ಯಾವುದೇ ದೇಶವಿರಲಿ, ಮನುಷ್ಯರ ಹೃದಯದ( Hearts) ಭಾವನೆಗಳಲ್ಲಿ ಭಾರಿ ವ್ಯತ್ಯಾಸವೇನು ಇರುವುದಿಲ್ಲ. ಹೆತ್ತವರು ಮತ್ತು ಹೆಣ್ಣು(Parents and daughters) ಮಕ್ಕಳ ನಡುವಿನ ಬಾಂಧವ್ಯಕ್ಕೂ(Attachment) ಇದು ಅನ್ವಯಿಸುತ್ತದೆ. ಅದರಲ್ಲೂ ಮುಖ್ಯವಾಗಿ, ಮದುವೆಯಾಗಿ ತವರು ಮನೆ ತೊರೆದು ಹೋಗುವಾಗ ಪ್ರತಿ ಹೆಣ್ಣು ಮತ್ತು ಆಕೆಯ ಹೆತ್ತವರ ಕಣ್ಣಾಲಿಗಳು ತುಂಬಿ ಬರುವುದು ಸಹಜ. ನಮ್ಮ ನೆರೆಯ ರಾಷ್ಟ್ರ ಪಾಕಿಸ್ತಾನದ ಅಂತದ್ದೇ ಒಂದು ವಿವಾಹ ಸಮಾರಂಭದ (Wedding ceremony) ದೃಶ್ಯವೊಂದು ಸಾಮಾಜಿಕ ಮಾಧ್ಯಮದಲ್ಲಿ(Social media) ವೈರಲ್ ಆಗಿದ್ದು, ಸಾವಿರಾರು ಮಂದಿ ವೀಕ್ಷಕರನ್ನು ಭಾವುಕರನ್ನಾಗಿ ಮಾಡಿದೆ.
ತಂದೆ ಕೂಡ ಭಾವುಕ
ವಧುವೊಬ್ಬಳು, ತನ್ನ ದಿವಂಗತ ತಾಯಿಯ ಫೋಟೋ ಕೈಯಲ್ಲಿ ಹಿಡಿದು, ಮದುವೆಯ ಸಭಾಂಗಣಕ್ಕೆ ಪ್ರವೇಶಿಸುವ ವಿಡಿಯೋವದು. ಸುಂದರವಾದ ಕೆಂಪು ಬಣ್ಣದ ಮದುವೆ ಉಡುಗೆಯುಟ್ಟು , ಸರ್ವಾಲಂಕೃತಳಾಗಿ ಮದುವೆಯ ಸಭಾಂಗಣಕ್ಕೆ ಪ್ರವೇಶಿಸುವಾಗ ವಧುವಿನ ಕಣ್ಣುಗಳು ತುಂಬಿ ಬಂದಿರುವುದನ್ನು ಮಾತ್ರವಲ್ಲ, ಆಕೆ ಕೈ ಹಿಡಿದು ನಡೆದು ಬಂದ ತಂದೆ ಕೂಡ ಭಾವುಕರಾಗಿರುವುದನ್ನು ಆ ವಿಡಿಯೋದಲ್ಲಿ ಕಾಣಬಹುದು.
ಇದನ್ನೂ ಓದಿ: ಅಯ್ಯಯ್ಯೋ ಏನಾಯ್ತು ಈ ನಟಿಗೆ.. ನೋರಾ ಫತೇಹಿರನ್ನು ಸ್ಟ್ರೆಚರ್ನಲ್ಲಿ ಎತ್ತೊಯ್ದ ಸಿಬ್ಬಂದಿ!
ವಿಡಿಯೋ ನೋಡಿ:
ಎಲ್ಲಾ ಹೆಣ್ಣು ಮಕ್ಕಳಿಗೆ ಅರ್ಪಣೆ
ಭಾವುಕ ಕ್ಷಣವುಳ್ಳ ಈ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಫೋಟೋಗ್ರಾಫರ್ ಮಾಹಾ ವಜಾಹತ್ ಖಾನ್, ಅದನ್ನು ತಮ್ಮ ತಾಯಂದಿರನ್ನು ಕಳೆದುಕೊಂಡಿರುವ ಎಲ್ಲಾ ಹೆಣ್ಣು ಮಕ್ಕಳಿಗೆ ಅರ್ಪಿಸಿದ್ದಾರೆ. ಈ ವಿಡಿಯೋದಲ್ಲಿ ತಂದೆ - ಮಗಳ ಭಾವುಕ ಕ್ಷಣ ಮಾತ್ರವಲ್ಲ, ವಧುವಿನ ಸಂಬಂಧಿಗಳು ಕೂಡ ತಮ್ಮ ಕಣ್ಣೀರನ್ನು ಒರೆಸಿಕೊಳ್ಳುವುದನ್ನು ಮತ್ತು ವಧುವನ್ನು ಸಂತೈಸುತ್ತಿರುವುದನ್ನು ನೋಡಬಹುದು. ಈ 57 ಸೆಕೆಂಡುಗಳ ವಿಡಿಯೋ ತುಣುಕು, ತಂದೆಯು ಭಾವುಕರಾಗಿ ಮಗಳನ್ನು ಪ್ರೀತಿಯಿಂದ ಅಪ್ಪಿಕೊಂಡು, ಗಂಡನ ಮನೆಗೆ ಕಳುಹಿಸಿ ಕೊಡುವ ದೃಶ್ಯದೊಂದಿಗೆ ಕೊನೆಗೊಳ್ಳುತ್ತದೆ.
2.8 ಲಕ್ಷ ಮಂದಿ ವೀಕ್ಷಣೆ
ಕೇವಲ 2 ದಿನಗಳ ಹಿಂದೆ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋವನ್ನು ಈಗಾಗಲೇ 2.8 ಲಕ್ಷ ಮಂದಿ ವೀಕ್ಷಿಸಿದ್ದಾರೆ. ಮತ್ತು ವಿಡಿಯೋಗೆ ಇದುವರೆಗೆ ಸುಮಾರು 800ಕ್ಕೂ ಹೆಚ್ಚು ಪ್ರತಿಕ್ರಿಯೆಗಳು ಬಂದಿವೆ. ನಿಯಂತ್ರಿಕೊಳ್ಳಲು ಆಗದಷ್ಟು ಭಾವುಕವಾಗಿದೆ” ಎಂದು ಒಬ್ಬ ಇನ್ಸ್ಟಾಗ್ರಾಂ ಬಳಕೆದಾರರು ಪ್ರತಿಕ್ರಿಯಿಸಿದ್ದರೆ, ಇನ್ನೊಬ್ಬರು “ನಾನು ಇದನ್ನು ನೋಡಿ ಯಾವಾಗಲೂ ಅಳುತ್ತೇನೆ” ಎಂದು ಬರೆದುಕೊಂಡಿದ್ದಾರೆ. ಬಹಳಷ್ಟು ಮಂದಿ ತಮ್ಮ ಪ್ರತಿಕ್ರಿಯೆಯಲ್ಲಿ, ವಿಡಿಯೋದಲ್ಲಿನ ವಧುವಿಗೆ ಪ್ರೀತಿ ಮತ್ತು ಶುಭ ಹಾರೈಕೆಗಳನ್ನು ಕಳುಹಿಸಿದ್ದಾರೆ.
ನೆಟ್ಟಿಗರ ಮನಗೆದ್ದ ವಿಡಿಯೋ
ಸಾಮಾಜಿಕ ಮಾಧ್ಯಮದಲ್ಲಿ , ಮದುವೆಯ ವಿಡಿಯೋವೊಂದು ನೆಟ್ಟಿಗರ ಹೃದಯ ಗೆಲ್ಲುತ್ತಿರುವುದು ಇದೇ ಮೊದಲೇನಲ್ಲ. ಇಂತಹ ಹಲವಾರು ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ನೆಟ್ಟಿಗರು ಕಣ್ಣರಳಿಸುವಂತೆ ಮಾಡುತ್ತಲೇ ಇರುತ್ತವೆ. ಈ ವರ್ಷದ ಆರಂಭದಲ್ಲಿ, ತನ್ನ ಮೆಚ್ಚಿನ ಹಾಡನ್ನು ಹಾಕದಿದ್ದರೆ ಮದುವೆಯ ಸಭಾಂಗಣ ಪ್ರವೇಶಿಸುವುದಿಲ್ಲ ಎಂದು ರಚ್ಚೆ ಹಿಡಿದಿದ್ದ ಮದುವಣಗಿತ್ತಿಯೊಬ್ಬಳ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು.
ಇದನ್ನೂ ಓದಿ: Viral Video: ಕೋತಿಗೆ ಉಸಿರು ನೀಡಿ ಜೀವ ಉಳಿಸಿದ ವ್ಯಕ್ತಿ, ಮಾನವೀಯತೆ ಇನ್ನೂ ಜೀವಂತ...ವಿಡಿಯೋ ನೋಡಿ
ಸುರಕ್ಷತೆಯ ಕುರಿತ ಮದುವೆಯ ವಿಡಿಯೋ
ಅದಕ್ಕಿಂತಲೂ ಮೊದಲು ಕೊರೋನಾ ಸಾಂಕ್ರಾಮಿಕದ ವಿರುದ್ಧ ಸುರಕ್ಷತೆಯ ಕುರಿತ ಮದುವೆಯ ವಿಡಿಯೋವೊಂದು ವೈರಲ್ ಆಗಿತ್ತು. ಆ ವಿಡಿಯೋದಲ್ಲಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಲು ವರ ಮತ್ತು ವಧು ಅತ್ಯಂತ ದೂರ ದೂರ ನಿಂತು ಮದುವೆ ವಿಧಿಗಳಲ್ಲಿ ಭಾಗವಹಿಸುತ್ತಿದ್ದದ್ದನ್ನು ಕಂಡು ಬಹಳಷ್ಟು ಸಾಮಾಜಿಕ ಮಾಧ್ಯಮ ಬಳಕೆದಾರರು ದಂಗಾಗಿದ್ದರೆ, ಇನ್ನು ಕೆಲವು ನೆಟ್ಟಿಗರು, ಕಡ್ಡಿಗಳ ಸಹಾಯದಿಂದ ಹಾರ ಬದಲಾಯಿಸಿಕೊಂಡಿದ್ದ ಆ ವಧುವರರನ್ನು ಕಂಡು ಮಿಶ್ರ ಪ್ರತಿಕ್ರಿಯೆ ನೀಡಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ