ಪಾಕಿಸ್ತಾನದಿಂದ 1 ಲಕ್ಷ ಕೆ.ಜಿ ತಲೆ ಕೂದಲನ್ನು ಆಮದು ಮಾಡಿಕೊಂಡ ಚೀನಾ..!

zahir | news18
Updated:January 19, 2019, 8:39 PM IST
ಪಾಕಿಸ್ತಾನದಿಂದ 1 ಲಕ್ಷ ಕೆ.ಜಿ ತಲೆ ಕೂದಲನ್ನು ಆಮದು ಮಾಡಿಕೊಂಡ ಚೀನಾ..!
@YouTube
zahir | news18
Updated: January 19, 2019, 8:39 PM IST
ಪಾಕಿಸ್ತಾನ ಕಳೆದ ಐದು ವರ್ಷಗಳಲ್ಲಿ ಚೀನಾಗೆ ಸುಮಾರು 1 ಲಕ್ಷ ಕೆ.ಜಿ ಕೂದಲನ್ನು ರಫ್ತು ಮಾಡಿದೆ ಎಂದು ಪಾಕ್ ವಾಣಿಜ್ಯ ಮತ್ತು ಜವಳಿ ಸಚಿವಾಲಯ ತಿಳಿಸಿದೆ. ಸುಮಾರು 94 ಲಕ್ಷ ರೂ. ಮೌಲ್ಯದ 1,05,461 ಕೆ.ಜಿ ತೂಕದಷ್ಟು ಮನುಷ್ಯರ ಕೂದಲನ್ನು ಚೀನಿಯರು ಆಮದು ಮಾಡಿಕೊಂಡಿದ್ದಾರೆ.

ಮಾನವನ ತಲೆ ಕೂದಲಿಗೆ ಚೀನಾದಲ್ಲಿ ಭಾರೀ ಬೇಡಿಯಿದೆ. ಈ ಕೂದಲನ್ನು ಬಳಸಿ ಅತ್ಯುತ್ತಮ ವಿಗ್​ಗಳನ್ನು ತಯಾರಿಸಲಾಗುತ್ತದೆ. ಚೀನಾದಲ್ಲಿ ಕೂದಲಿನ ಕೂರತೆ ಉಂಟಾಗಿದ್ದು, ಈ ಹಿನ್ನೆಲೆಯಲ್ಲಿ ಪಾಕ್​ನಿಂದ ಕಳುಹಿಸಿಕೊಡಲಾಗಿದೆ. ಹೆಚ್ಚಿನ ಚೀನಿಯರು ವಿಗ್​ಗಳನ್ನು ಸೌಂದರ್ಯವರ್ಧಕವಾಗಿ ಬಳಸುತ್ತಿದ್ದು, ಇದರಿಂದ ಬೇಡಿಕೆ ಕೂಡ ಹೆಚ್ಚಾಗುತ್ತಿದೆ. ಇಲ್ಲಿ ಪ್ರತಿ ಕೆ.ಜಿಗೆ 5 ರಿಂದ 6 ಸಾವಿರ ರೂ. ಬೆಲೆ ನೀಡಲಾಗುತ್ತಿದೆ ಎಂದು ಪಾಕಿಸ್ತಾನದ ಸೌಂದರ್ಯತಜ್ಞ ಎ.ಎಂ ಚೌಹಾಣ್ ತಿಳಿಸಿದ್ದಾರೆ.

ಇದನ್ನೂ ಓದಿ: ವಿಶ್ವದ ಲೆಜೆಂಡ್​ ಆಟಗಾರನನ್ನು ಭೇಟಿಯಾದ ವಿರುಷ್ಕಾ ಜೋಡಿ

ಇದಕ್ಕಾಗಿ ಪಾಕಿಸ್ತಾನದ ಸೆಲೂನ್​ಗಳಲ್ಲಿ ತೊಟ್ಟಿಗಳನ್ನು ಇರಿಸಿ ಕೂದಲನ್ನು ಸಂಗ್ರಹಿಸಲಾಗುತ್ತದೆ. ಈ ಕೂದಲು ನಿರ್ದಿಷ್ಟ ಪ್ರಮಾಣದಲ್ಲಿ ಸಂಗ್ರಹವಾಗುತ್ತಿದ್ದಂತೆ ಅದನ್ನು ರಫ್ತು ಮಾಡಲಾಗುತ್ತದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಇದು ವಿಶ್ವ ದಾಖಲೆ ಬರೆದ ಒಂದು ಮೊಟ್ಟೆಯ ಕಥೆ

ಚೀನಾದಂತೆ ಜಪಾನ್ ಹಾಗೂ ಅಮೆರಿಕದಲ್ಲೂ ಮೇಕಪ್​ ಕ್ಷೇತ್ರದಲ್ಲಿ ವಿಗ್​ಗಳಿಗೆ ಬೇಡಿಕೆಯಿದ್ದು, ಈ ಹಿನ್ನೆಲೆಯಲ್ಲಿ ಮಾನವರ ತಲೆ ಕೂದಲನ್ನು ಅನ್ಯ ದೇಶಗಳಿಂದ ಆಮದು ಮಾಡಿಕೊಳ್ಳುತ್ತಿದೆ. ಆದರೆ ಇದೇ ಸಂದರ್ಭದಲ್ಲಿ ಪಾಕಿಸ್ತಾನ ತಲೆ ಕೂದಲನ್ನು ನೀಡಿ ವಿಗ್​ಗಳನ್ನು ಆಮದು ಮಾಡಿಕೊಳ್ಳುತ್ತಿದೆ ಎಂದು ತಿಳಿಸಿದೆ.

ಇದನ್ನೂ ಓದಿ: ರಾತ್ರಿಯಲ್ಲಿ ಇದನ್ನು ಹೆಚ್ಚುಕಡಿಮೆ ಮಾಡಿದ್ರೆ ಅಪಾಯ ಕಟ್ಟಿಟ್ಟಬುತ್ತಿ!

 

First published:January 19, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...