀಟ್ ನಲ್ಲಿ ಕೂರಿಸಿಕೊಂಡು ಹೋಗುತ್ತಿರುವುದನ್ನು ನೋಡುತ್ತಿರುತ್ತೇವೆ. ಕೆಲವೊಮ್ಮೆ ಆ ಸಾಕುನಾಯಿ (Pet Dog) ಸುಮ್ಮನೆ ಸೀಟ್ ಮೇಲೆ ಕುಳಿತುಕೊಳ್ಳದೆ ತನ್ನ ಮುಂದಿನ ಎರಡು ಕಾಲುಗಳನ್ನು ಕಿಟಕಿಯ ಮೇಲೆ ಇರಿಸಿ ಹೊರಕ್ಕೆ ತನ್ನ ಮುಖವನ್ನು ಹಾಕಿ ನೋಡುತ್ತಿರುತ್ತದೆ ಮತ್ತು ಯಾವುದಾದರೂ ನಾಯಿಗಳನ್ನು ಕಂಡರೆ ಅವುಗಳತ್ತ ಬೊಗಳುತ್ತಾ ತಾನೇ ರಾಜ ಎಂಬಂತೆ ಕಾರಿನಲ್ಲಿ (Car) ಸವಾರಿ ಹೋಗುತ್ತಿರುತ್ತದೆ. ಹೌದು.. ಈ ಸಾಕುಪ್ರಾಣಿಗಳನ್ನು ಬಹುತೇಕರು ತಮ್ಮ ಮಕ್ಕಳಂತೆ (Children) ನೋಡಿಕೊಳ್ಳುತ್ತಾರೆ, ಅವರು ಎಲ್ಲಿಗೆ ಹೋದರೂ ಸಹ ಅವುಗಳನ್ನು ತಮ್ಮ ಕಾರಿನಲ್ಲಿ ಮತ್ತು ಬೈಕ್ ಮೇಲೆ ಕೂರಿಸಿ ಕರೆದುಕೊಂಡು ಹೋಗುತ್ತಾರೆ.

ಈ ಪ್ರಾಣಿಗಳು ಅಷ್ಟೇ ಮನೆಯಿಂದ ಹೊರಗೆ ಕಾಲಿಟ್ಟರೆ ಸಾಕು ಅವುಗಳಿಗೆ ಒಂದು ರೀತಿಯ ಖುಷಿ ಅಂತಾನೆ ಹೇಳಬಹುದು. ಅದರಲ್ಲೂ ಈ ಕಾರಿನ ಕಿಟಕಿಯ ಹೊರಕ್ಕೆ ಮುಖವನ್ನು ಹಾಕಿ ಆ ಎದುರಿಗೆ ಬೀಸುತ್ತಿರುವ ಗಾಳಿಯಲ್ಲಿ ಸವಾರಿ ಹೋಗುವ ಮಜಾನೆ ಬೇರೆ ಬಿಡಿ. ಈ ಮಜಾವನ್ನು ಕೇವಲ ಮಕ್ಕಳಲ್ಲದೆ, ಸಾಕುಪ್ರಾಣಿಗಳು ಸಹ ತೆಗೆದುಕೊಳ್ಳುತ್ತಿವೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಕಾರು ಸವಾರಿಯನ್ನು ಆನಂದಿಸುವ ಗಿಳಿ
ಈಗಂತೂ ಈ ಪಕ್ಷಿಗಳ ಮತ್ತು ಪ್ರಾಣಿಗಳನ್ನು ಒಳಗೊಂಡ ವೀಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ತುಂಬಾನೇ ಜನಪ್ರಿಯವಾಗಿವೆ. ಅವು ನೋಡುಗರ ಮನಸ್ಸಿಗೆ ವಿಭಿನ್ನ ರೀತಿಯ ಖುಷಿ ಕೊಡುತ್ತವೆ ಎಂದು ಹೇಳಿದರೆ ಸುಳ್ಳಲ್ಲ. ಗುಣಪಡಿಸುವಿಕೆಯನ್ನು ಒದಗಿಸುತ್ತವೆ. ಈ ವೀಡಿಯೋಗಳು ಪ್ರಾಣಿಗಳು ಸರಳ ವಿಷಯಗಳನ್ನು ಆನಂದಿಸುವುದನ್ನು ಅಥವಾ ಪಕ್ಷಿಗಳು ವಿಭಿನ್ನ ಸಾಹಸಗಳನ್ನು ಮಾಡುವುದನ್ನು ಸಹ ತೋರಿಸುತ್ತವೆ.

ಇದನ್ನೂ ಓದಿ:  Simba: ಈ ಮೇಕೆ ಮರಿಯ ಕಿವಿ ಎಷ್ಟು ಉದ್ದಯಿದೆ ಅಂತಾ ಗೊತ್ತಾದ್ರೆ ನೀವು ಶಾಕ್ ಆಗೋದು ಗ್ಯಾರೆಂಟಿ

ಅಂತಹ ಒಂದು ವೀಡಿಯೋದಲ್ಲಿ ಗಿಳಿಯು ತೆರೆದ ಕಾರಿನ ಕಿಟಕಿಯ ಮೇಲೆ ಕುಳಿತು ಕಾರು ಸವಾರಿಯನ್ನು ಆನಂದಿಸುವುದನ್ನು ನಾವು ನೋಡಬಹುದಾಗಿದೆ. ಈ ವೀಡಿಯೋವನ್ನು ಮೂಲತಃ ಫೆಬ್ರವರಿ ತಿಂಗಳಲ್ಲಿ ಹಂಚಿಕೊಳ್ಳಲಾಗಿದೆ, ಆದರೆ ಈ ದಿನಗಳಲ್ಲಿ ಮತ್ತೆ ಇದು ಸಾಮಾಜಿಕ ಮಾಧ್ಯಮದಲ್ಲಿ ಜನರನ್ನು ತನ್ನತ್ತ ಸೆಳೆಯುತ್ತಿದೆ ಎಂದು ಹೇಳಬಹುದು.

ಇನ್‌ಸ್ಟಾಗ್ರಾಮ್ ನಲ್ಲಿ ವಿಡಿಯೋ ಫುಲ್ ವೈರಲ್
ಈ ವೀಡಿಯೋವನ್ನು ಜೂನ್ 7 ರಂದು ಕ್ಯೂಟೆಸ್ಟ್ ಬರ್ಡ್ ಎಂಬ ಇನ್‌ಸ್ಟಾಗ್ರಾಮ್ ಖಾತೆಯ ಪುಟವು ಹಂಚಿಕೊಂಡಿದೆ. "ಸೂಪರ್ ಹೀರೋ" ಎಂದು ಇದಕ್ಕೆ ಮುದ್ದಾದ ಒಂದು ಶೀರ್ಷಿಕೆಯನ್ನು ಸಹ ಬರೆದಿದ್ದಾರೆ. ಈ ವೀಡಿಯೋವನ್ನು ಕೊಕೊಮೌಯಿಹವಾಯಿಗೆ ಕ್ರೆಡಿಟ್ ಮಾಡಲಾಗಿದೆ, ಅದು ಈ ವರ್ಷದ ಫೆಬ್ರವರಿಯಲ್ಲಿ ಈ ವೀಡಿಯೋವನ್ನು ಹಂಚಿಕೊಂಡಿತ್ತು.










View this post on Instagram






A post shared by Cutest.bird (@cutest.bird)




ಈ ವೈರಲ್ ವೀಡಿಯೋದಲ್ಲಿ ಸುಂದರವಾದ ಬಿಳಿ ಗಿಳಿ, ಕಾರಿನ ಕಿಟಕಿಯ ಅಂಚಿನಲ್ಲಿ ಕುಳಿತಿರುವಾಗ ತನ್ನ ಗರಿಗಳ ಮೂಲಕ ಬೀಸುವ ವೇಗದ ಗಾಳಿಯನ್ನು ಆನಂದಿಸುವುದನ್ನು ತೋರಿಸುತ್ತದೆ. ಅದರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಗಿಳಿಯ ಕಾಲಿಗೆ ಒಂದು ದಾರವನ್ನು ಸಹ ಕಟ್ಟಲಾಗಿದೆ.

ಈ ವೀಡಿಯೋವನ್ನು 1.8 ಮಿಲಿಯನ್ ಬಾರಿ ವೀಕ್ಷಿಸಲಾಗಿದೆ ಮತ್ತು ಇನ್‌ಸ್ಟಾಗ್ರಾಮ್ ಖಾತೆಯ ಪುಟದಲ್ಲಿ ಸುಮಾರು 1.7 ಲಕ್ಷ ಲೈಕ್ ಗಳನ್ನು ಇದು ಪಡೆದಿದೆ. ಸಾಮಾಜಿಕ ಮಾಧ್ಯಮ ಬಳಕೆದಾರರು ಈ ವೀಡಿಯೋ ನೋಡಿ ತುಂಬಾನೇ ಸಂತೋಷಪಟ್ಟರು ಮತ್ತು ಕಾಮೆಂಟ್ ವಿಭಾಗದಲ್ಲಿ ಸುಂದರವಾದ ಟಿಪ್ಪಣಿಗಳನ್ನು ಸಹ ಪೋಸ್ಟ್ ಮಾಡಿದರು.

ಈ ಬಗ್ಗೆ ಸಾಮಾಜಿಕ ಮಾಧ್ಯಮ ಬಳಕೆದಾರರು ಹೇಳಿದ್ದು ಹೀಗೆ
"ತುಂಬಾ ಎಂಜಾಯ್ ಮಾಡುತ್ತಿದೆ ಈ ಗಿಳಿ. ಈ ಸುಂದರವಾದ ಪಕ್ಷಿಯ ಸುರಕ್ಷತೆಯ ಬಗ್ಗೆ ಅದರ ಒಡೆಯ ತುಂಬಾನೇ ಕಾಳಜಿ ವಹಿಸಿ ಅದರ ಕಾಲಿಗೆ ದಾರವನ್ನು ಕಟ್ಟಿದ್ದಾರೆ. ಒಟ್ಟಿನಲ್ಲಿ ಸವಾರಿಯನ್ನು ಆನಂದಿಸುತ್ತಿದೆ" ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು ಬರೆದಿದ್ದಾರೆ. ಇನ್ನೂ ಕೆಲವರು ಈ ವೀಡಿಯೋ ನೋಡಿ ತುಂಬಾನೇ ದುಃಖಿತರಾದರು, ಮಾಲೀಕರು ಈ ಗಿಳಿಯನ್ನು ಏಕೆ ಹಾರಲು ಬಿಡುತ್ತಿಲ್ಲ ಎಂದು ಆಶ್ಚರ್ಯಪಟ್ಟರು.

ಇದನ್ನೂ ಓದಿ: Viral Video: ನೀವು ನವಿಲು ಹಾರೋದು ನೋಡಿದ್ದೀರಾ? ಈ ಸ್ಲೋ ಮೋಷನ್ ವೀಡಿಯೋ ನೋಡಿ

"ಗಿಳಿ ಹಾರಲು ಬಯಸುತ್ತಿದೆ, ಆದರೆ ಅದು ಸಾಧ್ಯವಾಗುತ್ತಿಲ್ಲ. ಕಿಟಕಿಯ ಮೇಲೆ ಕುಳಿತು ಗಾಳಿಗೆ ಅದು ಹಾರುತ್ತಿರುವಂತೆ ಅದಕ್ಕೆ ಭಾಸವಾಗುತ್ತಿದೆ" ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು ಕಳವಳ ವ್ಯಕ್ತಪಡಿಸಿ "ಅದು ಕೆಳಗೆ ಬೀಳಬಹುದು" ಎಂದು ಹೇಳಿದರು. ಮೂಲತಃ ವೀಡಿಯೋವನ್ನು ಪೋಸ್ಟ್ ಮಾಡಿದ ಚಾನೆಲ್ ಗಿಳಿಯ ಹೆಸರು ಕೊಕೊ ಎಂದು ಹೇಳಿದೆ ಮತ್ತು ಇದು ಮೌಯಿಯ ರಸ್ತೆಗಳಲ್ಲಿ ಕಾರ್-ಸರ್ಫಿಂಗ್ ಅನ್ನು ಆನಂದಿಸುತ್ತಿದೆ ಎಂದು ಹೇಳಿದ್ದಾರೆ.
Published by:Ashwini Prabhu
First published: