ಕುವೈತ್ ಅಧಿಕಾರಿಯ ಪರ್ಸ್​ ಕದ್ದ ಪಾಕ್ ಅಧಿಕಾರಿ: ವಿಡಿಯೋ ಭಾರೀ ವೈರಲ್

news18
Updated:September 30, 2018, 5:00 PM IST
ಕುವೈತ್ ಅಧಿಕಾರಿಯ ಪರ್ಸ್​ ಕದ್ದ ಪಾಕ್ ಅಧಿಕಾರಿ: ವಿಡಿಯೋ ಭಾರೀ ವೈರಲ್
@omar_quraishi
  • Advertorial
  • Last Updated: September 30, 2018, 5:00 PM IST
  • Share this:
-ನ್ಯೂಸ್ 18 ಕನ್ನಡ

ಸಮಾಜದಲ್ಲಿ ಉನ್ನತ ಹುದ್ದೆಯಲ್ಲಿದ್ದವರು ಸಭ್ಯತೆಯಿಂದ ನಡೆದುಕೊಳ್ಳುತ್ತಾರೆ ಎಂದು ಎಲ್ಲರು ನಂಬುತ್ತಾರೆ. ಆದರೆ ಈ ವಿಷಯ ಪಕ್ಕದ ಪಾಕಿಸ್ತಾನಕ್ಕೆ ಅನ್ವಯಿಸುತ್ತದೆ ಎಂದು ಹೇಳಲಾಗುವುದಿಲ್ಲ. ಏಕೆಂದರೆ ಪಾಕಿಸ್ತಾನ-ಕುವೈಟ್ ಜಂಟಿ ಸಚಿವಾಲಯಗಳ ಸಂಪುಟ ಸಭೆಯಲ್ಲಿ ಅಂತಹದೊಂದು ಘಟನೆ ನಡೆದಿದೆ.

ಜಂಟಿ ಸಚಿವ ಸಂಪುಟ ಸಭೆಯಲ್ಲಿ ಪಾಲ್ಗೊಂಡಿದ್ದ ಕುವೈತ್ ಅಧಿಕಾರಿಯೊಬ್ಬರ ಪರ್ಸ್​ ಕಳುವಾಗಿತ್ತು. ಈ ಬಗ್ಗೆ ಅಧಿಕಾರಿಯು ದೂರು ನೀಡಿ ಸಿಸಿ ಕ್ಯಾಮೆರಾವನ್ನು ಪರಿಶೀಲಿಸಿದ್ದರು. ಈ ವೇಳೆ ಅಧಿಕಾರಿಗಳು ಕುಳಿತಿದ್ದ ಟೇಬಲ್​ ಮೇಲೆಯಿಂದ ಪರ್ಸ್​ನ್ನು ಪಾಕ್ ಅಧಿಕಾರಿಯೊಬ್ಬರು ಎಗರಿಸುವುದು ಪತ್ತೆಯಾಗಿದೆ.

ನಂತರ ವಿಚಾರಿಸಿದಾಗ ಪಾಕಿಸ್ತಾನದ ಹೂಡಿಕೆ ಮತ್ತು ಸೌಕರ್ಯ ಜಂಟಿ ಕಾರ್ಯದರ್ಶಿ ಅಧಿಕಾರಿ ಜರಾರ್ ಹೈದರ್ ಖಾನ್ ಎಂಬವರು ಕದ್ದಿರುವುದು ಬೆಳಕಿಗೆ ಬಂದಿದೆ. ಹೈದರ್ ಪಾಕಿಸ್ತಾನದ ಗ್ರೇಡ್ 20 ಜಿಒಪಿ ಅಧಿಕಾರಿಗಳಲ್ಲಿ ಒಬ್ಬರಾಗಿದ್ದು, ಈ ಘಟನೆಯ ವಿಡಿಯೋವನ್ನು ಪಾಕ್ ಪತ್ರಕರ್ತ ಒಮರ್ ಆರ್ ಖುರೇಷಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಪಾಕಿಸ್ತಾನದ ಹಣಕಾಸು ಸಚಿವರು ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಿ, ಕುವೈತ್ ಸರ್ಕಾರದ ಕ್ಷಮೆಯಾಚಿಸಿದ್ದಾರೆ. ಅಲ್ಲದೆ ವಿಶ್ವಮಟ್ಟದಲ್ಲಿ ದೇಶದ ಮಾನ ಹರಾಜು ಹಾಕಿದ ಅಧಿಕಾರಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
First published:September 30, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ