• ಹೋಂ
  • »
  • ನ್ಯೂಸ್
  • »
  • ಟ್ರೆಂಡ್
  • »
  • Parking Place: ಮನೆ, ಕಾರಿಗಿಂತ ಪಾರ್ಕಿಂಗ್ ಸ್ಥಳವೇ ದುಬಾರಿ; ದಾಖಲೆಯ ಬೆಲೆ ಕೇಳಿದ್ರೆ ಬೆಚ್ಚಿ ಬೀಳ್ತಿರ!

Parking Place: ಮನೆ, ಕಾರಿಗಿಂತ ಪಾರ್ಕಿಂಗ್ ಸ್ಥಳವೇ ದುಬಾರಿ; ದಾಖಲೆಯ ಬೆಲೆ ಕೇಳಿದ್ರೆ ಬೆಚ್ಚಿ ಬೀಳ್ತಿರ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಹಾಂಗ್‌ ಕಾಂಗ್‌ನಲ್ಲಿ ಪಾರ್ಕಿಂಗ್‌ ಸ್ಥಳವೊಂದನ್ನು ಖರೀದಿಸಲು ಜನ ಮುಗಿಬಿದ್ದಿದ್ದು, ಬರೋಬ್ಬರಿ 9.43 ಕೋಟಿ ರೂ.ಗೆ ಮಾರಾಟ ಆಗಿದೆ.

  • Share this:

ನಮ್ಮ ಬೆಂಗಳೂರಲ್ಲಿ ಕಾರು ಪಾರ್ಕ್‌ ಮಾಡಲು ಜಾಗವಿಲ್ಲದೆ ಮನೆಗಳ ಮುಂದೆ ರಸ್ತೆಯಲ್ಲೇ ಕಾರು ಪಾರ್ಕ್‌ ಮಾಡಿರುತ್ತಾರೆ. ಅದಕ್ಕೆ ತೆರಿಗೆ ಕಟ್ಟಬೇಕು ಅಂದ್ರೆ ಬಹುತೇಕ ಜನ ತೀವ್ರ ವಿರೋಧಿಸುತ್ತಾರೆ. ಆದರೆ ಹಾಂಗ್‌ ಕಾಂಗ್‌ನಲ್ಲಿ ಪಾರ್ಕಿಂಗ್‌ ಸ್ಥಳವೊಂದನ್ನು ಖರೀದಿಸಲು ಜನ ಮುಗಿಬಿದ್ದಿದ್ದು, ಕೋಟ್ಯಂತರ ರೂಪಾಯಿಗೆ ಪಾರ್ಕಿಂಗ್​ ಜಾಗ ಮಾರಾಟವಾಗಿದೆ. ಪಾರ್ಕಿಂಗ್ ಸ್ಥಳವನ್ನು 10 ಮಿಲಿಯನ್‌ಗೂ ಅಧಿಕ ಹಾಂಗ್​​​ಕಾಂಗ್ ಡಾಲರ್‌ಗಳಿಗೆ ಮಾರಾಟ ಮಾಡಲಾಗಿದೆ (ಸುಮಾರು 1.3 ಮಿಲಿಯನ್ ಡಾಲರ್‌ ಅಥವಾ 9.43 ಕೋಟಿ ರೂ.) ಈ ಹಿನ್ನೆಲೆ ಇದು ಈವರೆಗೆ ಮಾರಾಟವಾದ ಅತ್ಯಂತ ದುಬಾರಿ ಪಾರ್ಕಿಂಗ್ ಸ್ಥಳವೆಂದು ಹೇಳಲಾಗಿದೆ.


ಹಾಂಗ್ ಕಾಂಗ್‌ನ ದಿ ಪೀಕ್‌ನಲ್ಲಿರುವ ಎಕ್ಸ್‌ಕ್ಲೂಸಿವ್‌ ಮೌಂಟ್ ನಿಕೋಲ್ಸನ್ ಡೆವಲಪ್‌ಮೆಂಟ್‌ನಲ್ಲಿ ಹಲವಾರು ಪಾರ್ಕಿಂಗ್ ತಾಣಗಳನ್ನು ಮಾರಾಟ ಮಾಡಲಾಗಿದೆ. ಡೆವಲಪರ್‌ಗಳಾದ ವಾರ್ಫ್ (ಹೋಲ್ಡಿಂಗ್ಸ್) ಮತ್ತು ನ್ಯಾನ್ ಫಂಗ್ ಗ್ರೂಪ್ ಐಷಾರಾಮಿ ಯೋಜನೆಯ ಎರಡನೇ ಮತ್ತು ಮೂರು ಹಂತಗಳಲ್ಲಿ 29 ಪಾರ್ಕಿಂಗ್ ಸ್ಥಳಗಳನ್ನು ಕಳೆದ ತಿಂಗಳು  ಟೆಂಡರ್ ಮೂಲಕ ಮನೆ ಮಾಲೀಕರಿಗೆ ಮಾರಾಟ ಮಾಡಿದೆ. 10 ಮಿಲಿಯನ್‌ಗಿಂತ ಹೆಚ್ಚು ಹಾಂಗ್ ಕಾಂಗ್ ಡಾಲರ್‌ಗಳಿಗೆ ಮಾರಾಟವಾಗಿದೆ ಎಂದು ಮೂಲಗಳು ತಿಳಿಸಿರುವ ಬಗ್ಗೆ ದಕ್ಷಿಣ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ.


ಪ್ರತಿ ಚದರ ಅಡಿಗೆ ಬೆಲೆ 74,350 ಡಾಲರ್‌


ಇನ್ನೊಂದು ಅಚ್ಚರಿಯ ವಿಷಯ ಎಂದರೆ, ದಿ ಪೀಕ್‌ನ ಸೆಂಟಾಲಿನ್ ಪ್ರಾಪರ್ಟಿ ಏಜೆನ್ಸಿಯ ಶಾಖೆಯ ಮಾರಾಟ ನಿರ್ದೇಶಕ ವಿಲಿಯಂ ಲಾ, ಫ್ಲಾಟ್‌ನ ಬೆಲೆಗೆ ಹೋಲಿಸಿದರೆ ಪಾರ್ಕಿಂಗ್ ಸ್ಥಳದ ಬೆಲೆ ತೀರಾ ಕಡಿಮೆ ಎಂದು ಹೇಳಿದರು. ತಮ್ಮ ಕಾರುಗಳನ್ನು ನಿಲುಗಡೆ ಮಾಡಲು ಸ್ಥಳಾವಕಾಶ ಬೇಕೇ ಹೊರತು ಹಣವಲ್ಲ. ಅವರು ಅದನ್ನು ತಮ್ಮ ಸ್ವಂತ ಬಳಕೆಗಾಗಿ ಖರೀದಿಸಿದ್ದಾರೆಯೇ ಹೊರತು ಹೂಡಿಕೆಯಾಗಿ ಅಲ್ಲ. ಎಂದೂ ತಿಳಿಸಿದರು.


2019 ರಲ್ಲಿ ಹಾಂಗ್ ಕಾಂಗ್‌ನಲ್ಲಿ ಖರೀದಿದಾರನು 7.6 ಮಿಲಿಯನ್ ಹಾಂಗ್ ಕಾಂಗ್ ಡಾಲರ್‌ಗಳಿಗೆ (6.16 ಕೋಟಿ ರೂ.) ಜಾಗವನ್ನು ಖರೀದಿಸಿದಾಗ ಅತ್ಯಂತ ದುಬಾರಿ ಪಾರ್ಕಿಂಗ್ ಸ್ಥಳವಾಗಿ ಈ ಹಿಂದೆ ವಿಶ್ವ ದಾಖಲೆಯನ್ನು ಮಾಡಿತ್ತು ಎಂದು ಇನ್ಸೈಡರ್‌ ವರದಿ ಮಾಡಿದೆ. ಈಗ ಆ ದಾಖಲೆಯನ್ನು ಅಳಿಸಿ ಹಾಕಲಾಗಿದೆ.


ಇದನ್ನೂ ಓದಿ: Viral Photo: ತಲೆಕೆಳಗಾದ ಕೋತಿಯ ಚಿತ್ರಕ್ಕೆ 1.5 ಲಕ್ಷ ರೂಪಾಯಿ ಬಹುಮಾನ, ಭಾರತೀಯ ಮೂಲದ ಛಾಯಾಗ್ರಾಹಕನಿಗೆ ಅಂತಾರಾಷ್ಟ್ರೀಯ ಪ್ರಶಸ್ತಿ !


ಮೌಂಟ್ ನಿಕೋಲ್ಸನ್ ಡೆವಲೆಪ್ಮೆಂಟ್‌ ಅನ್ನು 2017 ರಲ್ಲಿ 'ಏಷ್ಯಾದ ಬೆಲೆಬಾಳುವ ವಿಳಾಸ' ಎಂದು ಹೆಸರಿಸಲಾಯಿತು. ಏಕೆಂದರೆ, ಒಬ್ಬರೇ ಖರೀದಿದಾರರಿಗೆ ಎರಡು ಅಪಾರ್ಟ್‌ಮೆಂಟ್‌ಗಳು ಒಟ್ಟು 1.16 ಬಿಲಿಯನ್ ಹಾಂಗ್ ಕಾಂಗ್ ಡಾಲರ್‌ಗಳಿಗೆ (1,093 ಕೋಟಿ ರೂ.) ಮಾರಾಟವಾದವು.


ಈ ವರ್ಷದ ಆರಂಭದಲ್ಲಿ, ಯುಕೆಯ ಅತ್ಯಂತ ದುಬಾರಿ ಪಾರ್ಕಿಂಗ್ ಸ್ಥಳವು 350,000 ಪೌಂಡ್‌ ಅಂದರೆ ಸುಮಾರು 3.62 ಕೋಟಿ ರೂ. ಗೆ ಮಾರಾಟವಾಗಿತ್ತು. ಲಂಡನ್‌ನ ಫ್ಯಾನ್ಸಿ ನೈಟ್ಸ್‌ಬ್ರಿಡ್ಜ್ ಪ್ರದೇಶದಲ್ಲಿರುವ ಈ ಮೂರು ಮೀಟರ್ ಬೈ ಆರು ಮೀಟರ್ ಜಾಗವನ್ನು ಮಾರಾಟ ಮಾಡಲಾಗಿತ್ತು.

First published: