• Home
  • »
  • News
  • »
  • trend
  • »
  • Viral Video: ವಲಸೆ ಹಕ್ಕಿಗಳು ಹಾರುತ್ತಾ ಎಷ್ಟು ದೂರ‌ ಪ್ರಯಾಣ ಮಾಡುತ್ತವೆ ನೋಡಿ

Viral Video: ವಲಸೆ ಹಕ್ಕಿಗಳು ಹಾರುತ್ತಾ ಎಷ್ಟು ದೂರ‌ ಪ್ರಯಾಣ ಮಾಡುತ್ತವೆ ನೋಡಿ

ಪಾಲಿಡ್ ಹ್ಯಾರಿಯರ್ ಹಕ್ಕಿ

ಪಾಲಿಡ್ ಹ್ಯಾರಿಯರ್ ಹಕ್ಕಿ

ಬೇರೆ ಬೇರೆ ಹಕ್ಕಿಗಳ ಜೀವನಶೈಲಿ ಕೂಡ ಬೇರೆಯದೇ ಆಗಿರುತ್ತೆ. ಅಂದಹಾಗೆ ಈ ಹಕ್ಕಿಗಳು ಪ್ರತಿವರ್ಷ ಎಲ್ಲಿಂದೆಲ್ಲಿಗೋ ಪ್ರಯಾಣ ಬೆಳೆಸುತ್ತವೆ. ವಲಸೆ ಹೋಗುತ್ತವೆ. ಹಾಗಾಗಿಯೇ ಐಎಫ್‌ ಎಸ್‌ ಅಧಿಕಾರಿಯೊಬ್ಬರು ಈ ಹಕ್ಕಿಗಳನ್ನು ನಿಜವಾದ ಪ್ರವಾಸಿಗರು ಅಂತ ಕರೆದಿದ್ದಾರೆ.

  • News18 Kannada
  • Last Updated :
  • New Delhi, India
  • Share this:

ಹಕ್ಕಿಗಳದ್ದು (Birds) ಬೇರೆಯದೇ ಪ್ರಪಂಚ. ಗುಬ್ಬಚ್ಚಿಯಂಥ ಪುಟ್ಟ ಹಕ್ಕಿಗಳಿಂದ ಹಿಡಿದು ರಣಹದ್ದುಗಳಂಥ ದೊಡ್ಡ ಪಕ್ಷಿಗಳ ಸ್ವಭಾವ, ಶಕ್ತಿ, ಸಾಮರ್ಥ್ಯ, ಆಹಾರ ವಿಹಾರ ಎಲ್ಲವೂ ಬೇರೆಯದೇ ಆಗಿರುತ್ತೆ. ಅಲ್ಲದೇ ಬೇರೆ ಬೇರೆ ಹಕ್ಕಿಗಳ ಜೀವನಶೈಲಿ (Birds Lifestyle) ಕೂಡ ಬೇರೆಯದೇ ಆಗಿರುತ್ತೆ. ಅಂದಹಾಗೆ ಈ ಹಕ್ಕಿಗಳು ಪ್ರತಿವರ್ಷ ಎಲ್ಲಿಂದೆಲ್ಲಿಗೋ ಪ್ರಯಾಣ ಬೆಳೆಸುತ್ತವೆ. ವಲಸೆ ಹೋಗುತ್ತವೆ. ಹಾಗಾಗಿಯೇ ಐಎಫ್‌ ಎಸ್‌ ಅಧಿಕಾರಿಯೊಬ್ಬರು (IFS Officer) ಈ ಹಕ್ಕಿಗಳನ್ನು ನಿಜವಾದ ಪ್ರವಾಸಿಗರು ಅಂತ ಕರೆದಿದ್ದಾರೆ. ಐಎಫ್‌ ಎಸ್‌ ಅಧಿಕಾರಿ ಪರ್ವೀನ್‌ ಕಸ್ವಾನ್‌ ವಲಸೆ ಹಕ್ಕಿಗಳು ಪ್ರತಿ ವರ್ಷ ಸಾವಿರಾರು ಕಿಲೋಮೀಟರ್‌ಗಳಷ್ಟು ಹೇಗೆ ಪ್ರಯಾಣಿಸುತ್ತವೆ ಎಂಬುದನ್ನು ಹಂಚಿಕೊಂಡಿದ್ದಾರೆ.


ಅವರು, ಪಾಲಿಡ್ ಹ್ಯಾರಿಯರ್ ಮತ್ತು ಇಂಡಿಯನ್ ಸ್ಪಾಟೆಡ್ ಈಗಲ್ ನಂತಹ ವಲಸೆ ಹಕ್ಕಿಗಳ ಬಗ್ಗೆ ಅಧ್ಯಯನ ಮಾಡಿ ಅದನ್ನು ವಿಡಿಯೋ ಮೂಲಕ ಹಂಚಿಕೊಂಡಿದ್ದಾರೆ.


ಸಾವಿರಾರು ಮೈಲಿ ದೂರ ಹಾರಿ ಹೋಗುವ ಹಕ್ಕಿಗಳು 
ನಮಗೆಲ್ಲ ಒಂದು ಕಡೆಯಿಂದ ಮತ್ತೊಂದು ಕಡೆ ಹೋಗೋಕೆ ವಾಹನಗಳಿರುತ್ತವೆ. ಇನ್ನು ಸಾಗರದಾಚೆ ಹೋಗೋದಿಕ್ಕೆ ನಾವೇ ವಿಮಾನ ಕಂಡು ಕೊಂಡಿದ್ದೀವಿ. ಆದ್ರೆ ಹಕ್ಕಿಗಳು ರೆಕ್ಕೆಯಲ್ಲಿ ಒಂದು ಸ್ಥಳದಿಂದ ಮತ್ತೊಂದೆಡೆ ಹೋಗುತ್ತವೆ.


ಒಂದೆರಡಲ್ಲ ಸಾವಿರಾರು ಮೈಲಿ ದೂರ ಹಾರಿ ಹೋಗುತ್ತವೆ. ತಮಗೆ ಅನುಕೂಲವಾಗುವ ಆವಾಸ ಸ್ಥಾನಗಳಿಗಾಗಿ ಅವು ಅಷ್ಟು ದೂರ ಹಾರಿ ಹೋಗುತ್ತವೆ. ಹವಾಮಾನ ವೈಪರೀತ್ಯದಿಂದ ತಪ್ಪಿಸಿಕೊಳ್ಳುವುದು, ಗೂಡುಕಟ್ಟುವುದು ಮತ್ತು ಆಹಾರಕ್ಕಾಗಿ ಹುಡುಕುವುದು ಮುಂತಾದ ಅಸಂಖ್ಯಾತ ಕಾರಣಗಳಿಗಾಗಿ ಪಕ್ಷಿಗಳು ಸೂಕ್ತವಾದ ಪರಿಸರ ಗೂಡುಗಳನ್ನು ಹುಡುಕಿಕೊಂಡು ವಲಸೆ ಹೋಗುತ್ತವೆ.


6 ಸಾವಿರ ಕಿಲೋಮೀಟರ್‌ ಪ್ರಯಾಣ!
ಇನ್ನು ಸಾಮಾಜಿಕ ಜಾಲತಾಣ ಟ್ವಿಟ್ಟರ್‌ ನಲ್ಲಿ ಐಎಫ್‌ ಎಸ್‌ ಅಧಿಕಾರಿ ಪರ್ವೀನ್‌ ಕಸ್ವಾನ್‌ ಹಂಚಿಕೊಂಡಿರುವ ವಿಡಿಯೋದಲ್ಲಿ ವಲಸೆ ಹಕ್ಕಿಗಳು ಹೇಗೆ ಒಂದು ಕರೆಯಿಂದ ಮತ್ತೊಂದು ಕಡೆ ಪ್ರಯಾಣಿಸುತ್ತವೆ ಅನ್ನೋದನ್ನು ತೋರಿಸಲಾಗಿದೆ. ಈ ವಿಡಿಯೋ ಕ್ಲಿಪ್‌ ನಲ್ಲಿ ಪಾಲಿಡ್ ಹ್ಯಾರಿಯರ್‌ನ ಮಾರ್ಗವನ್ನು ಟ್ರ್ಯಾಕ್ ಮಾಡಲಾಗಿದೆ. ವಲಸೆ ಹಕ್ಕಿಗಳು 2658 ಮೀಟರ್ ಎತ್ತರದಲ್ಲಿ ಹಾರುವ ಮೂಲಕ ಮತ್ತು ಒಂದು ಹಂತದಲ್ಲಿ ಗಂಟೆಗೆ 87 ಕಿಮೀ ವೇಗದಲ್ಲಿ ಹಾರುವ ಮೂಲಕ 6,000 ಕಿಲೋಮೀಟರ್‌ಗಳಷ್ಟು ಪ್ರಯಾಣಿಸಿದವು ಎಂಬುದನ್ನು ತೋರಿಸಲಾಗಿದೆ.


ಇದನ್ನೂ ಓದಿ: Frogs: ಕಪ್ಪೆಗಳ ಸಾವಿನಿಂದ ಮನುಷ್ಯನ ಜೀವಕ್ಕೂ ಕುತ್ತು ಬರುತ್ತಿದೆಯಂತೆ! ತಜ್ಞರು ಕೊಟ್ಟಿದ್ದಾರೆ ಶಾಕಿಂಗ್ ನ್ಯೂಸ್


“ಮಾನವರು ಎಷ್ಟು ಕಡಿಮೆ ವಲಸೆ ಹೋಗುತ್ತಾರೆ ಎಂಬುದನ್ನು ನೋಡಿ. ಒಂದು ಪಾಲಿಡ್ ಹ್ಯಾರಿಯರ್ ಹಕ್ಕಿಯನ್ನು ಉಪಗ್ರಹಕ್ಕೆ ಟ್ಯಾಗ್ ಮಾಡಲಾಗಿದೆ ಮತ್ತು ಅದರ ಮಾರ್ಗವನ್ನು ಮಾನಿಟರ್‌ ಮಾಡಲಾಗಿದೆ. ಈ ಹಕ್ಕಿ 6000 ಕಿಮೀ ಪ್ರಯಾಣಿಸಿ ರಷ್ಯಾ ತಲುಪಿದೆ. ಇವರೇ ನಿಜವಾದ ಪ್ರವಾಸಿಗರು ಅಂತ ಪರ್ವೀನ್‌ ಕಸ್ವಾನ್‌ ಬರೆದುಕೊಂಡಿದ್ದಾರೆ. ಕಸ್ವಾನ್ ಅವರು "ಸೆಂಟ್ರಲ್ ಏಷ್ಯನ್ ಫ್ಲೈವೇ" ಯ ಅಧ್ಯಯನ ಆಧರಿಸಿ ವಿಡಿಯೋವನ್ನು ಮಾಡಿದ್ದಾಗಿ ಹೇಳಿದ್ದಾರೆ. ಅಲ್ಲದೇ


ಕಸ್ವಾನ್ ಅವರ ಪೋಸ್ಟ್‌ ನೋಡಿ ಬೆರಗಾದ ನೆಟ್ಟಿಗರು 
ಇನ್ನು ಕಸ್ವಾನ್ ಅವರ ಪೋಸ್ಟ್‌ ಗಳಿಗೆ ಸಾಕಷ್ಟು ಬೆರಗುಗೊಳಿಸುವ ಕಾಮೆಂಟ್‌ ಗಳು ಬಂದಿವೆ. ಒಬ್ಬ ಟ್ವಿಟ್ಟರ್‌ ಬಳಕೆದಾರ, “ಅನ್‌ಬಿಲೀವಬಲ್….ಅವರ ರೆಕ್ಕೆಗಳ ಶಕ್ತಿ ಮತ್ತು ಅವರ ತ್ರಾಣವನ್ನು ಊಹಿಸಿ. ಅದ್ಭುತ” ಎಂದಿದ್ದಾರೆ. ಇನ್ನೊಬ್ಬ ವ್ಯಕ್ತಿ “ಮಾನವರಿಗೆ ವೀಸಾ ಸಮಸ್ಯೆಗಳು. ನೀವು ನೋಡುವ ಪಕ್ಷಿಗಳಿಗೆ ಅಂತಹ ನಿರ್ಬಂಧಗಳಿಲ್ಲ” ಎಂದಿದ್ದಾರೆ. ಮತ್ತೊಬ್ಬರು ಅಮೇಜಿಂಗ್‌ ಟೂರಿಸ್ಟ್‌ ಎಂದಿದ್ದಾರೆ.


ಇನ್ನು ಇಂಡಿಯನ್ ಸ್ಪಾಟೆಡ್ ಈಗಲ್, ಟಾನಿ ಈಗಲ್ ಮತ್ತು ಪಾಲಿಡ್ ಹ್ಯಾರಿಯರ್‌ಗಳಂತಹ ವಲಸೆ ಹಕ್ಕಿಗಳು ಹೆಚ್ಚಿನ ದೂರಕ್ಕೆ ವಲಸೆ ಹೋಗುವುದನ್ನು ಮುಂದುವರೆಸಿದರೆ ಅವುಗಳ ಸಂತತಿ ನಾಶವಾಗುವ ಸಾಧ್ಯತೆಗಳಿವೆ. ಹವಾಮಾನ ಬದಲಾವಣೆ ಮತ್ತು ಅವುಗಳ ಆವಾಸಸ್ಥಾನದ ಅತಿಕ್ರಮಣದಿಂದಾಗಿ ಅವುಗಳ ಜನಸಂಖ್ಯೆಯು ಕ್ಷೀಣಿಸುತ್ತಿದೆ ಎನ್ನಲಾಗ್ತಿದೆ.


ಇದನ್ನೂ ಓದಿ:  Viral Video: ಮತ್ತೆ ತನ್ನ ಮರಿಯ ಜೊತೆಯಾದ ಆನೆಯೊಂದು ಅರಣ್ಯಾಧಿಕಾರಿಗಳಿಗೆ ಏನ್​​ಮಾಡಿದೆ ಗೊತ್ತಾ? ಈ ವಿಡಿಯೋ ನೋಡಿ


ಒಟ್ಟಾರೆಯಾಗಿ ಪ್ರಾಣಿ – ಪಕ್ಷಿಗಳ ಪ್ರಪಂಚ ವಿಶಿಷ್ಟವಾದದ್ದು. ಅವು ಬದುಕಲ್ಲಿ ಕಷ್ಟ ಪಡುತ್ತವೆ. ಹಾಗೇ ಇದ್ದಷ್ಟು ದಿನ ಸಂತೋಷದಿಂದ ಬದುಕುತ್ತವೆ. ಹಾಗೇ ಅವುಗಳಿಂದ ನಾವು ಕಲಿಯಬೇಕಾದ ಪಾಠಗಳೂ ಸಾಕಷ್ಟಿವೆ.

Published by:Ashwini Prabhu
First published: