Simba: ಈ ಮೇಕೆ ಮರಿಯ ಕಿವಿ ಎಷ್ಟು ಉದ್ದಯಿದೆ ಅಂತಾ ಗೊತ್ತಾದ್ರೆ ನೀವು ಶಾಕ್ ಆಗೋದು ಗ್ಯಾರೆಂಟಿ

ಸಾಮಾನ್ಯವಾಗಿ ಮನುಷ್ಯನಂತೆ ಪ್ರಾಣಿಗಳಲ್ಲೂ ಇದೇ ರೀತಿ ಕಂಡು ಬರುತ್ತದೆ. ಆದರೆ ಪ್ರಾಣಿಗಳ ಕಿವಿ ಮಾತ್ರ ಸ್ವಲ್ಪ ದೊಡ್ಡದಿರುತ್ತದೆ. ಆನೆ ಕಿವಿ, ಮೇಕೆ, ಹಸು ಇವೆಲ್ಲಾ ಸ್ವಲ್ಪ ದೊಡ್ಡದಾದ ಅಂದರೆ ಐದಾರು ಇಂಚಿನ ಗಾತ್ರವನ್ನು ಹೊಂದಿದೆ. ಆದರೆ ಇಲ್ಲೊಂದು ಮೇಕೆ ಕಿವಿ ನೋಡಿದರೆ ಅಚ್ಚರಿ ಪಡುತ್ತೀರಾ, ಏಕೆಂದರೆ ಮೇಕೆ ಮರಿಯ ಕಿವಿ ಥೇಟ್ ಹೆಣ್ಣು ಮಕ್ಕಳ ಜಡೆಯಂತೆ ಉದ್ದವಾಗಿದೆ.

19 ಇಂಚಿನ ಕಿವಿಯ ಮರಿ ಮೇಕೆ

19 ಇಂಚಿನ ಕಿವಿಯ ಮರಿ ಮೇಕೆ

  • Share this:
ಪಂಚೇಂದ್ರಿಯಗಳು ಎಂದು ಕರೆಯಲಾಗುವ ದೇಹದ ಅಂಗಗಳಾದ ಕಿವಿ, ಕಣ್ಣು, ಮೂಗು, ನಾಲಿಗೆ ಎಲ್ಲವೂ ಪುಟ್ಟದಾಗಿವೆ. ಚರ್ಮವು (Skin) ದೇಹದ ತುಂಬೆಲ್ಲಾ ಆವರಿಸಿದ್ದು, ಅದನ್ನು ಹೊರತುಪಡಿಸಿದರೆ ಇವು ಚಿಕ್ಕ ಅಂಗಗಳು. ಸಾಮಾನ್ಯವಾಗಿ ಮನುಷ್ಯನಂತೆ ಪ್ರಾಣಿಗಳಲ್ಲೂ (Animal) ಇದೇ ರೀತಿ ಕಂಡು ಬರುತ್ತದೆ. ಆದರೆ ಪ್ರಾಣಿಗಳ ಕಿವಿ ಮಾತ್ರ ಸ್ವಲ್ಪ ದೊಡ್ಡದಿರುತ್ತದೆ. ಆನೆ ಕಿವಿ, ಮೇಕೆ, ಹಸು ಇವೆಲ್ಲಾ ಸ್ವಲ್ಪ ದೊಡ್ಡದಾದ ಅಂದರೆ ಐದಾರು ಇಂಚಿನ ಗಾತ್ರವನ್ನು ಹೊಂದಿದೆ. ಆದರೆ ಇಲ್ಲೊಂದು ಮೇಕೆ (Goat) ಕಿವಿ (Ear) ನೋಡಿದರೆ ಅಚ್ಚರಿ ಪಡುತ್ತೀರ, ಏಕೆಂದರೆ ಮೇಕೆ ಮರಿಯ ಕಿವಿ ಥೇಟ್ ಹೆಣ್ಣು ಮಕ್ಕಳ ಜಡೆಯಂತೆ ಉದ್ದವಾಗಿದೆ.

19 ಇಂಚಿನ ಕಿವಿಗಳನ್ನು ಹೊಂದಿದ ಮೇಕೆ ಮರಿ
ಪಾಕಿಸ್ತಾನದ ಕರಾಚಿಯಲ್ಲಿ ನವಜಾತ ಮೇಕೆ, ಸುಮಾರು 19 ಇಂಚುಗಳಷ್ಟು (46cm) ಅಳತೆಯ ಕಿವಿಗಳನ್ನು ಹೊಂದಿದೆ. ಇಷ್ಟೇ ಅಲ್ಲದೇ ಅದರ ಕಿವಿಯಿಂದಲೇ ಸುದ್ದಿಯಾದ ಮೇಕೆ ಮರಿ ಗಿನ್ನೆಸ್ ದಾಖಲೆಯನ್ನು ಸಹ ಬರೆಯಬಹುದೆಂದು ಹೇಳಲಾಗುತ್ತಿದೆ. ಅಸಾಮಾನ್ಯವಾಗಿ ಉದ್ದವಾದ ಕಿವಿಗಳಿಗಾಗಿ ವಿಶ್ವ ದಾಖಲೆ ಪುಟದಲ್ಲಿ ಮೇಕೆ ಮರಿ ಹೆಸರು ಸೇರ್ಪಡೆಯಾಗುವ ಸಾಧ್ಯತೆಗಳಿವೆ.

ಸೆಲೆಬ್ರಿಟಿ ಸಿಂಬಾ
ಮಾಧ್ಯಮ ವರದಿಗಳ ಪ್ರಕಾರ ಸಿಂಬಾ ಎಂಬ ಮೇಕೆ ಜೂನ್ 5ರಂದು ಸಿಂಧ್‌ನಲ್ಲಿ ಜನಿಸಿತು. ಮೇಕೆ ಅಸಾಮಾನ್ಯವಾಗಿ ಉದ್ದವಾದ ಕಿವಿಗಳೊಂದಿಗೆ ಜನಿಸಿದಾಗ ಅದರ ಮಾಲೀಕ ಮುಹಮ್ಮದ್ ಹಸನ್ ನರೇಜೊ ಅವರಿಗೆ ಅಚ್ಚರಿಯಾಯಿತು. ಈ ಮೇಕೆ ಮರಿ ಪ್ರಸ್ತುತ ಪಾಕಿಸ್ತಾನದ ಸ್ಥಳೀಯ ಪ್ರದೇಶಗಳಲ್ಲಿ ಸೆಲೆಬ್ರಿಟಿಯಾಗಿಬಿಟ್ಟಿದೆ. ಜನರು ತಮ್ಮ ಮೊಬೈಲ್‍ನಲ್ಲಿ ಉದ್ದ ಕಿವಿ ಹೊಂದಿರುವ ಮೇಕೆ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: Viral Video: ಮಹಿಳೆ ಮೇಲೆ ಆನೆ ಮರಿ ದಾಳಿ! ಮುಂದೇನಾಯ್ತು?

ಆಡಿನ ಕಿವಿಗಳು ತುಂಬಾ ಉದ್ದವಾಗಿದ್ದು ಅದು ನಡೆಯುವಾಗಲೂ ಸಹ ನೆಲದ ಮೇಲೆ ಜೋತು ಬಿದ್ದು ಎಳೆದಾಡುತ್ತವೆ. ಮೇಕೆ ಮುಖದ ಎರಡೂ ಬದಿಗಳಲ್ಲಿ ಕಿವಿಗಳು ಜೋತು ಬಿದ್ದಿದ್ದು, ಗಾಳಿಗೆ ಸಹ ತೂರಾಡುತ್ತವೆಯಂತೆ. ಒಂದೇ ಬಾರಿ ನೋಡಿದರೆ ಕಿವಿಗಳು ಎನ್ನಿಸುವುದಿಲ್ಲ, ಜುಟ್ಟು ರೀತಿ ಕಾಣುತ್ತದೆ ಎನ್ನುತ್ತಾರೆ ಮೇಕೆ ನೋಡಿದ ಸ್ಥಳೀಯರು.

ಮೇಕೆಗೂ ಗಿನ್ನೆಸ್ ವಿಶ್ವ ದಾಖಲೆ
ಟೆಲಿಗ್ರಾಫ್ ಪ್ರಕಾರ, ಮೇಕೆ ಮರಿಗಳ ಉದ್ದನೆಯ ಕಿವಿಗಳು ಬಹುಶಃ ಜೀನ್ ರೂಪಾಂತರ ಅಥವಾ ಆನುವಂಶಿಕ ಅಸ್ವಸ್ಥತೆಯ ಪರಿಣಾಮವಾಗಿದೆ. ಸಿಂಬಾ ಶೀಘ್ರದಲ್ಲಿಯೇ ಗಿನ್ನೆಸ್ ವಿಶ್ವ ದಾಖಲೆಯನ್ನು ಹೊಂದಲಿ ಎಂದು ಮಾಲೀಕ ನರೇಜೋ ಆಶಿಸಿದ್ದಾರೆ.

ಸಿಂಬಾ ಒಂದು ನುಬಿಯನ್, ಮೇಕೆ ತಳಿಯಾಗಿದ್ದು, ಇದು ಉದ್ದವಾದ ಕಿವಿಗಳಿಗೆ ಹೆಸರುವಾಸಿಯಾಗಿದೆ. ಬಿಸಿ ವಾತಾವರಣದಲ್ಲಿ ದೇಹವನ್ನು ತಂಪಾಗಿರಿಸಲು ಸಹಾಯ ಮಾಡುತ್ತದೆ. ಆದಾಗ್ಯೂ, ನುಬಿಯನ್ ಮಾನದಂಡಗಳ ಪ್ರಕಾರ, ಸಿಂಬಾ ಅವರ ಕಿವಿಗಳು ಹೆಚ್ಚೇ ಉದ್ದವಾಗಿವೆ. ಮೇಕೆ ಮರಿ ವಾಸಿಸುವ ಕರಾಚಿಯಲ್ಲಿ, ತಾಪಮಾನವು ವಿಭಿನ್ನ ಭೂಪ್ರದೇಶದ ಕಾರಣದಿಂದಾಗಿ ಬದಲಾಗುತ್ತದೆ, ಬೇಸಿಗೆಯಲ್ಲಿ ಗರಿಷ್ಠ ತಾಪಮಾನವು 47 ಡಿಗ್ರಿ ಸೆಲ್ಸಿಯಸ್ ತಲುಪಬಹುದು. ಹೀಗಾಗಿ ಈ ಕಿವಿಗಳು ಮೇಕೆ ಮರಿಗೆ ಅನುಕೂಲಕರವಾಗಬಹದು ಎನ್ನಲಾಗುತ್ತಿದೆ.

ವಿಶ್ವದ ಮೂರನೇ ಅತಿದೊಡ್ಡ ಮೇಕೆ-ಉತ್ಪಾದಿಸುವ ದೇಶ
ಏತನ್ಮಧ್ಯೆ, ಎಕ್ಸ್ ಪ್ರೆಸ್ ಪ್ರಕಾರ, ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಕಂಡುಬರುವ ಕಮೋರಿ ಅತ್ಯಂತ ಸಾಮಾನ್ಯವಾದ ಮೇಕೆಯಾಗಿದೆ. ಸುಮಾರು 54 ಮಿಲಿಯನ್ ಆಡುಗಳನ್ನು ಹೊಂದಿರುವ ರಾಷ್ಟ್ರವು ವಿಶ್ವದ ಮೂರನೇ ಅತಿದೊಡ್ಡ ಮೇಕೆ-ಉತ್ಪಾದಿಸುವ ದೇಶವಾಗಿದೆ.

ಇದನ್ನೂ ಓದಿ:  Viral Video: ನೀವು ನವಿಲು ಹಾರೋದು ನೋಡಿದ್ದೀರಾ? ಈ ಸ್ಲೋ ಮೋಷನ್ ವೀಡಿಯೋ ನೋಡಿ

ಕೆಲವು ತಳಿಗಳನ್ನು ಮಾಂಸಕ್ಕಾಗಿ ಬೆಳೆಸಲಾಗುತ್ತದೆ, ಕೆಲವು ಮಾಂಸ ಮತ್ತು ಹಾಲು ಎರಡಕ್ಕೂ ಬಳಸಲಾಗುತ್ತದೆ. ನುಬಿಯನ್ ಆಡುಗಳು ಉತ್ತಮ ಗುಣಮಟ್ಟದ, ಹೆಚ್ಚಿನ ಬೆಣ್ಣೆಯ ಹಾಲನ್ನು ಉತ್ಪಾದಿಸುತ್ತವೆ, ಇದನ್ನು ಕುಡಿಯಬಹುದು ಅಥವಾ ಐಸ್ ಕ್ರೀಮ್, ಮೊಸರು, ಚೀಸ್ ಮತ್ತು ಬೆಣ್ಣೆಯನ್ನು ತಯಾರಿಸಲು ಬಳಸಬಹುದು. ತಮ್ಮ ಮಧ್ಯ-ಪ್ರಾಚ್ಯ ಪರಂಪರೆಯ ಕಾರಣದಿಂದಾಗಿ, ಈ ಆಡುಗಳು ತುಂಬಾ ಬಿಸಿ ವಾತಾವರಣದಲ್ಲಿ ವಾಸಿಸುತ್ತವೆ ಮತ್ತು ಇತರ ಡೈರಿ ಮೇಕೆಗಳಿಗಿಂತ ಹೆಚ್ಚು ಸಂತಾನೋತ್ಪತ್ತಿ ಅವಧಿಯನ್ನು ಹೊಂದಿರುತ್ತವೆ.
Published by:Ashwini Prabhu
First published: