Girl Name: 6 ವರ್ಷದ ಹುಡುಗಿಗೆ ಹೆಸರೇ ಕಂಟಕ: ಆಗಿದ್ದೇನು? ಹೀಗಿದೆ ಈ ವಿಚಿತ್ರ ಪ್ರಕರಣ

‘ಹೇ ಅಲೆಕ್ಸಾ ಆ ಚಿತ್ರದ ಹಾಡು ಹಾಕು’ ಅಂತ ಅದಕ್ಕೆ ಆದೇಶಗಳನ್ನು ನೀಡುತ್ತಲೇ ಇರುತ್ತೇವೆ ಮತ್ತು ಅದು ಸಹ ಆದೇಶಗಳಂತೆ ಕೇಳಿದ ಹಾಡುಗಳನ್ನು ಪ್ಲೇ ಮಾಡುತ್ತಾ ನಿಮಗೆ ಮನರಂಜನೆ ನೀಡುತ್ತಿರುತ್ತದೆ. ಹೌದು.. ಇದರ ಬಗ್ಗೆ ಈಗೇಕೆ ಮಾತು ಅಂತೀರಾ? ಇಲ್ಲೊಬ್ಬ ಹುಡುಗಿಯ ಹೆಸರನ್ನು ಆಕೆಯ ಪೋಷಕರು ಬದಲಾಯಿಸಿದ್ದಾರಂತೆ ನೋಡಿ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಸಾಮಾನ್ಯವಾಗಿ ನಿಮ್ಮ ಮನೆಯಲ್ಲಿ ಅಮೆಜಾನ್ ನ (Amazon) ಅಲೆಕ್ಸಾ (Alexa) ಸಾಧನಗಳು ಇದ್ದರೆ, ನಿಮಗೆ ಅದಕ್ಕೆ ಹೇಗೆ ಆದೇಶಗಳನ್ನು ನೀಡಬೇಕು ಅಂತ ಗೊತ್ತಿರುತ್ತದೆ.  ಹೌದು..ನಾವು ಅಮೆಜಾನ್ ಅಲೆಕ್ಸಾ ಸಾಧನಕ್ಕೆ ‘ಹೇ ಅಲೆಕ್ಸಾ ಈ ಚಿತ್ರದ ಹಾಡು ಹಾಕು’, ‘ಹೇ ಅಲೆಕ್ಸಾ ಆ ಚಿತ್ರದ ಹಾಡು (Song) ಹಾಕು’ ಅಂತ ಅದಕ್ಕೆ ಆದೇಶಗಳನ್ನು ನೀಡುತ್ತಲೇ ಇರುತ್ತೇವೆ ಮತ್ತು ಅದು ಸಹ ಆದೇಶಗಳಂತೆ ಕೇಳಿದ ಹಾಡುಗಳನ್ನು ಪ್ಲೇ (Play) ಮಾಡುತ್ತಾ ನಿಮಗೆ ಮನರಂಜನೆ (Entertainment) ನೀಡುತ್ತಿರುತ್ತದೆ. ಹೌದು.. ಇದರ ಬಗ್ಗೆ ಈಗೇಕೆ ಮಾತು ಅಂತೀರಾ? ಇಲ್ಲೊಬ್ಬ ಹುಡುಗಿಯ ಹೆಸರನ್ನು ಆಕೆಯ ಪೋಷಕರು (Parents) ಬದಲಾಯಿಸಿದ್ದಾರಂತೆ ನೋಡಿ.

ಹುಡುಗಿಯ ಹೆಸರು ಬದಲಾಯಿಸುವುದಕ್ಕೂ ಮತ್ತು ಅಲೆಕ್ಸಾ ಸಾಧನಕ್ಕೂ ಯಾವ ರೀತಿಯ ಸಂಬಂಧ ಅಂತೀರಾ? ಈ ಹುಡುಗಿಯ ಹೆಸರು ಸಹ ಅಲೆಕ್ಸಾ ಅಂತ ಇಟ್ಟಿದ್ದರಂತೆ ಎಂದು ಹೇಳಲಾಗುತ್ತಿದೆ.

ಮಗುವಿನ ಹೆಸರು ಬದಲಾಯಿಸಲು ಕಾರಣವೇನು
ಕಾಕತಾಳೀಯವೆಂಬಂತೆ ಅಲೆಕ್ಸಾ ಎಂಬ ತನ್ನ ಮಗಳ ಹೆಸರನ್ನು ಬದಲಾಯಿಸಲು ಜರ್ಮನಿಯ ಮಹಿಳೆಯೊಬ್ಬರು ಈಗ ಅರ್ಜಿ ಸಲ್ಲಿಸಿದ್ದಾರೆ. ನ್ಯೂಯಾರ್ಕ್ ಪೋಸ್ಟ್ ನ ವರದಿಯ ಪ್ರಕಾರ, ಈಗ ಆರು ವರ್ಷದ ಬಾಲಕಿಗೆ ಇದು ತುಂಬಾ ನೋವನ್ನುಂಟು ಮಾಡಿದೆ, ಏಕೆಂದರೆ ಅವಳಿಗೆ ಶಾಲೆಯಲ್ಲಿ ಸ್ನೇಹಿತರು ಈಕೆಯ ಹೆಸರು ಹೇಳಿ ಆದೇಶಗಳನ್ನು ನೀಡಿ ಒಂದು ರೀತಿಯ ಕಾಲೆಳೆದಾಟ ಶುರು ಮಾಡಿದ್ದರಂತೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ:  Marriage with Doll: ಇವನಿಗೆ ಬೊಂಬೆ ಮೇಲೆ ಪ್ಯಾರ್‌ಗೇ ಆಗ್ಬಿಟ್ಟೈತೆ! ಅದನ್ನೇ ಮದ್ವೆಯಾಗ್ತಾನಂತೆ ಈ ಭೂಪ!

ಅಮೆಜಾನ್ ನ ಅಲೆಕ್ಸಾ ಸಾಧನಗಳು ಮಾರುಕಟ್ಟೆಯನ್ನು ಪ್ರವೇಶಿಸುತ್ತಿದ್ದಂತೆಯೇ ಬಾಲಕಿಗೆ ಈ ಹೆಸರು ಬಂದಿದೆ. ಧ್ವನಿ ಆಜ್ಞೆಯಿಂದ ನಿರ್ವಹಿಸಲ್ಪಡುವ, ಅವು ಶೀಘ್ರದಲ್ಲಿಯೇ ತುಂಬಾನೇ ಜನಪ್ರಿಯವಾದವು ಮತ್ತು ಜರ್ಮನಿಯ ಗೊಯೆಟ್ಟಿಂಗೆನ್ ನಲ್ಲಿರುವ ಈ ಹುಡುಗಿಗೆ ಇದರಿಂದ ಆಕೆಯ ಕಾಲೆಳೆದಾಟ ಶುರುವಾಯಿತು. ಆಕೆಯ ಸಹಪಾಠಿಗಳು ನಿರಂತರವಾಗಿ ಅವಳನ್ನು ಅಪಹಾಸ್ಯ ಮಾಡುತ್ತಿದ್ದರು, ಆಟದ ಮೈದಾನದಲ್ಲಿ ಈಕೆಗೆ 'ಅಲೆಕ್ಸಾ' ಅಂತ ಹೇಳಿ ಆದೇಶಗಳನ್ನು ಸಹ ನೀಡುತ್ತಿದ್ದರು ಎಂದು ಪೋಸ್ಟ್ ತನ್ನ ವರದಿಯಲ್ಲಿ ತಿಳಿಸಿದೆ. ಅವಳು ಈಜಲು ಹೋದಾಗ ಸಹ ಆಕೆಯನ್ನು ಸ್ನೇಹಿತರು ಮತ್ತು ಇನ್ನಿತರರು ಗೇಲಿ ಮಾಡಲು ಪ್ರಾರಂಭಿಸಿದರು ಎಂದು ಔಟ್ಲೆಟ್ ಹೇಳಿದೆ.

ಮಗುವಿನ ಹೆಸರೂ ಬಳಸಿ ನಿರಂತರವಾಗಿ ಅಪಹಾಸ್ಯ ಮಾಡುತ್ತಿದ್ದ ಜನ 
ಒಮ್ಮೆ ಅಪರಿಚಿತ ವ್ಯಕ್ತಿಯೊಬ್ಬ ಈ ಪುಟ್ಟ ಹುಡುಗಿಗೆ ಅವಳ ಹೆಸರನ್ನು ಕೇಳಿದ ನಂತರ "ಅಲೆಕ್ಸಾ, ನನಗಾಗಿ ಡ್ಯಾನ್ಸ್ ಮಾಡು" ಎಂದು ಹೇಳಿದ್ದನಂತೆ ಎಂದು ಮಹಿಳೆ ಪೋಸ್ಟ್ ನಲ್ಲಿ ಉಲ್ಲೇಖಿಸಿದ್ದಾರೆ. ಅವಳ ಪೋಷಕರು ಅಂತಿಮವಾಗಿ ಮಗಳ ಈ ಹೆಸರನ್ನು ಬದಲಾಯಿಸುವಂತೆ ಗೊಯೆಟ್ಟಿಂಗೆನ್ ನ ನಗರ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಿದರು. ಅವರು ಪುಟಾಣಿ ಅಲೆಕ್ಸಾ ಹೆಸರು ಬಳಸಿಕೊಂಡು ನಿರಂತರವಾಗಿ ಅಪಹಾಸ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಆಡಳಿತಾತ್ಮಕ ನ್ಯಾಯಾಲಯದ ಮೊರೆ ಹೋದ ದಂಪತಿಗಳು 
ಮಗಳ ಹೆಸರು ಬದಲಾಯಿಸುವ ದಂಪತಿಗಳ ಮೊದಲ ಪ್ರಯತ್ನವನ್ನು ತಿರಸ್ಕರಿಸಲಾಯಿತು, ಆದ್ದರಿಂದ ಅವರು ಮತ್ತೆ ನಗರದ ಆಡಳಿತಾತ್ಮಕ ನ್ಯಾಯಾಲಯದ ಮೊರೆ ಹೋದರು. ಆಸ್ಟ್ರೇಲಿಯಾ ಮೂಲದ ಪೇರೆಂಟಿಂಗ್ ಬ್ರ್ಯಾಂಡ್ ಕಿಡ್ಸ್‌ಸ್ಪಾಟ್ ಪ್ರಕಾರ ಈ ಬಾಲಕಿಯ ಹೆಸರು ಆಕೆಗೆ "ಭಾವನಾತ್ಮಕವಾಗಿ ಹೊರೆಯಾಗಿದೆ" ಎಂದು ನ್ಯಾಯಾಲಯದ ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ ಎಂದು ವರದಿ ಮಾಡಿದೆ.

ಇದನ್ನೂ ಓದಿ: Cooking: ಒಂದಲ್ಲ, ಎರಡಲ್ಲ ಬರೋಬ್ಬರಿ 426 ಬಗೆಯ ಖಾದ್ಯ ತಯಾರಿಸಿದ್ದಾರೆ ಈಕೆ, ಎಲ್ಲಾ ನೆಂಟರಿಗಾಗಿ!

"ಈ ಹೆಸರು ಗೇಲಿ ಮಾಡಲು ಪ್ರಚೋದಿಸುವುದಲ್ಲದೆ, ಇದು ಹುಡುಗಿಗೆ ಅವಮಾನಕರ ಮತ್ತು ಕೀಳುಮಟ್ಟದ ಆದೇಶಗಳನ್ನು ಹೊರಡಿಸಲು ಆಹ್ವಾನಿಸುತ್ತದೆ" ಎಂದು ನ್ಯಾಯಾಲಯವು ತನ್ನ ಆದೇಶದಲ್ಲಿ ಹೇಳಿದೆ, ಪೋಷಕರು ತಮ್ಮ ಮಗಳಿಗೆ ಹೊಸ ಹೆಸರನ್ನು ಆಯ್ಕೆ ಮಾಡಲು ಅನುಮತಿಸಿದ್ದಾರೆ. ಆದಾಗ್ಯೂ, ಅವಳ ಹೊಸ ಹೆಸರಿನ ಬಗ್ಗೆ ಯಾವುದೇ ಮಾಹಿತಿಗಳು ಲಭ್ಯವಾಗಿಲ್ಲ. 'ಅಲೆಕ್ಸಾ' ವಿಶ್ವದಾದ್ಯಂತ ಜನಪ್ರಿಯವಾಗಿದ್ದು, 2019 ರ ಜನವರಿಯಲ್ಲಿ ಅಮೆಜಾನ್ ಇದುವರೆಗೂ 100 ಮಿಲಿಯನ್ ಗೂ ಹೆಚ್ಚು ಅಲೆಕ್ಸಾ ಸಾಧನಗಳನ್ನು ಮಾರಾಟ ಮಾಡಿದೆ ಎಂದು ತಿಳಿದುಬಂದಿದೆ.
Published by:Ashwini Prabhu
First published: