• ಹೋಂ
  • »
  • ನ್ಯೂಸ್
  • »
  • ಟ್ರೆಂಡ್
  • »
  • Trending Plazzo: ಇಲ್ನೋಡಿ ಗೋಣಿಚೀಲದ ಪ್ಯಾಂಟ್​​! ರೇಟ್​ ಕೇಳಿದ್ರೆ ನೀವು ಚೀಲ ಹಿಡಿದು ಟೈಲರ್​​ ಹತ್ರ ಹೋಗ್ತಿರಾ

Trending Plazzo: ಇಲ್ನೋಡಿ ಗೋಣಿಚೀಲದ ಪ್ಯಾಂಟ್​​! ರೇಟ್​ ಕೇಳಿದ್ರೆ ನೀವು ಚೀಲ ಹಿಡಿದು ಟೈಲರ್​​ ಹತ್ರ ಹೋಗ್ತಿರಾ

ಗೋಣಿ ಚೀಲದ ಪ್ಯಾಂಟ್​

ಗೋಣಿ ಚೀಲದ ಪ್ಯಾಂಟ್​

ಈ ಗೋಣಿಚೀಲವನ್ನು ಯಾರಾದರೂ 60 ಸಾವಿರ ರೂಪಾಯಿ ಕೊಟ್ಟು ಖರೀದಿಸುತ್ತಾರೆಯೇ ಎಂಬ ಪ್ರಶ್ನೆ ನಿಮಗೂ ಬರುತ್ತೆ. ಒಮ್ಮೆ ಇದನ್ನು ಓದಿನೋಡಿ.

  • News18 Kannada
  • 5-MIN READ
  • Last Updated :
  • New Delhi, India
  • Share this:

ಈಗಂತು ಫ್ಯಾಷನ್​ ಯಾವ ಮಟ್ಟಕ್ಕೆ ಹೋಗಿದೆ ಎಂದು ಊಹೆ ಮಾಡೋದು ತುಂಬಾ ಕಷ್ಟ ಯಾಕಂದ್ರೆ ಚಿತ್ರ ವಿಚಿತ್ರವಾದ ಉಡುಗೆ (Dress) ತೊಡೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಕ್​ ಆಗುತ್ತಾ ಇರುತ್ತದೆ. ಅದೇ ರೀತಿ ಇಲ್ಲೂ ಒಂದು ಫ್ಯಾಷನೇಬಲ್ ​ ಪ್ಯಾಂಟ್​ ವೈರಲ್ (Viral) ಆಗಿದೆ. ಇದನ್ನು ನೀವು ನೋಡಿದ್ರೆ ಒಮ್ಮೆ ಅಯ್ಯೋ ದೇವಾ! ಎಂದು ಹೇಳೇ ಹೇಳ್ತೀರಾ. ಅಷ್ಟಾದರೂ ಪರವಾಗಿಲ್ಲ ಇದರ ರೇಟ್ (Rate)​ ಕೇಳಿದ್ರೆ ನೀವು ಖಂಡಿತ ತಲೆ ತಿರುಗಿ ಬೀಳೋದು ಗ್ಯಾರಂಟಿ (Guarantee). ಹಾಗಾದ್ರೆ ಇದರ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ (Information) ತಿಳಿಯೋ ಕುತೂಹಲ ನಿಮಗಾಗ್ತಿದೆ ಅಲ್ವಾ? ಹಾಗಾದ್ರೆ ಇದನ್ನಾ ಸಂಪೂರ್ಣವಾಗಿ ಓದಿ.


ಗೋಧಿ, ಅಕ್ಕಿ, ಜೋಳ, ರಾಗಿ ಹೀಗೆ ಮುಂತಾದ ಕಾಳುಕಡಿ ತುಂಬಿಸುವ ಗೋಣಿ ಚೀಲವನ್ನು ನೀವೆಲ್ಲರೂ ನೋಡಿರ್ತಿರಾ ಆದ್ರೆ ಇದೇ ಚೀಲದಿಂದ ಮಾಡಿದ ಪ್ಯಾಂಟೊಂದು ಮಾರಾಟಕ್ಕಿದೆ. ಇದನ್ನು ತೊಟ್ಟುಕೊಳ್ಳುವ ಸುಂದರಿ ಮಾತ್ರ ಉರ್ಫಿನೇ ಇರ್ಬೇಕು. ಹಾಗಿದೆ ಈ ಪ್ಯಾಂಟ್​ ನೋಡಿ ತಕ್ಷಣ ಅನಿಸೋದು ಇಷ್ಟೇ ಅಯ್ಯೋ ಫ್ಯಾಷನ್​ ಇಲ್ಲಿವರ್ಗೆ ಬಂತಾ ಅಂತಾ. ಸೆಲೆಬ್ರಿಟಿಗಳಂತೂ ಈಗ ಯಾವ್ ಯಾವತರದ ಬಟ್ಟೆಗಳನ್ನು ತೊಡುತ್ತಾರೆ ಅಂತಾನೇ ಗೊತ್ತಾಗಲ್ಲಾ ಅಂಥದರಲ್ಲಿ ಈ ರೀತಿ ಬಟ್ಟೆ ಸಿಕ್ರಂತೂ ಬಿಡೋದೆ ಇಲ್ಲಾ. ಅವರು ವೈರಲ್ಲಾಗೋದಕ್ಕೆ ಇದೊಂದೆ ಸಾಕು.


ವಿವಿಧ ವಸ್ತುಗಳಿಂದ ತಯಾರಿಸಿದ ಪಲಾಜೋಗಳು ಇಂದು ಮಾರುಕಟ್ಟೆಯಲ್ಲಿ ಲಭ್ಯವಿವೆ. ಕಾಮನ್ ಮ್ಯಾನ್‌ನಿಂದ ಹಿಡಿದು ಸೆಲೆಬ್ರಿಟಿಗಳವರೆಗೂ ಈ ಲುಕ್‌ ಇಷ್ಟವಾಗುತ್ತದೆ ಆದರೆ ಈ ಪ್ಯಾಂಟ್​ ಕೊಳ್ಳುವ ಪುಣ್ಯಾತ್ಮರು ಯಾರು ಎಂಬುದೇ ಕುತೂಹಲದ ಪ್ರಶ್ನೆ. ಹಾಗೇ ಮಾಲ್​ನಲ್ಲಿ ಹೊರಗಿನಿಂದ ಕಾಣುವಂತೆ ತೂಗು ಹಾಕಿದ ಈ ಫೋಟೋ ಕೂಡಾ ವಿಡಿಯೋದಷ್ಟೇ ವೈರಲ್ ಆಗ್ತಿದೆ.


ಇದನ್ನೂ ಓದಿ: Cancer Study: ಕ್ಯಾನ್ಸರ್​ ಚಿಕಿತ್ಸೆ ವೇಳೆ ಅಚ್ಚರಿಯ ಘಟನೆ; ಹಿಂದೆಂದೂ ಮಾತನಾಡದ ಭಾಷೆಯಲ್ಲಿ ನಿರರ್ಗಳ ಮಾತು -ಏನು ಹೇಳುತ್ತೆ ಸಂಶೋಧನೆ?


ಇನ್ನು ಹಳ್ಳಿಕಡೆ ಹೋದರೆ ಈ ಚೀಲವನ್ನಾ ನೆಲಕ್ಕೆ ಕಾಲು ಒರೆಸೋದಕ್ಕೂ ಬಳಸ್ತಾರೆ. ಇದನ್ನೇ ನಾವು ನಿಮಗೆ ಸೀರೆಯಾಗಿ ಬೇಕಾದ್ರೂ ಕೊಡ್ತಿವಿ ಅಂತಾರೆ. ಯಾಕಂದ್ರೆ ಈ ಪ್ಯಾಂಟ್​ನ ರೇಟ್​​ ಒಂದಲ್ಲಾ ಎರಡಲ್ಲಾ ಬರೋಬ್ಬರಿ 60 ಸಾವಿರ ರೂಪಾಯಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗಿದೆ. ಇದು ನಿಜಕ್ಕೂ ಹೌದು.




ಈ ಗೋಣಿಚೀಲವನ್ನು ಯಾರಾದರೂ 60 ಸಾವಿರ ರೂಪಾಯಿ ಕೊಟ್ಟು ಖರೀದಿಸುತ್ತಾರೆಯೇ ಎಂಬುದು ಪ್ರಶ್ನೆ ಈಗ ನಿಮಗೂ ಬಂದಿರಬಹುದು. ಈ ವೀಡಿಯೊ ಈಗಾಗಲೇ 20 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ. ವೀಡಿಯೊಗೆ ಆಸಕ್ತಿದಾಯಕ ಕಾಮೆಂಟ್‌ಗಳು ಸಹ ಬಂದಿವೆ.





ಈ ತನಕ ಈ ವಿಡಿಯೋ ಅನ್ನು ಸುಮಾರು 8 ಮಿಲಿಯನ್ ಜನರು ನೋಡಿದ್ದಾರೆ. 5 ಲಕ್ಷಕ್ಕೂ ಹೆಚ್ಚು ಜನರು ಈ ವಿಡಿಯೋ ಇಷ್ಟಪಟ್ಟಿದ್ದಾರೆ. ನೋಡಿ ಮತ್ತೆ ನೀವೇನಾದೂ ಹೊಸ ಉದ್ಯಮ ಶುರು ಮಾಡಬೇಕೆಂದುಕೊಂಡಿದ್ದರೆ ಈ ಐಡಿಯಾ ತುಂಬಾ ಚೆನ್ನಾಗಿದೆ.


ವಿಡಿಯೋಗೆ ಬಂದ ಫನ್ನಿ ಕಮೆಂಟ್​ಗಳು


ಇನ್ನು ಯಾವೆಲ್ಲಾ ಕಮೆಂಟ್​ಗಳು ಬಂದಿವೆ ಅಂತ ನೋಡೋದಾದ್ರೆ
ಈ ವಿಷ್ಯ ಉರ್ಫಿಗೆ ಮಾತ್ರ ಗೊತ್ತಾಗ್ದೆ ಇದ್ರೆ ಸಾಕು ಅಂತ ಹೇಳಿದ್ದಾರೆ.
ಬಾ ಗುರು ನಮ್ಮನೆಗೆ ನಾನ್​ ಗೋಣಿ ಸೀರೆನೆ ಕೊಡ್ತಿನಿ ಅಂತ ಇಬ್ಬೊಬ್ರು ಕಮೆಂಟ್​ ಮಾಡಿದ್ದಾರೆ.
ಈ ಗೋಣಿಚೀಲವನ್ನು ಯಾರಾದರೂ 60 ಸಾವಿರ ರೂಪಾಯಿ ಕೊಟ್ಟು ಖರೀದಿಸ್ತಾರಾ?

First published: