Cute Panda: ಏಳಪ್ಪಾ ತಿಂಡಿ ತಿನ್ನು ಅಂತ ಕರೆದರೆ ಎದ್ದು ತಿನ್ನುತ್ತೆ ಈ ಪಾಂಡಾ! ಮುದ್ದು ಜಾಸ್ತಿ ಆಯ್ತು, ಆದರೂ ಮುದ್ದಾಗಿದೆ

ಪ್ರಾಣಿ ಸಂಗ್ರಹಾಲಯದ ಸಿಬ್ಬಂದಿಯೊಬ್ಬರು, ಪಾಂಡಾವೊಂದರ ಆರೈಕೆ ಮಾಡುತ್ತಿರುವ ದೃಶ್ಯವುಳ್ಳ ವಿಡಿಯೋವೊಂದು ವೈರಲ್ ಆಗಿದ್ದು, ಬಹಳಷ್ಟು ಮಂದಿ ನೆಟ್ಟಿಗರು ‘ಆಹಾ, ಪಾಂಡಾ ಮಹಾಶಯ, ಭಲೇ ನಿನ್ನ ಅದೃಷ್ಟವೇ’ ಎಂದು ಮೂಗಿನ ಮೇಲೆ ಬೆರಳಿಟ್ಟಿದ್ದಾರೆ.

ಪಾಂಡಾ

ಪಾಂಡಾ

  • Share this:
ಪ್ರಾಣಿ ಜಗತ್ತಿನಲ್ಲಿರುವ ಸೋಮಾರಿ (lazy) ಜೀವಿಗಳಲ್ಲಿ ಪಾಂಡಾಗಳು (Panda) ಕೂಡ ಒಂದು ಎಂಬುವುದರಲ್ಲಿ ಎರಡು ಮಾತಿಲ್ಲ. ಆರಾಮಾಗಿ, ಲೋಕದ ಚಿಂತೆಯಿಲ್ಲದೆ ಬಿದ್ದುಕೊಂಡಿರುವ ಪಾಂಡಾಗಳನ್ನು ಕಂಡಾಗ, ಮುಂದಿನ ಜನ್ಮದಲ್ಲಾದರೂ ನಾನು ಪಾಂಡಾ ಆಗಿ ಹುಟ್ಟಿದ್ದರೆ ಚೆನ್ನಾಗಿರುತ್ತೆ ಎಂಬ ಆಸೆಯೊಂದು ನಿಮ್ಮ ಮನಸ್ಸುನ್ನು (mind) ಹಾದುಹೋಗದೇ ಇರಲು ಸಾಧ್ಯವೇ ಇಲ್ಲ ಬಿಡಿ. ಆ ಮುದ್ದು ಪ್ರಾಣಿಗಳನ್ನು (Animals) ಪ್ರೀತಿಸದೇ (Love) ಇರಲು ಹೇಗೆ ಸಾಧ್ಯ ಅಲ್ಲವೇ? ಮೈಯಿಡಿ ಮೃದುವಾದ ರೋಮವುಳ್ಳ, ಗುಂಡುಗುಂಡಾದ ಮತ್ತು ಸದಾ ನಿದ್ರಿಸಲು (Sleepy) ಬಯಸುವ ಪಾಂಡಾಗಳನ್ನು ನೋಡುವುದೇ ಒಂದು ಖುಷಿ. ಕಾರ್ಟೂನ್‍ಗಳಲ್ಲೂ (Cartoon) ಕಾಣ ಸಿಗುವ ಜನಪ್ರಿಯ ಪಾತ್ರಗಳವು. ಹಾಗಾಗಿ, ಮಕ್ಕಳಿಗೂ ಪಾಂಡಾಗಳನ್ನು ಕಂಡರೆ ಅಚ್ಚುಮೆಚ್ಚು.

ಪಾಂಡಾವೊಂದರ ಆರೈಕೆ ಮಾಡುತ್ತಿರುವ ದೃಶ್ಯ ವೈರಲ್
ಇದೀಗ, ಪ್ರಾಣಿ ಸಂಗ್ರಹಾಲಯದ ಸಿಬ್ಬಂದಿಯೊಬ್ಬರು, ಪಾಂಡಾವೊಂದರ ಆರೈಕೆ ಮಾಡುತ್ತಿರುವ ದೃಶ್ಯವುಳ್ಳ ವಿಡಿಯೋವೊಂದು ವೈರಲ್ ಆಗಿದ್ದು, ಬಹಳಷ್ಟು ಮಂದಿ ನೆಟ್ಟಿಗರು ‘ಆಹಾ, ಪಾಂಡಾ ಮಹಾಶಯ, ಭಲೇ ನಿನ್ನ ಅದೃಷ್ಟವೇ’ ಎಂದು ಮೂಗಿನ ಮೇಲೆ ಬೆರಳಿಟ್ಟಿದ್ದಾರೆ. ನೀವು ಕೂಡ ಆ ವಿಡಿಯೋವನ್ನು ಒಮ್ಮೆ ನೋಡಿದರೆ, ಮತ್ತೊಮ್ಮೆ, ಮಗದೊಮ್ಮೆ ನೋಡಲು ಬಯಸುವಿರಿ ಎಂಬುವುದರಲ್ಲಿ ಖಂಡಿತಾ ಸಂಶಯವಿಲ್ಲ.

ಇದನ್ನೂ ಓದಿ:  Viral Photo: ಇದು ಗಂಗೂಬಾಯಿ ಅಲ್ಲ ಗಂಗೂ ಕ್ಯಾಟ್; ಬೆಕ್ಕಿನ ವೇಷಕ್ಕೆ ನೆಟ್ಟಿಗರು ಫ್ಲ್ಯಾಟ್!

ಬ್ಯುಟೆಂಗೆಬೀಡೆನ್ ಎಂಬವರು ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿರುವ ಈ ವಿಡಿಯೋದಲ್ಲಿ, ಮೃಗಾಲಯದ ಪ್ರಾಣಿಗಳ ಉಸ್ತುವಾರಿ ಸಿಬ್ಬಂದಿ ಒಬ್ಬರು, ಆರಾಮಾಗಿ ಮಲಗಿಕೊಂಡಿರುವ ಪಾಂಡಾವೊಂದನ್ನು ಎಬ್ಬಿಸುವ ದೃಶ್ಯವಿದೆ.

ವಿಡಿಯೋದಲ್ಲಿನ ದೃಶ್ಯ ಹೀಗಿದೆ
ಮಹಿಳೆಯೊಬ್ಬರು (ಮೃಗಾಲಯದ ಪ್ರಾಣಿಗಳ ಉಸ್ತುವಾರಿ ಸಿಬ್ಬಂದಿ) ಮಲಗಿರುವ ಪಾಂಡಾದ ಹಿಂಬಂದಿಯಿಂದ ಬಂದು, ಕ್ಯಾರೆಟ್ ಒಂದನ್ನು ಅದರ ಬೆನ್ನಿಗೆ ಚುಚ್ಚುತ್ತಾ ಎಬ್ಬಿಸಲು ಪ್ರಯತ್ನಿಸುತ್ತಾರೆ. ಸೋಮಾರಿ ಪಾಂಡಾ ನಿಧಾನಕ್ಕೆ ಆಕೆಯ ಕಡೆ ತಿರುಗಿ, ಆಕೆಯಿಂದ ತನ್ನ ತಿಂಡಿ ಮತ್ತು ಆ ಕ್ಯಾರೆಟನ್ನು ಪಡೆದು, ಊಟವನ್ನು ಸವಿಯಲೆಂದು ಮತ್ತೆ ಬೆನ್ನು ತಿರುಗಿಸುತ್ತದೆ. ಈ ವಿಡಿಯೋಗೆ “ಎದ್ದೇಳು! ತಿಂಡಿಯ ಸಮಯ! ಎಂಬ ಶೀರ್ಷಿಕೆಯನ್ನು ಕೂಡ ನೀಡಲಾಗಿದೆ.ಈ ವಿಡಿಯೋವನ್ನು ಇದುವರೆಗೆ 5,79000 ಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ, ಲೆಕ್ಕವಿಲ್ಲದಷ್ಟು ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಸಾಮಾಜಿಕ ಮಾಧ್ಯಮ ಬಳಕೆದಾರರು, ಈ ವಿಡಿಯೋದಲ್ಲಿನ ಪಾಂಡಾ ಮತ್ತು ಜೂ ಕೀಪರ್ ನಡುವಿನ ಸಂವಹನವನ್ನು ಬಹಳ ಇಷ್ಟಪಟ್ಟಿದ್ದಾರೆ. ಬಹಳಷ್ಟು ಬಳಕೆದಾರರು ಈ ವಿಡಿಯೋ, ತಮಗೆ ತಮ್ಮ ತಾಯಿಯನ್ನು ನೆನಪಿಸಿದೆ ಎಂದು ಕೂಡ ಬರೆದುಕೊಂಡಿದ್ದಾರೆ. ಇನ್ನುಳಿದವರು, ಆಕೆ ತಿಂಡಿ ತಿನ್ನಲು ಎಬ್ಬಿಸಿದಾಗ, ಪಾಂಡಾ ತನ್ನ ಮನಸ್ಸಿನಲ್ಲಿ ಏನೆಲ್ಲಾ ಯೋಚಿಸಿರಬಹುದು ಎಂಬುದನ್ನು ಊಹಿಸಿ, ಹಾಸ್ಯಮಯ ಪ್ರತಿಕ್ರಿಯಗಳನ್ನು ಕೂಡ ಬರೆದಿದ್ದಾರೆ.

ಅವುಗಳಲ್ಲಿ ಕೆಲವು ಪ್ರತಿಕ್ರಿಯಗಳು ಹೀಗಿವೆ :
“ಪಾಂಡಗಳು ತಿನ್ನುವ ಕಡಿಮೆ ಪೌಷ್ಟಿಕಾಂಶದ ಆಹಾರವು ಅವುಗಳಿಗೆ ಹೆಚ್ಚಿನ ಶಕ್ತಿಯನ್ನು ನೀಡುವುದಿಲ್ಲ, ಹಾಗಾಗಿ ಅವುಗಳು ಹೆಚ್ಚು ಶ್ರಮ ಪಡುವುದಿಲ್ಲ ಎಂದು ನಾನು ಹಿಂದೊಮ್ಮೆ ಓದಿದ್ದೆ. ಹಾಗಾಗಿ, ನನ್ನ ಪ್ರಕಾರ ಅದು ಸರಿ. ಪ್ರಕೃತಿಯ ಹಾಸ್ಯ ಕಲಾವಿದರ ಪಾತ್ರದಲ್ಲಿ ಅವುಗಳನ್ನು ನೋಡುತ್ತಿರುವ ತೃಪ್ತಿ ನನಗಿದೆ” ಎಂದು ಒಬ್ಬ ಟ್ವಿಟ್ಟರ್ ಬಳಕೆದಾರ ಪಾಂಡಾಗಳ ಸೋಮಾರಿತನದ ಹಿಂದಿನ ಕಾರಣ ತಿಳಿಸಿದ್ದರೆ, ಇನ್ನೊಬ್ಬರು “ನನಗೆ ಈ ಪಾಂಡಾದ ಬದುಕು ಬೇಕು! ಕೇವಲ ತಿಂಡಿ ತಿನ್ನಲು ನನ್ನನ್ನು ಎಬ್ಬಿಸಿ!!” ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ:  Carpet Python: ಮನೆಯೊಳಗಿತ್ತು 4 ಬೃಹತ್ ಹೆಬ್ಬಾವು! ಶಾಕಿಂಗ್ ವಿಡಿಯೋ ವೈರಲ್

“ಪಾಂಡಾಗಳಾಗಿ ಪುನರ್ಜನ್ಮ ಪಡೆಯಬೇಕು” ಎಂದು ಒಬ್ಬ ನೆಟ್ಟಿಗ ಆಸೆ ವ್ಯಕ್ತಪಡಿಸಿದ್ದರೆ, ಮತ್ತೊಬ್ಬರು “ನಮಗೆಲ್ಲೆರಿಗೂ ಎಂದಿಗೂ ಮುಗಿಯದಂತಹ ತಿಂಡಿಗಳನ್ನು ತರುವ ಅಂತಹ ಮಹಿಳೆಯ ಅಗತ್ಯವಿದೆ” ಎಂದು ಬರೆದಿದ್ದಾರೆ. ಇನ್ನೊಬ್ಬರು “ನಾನು ನನ್ನ ಮುಂದಿನ ಜನ್ಮದಲ್ಲಿ, ನಿದ್ರಿಸುವ ಊಟ ತಿನ್ನಿಸಿಕೊಳ್ಳುವ ಮತ್ತು ಆ ಬಳಿಕ ಪಾತ್ರೆ ತೊಳೆಯುವುದರ ಬಗ್ಗೆ ಚಿಂತೆಯೇ ಇಲ್ಲದ ಪಾಂಡಾ ಆಗಲು ಬಯಸುವೆ” ಎಂದು ಪ್ರತಿಕ್ರಿಯೆ ನೀಡಿದ್ದಾರೆ.
Published by:Ashwini Prabhu
First published: