ಎಷ್ಟೋ ಸಲ ನಾವು ನಮ್ಮ ಬೈಕ್ ಅಥವಾ ಕಾರಿನ ಟೈರ್ ಪಂಕ್ಚರ್ (Tyre Puncture) ಆದಾಗ ಅದನ್ನು ಪಂಕ್ಚರ್ ಸರಿ ಮಾಡುವ ಮೆಕ್ಯಾನಿಕ್ ಬಳಿ ತೆಗೆದುಕೊಂಡು ಹೋಗುತ್ತೇವೆ. ಅಲ್ಲಿ ಹೋದಾಗ ಕೆಲವರು ನಮ್ಮನ್ನು ಕುರ್ಚಿ ಹಾಕಿ ಕೂತ್ಕೊಳ್ಳಿ ಸಾರ್, ನಿಮ್ಮ ಟೈರ್ ನ ಪಂಕ್ಚರ್ ಅನ್ನ ಸರಿ ಮಾಡಿ ಕೊಡ್ತೇನೆ” ಅಂತ ತುಂಬಾನೇ ವಿನಮ್ರತೆಯಿಂದ ಹೇಳಿ ಪಂಕ್ಚರ್ ಆದ ಟೈರ್ ಅನ್ನು ಸರಿ ಮಾಡಿ ಕೊಡುತ್ತಾರೆ ಮತ್ತು ನಮಗೆ ಅವರ ವ್ಯಕ್ತಿತ್ವ ತುಂಬಾನೇ ಇಷ್ಟವಾಗುತ್ತದೆ (Like) ಅಂತ ಹೇಳಬಹುದು. ಹೀಗೆ ತಮ್ಮ ವಾಹನದ ಟೈರ್ ಪಂಕ್ಚರ್ ಆಗಿದ್ದಕ್ಕೆ ಮೆಕ್ಯಾನಿಕ್ ಬಳಿಗೆ ರಿಪೇರಿಗೆ (Repair) ಅಂತ ತಂದ ಪಾಕಿಸ್ತಾನದ ಶ್ರೀಮಂತ (Rich) ಮಹಿಳೆಯೊಬ್ಬಳು ಆ ಪಂಕ್ಚರ್ ಸರಿ ಮಾಡಿಕೊಟ್ಟ ವ್ಯಕ್ತಿಯ ವ್ಯಕ್ತಿತ್ವಕ್ಕೆ ಮನಸೋತು ಪ್ರೀತಿಯಲ್ಲಿ ಬಿದ್ದಿದ್ದಾಳೆ ನೋಡಿ.
ಈ ಕಥೆ ನಿಮಗೆ ಯಾವುದೋ ಒಂದು ಸಿನೆಮಾದ ಕಥೆಯನ್ನು ನೆನಪಿಸಬಹುದು ಅಲ್ಲವೇ? ಕನ್ನಡದಲ್ಲಿ ಚೆಲುವಿನ ಚಿತ್ತಾರ ಅಂತ ಫಿಲ್ಮ್ ನಲ್ಲಿ ನಟಿ ಹೀಗೆ ತನ್ನ ಸ್ಕೂಟಿಯ ಟೈರ್ ಪಂಕ್ಚರ್ ಸರಿ ಮಾಡಿಸಿಕೊಳ್ಳಲು ಬಂದು ಆ ಮೆಕ್ಯಾನಿಕ್ ಮೇಲೆ ಪ್ರೀತಿ ಹುಟ್ಟಿರುತ್ತದೆ. ಇಲ್ಲಿಯೂ ಸಹ ಇದೇ ರೀತಿಯ ಒಂದು ಘಟನೆ ನಡೆದಿದೆ ನೋಡಿ. ಅದಕ್ಕೆ ಹೇಳೋದು ಕಣ್ರೀ.. ಪ್ರೀತಿ ಯಾವಾಗ ಮತ್ತು ಯಾರ ಜೊತೆ ಆಗುತ್ತದೆ ಅಂತ ಯಾರಿಂದಲೂ ಊಹಿಸುವುದಕ್ಕೂ ಸಾಧ್ಯವಿಲ್ಲ.
ಒಳ್ಳೆ ಫಿಲ್ಮಿ ಸ್ಟೋರಿಯಂತಿದೆ ಪಾಕಿಸ್ತಾನದ ಈ ಪ್ರೇಮಕಥೆ..
ಕೆಲವೊಮ್ಮೆ ನೀವು ವ್ಯಕ್ತಿಯನ್ನು ಏಕೆ ಇಷ್ಟ ಪಡುತ್ತೀರಿ ಅನ್ನೋದಕ್ಕೆ ವಿಶೇಷವಾದ ಕಾರಣ ಇರುವುದಿಲ್ಲ, ಆದರೂ ಅವರ ಮೇಲೆ ನಿಮಗೆ ಒಂದು ರೀತಿಯ ಪ್ರೀತಿ ಬೆಳೆದಿರುತ್ತದೆ ಅಂತ ಹೇಳಬಹುದು. ಒಮ್ಮೊಮ್ಮೆ ನಿಮ್ಮ ಬುದ್ಧಿ ನಿಮಗೆ ಈ ಹುಡುಗ ಅಥವಾ ಹುಡುಗಿ ಸರಿಯಾದ ಜೋಡಿಯಲ್ಲ ಅಂತ ಹೇಳಿದರೂ, ನಿಮ್ಮ ಮನಸ್ಸು ಅದನ್ನು ಒಪ್ಪಿಕೊಳ್ಳುವುದಕ್ಕೆ ತಯಾರಿರುವುದಿಲ್ಲ ನೋಡಿ.
ಹೀಗೆ ಮನಸ್ಸಿನಿಂದ ಹುಟ್ಟಿದ ಪ್ರೀತಿಯೊಂದು ನೆರೆಯ ದೇಶವಾದ ಪಾಕಿಸ್ತಾನದಲ್ಲಿ ನಡೆದಿದೆ ನೋಡಿ. ಈ ಪ್ರೇಮಕಥೆಯು ಇಂಟರ್ನೆಟ್ ನಲ್ಲಿ ಅನೇಕರ ಗಮನವನ್ನು ಸೆಳೆದಿದೆ ಅಂತ ಹೇಳಿದರೆ ಸುಳ್ಳಲ್ಲ. ಪಾಕಿಸ್ತಾನದ ಶ್ರೀಮಂತ ಕುಟುಂಬದ ಆಯೇಷಾ ತನ್ನ ವಾಹನದ ಟೈರ್ ಬದಲಾಯಿಸಿಕೊಟ್ಟ ಟೆಕ್ನಿಷಿಯನ್ ಜಿಸೆನ್ ನನ್ನು ತುಂಬಾನೇ ಇಷ್ಟಪಟ್ಟಳಂತೆ. ಯೂಟ್ಯೂಬರ್ ಸೈಯದ್ ಬಸಿತ್ ಅಲಿ ಅವರೊಂದಿಗೆ ಆನ್ಲೈನ್ ನಲ್ಲಿ ನಡೆದ ಸಂದರ್ಶನವೊಂದರಲ್ಲಿ ಈ ಜೋಡಿ ತಮ್ಮ ಪ್ರೀತಿಯ ಬಗ್ಗೆ ಹೇಳಿಕೊಂಡರು.
ಇದನ್ನೂ ಓದಿ: Viral Video: ಟ್ರಕ್ನ ಕೆಳಗಿಂದ ಕಾರ್ ಪಾಸ್ ಮಾಡಿದ ಧೀರ! ಈತ ಸಾಮಾನ್ಯ ಡ್ರೈವರ್ ಅಲ್ಲ!
ಆಯೇಷಾ ಅವರು ಜಿಸೆನ್ ಅವರನ್ನು ಹೇಗೆ ಭೇಟಿಯಾದರು?
ಸಂದರ್ಶನದಲ್ಲಿ, ಆಯೇಷಾ ಅವರು ಜಿಸೆನ್ ಅವರನ್ನು ಹೇಗೆ ಭೇಟಿಯಾದರು ಎಂಬುದನ್ನು ವಿವರಿಸಿದರು. ಅವರ ಒಂದು ಪ್ರಯಾಣದ ಸಮಯದಲ್ಲಿ ಅವರ ವಾಹನದ ಟೈರ್ ಪಂಕ್ಚರ್ ಆದಾಗ ಅವರು ಪಂಕ್ಚರ್ ಆದ ಆ ಟೈರ್ ಅನ್ನು ಸರಿಪಡಿಸಲು ಅನೇಕರಿಗೆ ಸಹಾಯ ಕೇಳಿದರಂತೆ, ಆದರೆ ಯಾರು ಅವರ ಸಹಾಯಕ್ಕೆ ಬರಲಿಲ್ಲವಂತೆ. ಬದಲಾಗಿ ಕೆಲವರು ಅವರ ಕಾರನ್ನು ಅಲ್ಲೇ ಹತ್ತಿರವಿರುವ ಜಿಸೆನ್ ಅವರ ಗ್ಯಾರೇಜ್ ಗೆ ಹೋಗುವಂತೆ ಸಲಹೆ ನೀಡಿದರಂತೆ.
ಆಯೇಷಾಳನ್ನು ಕೇರ್ ಮಾಡಿದ ಗ್ಯಾರೇಜ್ ಹುಡುಗ
ಅವರು ಗ್ಯಾರೇಜ್ ಗೆ ಹೋದಾಗ ಆ ಕಾರನ್ನು ನೋಡಿದ ನಂತರ, ಜಿಸೆನ್ ತಕ್ಷಣವೇ ತನ್ನ ಅಂಗಡಿಯ ಕೆಲಸಗಾರರನ್ನು ಪಂಕ್ಚರ್ ಆದ ಟೈರ್ ನ ಪರಿಸ್ಥಿತಿಯನ್ನು ನೋಡುವಂತೆ ಹೇಳಿದನು. ಈ ಸಂದರ್ಭದಲ್ಲಿ ತನ್ನ ವಾಹನವನ್ನು ಸರಿಪಡಿಸುವುದನ್ನು ಕಾಯುತ್ತಿರುವಾಗ ಆಯೇಷಾಳನ್ನು ಆರಾಮದಾಯಕವಾಗಿ ಒಂದೆಡೆ ಕೂರಿಸಿ ಅವರಿಗೆ ಕುಡಿಯಲು ಟೀ ಸಹ ತರಿಸಿಕೊಟ್ಟರಂತೆ ಜಿಸೆನ್. ಸ್ವಲ್ಪ ಸಮಯದಲ್ಲಿಯೇ ಆಕೆಯ ಕಾರನ್ನು ಸರಿ ಮಾಡಿ ಅವಳಿಗೆ ನೀಡಿದರಂತೆ. ಜಿಸೆನ್ ಅವರ ಮನೋಭಾವವು ಆಕೆಯ ಮನಸ್ಸಿನ ಮೇಲೆ ಶಾಶ್ವತವಾದ ಪ್ರಭಾವ ಬೀರಿತು. ಅವಳು ಅವನನ್ನು ಪ್ರೀತಿಸಲು ಶುರು ಮಾಡಿದಳು.
ಪ್ರೀತಿಸಿ ಮದುವೆಯಾದ ಜೋಡಿ..
ನಂತರ ಆಯೇಷಾ ಜಿಸೆನ್ ನನ್ನು ನೋಡುವ ಪ್ರತಿಯೊಂದು ಅವಕಾಶವನ್ನು ಬಳಸಿಕೊಂಡಳು. ಅವನನ್ನು ಮತ್ತೆ ಮತ್ತೆ ಭೇಟಿಯಾಗಲು ಮಹಿಳೆ ತನ್ನ ಕಾರನ್ನು ಉದ್ದೇಶಪೂರ್ವಕವಾಗಿ ಪಂಕ್ಚರ್ ಮಾಡಿಸಿಕೊಂಡಳು. ಅವರ ಸಂಬಂಧದ ಬಗ್ಗೆ ಮಾತನಾಡಿದ ಜಿಸೆನ್, ಆಯೇಷಾ ತುಂಬಾನೇ ಒಳ್ಳೆಯ ಹುಡುಗಿ ಎಂದು ಹೇಳಿದರು. ಇವರಿಬ್ಬರು ಮುಂದೆ ಮದುವೆಯಾಗಿ ಒಬ್ಬರಿಗೊಬ್ಬರು ಆಸರೆಯಾಗಿದ್ದಾರೆ. ಅವರಿಬ್ಬರ ವಿಭಿನ್ನ ಸಾಮಾಜಿಕ ಸ್ಥಾನಮಾನವು ಅವರ ವಿವಾಹದಲ್ಲಿ ಯಾವುದೇ ತೊಡಕು ಉಂಟು ಮಾಡಲಿಲ್ಲವಂತೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ