Viral Video: ನೀವು ಎಂದಾದರೂ ಪ್ಯಾನ್​ನಿಂದ ಕಪಾಳಕ್ಕೆ ಹೊಡೆಯುವ ಸ್ಪರ್ಧೆ ನೋಡಿದ್ದೀರಾ? ಈ ವೈರಲ್ ವಿಡಿಯೋ ನೋಡಿ

ವಿಚಿತ್ರ ವಿಡಿಯೋಗಳ ಬಗ್ಗೆ ಇಷ್ಟೇಕೆ ಪೀಠಿಕೆ ಅಂತೀರಾ? ಇಲ್ಲೊಂದು ವಿಡಿಯೋ ಇದೆ ನೋಡಿ, ಅದರಲ್ಲಿರುವ ಸ್ಪರ್ಧೆಯ ಬಗ್ಗೆ ನೀವು ಎಲ್ಲಿಯೂ ಕೇಳಿರಲಿಕ್ಕಿಲ್ಲ. ಇದು "ಪ್ಯಾನ್ ಸ್ಲ್ಯಾಪಿಂಗ್ ಕಾಂಟೆಸ್ಟ್" ಅಂತೆ, ಎಂದರೆ ಕನ್ನಡದಲ್ಲಿ ಇದನ್ನು ಅರ್ಥವಾಗುವಂತೆ ಹೇಳಬೇಕಾದರೆ ಇದು ಅಡುಗೆ ಮಾಡಲು ಬಳಸುವ ಪ್ಯಾನ್ ನಿಂದ ಕಪಾಳಕ್ಕೆ ಬಾರಿಸುವ ಸ್ಪರ್ಧೆ ಅಂತ ಹೇಳಬಹುದು ನೋಡಿ.

ಪ್ಯಾನ್ ಸ್ಲ್ಯಾಪಿಂಗ್ ಕಾಂಟೆಸ್ಟ್

ಪ್ಯಾನ್ ಸ್ಲ್ಯಾಪಿಂಗ್ ಕಾಂಟೆಸ್ಟ್

  • Share this:
ಸಾಮಾನ್ಯವಾಗಿ ನಾವು ಈ ಪ್ಯಾನ್ ಗಳನ್ನು (Pan) ಆಹಾರ ಪದಾರ್ಥಗಳನ್ನು ಬಿಸಿ ಮಾಡಿಕೊಳ್ಳಲು ಮತ್ತು ಚಪಾತಿ, ದೋಸೆಗಳನ್ನು ಮಾಡಿಕೊಳ್ಳಲು ಬಳಸುತ್ತೇವೆ. ಆದರೆ ಇಲ್ಲಿ ಈ ಪ್ಯಾನ್ ಅನ್ನು ಬೇರೆಯದ್ದಕ್ಕೆ ಬಳಸಿದ್ದಾರೆ, ಯಾವುದಕ್ಕೆ ಬಳಸಿದ್ದಾರೆ ಅಂತ ನೀವು ನೋಡಿದರೆ ಒಂದು ಕ್ಷಣ ದಂಗಾಗುವುದಂತೂ ಗ್ಯಾರಂಟಿ. ಈ ಸಾಮಾಜಿಕ ಮಾಧ್ಯಮಗಳು (Social Media) ಹುಟ್ಟಿಕೊಂಡಾಗಿನಿಂದ ಈ ವಿಡಿಯೋಗಳನ್ನು ರೆಕಾರ್ಡ್ ಮಾಡಿ ಪೋಸ್ಟ್ (Post) ಮಾಡುವ ಅಭ್ಯಾಸ ಶುರುವಾಯಿತು. ಬರೀ ವಿಡಿಯೋಗಳನ್ನು (Video) ರೆಕಾರ್ಡ್ ಮಾಡಿ ಪೋಸ್ಟ್ ಮಾಡುವುದಲ್ಲದೆ, ಜನರಿಗೆ ಇಷ್ಟವಾಗುವ ರೀತಿಯಲ್ಲಿ ಮತ್ತು ಅದನ್ನು ಸಿಕ್ಕಾಪಟ್ಟೆ ಜನರು ನೋಡಿ ವೈರಲ್ (Viral) ಮಾಡುವ ಹಾಗೆ ಮಾಡುವುದಕ್ಕೆ ಜನರು ಕೆಲವೊಮ್ಮೆ ವಿಚಿತ್ರವಾದ ಕೆಲಸಗಳನ್ನು ಮಾಡಲು ಸಹ ಶುರು ಮಾಡಿದರು ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಇಂತಹ ಅನೇಕ ವಿಚಿತ್ರಗಳ ವಿಡಿಯೋಗಳನ್ನು ನಾವು ಇಂದು ಸಾಮಾಜಿಕ ಮಾಧ್ಯಮಗಳಲ್ಲಿ ನೋಡುತ್ತೇವೆ. ಹಾಗಂತ ಬರೀ ಇಂತಹ ವಿಡಿಯೋಗಳೇ ಇರುತ್ತವೆ ಎಂದು ನಾವು ಹೇಳುತ್ತಿಲ್ಲ. ಮನಸ್ಸಿಗೆ ಮುದ ನೀಡುವ ಮತ್ತು ನಗು ತರಿಸುವ ವಿಡಿಯೋಗಳು ಸಹ ನಮಗೆ ನೋಡಲು ಸಿಗುತ್ತವೆ ಎಂದು ಹೇಳಬಹುದು.

ಏನಿದು "ಪ್ಯಾನ್ ಸ್ಲ್ಯಾಪಿಂಗ್ ಕಾಂಟೆಸ್ಟ್"
ವಿಚಿತ್ರ ವಿಡಿಯೋಗಳ ಬಗ್ಗೆ ಇಷ್ಟೇಕೆ ಪೀಠಿಕೆ ಅಂತೀರಾ? ಇಲ್ಲೊಂದು ವಿಡಿಯೋ ಇದೆ ನೋಡಿ, ಅದರಲ್ಲಿರುವ ಸ್ಪರ್ಧೆಯ ಬಗ್ಗೆ ನೀವು ಎಲ್ಲಿಯೂ ಕೇಳಿರಲಿಕ್ಕಿಲ್ಲ. ಇದು "ಪ್ಯಾನ್ ಸ್ಲ್ಯಾಪಿಂಗ್ ಕಾಂಟೆಸ್ಟ್" ಅಂತೆ, ಎಂದರೆ ಕನ್ನಡದಲ್ಲಿ ಇದನ್ನು ಅರ್ಥವಾಗುವಂತೆ ಹೇಳಬೇಕಾದರೆ ಇದು ಅಡುಗೆ ಮಾಡಲು ಬಳಸುವ ಪ್ಯಾನ್ ನಿಂದ ಕಪಾಳಕ್ಕೆ ಬಾರಿಸುವ ಸ್ಪರ್ಧೆ ಅಂತ ಹೇಳಬಹುದು ನೋಡಿ.

ಇದನ್ನೂ ಓದಿ: Sunset: ಸುಂದರ ಸೂರ್ಯಾಸ್ತಮಾನ ಸೆರೆಹಿಡಿಯಲು ಟ್ರಾಫಿಕ್ ಸ್ಟಾಪ್ ಮಾಡಿದ ಜನ!

ಇದು ಎಂತಹ ಒಂದು ವಿಲಕ್ಷಣ ಸ್ಪರ್ಧೆ ಅಂತ ಇದರ ಹೆಸರು ಕೇಳಿದರೆನೆ ನಿಮಗೆ ಅರ್ಥವಾಗಿರಬಹುದು ಅಲ್ಲವೇ? ಈ ವಿಡಿಯೋದಲ್ಲಿ ಇಬ್ಬರು ಪುರುಷರು ಈ ಸ್ಪರ್ಧೆಯಲ್ಲಿ ಭಾಗವಹಿಸಿರುವುದನ್ನು ಮತ್ತು ಹೇಗೆ ಒಬ್ಬರಿಗೊಬ್ಬರು ಪ್ಯಾನ್ ನಿಂದ ಜೋರಾಗಿ ಕಪಾಳಕ್ಕೆ ಹೊಡೆದುಕೊಂಡಿದ್ದಾರೆ ಅಂತ ನೀವೇ ನೋಡಿ. ಈ ವಿಡಿಯೋ ಇಂಟರ್ನೆಟ್ ನಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಸಿಕ್ಕಾಪಟ್ಟೆ ವೈರಲ್ ಆದ ವಿಡಿಯೋದಲ್ಲಿ ಏನಿದೆ?
ಮಾಜಿ ಎನ್‌ಬಿಎ ಆಟಗಾರರಾದ ರೆಕ್ಸ್ ಚಾಪ್ಮನ್ ಹಂಚಿಕೊಂಡಿರುವ ಸಣ್ಣ ಕ್ಲಿಪ್ ನಲ್ಲಿ ಇಬ್ಬರು ಪುರುಷರು ಒಬ್ಬರಿಗೊಬ್ಬರು ಕಪಾಳಕ್ಕೆ ಸರದಿಯ ಪ್ರಕಾರವಾಗಿ ಹೊಡೆದಿರುವುದನ್ನು ನಾವು ನೋಡಬಹುದು. ಈ ಸ್ಪರ್ಧೆಯಲ್ಲಿ ಭಾಗವಹಿಸಿದಂತಹ ಇಬ್ಬರು ಸ್ಪರ್ಧಿಗಳು ಯಾವುದೇ ಗಂಭೀರವಾದ ಗಾಯವಾಗಬಾರದೆಂದು ತಮ್ಮ ತಲೆಗಳನ್ನು ರಕ್ಷಿಸುವ ಲೋಹದ ನೈಟ್ ಹೆಲ್ಮೆಟ್ ಗಳನ್ನು ಧರಿಸಿರುವುದನ್ನು ನೋಡಬಹುದು.ಅವರಲ್ಲಿ ಒಬ್ಬರು ಕೊನೆಗೆ ನಿಧಾನವಾಗಿ ಹೇಗೆ ನೆಲಕ್ಕೆ ಬೀಳುತ್ತಾರೆ ಎನ್ನುವುದನ್ನು ವಿಡಿಯೋದ ಕೊನೆಯಲ್ಲಿ ನೋಡಬಹುದು. ಈ ಸ್ಪರ್ಧೆಯಲ್ಲಿ ಒಬ್ಬರು ಕೆಳಕ್ಕೆ ಬೀಳುವವರೆಗೆ ಮತ್ತು ತಮ್ಮ ಕೈಗಳನ್ನು ಮೇಲಕ್ಕೆ ಎತ್ತುವವರೆಗೆ ಆಟ ಹಾಗೆ ಮುಂದುವರೆಯುತ್ತದೆ. ಈ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಾಗಿನಿಂದ, ಇದು ಎರಡು ದಶಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಮತ್ತು ಸಾವಿರಾರು ಲೈಕ್ ಗಳನ್ನು ಅಲ್ಲದೆ ಕಾಮೆಂಟ್ ಗಳನ್ನು ಸಹ ಗಳಿಸಿದೆ.

ವಿಡಿಯೋ ನೋಡಿ ನೆಟ್ಟಗರು ಹೇಳಿದ್ದು ಹೀಗೆ
ಈ ಕ್ಲಿಪ್ ಗೆ ಪ್ರತಿಕ್ರಿಯಿಸಿರುವ ನೆಟ್ಟಿಗರೊಬ್ಬರು "ಇದು ನಮ್ಮ ಸಂಪ್ರದಾಯವಲ್ಲ ಬಿಡಿ" ಎಂದು ತಮಾಷೆಯಾಗಿ ಬರೆದಿದ್ದಾರೆ. "ಅನ್ಯಗ್ರಹದ ನಾಗರಿಕತೆ ಅಂತಿಮವಾಗಿ ಭೂಮಿಯನ್ನು ತಲುಪಿದಾಗ ಹೀಗೆ ಆಗುತ್ತದೆ ಎಂದು ನಾನು ಆಶಿಸುತ್ತೇನೆ" ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ:  Kacha Badam: ಕೊಳಲಿನಲ್ಲಿ ‘ಕಚ್ಚಾ ಬಾದಾಮ್’ ಹಾಡು ನುಡಿಸಿದ ಬಲೂನ್ ವ್ಯಾಪಾರಿ! ನೀವೂ ಒಮ್ಮೆ ಕೇಳಿ

ಪ್ಯಾನ್ ಕಪಾಳ ಮೋಕ್ಷ ಸ್ಪರ್ಧೆಯು ಅಸ್ತಿತ್ವದಲ್ಲಿರುವ ಏಕೈಕ ವಿಲಕ್ಷಣ ಸ್ಪರ್ಧೆಯಲ್ಲ. ಮಾರ್ಚ್ ನಲ್ಲಿ, ಹಾಲಿವುಡ್ ನಟ ಅರ್ನಾಲ್ಡ್ ಶ್ವಾರ್ಜನೆಗ್ಗರ್ ಸ್ಥಾಪಿಸಿದ ಅರ್ನಾಲ್ಡ್ ಸ್ಪೋರ್ಟ್ಸ್ ಫೆಸ್ಟಿವಲ್ ನಲ್ಲಿ "ಸ್ಲ್ಯಾಪ್ ಫೈಟಿಂಗ್ ಚಾಂಪಿಯನ್ ಶಿಪ್" ನ ಆವೃತ್ತಿಯನ್ನು ಪ್ರಾರಂಭಿಸಿತ್ತು. ಇದನ್ನು ಶುರು ಮಾಡುವ ಮುಂಚೆ ಮೊದಲ ವೃತ್ತಿಪರ "ಪಿಲ್ಲೋ ಫೈಟಿಂಗ್ ಚಾಂಪಿಯನ್‌ಶಿಪ್" ಅನ್ನು 2022 ರ ಜನವರಿಯಲ್ಲಿ ಅಮೆರಿಕದಲ್ಲಿ ನಡೆಸಲಾಯಿತು.
Published by:Ashwini Prabhu
First published: