HOME » NEWS » Trend » PAKISTANI GIRL DANANEER MOBEEN SAYS KAREENA KAPOORS POO WAS INSPIRATION FOR VIRAL PAWRI HORI HAI SGT AE

Pawri Ho Rahi Hai: ಪಾವ್ರಿ ಹೋ ರಹೀ ಹೈ ಎಂಬ ವೈರಲ್‌ ಮೀಮ್‌ಗೆ ಬಾಲಿವುಡ್‌ ಬೇಬೊ ಕರೀನಾ ಕಪೂರ್‌ ಸ್ಫೂರ್ತಿ..!

ಪೂ ಪಾತ್ರವನ್ನು ನಾನು ಮಾತ್ರವಲ್ಲ, ಇಡೀ ಪ್ರಪಂಚವೇ ಇದು ತಮಗೆ ಸಂಬಂಧಿಸಿದೆ ಎಂದು ಯೋಚಿಸಬಹುದು ಎಂದು ನಾನು ಭಾವಿಸುತ್ತೇನೆ. ನಾನು ಕೆಲವೊಮ್ಮೆ ಪೂ ಪಾತ್ರ ನನ್ನ ವೈಯಕ್ತಿಕ ಜೀವನಕ್ಕೆ ತುಂಬಾ ಹತ್ತಿರವಾಗಿದೆ ಎಂದೆನಿಸುತ್ತದೆ ಎಂದು ಆಕೆ ಬಾಲಿವುಡ್ ಹಂಗಾಮಾಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.

Anitha E | news18-kannada
Updated:March 15, 2021, 5:54 PM IST
Pawri Ho Rahi Hai: ಪಾವ್ರಿ ಹೋ ರಹೀ ಹೈ ಎಂಬ ವೈರಲ್‌ ಮೀಮ್‌ಗೆ ಬಾಲಿವುಡ್‌ ಬೇಬೊ ಕರೀನಾ ಕಪೂರ್‌ ಸ್ಫೂರ್ತಿ..!
ಕರೀನಾ ಕಪೂರ್​ ಹಾಗೂ ದನಾನೀರ್​
  • Share this:
2021 ಆರಂಭವಾಗುತ್ತಿದ್ದಂತೆಯೇ ದೇಸಿ ವೈರಲ್‌ ಪದ ‘ಪಾವ್ರಿ ಹೋ ರಹೀ ಹೈ’ ಟ್ರೆಂಡ್‌ ಆಗಲು ಶುರುವಾಗಿತ್ತು. ಪಾಕಿಸ್ತಾನದ ಸೋಶಿಯಲ್​ ಮೀಡಿಯಾ ಇನ್​ಫ್ಲುಯೆನ್ಸರ್​ ದಾನನೀರ್ ಮೊಬೀನ್ ಈ ಪದದಿಂದಾಗಿಯೇ ರಾತ್ರೋರಾತ್ರಿ ಸೆನ್ಸೇಷನ್​ ಆಗಿದ್ದರು.ಯೇ ಹಮಾರಿ ಕಾರ್​ ಹೈ... ಯೇ ಹಮ್​ ಹೈ ಔರ್​ ಯೇ ಹಮಾರಿ ಪಾವ್ರಿ ಹೋ ರಹೀ ಹೈ ಅಂತ ಹೇಳುವ ಮೂಲಕ ಒಂದು ವಿಡಿಯೋ ಮಾಡಿ ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು.‌ 'ಪಾವ್ರಿ ಹೋ ರಹೀ ಹೈ' ಎನ್ನುವ ವೈರಲ್‌ ಮೀಮ್‌ ಹುಟ್ಟುಹಾಕಿದ್ದು, ರಾತ್ರೋರಾತ್ರಿ ಸಾಮಾಜಿಕ ಜಾಲತಾಣದಲ್ಲಿ ಶೈನ್​ ಆಗ ತೊಡಗಿದಳು. ತಾನು ಕರೀನಾ ಕಪೂರ್‌ ಹಾಗೂ ಶಾರುಖ್‌ ಖಾನ್‌ ಅವರ ಅಭಿಮಾನಿ ಎಂದು ಇತ್ತೀಚೆಗೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ ದಾನನೀರ್​.  'ಪಾವ್ರಿ ಹೋ ರಹಿ ಹೈ' ಎಂಬ ವೈರಲ್‌ ಮೀಮ್‌ಗೆ ಕರಣ್​ ಜೋಹರ್ ಅವರ 'ಕಭಿ ಖುಷಿ ಕಭಿ ಗಮ್' ಸಿನಿಮಾದಲ್ಲಿರುವ  ಕರೀನಾ ಕಪೂರ್​ ಅವರ ಪೂಜಾ ಅಲಿಯಾಸ್​ ಪೂ ಎಂಬ ಪಾತ್ರ ಎಂದು  ಹೇಳಿಕೊಂಡಿದ್ದಾರೆ.

''ಪೂ' ಪಾತ್ರವನ್ನು ನಾನು ಮಾತ್ರವಲ್ಲ, ಇಡೀ ಪ್ರಪಂಚವೇ ಇದು ತಮಗೆ ಸಂಬಂಧಿಸಿದೆ ಎಂದು ಯೋಚಿಸಬಹುದು ಎಂದು ನಾನು ಭಾವಿಸುತ್ತೇನೆ. ನಾನು ಕೆಲವೊಮ್ಮೆ 'ಪೂ' ಪಾತ್ರ ನನ್ನ ವೈಯಕ್ತಿಕ ಜೀವನಕ್ಕೆ ತುಂಬಾ ಹತ್ತಿರವಾಗಿದೆ ಎಂದೆನಿಸುತ್ತದೆ'' ಎಂದು ಆಕೆ ಬಾಲಿವುಡ್ ಹಂಗಾಮಾಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.

19ವರ್ಷದ ದಾನನೀರ್​ ಬಾಲ್ಯದಿಂದಲೇ ಕರೀನಾ ಕಪೂರ್ ಅವರ ಸಿನಿಮಾಗಳನ್ನು ನೋಡುತ್ತಲೇ ಬೆಳೆದಿದ್ದಾರಂತೆ. ಬಾಲ್ಯದಿಂದಲೂ ಭಾರತೀಯ ಸಿನಿಮಾಗಳ ಅಭಿಮಾನಿಯಾಗಿರುವ ದಾನನೀರ್​ ಶಾರುಖ್​ ಅವರ ಅಭಿಮಾನಿಯಂತೆ. ಸದಾ ಅವರನ್ನೇ ನೋಡುತ್ತಿರುತ್ತಿದ್ದಂತೆ. ಅದರ ಜೊತೆಗೆ ಕಭಿ ಖುಷಿ ಕಭಿ ಗಮ್​ ಸಿನಿಮಾದ ಪೂ ಪಾತ್ರ ದಾನನೀರ್​ ಅವರಿಗೆ ತುಂಬಾ ಪ್ರಿಯವಾದ ಪಾತ್ರವಂತೆ.
‘ಪಾವ್ರಿ ಹುಡುಗಿ’ ಯಲ್ಲಿ 'ಪೂ' ಎಂಬ ಅಂಶವಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ದಾನನೀರ್, ''ಪೂ ನಮ್ಮೆಲ್ಲರಲ್ಲೂ ಆಳವಾಗಿ ಬೇರೂರಿದ್ದಾಳೆಂದು ನನಗನ್ನಿಸುತ್ತೆ'. ಆದ್ದರಿಂದ, ನೀವು ಮಾಡುವ ಯಾವುದೇ ಕೆಲಸದಲ್ಲಿ, 'ಪೂ' ಪಾತ್ರದ  ಉಸಿರಿರುತ್ತದೆ ಎಂದಿದ್ದಾರೆ.

ಇದನ್ನೂ ಓದಿ: Roberrt: ವೇಷ ಬದಲಿಸಿಕೊಂಡು ಅಭಿಮಾನಿಗಳ ನಡುವೆ ಕುಳಿತು ಸಿನಿಮಾ ನೋಡಿದ ದರ್ಶನ್​: 50 ಕೋಟಿ ಕ್ಲಬ್​ ಸೇರಿದ ರಾಬರ್ಟ್​ ​​..!

ಇನ್ನು, ಇದೇ ಪಾವ್ರಿ ಹೋ ರಹೀ ಹೈ ಆಡಿಯೋಗೆ  90 ರ ದಶಕದ ಜನಪ್ರಿಯ ಚಲನಚಿತ್ರ ಮಿಸ್ಟರ್​ ಮತ್ತು ಮಿಸೆಸ್ ಖಿಲಾಡಿ ದೃಶ್ಯಗಳಿರುವ ವಿಡಿಯೋವನ್ನು ಸೇರಿಸಿ ಜೂಹಿ ಚಾವ್ಲಾ ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋದ ಬಗ್ಗೆ ಪ್ರತಿಕ್ರಿಯಿಸಿದ ದಾನನೀರ್, “ಆಕೆ ಈ ಟ್ರೆಂಡ್‌ ಅನ್ನು ಗಮನಿಸುತ್ತಿರುವುದು ತುಂಬಾ ಖುಷಿಯಾಗಿದೆ. ಅವರು ಆ ಕಾಲದ ದಂತಕತೆ ಎಂದು ಹೊಗಳಿದ್ದಾರೆ.


View this post on Instagram


A post shared by Juhi Chawla (@iamjuhichawla)


ಮೊಬೀನ್ ತನ್ನ ಮತ್ತು ಸ್ನೇಹಿತರ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಇಡೀ ಜಗತ್ತನ್ನು ‘ಪಾವ್ರಿ’ ಮನಸ್ಥಿತಿಯಲ್ಲಿಯಲ್ಲಿಟ್ಟಿದ್ದಾರೆ. ದಾನನೀರ್ ರಸ್ತೆಯೊಂದರಲ್ಲಿ ಸ್ನೇಹಿತರ ನಡುವೆ ಮಾಡಿರುವ 'ಪಾವ್ರಿ ಹೋ ರಹೀ ಹೈ' ವಿಡಿಯೋ ಸಿಕ್ಕಾಪಟ್ಟೆ ವೈರಲ್‌ ಆಗಿದೆ.
Published by: Anitha E
First published: March 15, 2021, 5:49 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories