Viral News: ಪಾಕಿಸ್ತಾನದಲ್ಲಿ ಇದೆಲ್ಲಾ ಸಾಧ್ಯ ಗುರೂ.. ಮೊಸರಿಗಾಗಿ ರೈಲು ನಿಲ್ಲಿಸಿದ ಚಾಲಕ

Pakistan: ಲಾಹೋರ್‌ನಿಂದ ದಕ್ಷಿಣ ಕರಾಚಿಗೆ ಹೋಗುತ್ತಿದ್ದ ರೈಲನ್ನು ಕನ್ಹಾ ರೈಲು ನಿಲ್ದಾಣದಿಂದ ಕೆಲವೇ ಕೆಲವು ದೂರದಲ್ಲಿ ಮೊಸರು ಖರೀದಿಗಾಗಿ ಚಾಲಕ ಹಾಗೂ ಸಹಾಯಕ ನಿಲ್ಲಿಸಿದರು.. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಪಾಕಿಸ್ತಾನ ರೈಲ್ವೆ ಇಲಾಖೆ ಚಾಲಕ ಹಾಗೂ ಸಹಾಯಕನನ್ನ ಅಮಾನತು ಮಾಡಿದೆ..

ರೈಲು

ರೈಲು

  • Share this:
    ಸಾಮಾನ್ಯವಾಗಿ ಪ್ರಯಾಣಿಕರನ್ನು(Passengers) ಹೊತ್ತು ಸಾಗುವ ಬಸ್ಗಳು(Bus) ನಿಗದಿತ ಹೋಟೆಲ್ ಗಳ(Hotel) ಮುಂದೆ ಊಟಕ್ಕಾಗಿ(Food) ಕೆಲಕಾಲ ನಿಲುಗಡೆ ಮಾಡುತ್ತವೆ.. ಟ್ರಕ್ ಡ್ರೈವರ್ ಗಳು(Drivers) ಲಾರಿ ಚಾಲಕರಾದರೆ ಅದೇ ಪರಿಚಯ ಇರುವ ಹೋಟೆಲ್ ಗಳ ಮುಂದೆ ಗಾಡಿ ನಿಲ್ಲಿಸಿ ಅಲ್ಲಿಯೇ ಊಟ ಮಾಡಿ ಮುಂದೆ ಸಾಗುತ್ತಾರೆ. ಅಲ್ಲದೇ ತಮಗೆ ಪರಿಚಯ ಇರುವವರಿಗೂ ಹೋಟೆಲ್ಗಳಿಗೆ ಹೋಗುವಂತೆ ಸಲಹೆಯನ್ನು ನೀಡುತ್ತಾರೆ.. ಆದರೆ ಬಸ್ಸು(Bus) ಕಾರು(Car) ಲಾರಿ(Lorry), ಬೈಕ್ಗಳು(Bike) ಊಟಕ್ಕೆ ಎಲ್ಲೆಂದರಲ್ಲಿ ನಿಲ್ಲಿಸುವಂತೆ, ರೈಲು ಚಾಲಕರೇನಾದ್ರು ಎಲ್ಲೆಂದರಲ್ಲಿ ರೈಲನ್ನ ನಿಲ್ಲಿಸಿದರೆ ಪರಿಸ್ಥಿತಿ ಹೇಗಿರಬೇಡ ಹೇಳಿ.. ಈ ರೀತಿ ನಿಲ್ಲಿಸೋದಕ್ಕೂ ಸಾಧ್ಯಾನಾ.. ಖಂಡಿತ ಸಾಧ್ಯ ಇದೆ..

    ಪಾಕಿಸ್ತಾನದಲ್ಲಿ ಮೊಸರಿಗಾಗಿ ರೈಲು ನಿಲ್ಲಿಸಿದ ಚಾಲಕರು

    ಸಾಮಾನ್ಯವಾಗಿ ತುರ್ತು ಪರಿಸ್ಥಿತಿಗಳ ಸಂದರ್ಭದಲ್ಲಿ ಮಾತ್ರ ರೈಲಿನಲ್ಲಿರುವ ಚೈನ್ ಎಳೆದು ಎಲ್ಲೆಂದರಲ್ಲಿ ರೈಲು ನಿಲ್ಲಿಸುವುದು ಸಾಮಾನ್ಯ.. ಈ ರೀತಿ ರೈಲು ನಿಲ್ಲಿಸಿ ದವರಿಗೂ ರೈಲ್ವೆ ಇಲಾಖೆ ದಂಡ ವಿಧಿಸುತ್ತದೆ. ಆದರೆ ಚಾಲಕ ಹಾಗೂ ರೈಲಿನ ಸಹಾಯಕ ಚಾಲಕರೇ ಎಲ್ಲೆಂದರಲ್ಲಿ ರೈಲು ನಿಲ್ಲಿಸಿದರೆ ಅವರಿಗೆ ಏನು ಶಿಕ್ಷೆ ಅನ್ನೋದು ಮಾತ್ರ ಹೆಚ್ಚಿನ ಜನಕ್ಕೆ ಗೊತ್ತಿರುವುದಿಲ್ಲ.. ಅಲ್ಲದೆ ರೈಲು ಚಾಲಕ ಹೀಗೆ ಎಲ್ಲೆಂದರಲ್ಲಿ ರೈಲುನಿಲುಗಡೆ ಮಾಡುವುದು ಇಲ್ಲ.. ಆದ್ರೆ ಪಾಕಿಸ್ತಾನದಲ್ಲಿ ಮಾತ್ರ ಕೇವಲ ಮೊಸರು ಖರೀದಿ ಮಾಡಲು ರೈಲು ಚಾಲಕ ರೈಲನ್ನು ಬೇಕಾಬಿಟ್ಟಿಯಾಗಿ ಎಲ್ಲೆಂದರಲ್ಲಿ ನಿಲ್ಲಿಸಿದ್ದಾನೆ..

    ಇದನ್ನೂ ಓದಿ: ಭಾರತೀಯರು ಹಿಂದೆಂದೂ ಆ ರೀತಿ ಇರಲಿಲ್ಲ, ಅಂದು ಆ ಸ್ಥಿತಿ ಕಂಡು ಅಚ್ಚರಿ ಆಯಿತು: ಇಂಜಮಮ್

    ಹೌದು.ಪಾಕಿಸ್ತಾನದಲ್ಲಿ ಲಾಹೋರ್ ರೈಲ್ವೆ ನಿಲ್ದಾಣ ಬರುವ ಮೊದಲು ಮೊಸರು ಖರೀದಿ ಮಾಡಲು ರೈಲು ಚಾಲಕ ಮತ್ತು ಸಹಾಯಕ ರೈಲನ್ನು ನಿಲ್ಲಿಸಿ ಕೆಳಗಡೆ ಇಳಿದಿದ್ದಾರೆ.. ಅಲ್ಲದೆ ಮೊಸರು ಖರೀದಿಸಿ ಆರಾಮಾಗಿ ಏನು ಆಗಿಲ್ಲ ಎನ್ನುವಂತೆ ಮತ್ತೆ ಬಂದು ರೈಲು ಹತ್ತಿ ನಿಸಿದ್ದ ಸ್ಥಳದಿಂದ ರೈಲು ಚಾಲನೆ ಮಾಡಿದ್ದಾರೆ..


    ಮೊಸರಿಗಾಗಿ ರೈಲು ನಿಲ್ಲಿಸಿದ ಚಾಲಕ ಅಮಾನತು

    ಲಾಹೋರ್‌ನಿಂದ ದಕ್ಷಿಣ ಕರಾಚಿಗೆ ಹೋಗುತ್ತಿದ್ದ ರೈಲನ್ನು ಕನ್ಹಾ ರೈಲು ನಿಲ್ದಾಣದಿಂದ ಕೆಲವೇ ಕೆಲವು ದೂರದಲ್ಲಿ ಮೊಸರು ಖರೀದಿಗಾಗಿ ಚಾಲಕ ಹಾಗೂ ಸಹಾಯಕ ನಿಲ್ಲಿಸಿದರು.. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಪಾಕಿಸ್ತಾನ ರೈಲ್ವೆ ಇಲಾಖೆ ಚಾಲಕ ಹಾಗೂ ಸಹಾಯಕನನ್ನ ಅಮಾನತು ಮಾಡಿದೆ..

    ಘಟನೆ ಬಗ್ಗೆ ಪಾಕ್ ರೈಲ್ವೆ ಸಚಿವ ಅಸಮಾಧಾನ..

    ಇನ್ನು ಘಟನೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಪಾಕಿಸ್ತಾನದ ರೈಲ್ವೆ ಸಚಿವ ಅಜಮ್ ಖಾನ್ ಸ್ವಾತಿ ಅವರು ಮೊಸರಿಗಾಗಿ ರೈಲುನಿಲುಗಡೆ ಮಾಡಿದ್ದ ಚಾಲಕ ರಾಣಾ ಮೊಹಮ್ಮದ್ ಶೆಹ್ಜಾದ್ ಮತ್ತು ಅವರ ಸಹಾಯಕ ಇಫ್ತಿಕರ್ ಹುಸೇನ್ ಅವರನ್ನು ಅಮಾನತುಗೊಳಿಸಲಾಗಿದ್ದು,ಭವಿಷ್ಯದಲ್ಲಿ ಇಂತಹ ಘಟನೆಗಳನ್ನು ನಾನು ಸಹಿಸುವುದಿಲ್ಲ ಮತ್ತು ರಾಷ್ಟ್ರೀಯ ಆಸ್ತಿಯನ್ನು ವೈಯಕ್ತಿಕ ಬಳಕೆಗೆ ಬಳಸಲು ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ..

    ಇದನ್ನೂ ಓದಿ: ಗೆಲುವು ಸಿಗದಿದ್ದರೂ ಪ್ರೀತಿ, ಸ್ನೇಹ ಸಿಕ್ಕಿತು’- ಭಾರತದ ಬಗ್ಗೆ ಪಾಕ್ ಕಿರಿಯರು ಆಡಿದ ಮಾತಿದು

    ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪಾಕಿಸ್ತಾನ ರೈಲ್ವೇ ಸಚಿವಾಲಯದ ವಕ್ತಾರ ಸೈಯದ್ ಇಜಾಜ್-ಉಲ್-ಹಸನ್ ಶಾ ನೀವು ರೈಲನ್ನು ಮಧ್ಯದಲ್ಲಿ ನಿಲ್ಲಿಸಿದಾಗ ಅದು ಸುರಕ್ಷತೆಯ ಸಮಸ್ಯೆಯಾಗುತ್ತದೆ. ಸುರಕ್ಷತೆ ನಮ್ಮ ಆದ್ಯತೆಯಾಗಿದೆ. ಸುರಕ್ಷತೆಗೆ ಧಕ್ಕೆ ತರುವ ಯಾವುದನ್ನೂ ನಾವು ಸಹಿಸುವುದಿಲ್ಲ ಎಂದು ಹೇಳಿದ್ದಾರೆ.

    ಇನ್ನು ಇತ್ತೀಚಿನ ದಿನಗಳಲ್ಲಿ ಪಾಕಿಸ್ತಾನದಲ್ಲಿ ರೈಲು ಅಪಘಾತಗಳು ಹೆಚ್ಚಾಗುತ್ತಿವೆ.. ಹೀಗಿರುವಾಗಲೇ ರೈಲು ಚಾಲಕರು ಕೇವಲ ಮೊಸರು ಖರೀದಿಗಾಗಿ ರೈಲು ಹಳಿಗಳ ಮಧ್ಯೆ ರೈಲನ್ನು ನಿಲ್ಲಿಸಿ ಹಲವು ನಿಮಿಷಗಳ ಕಾಲ ಹೋಗಿದ್ದು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿದೆ.. ಅದೇ ವಿಡಿಯೋ ಸಹ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ..
    Published by:ranjumbkgowda1 ranjumbkgowda1
    First published: