HOME » NEWS » Trend » PALEONTOLOGISTS UNEARTH ONE OF THE LARGEST NEW SPECIES OF DINOSAUR IN AUSTRALIA STG MAK

ಆಸ್ಟ್ರೇಲಿಯಾದಲ್ಲಿ ಪುರಾತನ, ಹೊಸ ಡೈನೋಸಾರ್‌ ಪ್ರಭೇದವಾದ ಸೌರೋಪಾಡ್ ಪಳೆಯುಳಿಕೆ ಪತ್ತೆ

ಡೈನೋಸಾರ್‌ಗಳ ಮೂಳೆಗಳು ಅತ್ಯಂತ ಭಾರ ಮತ್ತು ದುರ್ಬಲವಾಗಿದ್ದು, ಅವುಗಳನ್ನು ವಿಶ್ವಾದ್ಯಂತ ಮ್ಯೂಸಿಯಂಗಳಲ್ಲಿ ಇಡಲಾಗಿದೆ. ಆದುದರಿಂದ ಅವುಗಳ ಬಗ್ಗೆ ಸಂಶೋಧನೆ ನಡೆಸುವುದು ಅತ್ಯಂತ ಕಷ್ಟಕರ.

Trending Desk
Updated:June 10, 2021, 7:19 AM IST
ಆಸ್ಟ್ರೇಲಿಯಾದಲ್ಲಿ ಪುರಾತನ, ಹೊಸ ಡೈನೋಸಾರ್‌ ಪ್ರಭೇದವಾದ ಸೌರೋಪಾಡ್ ಪಳೆಯುಳಿಕೆ ಪತ್ತೆ
ಡೈನೋಸಾರ್ ಪಳೆಯುಳಿಕೆ.
  • Share this:

ಸುಮಾರು ಒಂದು ದಶಕಕ್ಕೂ ಹೆಚ್ಚು ಸಮಯದ ಹಿಂದೆ, ಆಸ್ಟ್ರೇಲಿಯದ ಪ್ರದೇಶವೊಂದರಲ್ಲಿ ಪಶು ಸಂಗೋಪನೆ ಮಾಡುತ್ತಿದ್ದ ರೈತರಿಗೆ ಡೈನೋಸಾರ್ನ‌ ಪಳೆಯುಳಿಕೆಗಳು ಸಿಕ್ಕಿದ್ದವು. ಆ ಪಳೆಯುಳಿಕೆಗಳು ಜಗತ್ತಿನ ಅತ್ಯಂತ ದೊಡ್ಡ ಡೈನೋಸಾರ್ ಪ್ರಭೇದದಕ್ಕೆ ಸೇರಿದ್ದು ಎಂಬುದನ್ನು ತಜ್ಞರು ಈ ದೃಢಪಡಿಸಿ ದ್ದಾರೆ. ಕ್ರೆಟೇಶಿಯಸ್ ಅವಧಿಯಲ್ಲಿ, ಅಂದರೆ 92ದಶಲಕ್ಷ - 96 ದಶಲಕ್ಷ ವರ್ಷಗಳ ಹಿಂದೆ, ಆಸ್ಟ್ರೇಲಿಯಾ ಅಂಟಾರ್ಟಿಕಾಗೆ ಅಂಟಿಕೊಂಡಿದ್ದ ಕಾಲದಲ್ಲಿ, ಸಸ್ಯಹಾರಿ ಸೋರೋಪಾಡ್ ಬದುಕಿತ್ತು ಎಂದು ಸೋಮವಾರ ಪ್ರಕಟಿಸಲಾದ ಸಂಶೋಧನಾ ವರದಿಯಲ್ಲಿ ತಿಳಿಸಲಾಗಿದೆ. ಪ್ಯಾಲಿಯಂಟಾಲಜಿಸ್ಟ್‌ಗಳ ಪ್ರಕಾರ, ಸೊಂಟಕ್ಕಿಂತ ಮೇಲೆ 5-6.5 ಮೀಟರ್‌ಗಳಷ್ಟು ಎತ್ತರ ಮತ್ತು 25-30 ಮೀಟರ್‌ಗಳಷ್ಟು ಉದ್ದ, ಅಂದರೆ ಒಂದು ಬಾಸ್ಕೆಟ್‍ಬಾಲ್ ಕ್ರೀಡಾಂಗಣದಷ್ಟು ಉದ್ದ ಮತ್ತು ಎರಡು ಮಹಡಿಯ ಕಟ್ಟಡದಷ್ಟು ಎತ್ತರ ಇತ್ತು.


ಇದು ಆಸ್ಟ್ರೇಲಿಯಾದಲ್ಲಿ ಕಂಡು ಬಂದ ಈವರೆಗಿನ ಅತ್ಯಂತ ದೊಡ್ಡ ಹೊಸ ಪ್ರಭೇದ ಎಂದು ಪರಿಗಣಿಸಲ್ಪಡುತ್ತದೆ, ಮಾತ್ರವಲ್ಲ ಅತ್ಯಂತ ದೊಡ್ಡ ಡೈನೋಸಾರ್‌ಗಳು ಇದ್ದ ಪ್ರಥಮ ಐದು ದೇಶಗಳ ಪಟ್ಟಿಗೆ ಸೇರಿಕೊಳ್ಳುತ್ತದೆ. ಈವರೆಗೆ ದಕ್ಷಿಣ ಅಮೆರಿಕದಲ್ಲಿ ಮಾತ್ರ ಟೈಟಾನೋಸಾರ್‌ಗಳ ಪಳಿಯುಳಿಕೆಗಳು ಪತ್ತೆಯಾಗಿದ್ದವು.“ಈ ರೀತಿಯ ಆವಿಷ್ಕಾರಗಳು, ಮಂಜುಗಡ್ಡೆಯ ತುದಿಯಿದ್ದಂತೆ.” ಎಂದು ಕ್ವೀನ್ಸ್ಲ್ಯಾಂಡ್ ಮ್ಯೂಸಿಯಂನ ಕ್ಯೂರೇಟರ್ ಮತ್ತು ಪ್ಯಾಲಿಯಂಟಾಲಜಿಸ್ಟ್ ಸ್ಕಾಟ್ ಹಾಕ್‍ನಲ್ ತಿಳಿಸಿದ್ದಾರೆ. ಪ್ಯಾಲಿಯಂಟಾಲಜಿಸ್ಟ್‌ಗಳು ಈ ಸಾರೋಪಾಡ್‍ಗೆ “ಆಸ್ಟ್ರೇಲಿಯನ್ ಕೂಪರೆನ್ಸಿಸ್” ಎಂದು ಹೆಸರಿಟ್ಟಿದ್ದಾರೆ. ಈ ಪ್ರಾಣಿಯ ಮೂಳೆಗಳು 2006ರಲ್ಲಿ ಕ್ವೀನ್ಸ್‌ಲ್ಯಾಂಡ್‌ ರಾಜ್ಯದ ಇರೋಮಾಂಗ ಎಂಬ ಪಶುಸಂಗೋಪನಾ ಕೃಷಿಭೂಮಿಯಲ್ಲಿ ದೊರಕಿತ್ತು.


ರಾಬಿನ್ ಮ್ಯಾಕೆನ್ಸಿ ಕುಟುಂಬಕ್ಕೆ ಜಾನುವಾರುಗಳನ್ನು ಮೇಯಿಸುವಾಗ ಈ ಪಳೆಯುಳಿಕೆಗಳು ಲಭ್ಯವಾದವು. ಆ ಬಳಿಕ, ರಾಬಿನ್ ಮ್ಯಾಕೆನ್ಸಿ ಕುಟುಂಬ ಅದರ ಅಧ್ಯಯನಕ್ಕಾಗಿ ಇರೋಮಾಂಗ ನ್ಯಾಚುರಲ್ ಹಿಸ್ಟೊರಿ ಮ್ಯೂಸಿಯಂನ್ನು ಸ್ಥಾಪಿಸಿತು. ಆ ಪಳಿಯುಳಿಕೆಗಳ ಬಗ್ಗೆ ಅಧ್ಯಯನ ಮಾಡಲು, 17 ವರ್ಷಗಳ ಸುದೀರ್ಘ ಅವಧಿ ತೆಗೆದುಕೊಳ್ಳಲಾಗಿದೆ.


ಇದನ್ನೂ ಓದಿ: Narendra Modi: ಗಡ್ಡ ಬೋಳಿಸಿಕೊಳ್ಳಿ ಎಂದು ಪ್ರಧಾನಿ ನರೇಂದ್ರ ಮೋದಿಗೆ 100ರೂ ಕಳಿಸಿದ ಚಹಾ ಮಾರಾಟಗಾರ!

ಡೈನೋಸಾರ್‌ಗಳ ಮೂಳೆಗಳು ಅತ್ಯಂತ ಭಾರ ಮತ್ತು ದುರ್ಬಲವಾಗಿದ್ದು, ಅವುಗಳನ್ನು ವಿಶ್ವಾದ್ಯಂತ ಮ್ಯೂಸಿಯಂಗಳಲ್ಲಿ ಇಡಲಾಗಿದೆ. ಆದುದರಿಂದ ಅವುಗಳ ಬಗ್ಗೆ ಸಂಶೋಧನೆ ನಡೆಸುವುದು ಅತ್ಯಂತ ಕಷ್ಟಕರ. ಇರೋಮಾಂಗ ನ್ಯಾಚುರಲ್ ಹಿಸ್ಟೊರಿ ಮ್ಯೂಸಿಯಂ ಮತ್ತು ಕ್ವೀನ್ಸ್‍ಲ್ಯಾಂಡ್ ಮ್ಯೂಸಿಯಂ, ಹೊಸ ಡಿಜಿಟಲ್ ತಂತ್ರಜ್ಞಾನವನ್ನು ಬಳಸಿ, 3ಡಿ ಸ್ಕ್ಯಾನ್ ಮೂಲಕ ಮೂಳೆಗಳ ಹೋಲಿಕೆ ಮಾಡಿದೆ. ಸೌರೋಪಾಡ್‍ನ ಮಾರ್ಗ ಎಂದು ನಂಬಲಾಗಿರುವ ಒಂದು ರಾಕ್ - ಶೆಲ್ಫ್ ಕೂಡ ಪಳೆಯುಳಿಕೆಗಳ ಜೊತೆಗೆ ಪತ್ತೆಯಾಗಿದ್ದು, ಅದರ ಕುರಿತು ಇನ್ನೂ ಸಂಪೂರ್ಣ ವೈಜ್ಞಾನಿಕ ಅಧ್ಯಯನ ನಡೆಯಬೇಕಿದೆ.


“ಪಯಾಲೋ ಟೂರಿಸಂಗೆ ಪ್ರಪಂಚದಾದ್ಯಂತ ಬೆಲೆಯಿದೆ, ಹಾಗಾಗಿ ನಮ್ಮ ಸರಹದ್ದುಗಳು ಪ್ರವೇಶಕ್ಕೆ ಮುಕ್ತವಾದ ಬಳಿಕ, ಅಂತರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುತ್ತೇವೆ ಎಂಬ ನಿರೀಕ್ಷೆಯಲ್ಲಿ ಇದ್ದೇವೆ” ಎಂದು ಫೀಲ್ಡ್ ಪ್ಯಾಲಿಯಂಟಾಲಜಿಸ್ಟ್ ಆಗಿಯೂ ಕೆಲಸ ಮಾಡುತ್ತಿರುವ ಮೆಕ್ಯಾಂನ್ಸಿ ಹೇಳಿದ್ದಾರೆ.

ಇದನ್ನೂ ಓದಿ: ಮುನ್ನಿ ಬದ್ನಾಮ್ ಹುಯಿ ಸಾಂಗ್ ಕಲಿತರಷ್ಟೇ ಪಾಸ್ ಮಾಡ್ತಾರಂತೆ.. ಇದೆಂಥಾ ಕಾಲೇಜ್ ಮಾರಾಯ!?

ಸಸ್ಯಹಾರಿ ಸೌರೋಪಾಡ್‍ಗಳನ್ನು ಸಾಮಾನ್ಯವಾಗಿ ಅತ್ಯಂತ ಭಾರೀ ಗಾತ್ರದ ಥೇರೋಪಾಡ್‍ಗಳು ಬೇಟೆಯಾಡುತ್ತವೆ. ಹಾಗಾಗಿ ನಮಗೆ ಇನ್ನೂ ದೊಡ್ಡ ಗಾತ್ರದ ಡೈನೋಸಾರ್‌ಗಳು ಇಲ್ಲಿ ಸಿಗಲಿವೆ ಎಂಬ ನಿರೀಕ್ಷೆಯಲ್ಲಿ ಇದ್ದೇವೆ ಎಂದು ಕ್ವೀನ್ಸ್ ಲ್ಯಾಂಡ್ ಮ್ಯೂಸಿಯಂ ನ ಕ್ಯೂರೇಟರ್ ಮತ್ತು ಪ್ಯಾಲಿಯಂಟಾಲಜಿಸ್ಟ್ ಸ್ಕಾಟ್ ಹಾಕ್‍ನಲ್ ತಿಳಿಸಿದ್ದಾರೆ.Youtube Video

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾ ದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸು ವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
First published: June 10, 2021, 7:19 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories