Viral Video: ಅಬ್ಬಬ್ಬಾ.. ಮೃಗಾಲಯದಿಂದ ತಪ್ಪಿಸಿಕೊಂಡ ತುಂಟ ಪಾಂಡಾ..! ವಿಡಿಯೋ ನೋಡಿ

ಈ ವಿಡಿಯೋ ತುಣುಕು ಚೀನಾದ ಬೀಜಿಂಗ್ ಮೃಗಾಲಯದಲ್ಲಿರುವ ದೈತ್ಯ ಪಾಂಡಾದು ಎಂದು ಹೇಳಲಾಗುತ್ತಿದೆ. ಮೃಗಾಲಯದಲ್ಲಿರುವ ತನ್ನ ಆವರಣದಿಂದ ತಪ್ಪಿಸಿಕೊಂಡ ಕ್ಷಣವನ್ನು ಇಲ್ಲಿ ನೀವು ನೋಡಬಹುದಾಗಿದೆ.

ಪಾಂಡಾ

ಪಾಂಡಾ

  • Share this:
ಈಗಂತೂ ಸಾಮಾಜಿಕ ಮಾಧ್ಯಮಗಳಲ್ಲಿ( social media) ಪ್ರಾಣಿಗಳ ತುಂಟಾಟದ ವಿಡಿಯೋಗಳನ್ನು ನೋಡಿ ಮೆಚ್ಚದವರೇ ಇಲ್ಲ ಎಂದು ಹೇಳಬಹುದು. ಈ ಕಾಡು ಪ್ರಾಣಿಗಳ (Wild animal) ತುಂಟಾಟವು ಒಂದೆಡೆಯಾದರೆ ಈ ಮೃಗಾಲಯದಲ್ಲಿರುವಂತಹ ( Zoo) ಪ್ರಾಣಿಗಳ ತುಂಟಾಟವೇ ಬೇರೆಯಾಗಿರುತ್ತದೆ. ಒಟ್ಟಿನಲ್ಲಿ ಕೆಲವು ಭಯಾನಕ ಪ್ರಾಣಿಗಳ ವಿಡಿಯೋಗಳು ನೆಟ್ಟಿಗರಿಗೆ ಹೇಗೆ ಭಯ ಹುಟ್ಟಿಸುತ್ತವೆಯೋ (Scariest) ಅದೇ ರೀತಿಯಲ್ಲಿ ಕೆಲವು ಸಾಕು ಪ್ರಾಣಿಗಳ ಮತ್ತು ಮೃಗಾಲಯದಲ್ಲಿ ಬರುವಂತಹ ಜನರನ್ನು ರಂಜಿಸುವ ಪ್ರಾಣಿಗಳ ವಿಡಿಯೋಗಳು (Videos) ನೋಡುಗರ ಮನಸ್ಸಿಗೆ ಮುದವನ್ನು ನೀಡುತ್ತವೆ ಎಂದು ಹೇಳಿದರೆ ಅತಿಶಯೋಕ್ತಿಯಲ್ಲ.

ಪಾಂಡಾ ಹರಸಾಹಸ
ಜನರು ಹೆಚ್ಚಾಗಿ ಪ್ರಾಣಿಗಳ ವಿಡಿಯೋಗಳನ್ನು ನೋಡುತ್ತಾರೆ, ಹಾಗಾಗಿಯೇ ಪ್ರಾಣಿಗಳ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹೆಚ್ಚಾಗಿ ವೈರಲ್ ಆಗುತ್ತವೆ. ಈಗ ಮತ್ತೊಂದು ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ ನೋಡಿ, ಇಲ್ಲೊಂದು ಪುಟ್ಟ ಅಂದವಾದ ಪಾಂಡಾವೊಂದು ಹೇಗೆ ತಾನಿದ್ದ ಮೃಗಾಲಯದ ಅವರಣದಿಂದ ಆಚೆ ಬಂದಿದೆ ನೋಡಿ. ಈ ವಿಡಿಯೋ ನೋಡಲು ತಮಾಷೆ ಎನ್ನಿಸಬಹುದು, ಏಕೆಂದರೆ ಈ ಪಾಂಡಾ ಹೊರಬರಲು ತುಂಬಾನೇ ಹರಸಾಹಸ ಪಟ್ಟಿದ್ದು, ಕೊನೆಗೂ ಹೊರ ಬಂದಿರುವುದು ನಿಜಕ್ಕೂ ಸಂತೋಷ ನೀಡುತ್ತದೆ.

ಇದನ್ನೂ ಓದಿ: Cold Wave: ಶೀತಗಾಳಿಗೆ ಪ್ರಾಣಿ ಪಕ್ಷಿಗಳ ರಕ್ಷಿಸಲು ಅಸ್ಸಾಂ ಮೃಗಾಲಯದಲ್ಲಿ ಸಖತ್‌ ಐಡಿಯಾ... ಏನು ಗೊತ್ತೇ?

ಆನ್‌ಲೈನ್‌ನಲ್ಲಿ ವೈರಲ್ ಆದ ಉಲ್ಲಾಸದ ಈ ವಿಡಿಯೋ ತುಣುಕು ಚೀನಾದ ಬೀಜಿಂಗ್ ಮೃಗಾಲಯದಲ್ಲಿರುವ ದೈತ್ಯ ಪಾಂಡಾದು ಎಂದು ಹೇಳಲಾಗುತ್ತಿದೆ. ಮೃಗಾಲಯದಲ್ಲಿರುವ ತನ್ನ ಆವರಣದಿಂದ ತಪ್ಪಿಸಿಕೊಂಡ ಕ್ಷಣವನ್ನು ಇಲ್ಲಿ ನೀವು ನೋಡಬಹುದಾಗಿದೆ.

ವಿಡಿಯೋ ನೋಡಿ:

6 ಅಡಿ ಎತ್ತರದ ಲೋಹದ ಬೇಲಿ ಏರಿದ ಪಾಂಡಾ
ಅಲ್ಲಿನ ಸುದ್ದಿ ಮಾಧ್ಯಮದ ಪ್ರಕಾರ, ಮೃಗಾಲಯದ ಸಂದರ್ಶಕರು ಬುಧವಾರ 6 ವರ್ಷದ ಮೆಂಗ್ ಲ್ಯಾನ್ ಪಾಂಡಾ ತನ್ನ ಆವರಣದ ಗೋಡೆ ಏರುತ್ತಿದ್ದಂತೆ ಆಶ್ಚರ್ಯದಿಂದ ವೀಕ್ಷಿಸಿದರು. ಪಾಂಡಾ ತನ್ನ ಆವರಣದ ಸುತ್ತಲಿನ 6 ಅಡಿ ಎತ್ತರದ ಲೋಹದ ಬೇಲಿ ಏರುತ್ತಿದ್ದಂತೆ ಸಿಬ್ಬಂದಿ ಸದಸ್ಯರು ಕುತೂಹಲಕಾರಿ ಜನಸಮೂಹಕ್ಕೆ ಪಾಂಡಾದಿಂದ ತಮ್ಮ ಅಂತರ ಕಾಯ್ದುಕೊಳ್ಳುವಂತೆ ಹೇಳಿದರು ಎಂದು ವರದಿಯಾಗಿದೆ.

ಈ ತುಂಟ ಪಾಂಡಾ ಊಟ ಸಿಗುತ್ತದೆ ಎಂದು ತನ್ನ ಆವರಣ ದಾಟಿ ಮೃಗಾಲಯದ ಪ್ರದೇಶ ದಾಟಿಕೊಂಡು ಬಫರ್ ವಲಯಕ್ಕೆ ಬಂದಿತು. ಪಾಂಡಾ ಹೇಗೆ ತನ್ನ ಸುತ್ತಲೂ ಹಾಕಿದ 6 ಅಡಿ ಎತ್ತರದ ಲೋಹದ ಬೇಲಿಯನ್ನು ಹತ್ತಿ ನಂತರ ಆ ಕಡೆಗೆ ದಾಟಿಕೊಂಡು ಬಂದಿರುವ ವಿಡಿಯೋವನ್ನು ಮೃಗಾಲಯಕ್ಕೆ ಭೇಟಿ ನೀಡಿದ ಸಂದರ್ಶಕರು ಸೆರೆ ಹಿಡಿದಿದ್ದಾರೆ ಮತ್ತು ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಈ ವೀಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಬೀಜಿಂಗ್ ಮೃಗಾಲಯ
ಚೀನಾದ ಮೈಕ್ರೋಬ್ಲಾಗಿಂಗ್ ಸೈಟ್ ವೀಬೋ ಪೋಸ್ಟ್‌ನಲ್ಲಿ ಬೀಜಿಂಗ್ ಮೃಗಾಲಯವು ಮೆಂಗ್ ಲ್ಯಾನ್ ಎಂದಿಗೂ ಸಾರ್ವಜನಿಕರೊಂದಿಗೆ ಸಂಪರ್ಕಕ್ಕೆ ಬರಲಿಲ್ಲ ಮತ್ತು ಸಂದರ್ಶಕರಿಗೆ ಪ್ರವೇಶವಿರುವ ಮೃಗಾಲಯದ ಪ್ರದೇಶದಲ್ಲಿ ಸಹ ಎಂದಿಗೂ ಬಂದಿರಲಿಲ್ಲ ಎಂದು ಹೇಳಿದೆ.

ಇದನ್ನೂ ಓದಿ: ಅರಣ್ಯ ಸಚಿವರ ತವರಲ್ಲೇ ಝೂನಲ್ಲಿ ಅನಾರೋಗ್ಯದಿಂದ ಸಿಂಹ ಸಾವು: ಸಾವಿನ ಸುತ್ತ ಅನುಮಾನಗಳ ಹುತ್ತ

ಈ ತುಂಟ ಪಾಂಡಾವನ್ನು ಮೃಗಾಲಯದ ಸಿಬ್ಬಂದಿ ಅದರ ಆವರಣಕ್ಕೆ ಮರಳಿ ಬಿಡಲಾಯಿತು, ಸಿಬ್ಬಂದಿಯು ಹಸಿದ ಪಾಂಡಾಗೆ ಆಹಾರ ನೀಡಿದರು. ನಂತರ ಆ ಪಾಂಡಾ ತನ್ನ ಆವರಣದಲ್ಲಿಯೇ ಸಂತೋಷದಿಂದ ಆಡುವುದನ್ನು ಗಮನಿಸಲಾಯಿತು. ಮೆಂಗ್ ಲ್ಯಾನ್ ತುಂಟತನದ ನಡವಳಿಕೆಯ ಇತಿಹಾಸ ಹೊಂದಿದೆ ಮತ್ತು ಇನ್ನು ಮುಂದೆ ತಪ್ಪಿಸಿಕೊಳ್ಳುವ ಪ್ರಯತ್ನಗಳನ್ನು ತಡೆಯಲು ಅದರ ಆವರಣವನ್ನು ಮಾರ್ಪಡಿಸಲಾಗುವುದು ಎಂದು ಮೃಗಾಲಯ ಹೇಳಿದೆ.
Published by:vanithasanjevani vanithasanjevani
First published: