Sultan of Brunei: ಈತ ಬರೋಬ್ಬರಿ 7000 ಕಾರುಗಳ ಒಡೆಯ, ವಾಸ ಇರೋದು 2 ಸಾವಿರ ಕೋಟಿ ಮೌಲ್ಯದ ಬಂಗಲೆಯಲ್ಲಿ! 

Hassanal Bolkiah: ಹಸ್ಸನಲ್ ಬೊಲ್ಕಿಯಾ ಬ್ರೂನೈ ಜೀವನಶೈಲಿ  ಒಮ್ಮೆ ನಿಬ್ಬೆರಗಾಗಿಸುತ್ತದೆ.. ಬ್ರೂನೈ ದ್ವೀಪವನ್ನು ಕಳೆದ 600 ವರ್ಷಗಳಿಂದ ಬೊಲ್ಕಿಯಾ ರಾಜಮನೆತನ ಆಳುತ್ತಿದ್ದು, 21 ನೇ ವಯಸ್ಸಿನಲ್ಲಿ ದೇಶದ ಚುಕ್ಕಾಣಿಯನ್ನ ಹಸ್ಸನಲ್ ಬೊಲ್ಕಿಯಾ ಬ್ರೂನೈ ಹಿಡಿದುಕೊಂಡರು.

ಸುಲ್ತಾನ್ ಹಸ್ಸನಲ್ ಬೊಲ್ಕಿಯಾ

ಸುಲ್ತಾನ್ ಹಸ್ಸನಲ್ ಬೊಲ್ಕಿಯಾ

  • Share this:
    ಪ್ರತಿಯೊಬ್ಬರಿಗೂ ನಾವು ಶ್ರೀಮಂತರಾಗಬೇಕು (Rich) ಎಂಬ ಕನಸು( Dream) ಇದ್ದೇ ಇರುತ್ತದೆ.. ಆದರೆ ಯಾರು ಕಷ್ಟಪಟ್ಟು ಶ್ರಮವಹಿಸಿ ತಮ್ಮ ಚಾಣಾಕ್ಷತೆಯಿಂದ ಹಣ (Money) ಮಾಡುತ್ತಾರೋ ಅವರು ಖಂಡಿತಾ ಶ್ರೀಮಂತರಾಗುತ್ತಾರೆ.. ಈ ರೀತಿ ಕಷ್ಟಪಟ್ಟು ಹೆಸರು ಪಡೆದು ಹಣಗಳಿಸಿದ ನೂರಾರು ಸಂಖ್ಯೆಯ ಜನರು ಇಂದು ವಿಶ್ವದ (World) ಅಗ್ರಗಣ್ಯ ಶ್ರೀಮಂತರ ಪಟ್ಟಿಯಲ್ಲಿ ಇದ್ದಾರೆ.. ಆದರೆ ಇನ್ನೂ ಕೆಲವರು ವಂಶಪಾರಂಪರ್ಯವಾಗಿ ತಮ್ಮ ಮನೆತನದ ಆಡಳಿತದಿಂದ ಶ್ರೀಮಂತರ ಸಾಲಿಗೆ ಸೇರ್ಪಡೆಯಾಗಿದ್ದಾರೆ.. ಈ ರೀತಿ ಶ್ರೀಮಂತರಾದ ಅವರಲ್ಲಿ ರಾಜಮನೆತನದ (Royal Family) ವ್ಯಕ್ತಿಗಳು ಕೂಡ ಒಬ್ಬರು.. ಅವರ ಜೀವನಶೈಲಿ (Lifestyle) ಅವರು ನಡೆದುಕೊಳ್ಳುವ ರೀತಿ ಸಾಮಾನ್ಯವರ್ಗದ ಪ್ರತಿಯೊಬ್ಬ ಜನರ ಕಣ್ಣು ಕುಕ್ಕುತ್ತದೆ.. ಅವರ ಬಗ್ಗೆ ತಿಳಿದುಕೊಳ್ಳಬೇಕು ಎನ್ನುವ ಆಸೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ.. ಇಂತಹ ಶ್ರೀಮಂತರ ಸಾಲಿಗೆ ಬ್ರೂನೈಯ ದ್ವೀಪದ ಪ್ರಧಾನಮಂತ್ರಿ ಹಸ್ಸನಲ್ ಬೊಲ್ಕಿಯಾ ಬ್ರೂನೈ ಕೂಡ ಸೇರ್ಪಡೆಯಾಗುತ್ತಾರೆ..

    ಈ ಸುಲ್ತಾನನ ಬಳಿ ಇದೆ ಬರೋಬ್ಬರಿ 7,000 ಕಾರು..!

    ಹಸ್ಸನಲ್ ಬೊಲ್ಕಿಯಾ ಬ್ರೂನೈ ಜೀವನಶೈಲಿ  ಒಮ್ಮೆ ನಿಬ್ಬೆರಗಾಗಿಸುತ್ತದೆ.. ಬ್ರೂನೈ ದ್ವೀಪವನ್ನು ಕಳೆದ 600 ವರ್ಷಗಳಿಂದ ಬೊಲ್ಕಿಯಾ ರಾಜಮನೆತನ ಆಳುತ್ತಿದ್ದು, 21 ನೇ ವಯಸ್ಸಿನಲ್ಲಿ ದೇಶದ ಚುಕ್ಕಾಣಿಯನ್ನ ಹಸ್ಸನಲ್ ಬೊಲ್ಕಿಯಾ ಬ್ರೂನೈ ಹಿಡಿದುಕೊಂಡರು.. ಅಂದಿನಿಂದ ಇಂದಿನವರೆಗೂ ಇವರ ಐಶಾರಾಮೀ ಜೀವನ ಶೈಲಿ ಎಂಥವರನ್ನೂ ಕೂಡ ನಿಬ್ಬೆರಗಾಗಿಸುತ್ತದೆ. ಜಗತ್ತಿನಲ್ಲಿ ಇರುವ ಶ್ರೀಮಂತರ ಬಳಿಯು ಕೂಡ ಈ ಸುಲ್ತಾನನ ಬಳಿ ಇರುವಷ್ಟು ಇಲ್ಲ.. ಯಾಕೆಂದರೆ ಈತನ ಬಳಿ ಒಂದಲ್ಲ-ಎರಡಲ್ಲ ಸರಿಸುಮಾರು ಏಳು ಸಾವಿರ ಕಾರು ಗಳು ಇವೆ. ಈ ಕಾರು ಸಂಗ್ರಹದಲ್ಲಿ ರೋಲ್ಸ್ ರಾಯ್ಸ್, ಮರ್ಸಿಡಿಸ್, ಫೆರಾರಿ, ಬೆಂಟ್ಲಿ ಸೇರಿದಂತೆ ಅನೇಕ ಐಷಾರಾಮಿ ಕಾರುಗಳು ಸೇರಿವೆ.

    ಇದನ್ನೂ ಓದಿ: ರಸ್ತೆಬದಿಯ Benchನಲ್ಲಿ ಕುಳಿತ ಮಹಿಳೆ ನೋಡಿ ಭಯಭೀತರಾದ ಜನ? ಮುಂದೇನಾಯ್ತು?

    ದುಬಾರಿ ಕಾರುಗಳು ಮಾತ್ರವಲ್ಲ ದುಬಾರಿ ವೆಚ್ಚದ ವಿಮಾನಗಳ ಒಡೆಯ

    ಹಸ್ಸನಲ್ ಬೊಲ್ಕಿಯಾ ಬ್ರೂನೈ ಬಳಿ 600ಕ್ಕೂ ಹೆಚ್ಚು ರೋಲ್ಸ್ ರಾಯ್ಸ್, 570ಕ್ಕೂ ಹೆಚ್ಚು ಮರ್ಸಿಡಿಸ್-ಬೆಂಜ್, 450 ಫೆರಾರಿಗಳು, 380ಕ್ಕೂ ಹೆಚ್ಚು ಬೆಂಟ್ಲಿಗಳು, 134 ಕೋನಿಗೆಗ್ಸ್ ಮತ್ತು ಮೆಕ್ ಲಾರೆನ್ ಎಫ್1ಎಸ್, ಪೋರ್ಷೆಯಂತಹ ಹಲವಾರು ಐಷಾರಾಮಿ ಕಾರುಗಳು ಸೇರಿವೆ. ಅವರ ಬಳಿ ಚಿನ್ನದ ಪದರವನ್ನ ಹೊಂದಿರುವ ಕಾರು ಸಹ ಇದೆ. ಅವರು ಈ ಕಾರಿನಲ್ಲಿ ಅನೇಕ ಬಾರಿ ಕಾಣಿಸಿಕೊಂಡಿದ್ದಾರೆ. ಇಷ್ಟು ಮಾತ್ರವಲ್ಲದೆ ಇವರ ಬಳಿ ಖಾಸಗಿ ವಿಮಾನಗಳು ಕೂಡ ಇದ್ದು ಅವುಗಳ ಮೌಲ್ಯವು ದುಬಾರಿಯಾಗಿದೆ.
    ಬೋಯಿಂಗ್ 747-400, ಬೋಯಿಂಗ್ 767-200 ಮತ್ತು ಏರ್ ಬಸ್ ಎ340-200 ಐಷಾರಾಮಿ ಸೌಲಭ್ಯಗಳನ್ನ ಹೊಂದಿದೆ. ಇನ್ನವ್ರ ಬೋಯಿಂಗ್ 747-400 ಜೆಟ್ ಹಡಗು ಚಿನ್ನದ ಪದರ ಹೊಂದಿದೆ. ಇದು ಲಿವಿಂಗ್ ರೂಮ್ ಮತ್ತು ಮಲಗುವ ಕೋಣೆ ಸೇರಿದಂತೆ ಅನೇಕ ಸೌಲಭ್ಯಗಳನ್ನ ಸಹ ಹೊಂದಿದೆ.

    2500 ಕೊಠಡಿಗಳ ಅರಮನೆ

    ಬ್ರೂನೈ ದ್ವೀಪವನ್ನು ಕಳೆದ 600 ವರ್ಷಗಳಿಂದ ಬೊಲ್ಕಿಯಾ ರಾಜಮನೆತನ ಆಳುತ್ತಿದ್ದು, ಈ ರಾಜವಂಶಸ್ಥರ ನೂರುಲ್ ಅರಮನೆಯು ವಿಶ್ವದ ಅತಿದೊಡ್ಡ  ಅರಮನೆಗಳಲ್ಲಿ ಒಂದಾಗಿದೆ. 2 ಲಕ್ಷ ಚರದ ಅಡಿ ವಿಸ್ತೀರ್ಣ ಹೊಂದಿರುವ ಈ ಅರಮನೆಯಲ್ಲಿ 2500ಕ್ಕಿಂತ ಹೆಚ್ಚಿನ ಕೊಠಡಿಗಳಿವೆ. ಅಲ್ಲದೆ ಇದರಲ್ಲಿ 257 ಸ್ನಾನ ಗೃಹಗಳು, ಐದು ಈಜುಕೊಳಗಳನ್ನು ನಿರ್ಮಿಸಲಾಗಿದೆ. ಈ ಅರಮನೆಯ ಗುಮ್ಮಟಗಳನ್ನು 22 ಕ್ಯಾರೆಟ್ ಚಿನ್ನದಿಂದ ನಿರ್ಮಿಸಿರುವುದು ಮತ್ತೊಂದು ವಿಶೇಷ. ಒಟ್ಟಾರೆ ಹೇಳಬೇಕೆಂದರೆ ನೂರುಲ್ ಅರಮನೆಯ ಇಂದಿನ ಒಟ್ಟು ಮೌಲ್ಯ ಬರೋಬ್ಬರಿ 2387 ಕೋಟಿ.ರೂ.

    ಭಾರತದೊಂದಿಗೆ ಉತ್ತಮ ಸಂಬಂಧ ಹೊಂದಿರುವ ಸುಲ್ತಾನ

    ಭಾರತದೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ಬ್ರೂನೈ ಸುಲ್ತಾನ್ 69ನೇ ಗಣರಾಜ್ಯೋತ್ಸವದಂದು ವಿಶೇಷ ಅತಿಥಿಯಾಗಿ ಭಾಗವಹಿಸಿದ್ದರು. ಗಣರಾಜೋತ್ಸವದಲ್ಲಿ ಪಾಲ್ಗೊಳ್ಳಲು ದೆಹಲಿಗೆ ಆಗಮಿಸಿದ ರಾಜ ಹಸ್ಸನಲ್ ಬೊಲ್ಕಿಯಾ ಖುದ್ದು ವಿಮಾನವನ್ನು ಚಲಾಯಿಸಿದ್ದರು. 71 ವರ್ಷದ ಸುಲ್ತಾನ್ ಬ್ರೂನೈನಿಂದ ದೆಹಲಿಯವರೆಗೆ 4 ಸಾವಿರದ ಏಳುನೂರು ಕಿ.ಮೀ ವಿಮಾನ ಚಲಾಯಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದರು.

    ಇದನ್ನೂ ಓದಿ: Twitter account ತೆಗೆಯಲು19 ವರ್ಷದ ಯುವಕನಿಗೆ 5,000 ಡಾಲರ್ ಆಫರ್‌ ಮಾಡಿದ Elon Musk! ಯಾಕೆ ಗೊತ್ತೇ?

    14,700 ಕೋಟಿಗೂ ಅಧಿಕ ಮೌಲ್ಯದ ಆಸ್ತಿ..

    ವರದಿಯೊಂದರ ಪ್ರಕಾರ ಹಸ್ಸನಲ್ ಬೊಲ್ಕಿಯಾ 14,700 ಕೋಟಿ ರೂ.ಗೂ ಅಧಿಕ ಮೌಲ್ಯದ ಆಸ್ತಿ ಹೊಂದಿದ್ದಾರೆ. ತೈಲ ನಿಕ್ಷೇಪಗಳು ಮತ್ತು ನೈಸರ್ಗಿಕ ಅನಿಲವು ಅವರ ಆದಾಯದ ಅತಿದೊಡ್ಡ ಮೂಲವಾಗಿದೆ. ನಾವು ಅವರ ರಾಜಮನೆತನದ ಬಗ್ಗೆ ಮಾತನಾಡೋದಾದ್ರೆ, ಅವರ ಅರಮನೆಯ ಹೆಸರು 'ಇಸ್ತಾನಾ ನೂರುಲ್ ಇಮಾನ್ ಅರಮನೆ' ಮತ್ತು ಅದರ ಮೌಲ್ಯ 2387ಕೋಟಿ ರೂ. ಎಂದು ಹೇಳಲಾಗುತ್ತದೆ.
    Published by:ranjumbkgowda1 ranjumbkgowda1
    First published: