ಒಮ್ಮೊಮ್ಮೆ ಸಾರ್ವಜನಿಕ ಪ್ರದೇಶಗಳಲ್ಲಿ ಜನರು (People) ವರ್ತಿಸೋ ರೀತಿ ನೋಡಿದ್ರೆ ಎಂತೆಂಥ ಜನ ಇರ್ತಾರಪ್ಪ ಅನ್ಸುತ್ತೆ. ನಿಯಮ ಮೀರೋದಲ್ಲದೇ, ಕೋಪದಲ್ಲಿ ಕೈ ಗೆ ಸಿಕ್ಕಿದ್ದೆಲ್ಲಾ ಒಡೆದು ಹಾಕಿ, ಸಾರ್ವಜನಿಕ ಆಸ್ತಿಯನ್ನೂ (Public Property) ಹಾಳು ಮಾಡುವ ಜನರು ಆಗಾಗ ಕಾಣ್ತಾ ಇರ್ತಾರೆ. ಆಮೇಲೆ ಶಿಕ್ಷೆ ಆಗುತ್ತೆ, ದಂಡ (Fine) ಬೀಳುತ್ತೆ ಅಂತ ಗೊತ್ತಿದ್ದರೂ ಆ ಕ್ಷಣದಲ್ಲಿ ಮೈಮೇಲೆ ಪ್ರಜ್ಞೆ ಇಲ್ಲದ ಹಾಗೆ ನಡ್ಕೋತಾರೆ. ಇಲ್ಲೊಬ್ಬ ಭೂಪ ವಿಮಾನದಲ್ಲಿ (Flight) ವಿಚಿತ್ರವಾಗಿ ವರ್ತಿಸಿದ್ದಲ್ಲದೇ ಸೀಟು, ಕಿಟಕಿಗಳಿಗೆ ಗುದ್ದಿ ರಾದ್ಧಾಂತ ಮಾಡಿದ್ದಾನೆ. ಅಷ್ಟಕ್ಕೂ ಅಲ್ಲಿ ಆಗಿದ್ದೇನು..? ಆ ವ್ಯಕ್ತಿ ಹಾಗೆ ನಡ್ಕೊಳ್ಳೋಕೆ ಕಾರಣ ಏನು ಅನ್ನೋದನ್ನು ನೋಡೋಣ.
ಪಾಕಿಸ್ತಾನ ಇಂಟರ್‌ನ್ಯಾಶನಲ್ ಏರ್‌ಲೈನ್ಸ್‌ನಲ್ಲಿ ನಡೆದ ಘಟನೆ
ಎಲ್ಲರಿಗೂ ಗೊತ್ತಿರೋ ಹಾಗೆ ಪ್ರತಿ ಏರ್‌ಲೈನ್‌ನ ಕ್ಯಾಬಿನ್ ಸಿಬ್ಬಂದಿ ಪ್ರಯಾಣಿಕರ ಜೊತೆ ತುಂಬಾ ನಯವಾಗಿ ನಡ್ಕೊತಾರೆ. ಮತ್ತು ಅವರ ಅಗತ್ಯಗಳನ್ನು ನಮ್ರವಾಗಿ ಪರಿಗಣಿಸಿ ಪೂರೈಸ್ತಾರೆ. ಇದು ವಿಮಾನಯಾನ ಮಾಡಿದವರಿಗೆಲ್ಲ ಗೊತ್ತಿರೋ ವಿಚಾರ. ಆದರೆ ಕೆಲವೊಮ್ಮೆ ಪ್ರಯಾಣಿಕರು ಅವರ ಜೊತೆ ವಿಚಿತ್ರವಾಗಿ ವರ್ತಿಸ್ತಾರೆ. ಇಂಥ ಪ್ರಯಾಣಿಕರ ವರ್ತನೆ ಅಲ್ಲಿನ ಸಿಬ್ಬಂದಿಯ ಜೀವಕ್ಕೆ ಹಾಗೂ ಜೀವನಕ್ಕೆ ಕಂಟಕವಾಗುತ್ತೆ. ಇದಕ್ಕೆ ಉದಾಹರಣೆ ಎಂಬಂತೆ ಪಾಕಿಸ್ತಾನ ಇಂಟರ್‌ನ್ಯಾಶನಲ್ ಏರ್‌ಲೈನ್ಸ್‌ನ (ಪಿಐಎ) ಪೇಶಾವರ-ದುಬೈ ವಿಮಾನದಲ್ಲಿ ಇಂಥದ್ದೊಂದು ಅವಾಂತರ ನಡೆದಿದೆ.
ಇದನ್ನೂ ಓದಿ: Weird Laws: ಪುರುಷರ-ಮಹಿಳೆಯರ ಒಳ ಉಡುಪುಗಳನ್ನು ಒಟ್ಟಿಗೆ ಒಣಗಿಸುವಂತಿಲ್ಲ, ಇಲ್ಲಿದೆ ವಿಚಿತ್ರ ಕಾನೂನುಗಳು
ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರೋ ಈ ವಿಡಿಯೋದ ಕ್ಲಿಪ್ ಒಂದರಲ್ಲಿ ಬನಿಯನ್ ಧರಿಸಿರುವ ವ್ಯಕ್ತಿ ವಿಮಾನದ ಕಿಟಕಿಗೆ ಒದೆಯುವುದು ಮತ್ತು ಸೀಟುಗಳಿಗೆ ಗುದ್ದುವುದು ಕಂಡುಬರುತ್ತದೆ. ಅಲ್ದೇ ಆತ ವಿಮಾನದ ನೆಲದ ಮೇಲೆ ಮುಖ ಕೆಳಗೆ ಬಿದ್ದಿರುವಂತೆ ಕಂಡುಬರುತ್ತೆ. ಮತ್ತೊಂದು ವಿಡಿಯೋ ಕ್ಲಿಪ್ ನಲ್ಲಿ ಫ್ಲೈನ್ ನ ಅಟೆಂಡೆಂಟ್‌ಗಳು ಉಳಿದ ಪ್ರಯಾಣಿಕರನ್ನು ಸಂಭಾಳಿಸುತ್ತಿರೋದನ್ನ ಕಾಣಬಹುದು. ಅಲ್ದೇ ಈ ಪ್ರಯಾಣಿಕನಿಗೂ ಸುಮ್ಮನಾಗುವಂತೆ ಹೇಳುತ್ತಿರೋದನ್ನು ಕಾಣಬಹುದು.
ಏನಿದು ಘಟನೆ ?
ಇನ್ನು ಡಾವ್ನ್ ನ್ಯೂಸ್ ಪ್ರಕಾರ, ಈ ವ್ಯಕ್ತಿ ಬುಧವಾರ ಪೇಶಾವರದಿಂದ ದುಬೈಗೆ PIA ಯ PK-283 ವಿಮಾನವನ್ನು ಹತ್ತಿದ್ದಾನೆ. ವಿಮಾನ ಟೇಕ್ ಆಫ್ ಆಗುತ್ತಿದ್ದಂತೆ, ತನ್ನನ್ನು ವಿಮಾನದಿಂದ ಕೆಳಗಿಳಿಸುವಂತೆ ಕ್ಯಾಬಿನ್ ಸಿಬ್ಬಂದಿಯನ್ನು ಕೇಳಲು ಪ್ರಾರಂಭಿಸಿದ್ದಾನೆ. ವಿಮಾನ ಟೇಕಾಫ್ ಆದ ನಂತರ ಇಳಿಸೋದು ಸಾಧ್ಯವಿಲ್ಲ ಎಂದು ವಿಮಾನ ಸಿಬ್ಬಂದಿ ಆತನನ್ನು ಸಮಾಧಾನಿಸಲು ಯತ್ನಿಸಿದ್ದಾರೆ. ಆದರೆ ಇದನ್ನು ಕೇಳಲೊಪ್ಪದ ಆ ವ್ಯಕ್ತಿ ವಿಮಾನದ ಸೀಟ್ ಗಳಿಗೆ ಗುದ್ದಲು ಮತ್ತು ಒದೆಯಲು ಶುರು ಮಾಡಿಕೊಂಡಿದ್ದಾನೆ.
#Watch: In a shocking incident, a passenger on a #Pakistan International Airlines (#PIA) #Peshawar to #Dubai flight created chaos midflight when he started kicking the aircraft's window, punching seats, and indulging in a brawl with the flight staff. @odysseuslahori @BushraGohar pic.twitter.com/sW1ILpUz5f
— Mahar Naaz (@naaz_mahar) September 19, 2022
ಇಷ್ಟೇ ಅಲ್ದೇ ಕಿಟಕಿಯ ಶಟರ್ ಗೂ ಗುದ್ದಿ ಅದಕ್ಕೂ ಹಾನಿ ಮಾಡಿದ್ದಾನೆ. ಈ ಪ್ರಯಾಣಿಕನ ವರ್ತನೆಯಿಂದ ವಿಮಾನದಲ್ಲಿದ್ದ ಉಳಿದ ಪ್ರಯಾಣಿಕರು ಭಯಗೊಂಡಿದ್ದರು. ಇದನ್ನು ವಿಡಿಯೋ ಮಾಡಿರುವ ಪ್ರಯಾಣಿಕರು ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಇನ್ನು ವಿಮಾನ ಹತ್ತಿದ ಕೂಡಲೇ ಸೀಟ್ ಬೆಲ್ಟ್ ಧರಿಸೋದು ನಿಯಮ. ಆದರೆ ಈ ವ್ಯಕ್ತಿ ಅದನ್ನೂ ಕಿತ್ತು ರಾದ್ಧಾಂತ ಮಾಡಿರೋದು ವಿಚಿತ್ರವಾಗಿದೆ. ಇನ್ನು ಈ ಘಟನೆ ಹಿನ್ನೆಲೆಯಲ್ಲಿ ವಿಮಾನದ ಕ್ಯಾಪ್ಟನ್ ದುಬೈನ ಏರ್ ಟ್ರಾಫಿಕ್ ಕಂಟ್ರೋಲರ್ ರನ್ನು ಸಂಪರ್ಕಿಸಿ ಭದ್ರತೆ ಕೋರಿದ್ದಾರೆ.
ಇದನ್ನೂ ಓದಿ: Viral Video: ಮಳೆಯಿಂದಾದ ಸಮಸ್ಯೆ ನಡುವೆಯೂ ಹಣ ಸಂಪಾದಿಸಿದ ವ್ಯಕ್ತಿ!
ಇನ್ನು ಘಟನೆಯ ಹಿನ್ನೆಲೆಯಲ್ಲಿ ಈ ಫ್ಲೈಟ್ ದುಬೈನ ವಿಮಾನ ನಿಲ್ದಾಣಕ್ಕೆ ಆಗಮಿಸಿದ ತಕ್ಷಣ ಭದ್ರತಾ ಸಿಬ್ಬಂದಿ ಆ ಪ್ರಯಾಣಿಕನನ್ನು ಬಂಧಿಸಿದ್ದಾರೆ. ಘಟನೆ ಸೆಪ್ಟೆಂಬರ್ 14 ರಂದು ನಡೆದಿದ್ದು, PIA ಅಧಿಕಾರಿಗಳ ಪ್ರಕಾರ, ವ್ಯಕ್ತಿಯನ್ನು ಕಪ್ಪುಪಟ್ಟಿಗೆ ಸೇರಿಸಲಾಗಿದೆ. ವಿಮಾನದಲ್ಲಿ ಇಂಥ ಅನೇಕ ಘಟನೆಗಳು ಆಗಾಗ್ಗೆ ನಡೆಯುತ್ತಲೇ ಇರುತ್ತವೆ. ಅನಾಗರಿಕರಂತೆ ವರ್ತಿಸುವ ಜನರು ಅಲ್ಲಲ್ಲಿ ಕಂಡುಬರುತ್ತಾರೆ. ಆದ್ರೆ ಇಂಥ ಜಾಗಗಳಲ್ಲಾದರೂ ಸುಶಿಕ್ಷಿತರಂತೆ ವರ್ತಿಸೋದು ನಮಗೂ ನಮ್ಮ ಜೊತೆ ಇರೋರಿಗೂ ಒಳ್ಳೆಯದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ