• Home
  • »
  • News
  • »
  • trend
  • »
  • New York: ಮಗುವಿಗೆ ಒಂದೊಳ್ಳೆ ಹೆಸರು ಸೂಚಿಸುವುದಕ್ಕೆ ಪೋಷಕರು ಲಕ್ಷ ರೂಪಾಯಿ ಕೊಡ್ತಾರಂತೆ!

New York: ಮಗುವಿಗೆ ಒಂದೊಳ್ಳೆ ಹೆಸರು ಸೂಚಿಸುವುದಕ್ಕೆ ಪೋಷಕರು ಲಕ್ಷ ರೂಪಾಯಿ ಕೊಡ್ತಾರಂತೆ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Name ceremony: ನಿಮ್ಮ ಮನೆಗೆ ಮಗು ಆಗಮನವಾಗ್ತಾ ಇದ್ಯಾ? ಅದಕ್ಕೆ ಏನು ಹೆಸರು ಇಡೋದು ಅಂತ ತಲೆಕೆಡಿಸಿಕೊಳ್ಳಬೇಡಿ. ದುಡ್ಡು ಚೆನ್ನಾಗಿ ಇದ್ರೆ ಇವರ ಸಜೆಷನ್​ ತಗೊಳಿ.

  • Share this:

ಮಗು ಅಂದ್ರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ. ಹೆಣ್ಣು ತಾಯಿ ( Pregnant) ಆಗ್ತಾ ಇದ್ದಾಳೆ ಎಂದು ತಿಳಿದ ಕೂಡಲೇ ಮನೆಯಲ್ಲಿ ಎಲ್ಲರಿಗೂ ಸಂಭ್ರಮ ಮತ್ತು ಕಾಳಜಿ ಆರಂಭವಾಗುತ್ತದೆ. ಇದದ ಜೊತೆಗೆ ಮಗುವಿಗೆ ಏನು ಹೆಸರು ಇಡುವುದು ಅಂತಾನೂ ಯೋಚನೆಗಳು ಆರಂಭವಾಗಿತ್ತದೆ. ಹೆಣ್ಣು ಹುಟ್ಟಿದರೆ ಯಾವ ಹೆಸರು ಮತ್ತು ಗಂಡು ಹುಟ್ಟಿದರೆ ಯಾವ ಹೆಸರನ್ನು ಇಡುವುದು ಅಂತ ನೂರು ಬಾರಿ ಯೋಚನೆಗಳನ್ನು ಮಾಡುವುದು ಸರ್ವೇ ಸಾಮಾನ್ಯವಾಗಿದೆ. ಹೌದು. ಮಗುವಿನ ಹೆಸರನ್ನು ಆಯ್ಕೆ ಮಾಡುವುದು ಪೋಷಕರಾಗಿ ಅವರು ತೆಗೆದುಕೊಳ್ಳುವ ಮೊದಲ ನಿರ್ಧಾರಗಳಲ್ಲಿ ಒಂದಾಗಿದೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಆದರೆ ಈಗ ಈ ಕೆಲಸವನ್ನು ಸುಲಭ ಮಾಡಿಕೊಡುವ ವೃತ್ತಿಪರರು (Professionals) ಇದ್ದಾರೆ ಎಂದರೆ ನೀವು ನಂಬುತ್ತೀರಾ? ‘ಪ್ರೊಫೆಷನಲ್ ಬೇಬಿ ನೇಮರ್’, ಅವರಿಗೆ ನೀವು ಈ ಜವಾಬ್ದಾರಿಯನ್ನು ಕೊಟ್ಟು ನಿಶ್ಚಿಂತರಾಗಬಹುದು, ಆದರೆ ಅದಕ್ಕೆ ದುಡ್ಡು ಕೊಡಬೇಕು.


ಮಗುವಿಗೆ ಹೆಸರಿಡಲು ಪ್ರೊಫೆಷನಲ್ ಬೇಬಿ ನೇಮರ್ ಎಷ್ಟು ದುಡ್ಡು ತಗೋತಾರೆ?


ನ್ಯೂಯಾರ್ಕ್ ಮೂಲದ 'ಪ್ರೊಫೆಷನಲ್ ಬೇಬಿ ನೇಮರ್' ಟೇಲರ್ ಎ. ಹಂಫ್ರೆ ಅವರು, ತಮ್ಮ ಮಗುವಿಗೆ ಪರಿಪೂರ್ಣವಾದ ಹೆಸರನ್ನು ಆಯ್ಕೆ ಮಾಡುವ ಹಂತದಲ್ಲಿರುವ ಪೋಷಕರು 1,500 ಡಾಲರ್ ಎಂದರೆ 1.14 ಲಕ್ಷ ರೂಪಾಯಿ ಹಣ ನೀಡುತ್ತಾರಂತೆ ಎಂದು ಹೇಳಲಾಗುತ್ತಿದೆ.


ಇದನ್ನೂ ಓದಿ: ಗಣಿತದ ಸೂತ್ರಗಳನ್ನು ಎಷ್ಟು ಸುಲಭವಾಗಿ ಕಲಿಸಿದ್ದಾರೆ ನೋಡಿ ಈ ಶಿಕ್ಷಕ!


ಕೆಲವು ಪೋಷಕರು 10,000 ಡಾಲರ್ ಎಂದರೆ 7.6 ಲಕ್ಷ ರೂಪಾಯಿ ಸಹ ನೀಡುತ್ತಾರೆ. ಇಂತಹ ದೊಡ್ಡ ಮೊತ್ತವನ್ನು ನೀಡುತ್ತಾರೆಯೇ ಮಗುವಿಗೆ ಒಳ್ಳೆಯ ಹೆಸರು ಸೂಚಿಸುವುದಕ್ಕೆ ಅಂತ ನಿಮಗೆ ಆಶ್ಚರ್ಯವಾಗಬಹುದು. ಆದರೆ ಇದು ಸತ್ಯ. ಇಷ್ಟು ದೊಡ್ಡ ಮೊತ್ತವನ್ನು ಪಡೆದು ಹಂಫ್ರೆ ಅವರು ಪೋಷಕರು ತಮ್ಮ ಮಗುವಿಗೆ ಉತ್ತಮವಾದ ಹೆಸರು ನಿರ್ಧರಿಸಲು ಸಹಾಯ ಮಾಡುತ್ತಾರೆ


ಮಕ್ಕಳ ಹೆಸರುಗಳ ಬಗ್ಗೆ ಟೇಲರ್ ಹೇಳುವುದೇನು?


"ನೀವು ಅತ್ಯಂತ ಜನಪ್ರಿಯ ಶಿಶು ಹೆಸರುಗಳನ್ನು ನೋಡಿದರೆ, ಅದು ನಮ್ಮ ಸಾಂಸ್ಕೃತಿಕ ಮೌಲ್ಯಗಳನ್ನು ಒಳಗೊಂಡಿರುವುದರ ಸಂಕೇತವಾಗಿರುತ್ತದೆ" ಎಂದು ಹಂಫ್ರೆ ಅವರು ತಿಳಿಸಿದರು.


ಕಳೆದ ವರ್ಷ, ಇವರು ನೂರಕ್ಕೂ ಹೆಚ್ಚು ಮಕ್ಕಳನ್ನು ಹೆಸರಿಸಲು ಸಹಾಯ ಮಾಡಿದರಂತೆ. ಪೋಷಕರು ಹಂಫ್ರೆಯ ಸೇವೆಗಳಿಂದ ಆಯ್ಕೆ ಮಾಡಬಹುದು, ಇದು 1,500 ಡಾಲರ್ ನಿಂದ ಪ್ರಾರಂಭವಾಗುತ್ತದೆ ಮತ್ತು 10,000 ಡಾಲರ್ ವರೆಗೆ ಹೋಗುತ್ತದೆ.


ಕಡಿಮೆ ಹಣದ ಆಯ್ಕೆಯಲ್ಲಿ 1,500 ಡಾಲರ್ ಹಣದಲ್ಲಿ ಹಳೆಯ ಕುಟುಂಬದ ಹೆಸರುಗಳನ್ನು ಸೂಚಿಸಲಾಗುತ್ತದೆ. ಇದರಲ್ಲಿ ವಂಶಾವಳಿಯ ಬಗ್ಗೆ ತಿಳಿದುಕೊಳ್ಳಲು ಒಂದು ದೂರವಾಣಿ ಕರೆ ಮತ್ತು ಮಕ್ಕಳ ಹೆಸರುಗಳ ಒಂದು ಪಟ್ಟಿಯನ್ನು ನೀಡಲಾಗುತ್ತದೆ.


10,000 ಡಾಲರ್ ಹಣದ ಆಯ್ಕೆಯು ಪೋಷಕರ ವ್ಯವಹಾರದೊಂದಿಗೆ ಆನ್-ಬ್ರ್ಯಾಂಡ್ ಆಗಿರುವ ಹೆಸರನ್ನು ಆಯ್ಕೆ ಮಾಡುವುದನ್ನು ಒಳಗೊಂಡಿರುತ್ತದೆ.


2015 ರಲ್ಲಿ ಶುರು ಮಾಡಿದ್ರಂತೆ ಹಂಫ್ರೆ ಈ ಕೆಲಸ


ಹಂಫ್ರೆ 2015 ರಲ್ಲಿ ತನ್ನ ನೆಚ್ಚಿನ ಮಗುವಿನ ಹೆಸರುಗಳು ಮತ್ತು ಅವುಗಳ ಅರ್ಥಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುವ ಮೂಲಕ ತಮ್ಮ ಈ ವೃತ್ತಿಪರ ಜೀವನವನ್ನು ಶುರು ಮಾಡಿದರು.




"ನಾನು ಎಷ್ಟು ಕಡಿಮೆ ಫಾಲೋವರ್ಸ್ ಗಳನ್ನು ಹೊಂದಿದ್ದರೂ ಸಹ ಎಷ್ಟೊಂದು ಜನರು ನನ್ನನ್ನು ಭೇಟಿ ಮಾಡಲು ಕಾಯುತ್ತಿದ್ದಾರೆ ಅಂತ ನೋಡಿದರೆ ನನಗೆ ತುಂಬಾನೇ ಆಶ್ಚರ್ಯವಾಯಿತು. ನಾನು ಇನ್‌ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಲು ಪ್ರಾರಂಭಿಸಿದಾಗ, ಜನರು ಈ ಮುದ್ದಾದ ಹೆಸರುಗಳ ಮೇಲಿನ ತಮ್ಮ ಪ್ರೀತಿಯಿಂದ ನನ್ನ ಬಳಿಗೆ ಬರುತ್ತಿದ್ದರು. ನಾನು ಯಾವಾಗಲೂ ಒಳ್ಳೆಯ ಹೆಸರುಗಳನ್ನು ಹೊಂದಿದ್ದೆ, ಆದ್ದರಿಂದ ನಮ್ಮಲ್ಲಿ ಬಹಳಷ್ಟು ಜನರು ಬರುತ್ತಿದ್ದುದ್ದನ್ನು ನೋಡಿ ನನಗೆ ತುಂಬಾ ಆಶ್ಚರ್ಯವಾಯಿತು" ಎಂದು ಅವರು ಸುದ್ದಿ ಮಾಧ್ಯಮಕ್ಕೆ ತಿಳಿಸಿದರು.


ಇದನ್ನೂ ಓದಿ: ಹೆಬ್ಬಾವಿನ ಹೊಟ್ಟೆಯಿಂದ ಜೀವಂತವಾಗಿ ಬದುಕಿ ಬಂದ ಮಹಿಳೆ!


"2018 ರಲ್ಲಿ ನನಗೆ ಮಕ್ಕಳ ಹೆಸರುಗಳನ್ನು ಸೂಚಿಸುವುದು ಒಂದೊಳ್ಳೆ ಕೌಶಲ್ಯ ಅಂತ ಅರ್ಥವಾಯಿತು. ಅದಕ್ಕಾಗಿ ಜನರು ನನ್ನ ಬಳಿಗೆ ಬರುತ್ತಿದ್ದಾರೆ ಎಂದು ನಾನು ಅರಿತುಕೊಂಡೆ. ಈ ರೀತಿಯಲ್ಲಿ ಮಹಿಳೆಯರಿಗೆ ಸಹಾಯ ಮಾಡಬೇಕು ಅಂತ ನಿರ್ಧಾರ ಮಾಡಿದೆ” ಎಂದು ಅವರು ವಿವರಿಸುತ್ತಾರೆ.


ಕೆಲವರು ತಮ್ಮ ಮಗುವಿಗೆ ಹೆಸರು ಆಯ್ಕೆ ಮಾಡುವಲ್ಲಿ ಸೋಮಾರಿಗಳಾಗಿದ್ದಾರೆ ಎಂದು ಆರೋಪಿಸಬಹುದಾದರೂ, ಇನ್ನೂ ಕೆಲವು ಪೋಷಕರು ತಮ್ಮ ಮಗುವಿಗೆ ಒಂದೊಳ್ಳೆ ಹೆಸರು ಇಡುವುದಕ್ಕೆ ಹಣ ನೀಡುತ್ತಾರೆ ಎಂದು ಹಂಫ್ರೆ ಅವರು ಹೇಳುತ್ತಾರೆ.

First published: