ಸಾಮಾನ್ಯವಾಗಿ ನಾವೆಲ್ಲರೂ ಚಿಕ್ಕವರಾಗಿದ್ದಾಗ ಮಳೆ ನೀರಿನಲ್ಲಿ (Water) ಪೇಪರ್ ನಿಂದ ಹಡಗನ್ನು (Paper Boat) ತಯಾರಿಸಿ ನಿಂತ ಮಳೆ ನೀರಿನ ಮೇಲೆ ಬಿಟ್ಟಿದ್ದು ಮತ್ತು ಪೇಪರ್ ನಿಂದ ವಿಮಾನ (Plane) ಮಾಡಿ ಅದನ್ನು ಹಾಗೆಯೇ ಗಾಳಿಯಲ್ಲಿ ಹಾರಾಡಲು ಬಿಡುವ ಮುಂಚೆ ನಮ್ಮ ಒಂದು ಕೈಯಿಂದ ಅದರ ಮೇಲ್ಮೆಯನ್ನು ಜೋರಾಗಿ ತಿಕ್ಕಿ, ಅದನ್ನು ಊದಿ ಬಿಡುತ್ತಿದ್ದುದು ಎಂದಿಗೂ ಮರೆಯಲು ಸಾಧ್ಯವಿಲ್ಲ. ಇನ್ನು ಬಹುತೇಕ ಪ್ರತಿಯೊಬ್ಬರೂ ತಮ್ಮ ಬಾಲ್ಯದಲ್ಲಿ ಕಾಗದದಿಂದ ವಿಮಾನವನ್ನು ತಯಾರಿಸಿ ಹಾರಿಸಿರಲೇ ಬೇಕು. ಶಾಲೆಯಲ್ಲಿ (School) ತಮ್ಮನ್ನು ತಾವು ರಂಜಿಸಲು ಮಕ್ಕಳು ಮಾಡುತ್ತಿದ್ದ ಕೆಲಸ ಇದು. ಇದು ಶಿಕ್ಷಕರ ಕೋಪವನ್ನು ಕೆರಳಿಸುತ್ತಿತ್ತು ಎಂದು ಹೇಳಿದರೆ ತಪ್ಪಾಗುವುದಿಲ್ಲ.
ಪ್ರತಿಯೊಬ್ಬರೂ ತಮ್ಮ ಕಾಗದದ ವಿಮಾನಗಳು ಇನ್ನೂ ಎತ್ತರಕ್ಕೆ ಹಾರಬೇಕು ಎಂದು ತಮ್ಮ ಸ್ನೇಹಿತರೊಂದಿಗೆ ಸ್ಪರ್ಧೆಗೆ ಇಳಿಯುತ್ತಿದ್ದುದ್ದು ನಮಗೆಲ್ಲಾ ಇನ್ನೂ ನೆನಪಿರುತ್ತದೆ ಎಂದು ಹೇಳಬಹುದು. ಆದರೆ ಈ ಬಾಲ್ಯದ ಆಟವನ್ನು ಬರೀ ಮನೋರಂಜನೆಗೆ ಆಡದೆ, ತುಂಬಾನೇ ಗಂಭೀರವಾಗಿ ತೆಗೆದುಕೊಂಡು ಇದರಲ್ಲೇ ಹೊಸ ಗಿನ್ನೆಸ್ ವಿಶ್ವ ದಾಖಲೆಯನ್ನು ಮಾಡಿರುವವರು ನಮ್ಮ ಮಧ್ಯೆಯೇ ಇದ್ದಾರೆ ಎಂದು ನಾವು ಹೇಳಿದರೆ, ನೀವು ಬಹುಶಃ ಅದನ್ನು ಸುಲಭವಾಗಿ ನಂಬುವುದಿಲ್ಲ.
ಗಿನ್ನೆಸ್ ವಿಶ್ವ ದಾಖಲೆ ಮಾಡಿದ ಕಾಗದದ ವಿಮಾನ
ಹೌದು. ನಾವು ನಿಮಗೆ ಇಲ್ಲಿ ಹೇಳುತ್ತಿರುವುದು ಸುಳ್ಳಲ್ಲ, ಕಾಗದದಿಂದ ವಿಮಾನವನ್ನು ತಯಾರಿಸಿ ಅತ್ಯಂತ ದೂರದ ಹಾರಾಟದ ದಾಖಲೆಯನ್ನು ಮುರಿದ ಒಬ್ಬ ಯುವಕನ ಬಗ್ಗೆ ಇಲ್ಲಿ ಹೇಳುತ್ತೇವೆ ಕೇಳಿ. ಗಿನ್ನೆಸ್ ವಿಶ್ವ ದಾಖಲೆ ಮಾಡಿದ ಒಬ್ಬ ಯುವಕ ತಮ್ಮ ಈ ದಾಖಲೆಯನ್ನು ತೋರಿಸುವ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯ ಪುಟದಲ್ಲಿ ವೀಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ ನೀವೇ ನೋಡಿ.
ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್
ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಎರಡು ದಿನಗಳ ಹಿಂದೆ ಒಂದು ವೀಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದೆ ಮತ್ತು ಇದು ಇಲ್ಲಿಯವರೆಗೂ 3.97 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದೆ ಮತ್ತು 29,800ಕ್ಕೂ ಹೆಚ್ಚು ಲೈಕ್ ಗಳನ್ನು ಸಹ ಇದು ಗಳಿಸಿದೆ. ದಕ್ಷಿಣ ಕೊರಿಯಾದ ಕಿಮ್ ಕ್ಯು ಟೇ ಅವರು ತಮ್ಮ ಕಾಗದದ ವಿಮಾನದ ಮೂಲಕ 252 ಅಡಿ ಮತ್ತು 7 ಇಂಚು ಎಂದರೆ 77.134 ಮೀಟರ್ ಗಳಷ್ಟು ವಿಮಾನ ಪ್ರಯಾಣದ ಮೂಲಕ ಅತ್ಯಂತ ದೂರದ ಹಾರಾಟದ ದಾಖಲೆಯನ್ನು ನಿರ್ಮಿಸಿದ್ದಾರೆ. ಈ ಸಾಧನೆಯಲ್ಲಿ ಅವರಿಗೆ ಅವರ ದೇಶದವರೇ ಆದ ಶಿನ್ ಮೂ ಜೂನ್ ಮತ್ತು ಮಲೇಷ್ಯಾದ ಚೀ ಯಿ ಜಿಯಾನ್ ಸಾತ್ ನೀಡಿದ್ದಾರೆನ್ನಲಾಗಿದೆ.
ಇದನ್ನೂ ಓದಿ: Transgender: ಸಾಧನೆ ಮಾಡುವ ಮೂಲಕ ಸರ್ಕಾರಿ ವೃತ್ತಿ ನಿರ್ವಹಿಸುತ್ತಿರುವ ತೃತಿಯ ಲಿಂಗಿಗಳಿವರು!
ಇವರು ಹಾರಿಸಿದ ಕಾಗದದ ವಿಮಾನವು ಇವರು ಗಾಳಿಯಲ್ಲಿ ತೇಲುತ್ತ ಕೊನೆಗೆ ಎತ್ತರದಿಂದ ಕೆಳಕ್ಕೆ ಇಳಿಯುವ ಮೊದಲು ರೆಕಾರ್ಡ್-ಬ್ರೇಕಿಂಗ್ ಪ್ರಯತ್ನವನ್ನು ಈ ವೀಡಿಯೋ ತೋರಿಸುತ್ತದೆ.
ಕಾಗದದ ವಿಮಾನದ ಅತ್ಯಂತ ದೂರದ ಹಾರಾಟ
ಕಿಮ್ ಕ್ಯು ಟೇ ಅವರು 77.134 ಮೀಟರ್ (252 ಅಡಿ 7 ಇಂಚು) ದೂರದವರೆಗೆ ಕಾಗದದ ವಿಮಾನವನ್ನು ಶಿನ್ ಮೂ ಜೂನ್ (ದಕ್ಷಿಣ ಕೊರಿಯಾ) ಮತ್ತು ಚೀ ಯಿ ಜಿಯಾನ್ (ಮಲೇಷ್ಯಾ) ಅಕಾ ಶಿನ್ ಕಿಮ್ ಚೀ ಟೀಮ್ ಅವರ ಬೆಂಬಲದೊಂದಿಗೆ ಹಾರಿಸಿದ್ದಾರೆ” ಎಂದು ಈ ವೀಡಿಯೋದ ಶೀರ್ಷಿಕೆಯಲ್ಲಿ ಬರೆದಿದ್ದಾರೆ.
View this post on Instagram
"ಇವರು 2012 ರಲ್ಲಿ ಹೊಂದಲಾಗಿದ್ದ ಇಲ್ಲಿಯವರೆಗಿನ ದಾಖಲೆಯನ್ನು ಮುರಿದರು! ಈ ಹಿಂದಿನ ದಾಖಲೆ 69.14 ಮೀಟರ್ (226 ಅಡಿ 10 ಇಂಚು) ಆಗಿದ್ದು ಇದು ಜೋ ಅಯೂಬ್ ಮತ್ತು ಪೇಪರ್ ಏರೋಪ್ಲೇನ್ ಡಿಸೈನರ್ ಜಾನ್ ಎಂ. ಕಾಲಿನ್ಸ್ (ಯುಎಸ್ಎ) ಅವರ ಹೆಸರಿನಲ್ಲಿತ್ತು" ಎಂದು ಗಿನ್ನೆಸ್ ವರ್ಲ್ಡ್ ರೆಕಾರ್ಡ್ ನ ಕಾಮೆಂಟ್ ನಲ್ಲಿ ತಿಳಿಸಲಾಗಿದೆ.
ಈ ಕುರಿತು ಥ್ರೋವರ್ ಕಿಮ್ ಹೇಳಿದ್ದು ಹೀಗೆ
"ನಮ್ಮ ದಾಖಲೆಯನ್ನು ಅಧಿಕೃತ ಗಿನ್ನೆಸ್ ಇನ್‌ಸ್ಟಾಗ್ರಾಮ್ ಖಾತೆಯ ಪುಟದಲ್ಲಿ ಅಪ್ಲೋಡ್ ಮಾಡಿರುವುದು ತುಂಬಾ ಒಳ್ಳೆಯದು. ನಾನು ಥ್ರೋವರ್ ಕಿಮ್. ನನ್ನ ಹದಿಹರೆಯದ ಕನಸನ್ನು ಅನೇಕ ವರ್ಷಗಳ ನಂತರ ನನ್ನ ತಂಡದೊಂದಿಗೆ ಹೊಸ ದಾಖಲೆಯನ್ನು ಬರೆದಿರುವುದರಿಂದ ನನಗೆ ತುಂಬಾನೇ ಸಂತೋಷವಾಗಿದೆ.
ಇದನ್ನೂ ಓದಿ: Youngest CEO: ಬೋಟ್ ಸಂಸ್ಥೆಗೆ ಒಂದು ದಿನ ಸಿಇಒ ಆದ 11 ವರ್ಷದ ದೃಷ್ಟಿಹೀನ ಬಾಲಕ ಪ್ರಥಮೇಶ್ ಸಿನ್ಹಾ
ನಾನು 6 ವರ್ಷಗಳಿಂದ ಈ ಕಾಗದದ ವಿಮಾನಗಳನ್ನು ಹಾರಿಸುತ್ತಾ ಆನಂದಿಸಿದ್ದೇನೆ ಮತ್ತು ನಾನು ಇಷ್ಟಪಡುವದನ್ನು ಮಾಡಲು ಸಾಧ್ಯವಾಗಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ" ಎಂದು ಕಿಮ್ ತಮ್ಮ ವೈಯಕ್ತಿಕ ಇನ್‌ಸ್ಟಾಗ್ರಾಮ್ ಖಾತೆಯ ಪುಟದಲ್ಲಿ ಕಾಮೆಂಟ್ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ