• Home
  • »
  • News
  • »
  • trend
  • »
  • Lady Marries Servant: ಕೆಲಸಗಾರನ ಮದುವೆಯಾದ ಹಿರಿಯ ಮಹಿಳೆ! ಪ್ರಪೋಸ್ ಮಾಡಿದಾಗ ತಲೆಸುತ್ತಿ ಬಿದ್ದ ಯುವಕ

Lady Marries Servant: ಕೆಲಸಗಾರನ ಮದುವೆಯಾದ ಹಿರಿಯ ಮಹಿಳೆ! ಪ್ರಪೋಸ್ ಮಾಡಿದಾಗ ತಲೆಸುತ್ತಿ ಬಿದ್ದ ಯುವಕ

ಪಾಕಿಸ್ತಾನದ ಹಿರಿಯ ಮಹಿಳೆಯೊಬ್ಬರು ತಮ್ಮ ಸರ್ವೆಂಟ್​ನನ್ನು ಮದುವೆಯಾಗಿದ್ದಾರೆ. ಶ್ರೀಮಂತ ಹಿರಿಯ ಮಹಿಳೆ ಪ್ರಪೋಸ್ ಮಾಡಿದಾಗ ತಲೆಸುತ್ತಿ ಬಿದ್ದೇ ಬಿಟ್ಟಿದ್ದ ಸರ್ವೆಂಟ್!

ಪಾಕಿಸ್ತಾನದ ಹಿರಿಯ ಮಹಿಳೆಯೊಬ್ಬರು ತಮ್ಮ ಸರ್ವೆಂಟ್​ನನ್ನು ಮದುವೆಯಾಗಿದ್ದಾರೆ. ಶ್ರೀಮಂತ ಹಿರಿಯ ಮಹಿಳೆ ಪ್ರಪೋಸ್ ಮಾಡಿದಾಗ ತಲೆಸುತ್ತಿ ಬಿದ್ದೇ ಬಿಟ್ಟಿದ್ದ ಸರ್ವೆಂಟ್!

ಪಾಕಿಸ್ತಾನದ ಹಿರಿಯ ಮಹಿಳೆಯೊಬ್ಬರು ತಮ್ಮ ಸರ್ವೆಂಟ್​ನನ್ನು ಮದುವೆಯಾಗಿದ್ದಾರೆ. ಶ್ರೀಮಂತ ಹಿರಿಯ ಮಹಿಳೆ ಪ್ರಪೋಸ್ ಮಾಡಿದಾಗ ತಲೆಸುತ್ತಿ ಬಿದ್ದೇ ಬಿಟ್ಟಿದ್ದ ಸರ್ವೆಂಟ್!

  • Share this:

ಪಾಕಿಸ್ತಾನದ (Pakistan) ಶ್ರೀಮಂತ ಹಿರಿಯ ಮಹಿಳೆಯೊಬ್ಬರು (Woman) ತನ್ನ ಕೆಲಸಗಾರನನ್ನು (Servent) ಮದುವೆಯಾಗಿದ್ದಾರೆ. ಇವರ ಲವ್​ಸ್ಟೋರಿ (Love Story) ಈಗ ಎಲ್ಲ ಕಡೆಗಳಲ್ಲಿಯೂ ವೈರಲ್ ಆಗಿದೆ. ಪ್ರೀತಿಗೆ ಕಣ್ಣಿಲ್ಲ, ಪ್ರೀತಿ ಕುರುಡು ಎಂಬೆಲ್ಲ ಮಾತುಗಳನ್ನು ನೀವು ಕೇಳಿರುತ್ತೀರಿ. ಇದು ಮಾತಷ್ಟೇ ಅಲ್ಲ, ಬಹಳಷ್ಟು ಸಂದರ್ಭಗಳಲ್ಲಿ ಸತ್ಯ ಎಂದು ಸಾಬೀತಾಗಿರುವ ವಿಚಾರ. ಅಪರೂಪದ ಪ್ರೇಮಕಥೆಗಳಿಗೆ ನಮ್ಮಲ್ಲಿ ಕೊರತೆಯೇ ಇಲ್ಲ. ಈಗ ಪಾಕಿಸ್ತಾನದ ಜೋಡಿಯ  (Couple) ವಿವಾಹ ಕಥೆ (Marriage Story) ನೆಟ್ಟಿಗರಿಗೆ ಫೇವರೇಟ್ ಆಗಿದೆ. ಸಲ್ಮಾನ್ ಖಾನ್ (Salman Khan) ಕತ್ರೀನಾ ಕೈಫ್​ಗೆ (Katrina Kaif) ಹೋಲಿಸಿ ಈ ಮದುವೆ ಸ್ಟೋರಿ ಸೋಷಿಯಲ್ ಮೀಡಿಯಾದಲ್ಲಿ (Social Media) ಹರಿದಾಡುತ್ತಿದ್ದು ಜನರಿಂದ ಸ್ಪಂದನೆ ಪಡೆದಿದೆ.


ಪ್ರೀತಿ ಮತ್ತು ಯುದ್ಧದಲ್ಲಿ ಎಲ್ಲವೂ ನ್ಯಾಯೋಚಿತವಾಗಿರುತ್ತದೆ. ಪ್ರೀತಿಯು ನೀವು ಬದುಕಲು ಬೇಕಾಗಿರುವ ಚಂದದ್ದೊಂದು ವಿಚಾರ. ನಿಮ್ಮ ಜೀವನದಲ್ಲಿ ಪ್ರೀತಿಯನ್ನು ನೀವು ಕಂಡುಕೊಂಡರೆ, ಅದು ವಯಸ್ಸು, ಲಿಂಗ ಅಥವಾ ಸಾಮಾಜಿಕ ಸ್ಥಾನಮಾನವನ್ನು ನೋಡುವುದಿಲ್ಲ. ಜಸ್ಟ್ ಪ್ರೀತಿ ಅಷ್ಟೆ.


ಕೆಲಸಗಾರನೊಂದಿಗೆ ಲವ್


ಅಂತಹ ಒಂದು ಘಟನೆಯಲ್ಲಿ ಪಾಕಿಸ್ತಾನದಲ್ಲಿ ಒಬ್ಬ ಹಿರಿಯ ಮಹಿಳೆ ತನ್ನ ಕೆಲಸಗಾರನ ಪ್ರೀತಿಯಲ್ಲಿ ಬಿದ್ದು ಅವನನ್ನು ಮದುವೆಯಾದಳು ಎಂದು ಟೈಮ್ಸ್ ನೆಟ್‌ವರ್ಕ್ ವರದಿ ಮಾಡಿದೆ.


18 ಸಾವಿರ ತಿಂಗಳ ಸಂಬಳ


ಇಸ್ಲಾಮಾಬಾದ್ ನಿವಾಸಿಯಾದ ನಾಜಿಯಾ ತನ್ನ ಜೀವನದ ಪ್ರೀತಿಯನ್ನು ಸೂಫಿಯಾನ್‌ನಲ್ಲಿ ಕಂಡುಕೊಳ್ಳುವವರೆಗೂ ಏಕಾಂಗಿಯಾಗಿಯೇ ವಾಸಿಸುತ್ತಿದ್ದರು. ಮೊದಲಿಗೆ, ದಿನನಿತ್ಯದ ಮನೆಕೆಲಸಕ್ಕಾಗಿ ಸ್ನೇಹಿತ ಅವಳನ್ನು ಸೂಫಿಯಾನ್ಗೆ ಪರಿಚಯಿಸಿದನು. ಅವಳು ಅವನನ್ನು ತಿಂಗಳಿಗೆ 18,000 ರೂಪಾಯಿ ಸಂಬಳಕ್ಕೆ ನೇಮಿಸಿಕೊಂಡಳು.


ನಾಜಿಯಾ ಸೂಫಿಯಾನ್


ಶೀಘ್ರದಲ್ಲೇ, ನಾಜಿಯಾ ಸೂಫಿಯಾನ್ ಅವರ ಸರಳತೆ ಮತ್ತು ಒಳ್ಳೆಯ ಸ್ವಭಾವದಿಂದಭಾರೀ ಪ್ರಭಾವಿತರಾದರು ಎಂದು ಪಾಕಿಸ್ತಾನಿ ಕಂಟೆಂಟ್ ಕ್ರಿಯೇಟರ್ ಮತ್ತು ಯುಟ್ಯೂಬರ್ ಸೈಯದ್ ಬಸಿತ್ ಹೇಳುತ್ತಾರೆ.


Love Failure 26 year old youth commits suicide in ramanagara mrq
ಸೋಮಶೇಖರ್ ಆತ್ಮಹತ್ಯೆಗೆ ಶರಣಾದ ಯುವಕ. ಆತ್ಮಹತ್ಯೆಗೂ ಮುನ್ನ ಸೋಮಶೇಖರ್ ತನ್ನ ವಾಟ್ಸಪ್ ಸ್ಟೇಟಸ್ ನಲ್ಲಿ RIP ಎಂದು ಬರೆದುಕೊಂಡಿದ್ದನು. (ಸಾಂದರ್ಭಿಕ ಚಿತ್ರ)


ಅವನ ಸರಳತೆ ಅವಳ ಹೃದಯವನ್ನು ಗೆದ್ದಿದೆ. ಅವಳು ಅವನ ಎಲ್ಲಾ ಅಭ್ಯಾಸಗಳನ್ನು ಇಷ್ಟಪಡಲು ಪ್ರಾರಂಭಿಸಿದಳು. ಅದರ ನಂತರ ಅವಳು ತನ್ನ ಸರ್ವೆಂಟ್​ಗೆ ಪ್ರೇಮ ನಿವೇದನೆ ಮಾಡಿದ್ದಾಳೆ ಎಂದು ಯೂಟ್ಯೂಬರ್ ಹೇಳಿದ್ದಾರೆ.


ಪ್ರಪೋಸ್ ಮಾಡಿದಾಗ ತಲೆ ಸುತ್ತಿ ಬಿದ್ದ ಕೆಲಸಗಾರ


ಪ್ರಪೋಸಲ್ ಕೇಳಿದ ನಂತರ ಸೂಫಿಯಾನ್ ಮೂರ್ಛೆ ಹೋದರು ಎಂದು ನಾಜಿಯಾ ಹೇಳಿದರು. ಸುಫಿಯಾನ್, "ನಾನೂ ನಿನ್ನನ್ನು ಪ್ರೀತಿಸುತ್ತೇನೆ" ಎಂದು ಹೇಳಿ ಮುಗಿಸಿದರು. ನಾಜಿಯಾ ಪ್ರಕಾರ, ಸೂಫಿಯಾನ್ ಅವರು ಅನಾರೋಗ್ಯಕ್ಕೆ ಒಳಗಾದಾಗ ಅವಳನ್ನು ನೋಡಿಕೊಳ್ಳುತ್ತಾರೆ. ಅವರು ಅವಳಿಗೆ ಅಡುಗೆ ಮಾಡುತ್ತಾರೆ. ಅವರ ಔಷಧಿಗಳನ್ನೂ ಸಹ ಪಡೆಯುತ್ತಾರೆ. ನಾಜಿಯಾ ಅವರನ್ನು ಸಲ್ಮಾನ್ ಖಾನ್‌ಗೆ ಹೋಲಿಸಿದಾಗ ಸೂಫಿಯಾನ್‌ಗೆ ಅವರನ್ನು ಕತ್ರಿನಾ ಕೈಫ್ ಎಂದಿದ್ದಾರೆ.


ಇದನ್ನೂ ಓದಿ: Anand Mahindra: 10 ವರ್ಷ ಕಷ್ಟಪಟ್ಟು ದುಡಿದು SUV ಕಾರ್ ಖರೀದಿಸಿದ ವ್ಯಕ್ತಿ! ಆನಂದ್ ಮಹೀಂದ್ರ ರಿಯಾಕ್ಷನ್ ಹೀಗಿತ್ತು


ವೈಟರ್​ನನ್ನು ಮದುವೆಯಾದ ಮಹಿಳೆ


ಇಲ್ಲೊಂದು ಮದುವೆ ವಿಚ್ಛೇದನೆ ಪಾರ್ಟಿಯಲ್ಲಿ  (Divorce Party) ನಿಶ್ಚಯವಾಗಿದೆ. ಪ್ರೀತಿಗೆ ಕಣ್ಣಿಲ್ಲ ಎನ್ನುವುದು ನಿಜ ಎಂದು ಬಹಳಷ್ಟು ಸಲ ನೋಡಿದ್ದೇವೆ. ಅದು ಪದೇ ಪದೇ ಸಾಬೀತಾಗುತ್ತಲೇ ಇರುತ್ತದೆ. ಉದ್ಯೋಗ, ಪದವಿ, ಹಣ, ಸೌಂದರ್ಯ ಯಾವುದೂ ಇಲ್ಲಿ ಮುಖ್ಯವಾಗುವುದಿಲ್ಲ. ಪ್ರೀತಿ ಮಾತ್ರ ಇಲ್ಲಿ ಪ್ರಮುಖ ವಿಚಾರವಾಗಿರುತ್ತದೆ. ಇದೀಗ ಅಂಥ ಒಂದು ಲವ್​ಸ್ಟೋರಿ ವೈರಲ್ (Love Story Viral) ಆಗಿದೆ.  ಗೇಬ್ರಿಯೆಲಾ ಮತ್ತು ಜಾನ್ ಅವರ ಈ ಪ್ರೇಮಕಥೆಯು ವೈರಲ್ ಆಗುತ್ತಿದ್ದು ಅದರ ವಿಶಿಷ್ಟತೆಯ ಕಾರಣದಿಂದಾಗಿ ನೆಟ್ಟಿಗರ ಮನಸು ಗೆಲ್ಲುತ್ತಿದೆ.


ಗೇಬ್ರಿಯೆಲಾ ಲ್ಯಾಂಡೋಲ್ಫಿ ತನ್ನ ಹಿಂದಿನ ಸಂಗಾತಿಗೆ ವಿಚ್ಛೇದನ ನೀಡಿದ್ದರು. ಆ ವಿಚ್ಛೇದನೆಯನ್ನು ಆಚರಿಸಲು ಅವರು ಪಾರ್ಟಿಯನ್ನು ಆಯೋಜಿಸಿದ್ದಾರೆ. ಅದರಲ್ಲಿ ಅವರು ಅತಿಥಿಗಳಿಗೆ ಸೇವೆ ಸಲ್ಲಿಸಲು ಶರ್ಟ್​ಲೆಸ್ ವೈಟರ್​ ಜಾನ್‌ನನ್ನು ನೇಮಿಸಿಕೊಂಡರು.


ಇದನ್ನೂ ಓದಿ: Bangalore Tourist Place: ಬೆಂಗಳೂರಿನಲ್ಲಿ ಒಂದು ದಿನದ ಪ್ರವಾಸಕ್ಕೆ ಈ ಸ್ಥಳಗಳು ಬೆಸ್ಟ್!

 ಅದರಂತೆಯೇ, ಅವರ ಪ್ರಣಯವು ಮಾರ್ಚ್ 2019 ರಲ್ಲಿ ಪ್ರಾರಂಭವಾಯಿತು. ಆರೋಗ್ಯಕರ ಸಂಬಂಧಕ್ಕೆ ಏಳಿಗೆಯಾಯಿತು. ವಿಚ್ಛೇದನದ ಪಾರ್ಟಿ ನಂತರ ಬೆಳಿಗ್ಗೆ ಜಾನ್‌ನಿಂದ ಬಂದ ಮಸೇಜ್ ನೋಡಿ ಗೇಬ್ರಿಯೆಲಾ ಅವರಲ್ಲಾದ ಬದಲಾವಣೆಯಿಂದ ಇದು ಪ್ರಾರಂಭವಾಯಿತು. ರಾತ್ರಿಯ ನಂತರ ಅವಳು ಚೆನ್ನಾಗಿದ್ದಾಳೆಯೇ ಎಂದು ಪರೀಕ್ಷಿಸಲು ಜಾನ್ ಅವಳಿಗೆ ಸಂದೇಶ ಕಳುಹಿಸಿದನು. ಅಲ್ಲಿಂದ ಮುಂದೆ ಪ್ರಣಯ ಸಂಬಂಧ ಬೆಳೆಯಿತು.

Published by:Divya D
First published: