ಈಗಂತೂ ಶಾಲೆಗೆ ಹೋಗುವ ಚಿಕ್ಕ ಮಕ್ಕಳಿಂದ ಹಿಡಿದು ವಯೋ ವೃದ್ದರವರೆಗೂ ತಮ್ಮ ಯಾವುದಾದರೂ ಒಂದು ಇಷ್ಟದ ಹಾಡಿಗೆ ಅದ್ಭುತವಾಗಿ ಡ್ಯಾನ್ಸ್ (Dance) ಮಾಡಿ, ಅದನ್ನು ವೀಡಿಯೋ ಮಾಡಿಕೊಂಡು ನಂತರ ಸಾಮಾಜಿಕ ಮಾಧ್ಯಮಗಳಲ್ಲಿ (Social Media) ಪೋಸ್ಟ್ (Post) ಮಾಡುವುದನ್ನು ನಾವೆಲ್ಲಾ ದಿನ ಬೆಳಗಾದರೆ ನೋಡುತ್ತಲೇ ಇರುತ್ತೇವೆ. ಆದರೆ ಇದರಲ್ಲಿ ಎಲ್ಲಾ ವಿಡಿಯೋಗಳು (Video) ಜನರಿಗೆ ಇಷ್ಟವಾಗುವುದಿಲ್ಲ ಮತ್ತು ಪೋಸ್ಟ್ ಮಾಡಿದವರು ಎಲ್ಲರೂ ಫೇಮಸ್ ಆಗುವುದಿಲ್ಲ. ಕೆಲವರು ಮಾತ್ರ ಬಿಟ್ಟು ಬಿಡದೆ ತಮ್ಮ ಇಷ್ಟದ ಹಾಡುಗಳಿಗೆ ನಾನಾ ರೀತಿಯಲ್ಲಿ ಡ್ಯಾನ್ಸ್ ಮಾಡಿ ಆ ವಿಡಿಯೋಗಳನ್ನು ಆಗಾಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡುತ್ತಲೇ ಇರುತ್ತಾರೆ ಮತ್ತು ಅದನ್ನು ಜನರು ಹೆಚ್ಚಾಗಿ ಗುರುತಿಸುತ್ತಾರೆ ಅಂತ ಹೇಳಿದರೆ ತಪ್ಪಾಗುವುದಿಲ್ಲ.
ಹೀಗಾಗಿ ಕೆಲವರು ತುಂಬಾನೇ ಜನಪ್ರಿಯರಾಗಿರುತ್ತಾರೆ ಅಂತ ಹೇಳಬಹುದು. ಇಲ್ಲಿಯೂ ಸಹ ಹೀಗೆಯೇ ವಿಡಿಯೋಗಳನ್ನು ಪೋಸ್ಟ್ ಮಾಡಿ ವೈರಲ್ ಆಗಿರುವ ಯುವತಿಯ ಬಗ್ಗೆ ಹೇಳುತ್ತೇವೆ ನೋಡಿ.
ಪಾಕಿಸ್ತಾನಿ ಯುವತಿ ಮತ್ತೆ ಡ್ಯಾನ್ಸ್ ಮಾಡಿ ವೈರಲ್ ಆಗಿದ್ದಾರೆ ನೋಡಿ..
ನೀವು ನಿಯಮಿತವಾಗಿ ಸಾಮಾಜಿಕ ಮಾಧ್ಯಮವನ್ನು ಬಳಸುವವರಾಗಿದ್ದರೆ, ನಿಮಗೆ ಆಯೇಷಾ ಎಂಬ ಪಾಕಿಸ್ತಾನಿ ಯುವತಿಯ ಬಗ್ಗೆ ತಿಳಿದೇ ಇರುತ್ತದೆ. ಹಿಂದೊಮ್ಮೆ ಮದುವೆ ಸಮಾರಂಭದಲ್ಲಿ ಲತಾ ಮಂಗೇಶ್ಕರ್ ಅವರ ‘ಮೇರಾ ದಿಲ್ ಯೇ ಪುಕಾರೆ’ ಹಾಡಿಗೆ ಡ್ಯಾನ್ಸ್ ಮಾಡುತ್ತಿರುವ ವೈರಲ್ ವಿಡಿಯೋವನ್ನು ನೀವು ಬಹುಶಃ ನೋಡಿರಬಹುದು.
ಇದನ್ನೂ ಓದಿ: ಅಳುತ್ತಿರುವ ಅಕ್ಕನನ್ನ ಸಂತೈಸಿದ ತಮ್ಮ; ಕ್ಯೂಟ್ ವಿಡಿಯೋ ನೋಡಿದವರ ಕಣ್ಣಾಲಿಗಳು ತೇವ
ಅನೇಕ ಜನರು ಹೀಗೆ ಹಳೆಯ ಹಾಡುಗಳನ್ನು ಆಯ್ಕೆ ಮಾಡಿಕೊಂಡು ಅದಕ್ಕೆ ಡ್ಯಾನ್ಸ್ ಮಾಡಿ ಜನಪ್ರಿಯರಾಗಿದ್ದಾರೆ. ಆಯೇಷಾ ಮದುವೆಯಲ್ಲಿ ಡ್ಯಾನ್ಸ್ ಮಾಡುತ್ತಿರುವ ವಿಡಿಯೋ ವೈರಲ್ ಆದ ನಂತರ ಇಂಟರ್ನೆಟ್ ಸೆಲೆಬ್ರಿಟಿಯಾಗಿದ್ದಾರೆ ಎಂದು ಹೇಳಿದರೆ ಅತಿಶಯೋಕ್ತಿಯಲ್ಲ.
View this post on Instagram
ಹೊಸ ಹಾಡಿಗೆ ಡ್ಯಾನ್ಸ್ ಮಾಡಿದ ಆಯೇಷಾ:
ಈ ಬಾರಿ ಅವರು ಮಿಕ್ಕಿ ಸಿಂಗ್ ಅವರ 'ತು ಹೀ ದಸ್ ದೇ' ಹಾಡಿನ ರೀಮಿಕ್ಸ್ ಆವೃತ್ತಿಗೆ ಡ್ಯಾನ್ಸ್ ಮಾಡುತ್ತಿರುವುದನ್ನು ವೀಡಿಯೋದಲ್ಲಿ ನಾವು ನೋಡಬಹುದು. ಪಿಂಚ್ಆಫ್ಸಾಲ್ಟಿ ಎಂಬ ಹೆಸರಿನ ಇನ್ಸ್ಟಾಗ್ರಾಮ್ ಖಾತೆಯ ಪುಟದಲ್ಲಿ ಈ ಕ್ಲಿಪ್ ಅನ್ನು ಹಂಚಿಕೊಳ್ಳಲಾಗಿದೆ ಮತ್ತು ಇದು ಈಗಾಗಲೇ 228,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ.
ಪಂಜಾಬಿ ಹಾಡಿಗೆ ಡ್ಯಾನ್ಸ್ ಮಾಡಿದ ಆಯೇಷಾ..
ವೈರಲ್ ಕ್ಲಿಪ್ ನಲ್ಲಿ ಆಯೇಷಾ ಜನಪ್ರಿಯ ಪಂಜಾಬಿ ಹಾಡಿಗೆ ಡ್ಯಾನ್ಸ್ ಮಾಡುವುದನ್ನು ನೋಡಬಹುದು. ಅವರು ತಮ್ಮ ಚಲನವಲನಗಳನ್ನು ಅಪಾರ ಪರಿಪೂರ್ಣತೆಯಿಂದ ನಿರ್ವಹಿಸಿದ್ದಾರೆ. ಅವರು ಕಿತ್ತಳೆ ಬಣ್ಣದ ಹೂಡಿಯನ್ನು ಧರಿಸಿರುವುದನ್ನು ಕಾಣಬಹುದು.
ಇಂಟರ್ನೆಟ್ ಬಳಕೆದಾರರು ಪಾಕಿಸ್ತಾನಿ ಹುಡುಗಿಯ ನಡೆಗಳಿಂದ ಸಾಕಷ್ಟು ಮಂತ್ರಮುಗ್ಧಗೊಂಡಂತೆ ಕಂಡು ಬಂದರು, ಏಕೆಂದರೆ ಅವಳ ವೀಡಿಯೋಗಳ ವೀಕ್ಷಣೆಗಳ ಸಂಖ್ಯೆ ಏರುತ್ತಲೇ ಹೋಗುತ್ತಿದೆ. "ಓಯಿ ಆಯೇಷಾ ಹೊಸ ವೀಡಿಯೋ, ಮೇರಾ ದಿಲ್ ಯೇ ಪುಕಾರೆ ಆಜಾ" ಎಂದು ವೀಡಿಯೋ ಶೀರ್ಷಿಕೆಯನ್ನು ಬರೆಯಲಾಗಿದೆ.
ಆಯೇಷಾ ಹಾಕಿದ ಸ್ಟೆಪ್ಸ್ ಗೆ ನೆಟ್ಟಿಗರು ಫುಲ್ ಫಿದಾ..
ನೆಟ್ಟಿಗರು ಕಮೆಂಟ್ ವಿಭಾಗದಲ್ಲಿ ಆಯೇಷಾ ಅವರ ಮಂತ್ರಮುಗ್ಧಗೊಳಿಸುವ ಡ್ಯಾನ್ಸ್ ಸ್ಟೆಪ್ಸ್ ಗಳನ್ನು ತುಂಬಾನೇ ಶ್ಲಾಘಿಸಿದರು. "ನೀನು ಪಾಕಿಸ್ತಾನದಲ್ಲಿ ಜನಪ್ರಿಯ ಆಗಿದ್ದಕ್ಕಿಂತಲೂ 10 ಪಟ್ಟು ಜಾಸ್ತಿ ನಮ್ಮ ಭಾರತದಲ್ಲಿ ಜನಪ್ರಿಯವಾಗಿದ್ದೀಯಾ" ಎಂದು ಇನ್ಸ್ಟಾಗ್ರಾಮ್ ಬಳಕೆದಾರರೊಬ್ಬರು ಹೇಳಿದ್ದಾರೆ.
"ಸುಂದರವಾಗಿದೆ.. ನಿಮ್ಮ ಸ್ಟೆಪ್ಸ್ ತುಂಬಾನೇ ಇಷ್ಟವಾದುವು" ಎಂದು ಇನ್ನೊಬ್ಬರು ಪೋಸ್ಟ್ ಮಾಡಿದ್ದಾರೆ. "ನಿಮ್ಮ ಡ್ಯಾನ್ಸ್ ಅನ್ನು ನಾನು ಸಂಪೂರ್ಣವಾಗಿ ಇಷ್ಟಪಟ್ಟಿದ್ದೇನೆ. ದ್ವೇಷಿಗಳನ್ನು ನಿರ್ಲಕ್ಷಿಸಿ, ತುಂಬಾ ಎತ್ತರಕ್ಕೆ ಬೆಳೆಯಿರಿ” ಎಂದು ಮೂರನೆಯವರು ಕಾಮೆಂಟ್ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ