Viral Photo: ಪ್ರದರ್ಶನಕ್ಕೆ ಇಟ್ಟ ಕಮೋಡ್‌ನಲ್ಲೇ ಶ್ಯು ಶ್ಯು ಮಾಡಿದ ಮಕ್ಕಳು! ಪೋಷಕರ ಸ್ಥಿತಿ ಶೇಮ್ ಶೇಮ್ ಪಪ್ಪಿ ಶೇಮ್

ಇವ್ರು ಬಟ್ಟೆ ಖರೀದಿಗೆ ಅಂತ ಅಂಗಡಿಗೆ ಹೋದರೆ ಅಲ್ಲಿ ಪ್ರದರ್ಶನಕ್ಕೆ ಇಟ್ಟಿರುವ ಶೌಚಾಲಯದ ಕಮೋಡ್‌ನಲ್ಲೇ ಮಕ್ಕಳು ಒಂದು, ಎರಡು ಎಲ್ಲಾ ಮಾಡಿವೆಯಂತೆ! ಈ ಫೋಟೋಗಳು ವೈರಲ್ ಆಗಿದ್ದು, ಜನ ಬಿದ್ದೂ ಬಿದ್ದೂ ನಗುತ್ತಿದ್ದಾರೆ.

ಪ್ರದರ್ಶನಕ್ಕೆ ಇಟ್ಟ ಕಮೋಡ್ ನಲ್ಲಿಯೇ ಮಲಮೂತ್ರ ವಿಸರ್ಜನೆ ಮಾಡಿದ ಮಗು

ಪ್ರದರ್ಶನಕ್ಕೆ ಇಟ್ಟ ಕಮೋಡ್ ನಲ್ಲಿಯೇ ಮಲಮೂತ್ರ ವಿಸರ್ಜನೆ ಮಾಡಿದ ಮಗು

  • Share this:
ಕೆಲವೊಮ್ಮೆ ಈ ಮಕ್ಕಳು (Children) ತಿಳಿಯದೆ ಮಾಡುವ ತುಂಟಾಟಗಳಿಂದ ಮತ್ತು ಎಡವಟ್ಟುಗಳಿಂದ ಪೋಷಕರು (Parents) ಜನರ ಮುಂದೆ ಮುಜುಗರ ಪಡುವಂತೆ ಆಗುತ್ತದೆ. ಪೋಷಕರು ತಮ್ಮ ಮಕ್ಕಳನ್ನು ಅಂಗಡಿಗಳಿಗೆ (Shops) ಜೊತೆಯಲ್ಲಿ ಕರೆದುಕೊಂಡು ಹೋದರೆ ಅಲ್ಲಿರುವ ಯಾವುದಾದರೂ ಚೆನ್ನಾಗಿ ಕಾಣುವ ಆಟಿಕೆ (Toys) ಸಾಮಾನುಗಳನ್ನು ತಮ್ಮ ಬ್ಯಾಗಿಗೆ (Bag) ಹಾಕಿಕೊಳ್ಳುತ್ತಾರೆ ಅಥವಾ ಅಲ್ಲಿ ಸರಿಯಾಗಿ ಜೋಡಿಸಲ್ಪಟ್ಟಂತಹ ವಸ್ತುಗಳನ್ನು ಎಳೆದು ಬೀಳಿಸುತ್ತವೆ. ಹೀಗೆ ಮಕ್ಕಳು ಮಾಡುವ ಎಡವಟ್ಟುಗಳು ಒಂದೇ ಎರಡೇ, ಇವು ಪೋಷಕರನ್ನು ಜನರ ಮುಂದೆ ಮುಜುಗರ ಪಡುವಂತೆ ಮಾಡುತ್ತವೆ. ಇಲ್ಲಿಯೂ ಸಹ ಅಂತಹದೇ ಒಂದು ಘಟನೆ ನಡೆದಿದ್ದು, ಪೋಷಕರು ಮಾತ್ರ ಅಂಗಡಿಯವರ ಮುಂದೆ ತುಂಬಾನೇ ಮುಜುಗರ ಪಡುವಂತಾಗಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಪ್ರದರ್ಶನಕ್ಕೆ ಇತ್ತ ಕಮೋಡ್ ನಲ್ಲಿಯೇ ಮಲಮೂತ್ರ ವಿಸರ್ಜನೆ ಮಾಡಿದ ಮಗು
ಬಟ್ಟೆಯನ್ನು ಖರೀದಿಸಲು ಅಂಗಡಿಗೆ ಹೋದರೆ ತಮ್ಮ ಮಗುವು ಅಲ್ಲಿ ಪ್ರದರ್ಶನಕ್ಕೆ ಅಂತ ಇಟ್ಟಿರುವ ಶೌಚಾಲಯದ ಕಮೋಡ್ ನಲ್ಲಿಯೇ ಮಲಮೂತ್ರ ವಿಸರ್ಜನೆ ಮಾಡಿದೆ ನೋಡಿ. ಈ ಪೋಷಕರಿಗಂತೂ ಮಗುವಿನ ಎಡವಟ್ಟಿನಿಂದ ತುಂಬಾನೇ ಮುಜುಗರವಾಗಿದೆ ಎಂದು ಹೇಳಲಾಗುತ್ತಿದೆ. ಈಗ, ಅವರ ಫೇಸ್‌ಬುಕ್ ಪೋಸ್ಟ್ ಆನ್‌ಲೈನ್ ನಲ್ಲಿ ಜನರನ್ನು ಬಿದ್ದು ಬಿದ್ದು ನಗುವಂತೆ ಮಾಡಿದೆ.

ಇದನ್ನೂ ಓದಿ: Stranger in House: ಆ ಮಹಿಳೆಯ ಮನೆಯಲ್ಲಿ ತುಂಬಾ ದಿನ ಯಾರೋ ಜೊತೆಗೇ ವಾಸಿಸಿದ್ರಂತೆ, ಆಕೆಗೆ ಗೊತ್ತೇ ಆಗ್ಲಿಲ್ವಂತೆ!

"ಏನಾಯಿತು ಎಂಬುದೇ ಅರ್ಥವಾಗಲಿಲ್ಲ, ಬಿ ಅಂಡ್ ಕ್ಯೂ ಅಂಗಡಿಯಲ್ಲಿ ಪ್ರದರ್ಶನಕ್ಕೆ ಅಂತ ಇಟ್ಟಂತಹ ಶೌಚಾಲಯದಲ್ಲಿ ಬಳಸುವ ಕಮೋಡ್ ಗಳಲ್ಲಿ ಒಂದರಲ್ಲಿ ಜೆ ಹೋಗಿ ಕುಳಿತುಕೊಂಡು ಮಲಮೂತ್ರ ವಿಸರ್ಜನೆ ಮಾಡಿದ್ದಾನೆ" ಎಂದು ಇಬ್ಬರ ಮಕ್ಕಳ ತಾಯಿ ತಮ್ಮ ಫೇಸ್‌ಬುಕ್ ಖಾತೆಯ ಪುಟದಲ್ಲಿ ಹಂಚಿಕೊಂಡ ವೈರಲ್ ಪೋಸ್ಟ್ ನಲ್ಲಿ ಬರೆದಿದ್ದಾರೆ, ಇದು ಈಗಾಗಲೇ 25,000ಕ್ಕೂ ಹೆಚ್ಚು ಲೈಕ್ ಗಳನ್ನು ಮತ್ತು ಈ ಪೋಸ್ಟ್ ಅನ್ನು 38,000ಕ್ಕೂ ಹೆಚ್ಚು ಬಾರಿ ಶೇರ್ ಮಾಡಲಾಗಿದೆ.

ಘಟನೆಯ ಬಗ್ಗೆ ವಿವರಿಸಿದ ಮಗುವಿನ ತಾಯಿ
ಗ್ಲಾಸ್ಟನ್‌ಬರಿಯ ಹೋಮ್ ಸಪ್ಲೈ ಸ್ಟೋರ್ ಗೆ ಹೋದಾಗ, ತಮ್ಮ ಮಗ ಡಿಸ್‌ಪ್ಲೇ ಗೆ ಅಂತ ಇರಿಸಿದ ಕಮೋಡ್ ಗಳಲ್ಲಿ ಒಂದರಲ್ಲಿ ಕುಳಿತಿರುವುದನ್ನು ನೋಡಿದ ಯುಕೆ ತಾಯಿ ತನ್ನ ಪೋಸ್ಟ್ ನಲ್ಲಿ ಘಟನೆಯ ಬಗ್ಗೆ ವಿವರಿಸಿದ್ದಾರೆ ನೋಡಿ. ತಾಯಿಯು, ಮಕ್ಕಳು ಆ ಕಮೋಡ್ ಗಳ ಮೇಲೆ ಕುಳಿತಿರುವುದನ್ನು ನೋಡಿ ಅವರನ್ನು ಕೆಳಗೆ ಇಳಿಯಿರಿ ಎಂದು ಹೇಳುತ್ತಾ ಅವರತ್ತ ಓಡಿದ್ದಾರೆ. ಆಗ ಇಬ್ಬರು ಮಕ್ಕಳಲ್ಲಿ ಒಬ್ಬರು ಹಾಗೆಯೇ ಕುಳಿತ್ತಿದ್ದರೇ, ಇನ್ನೊಬ್ಬರು ಅಲ್ಲಿಂದ ಇಳಿದು ಓಡಿ ಹೋದರು. ಆದರೆ ಇದು ತುಂಬಾನೇ ತಡವಾಗಿತ್ತು" ಎಂದು ತಾಯಿ ವಿವರಿಸುತ್ತಾ ತಮ್ಮ ಮಗುವಿನ ಮುಖವನ್ನು ಎಮೋಜಿಯೊಂದಿಗೆ ಮುಚ್ಚಿ ಆ ಫೋಟೋವನ್ನು ಹಂಚಿಕೊಂಡಿದ್ದಾರೆ.

"ನಾನು ಹಾಗೆಯೇ ಕಮೋಡ್ ಮೇಲೆ ಕುಳಿತಿರುವ ಮಗುವಿನ ಹತ್ತಿರ ಹೋದರೆ ಆದಾಗಲೇ ಅವನು ಮಲವಿಸರ್ಜನೆ ಮಾಡಿ ಮುಗಿಸುವ ಹಂತದಲ್ಲಿದ್ದನು, ನಾನು ಟಿಶ್ಯೂಯಿಂದ ಒರೆಸಲು ಹೊರಟೆ, ನನ್ನ ಗಂಡನಿಗಂತೂ ಏನು ಮಾಡುವುದು ಎಂಬುದೇ ತೋಚದಂತಾಗಿತ್ತು" ಎಂದು ಅವಳು ಈ ಮುಜುಗರದ ಆದರೆ ಬೇರೆ ಜನರಿಗೆ ನಗು ತರಿಸುವಂತಹ ಘಟನೆಯನ್ನು ವಿವರಿಸಿದಳು.

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಯಿತು ಫೋಟೋ
ಇದನ್ನು ನೋಡಿದ ಅಂಗಡಿಯಲ್ಲಿನ ಸಹಾಯಕನಿಗೆ ನಗುವುದನ್ನು ನಿಲ್ಲಿಸಲು ಸಾಧ್ಯವಾಗಲಿಲ್ಲ, ಆದರೂ ಈ ಪರಿಸ್ಥಿತಿಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದರು, ಹುಡುಗನನ್ನು ದೂಷಿಸಬೇಡಿ" ಎಂದು ಅವರು ಪೋಷಕರಿಗೆ ಹೇಳಿದರು. ಮಗುವಿನ ತಂದೆ ಮಗ ಮಾಡಿದ ಮಲವನ್ನು ಆ ಕಮೋಡ್ ನಿಂದ ಹೊರ ತೆಗೆಯಲು ಪ್ರಯತ್ನಿಸುತ್ತಿರುವ ಫೋಟೋವನ್ನು ಸಹ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: Viral Video: ಶಾಲಾ ಸಮಾರಂಭದಲ್ಲಿ ಮಗನಿಗೆ ಸರ್ಪ್ರೈಸ್ ಕೊಟ್ಟ ತಂದೆ; ಇವರಿಬ್ಬರ ಬಾಂಧವ್ಯಕ್ಕೆ ಭಾವುಕರಾದ ನೆಟ್ಟಿಗರು

ಆ ಮಗುವಿನ ತಾಯಿ "ಮೊದಮೊದಲು ನಾವು ಈ ಘಟನೆಯನ್ನು ನೋಡಿ ತುಂಬಾನೇ ಮುಜುಗರ ಪಟ್ಟುಕೊಂಡಿದ್ದೆವು, ಆದರೆ ನಂತರ ನಾವು ಅದನ್ನು ತಮಾಷೆಯಾಗಿ ತೆಗೆದುಕೊಂಡೆವು" ಎಂದು ಹೇಳಿದರು. ಅಂಗಡಿಯಲ್ಲಿರುವ ಕೆಲವು ಪೋಷಕರು ಈ ದಂಪತಿಗಳಿಗೆ ಮುಜುಗರವಾಗಬಾರದೆಂದು ಸಹಾನುಭೂತಿಯಿಂದ ನಡೆದುಕೊಂಡರೆ, ಇತರರು ಬಹುಶಃ ಇಂತಹ ಪರಿಸ್ಥಿತಿಯಲ್ಲಿ ನಾವಿದ್ದರೆ ಹೇಗೆ ಪ್ರತಿಕ್ರಿಯಿಸುತ್ತಿದ್ದೆವು ಎಂಬುದು ತಮಗೆ ತಿಳಿದಿಲ್ಲ ಎಂದು ಹೇಳಿದರು.
Published by:Ashwini Prabhu
First published: