ಪಾಕಿಸ್ತಾನದಲ್ಲಿ ಈಗ ಕೇಕ್​ಗಳದ್ದೇ ಕಾರುಬಾರು; ವಿಶಿಷ್ಟವಾಗಿ ವಿಜಯವನ್ನು ಆಚರಿಸುತ್ತಿರುವ ಪಾಕ್ ಪ್ರಜೆಗಳು

news18
Updated:August 6, 2018, 6:52 PM IST
ಪಾಕಿಸ್ತಾನದಲ್ಲಿ ಈಗ ಕೇಕ್​ಗಳದ್ದೇ ಕಾರುಬಾರು; ವಿಶಿಷ್ಟವಾಗಿ ವಿಜಯವನ್ನು ಆಚರಿಸುತ್ತಿರುವ ಪಾಕ್ ಪ್ರಜೆಗಳು
news18
Updated: August 6, 2018, 6:52 PM IST
-ನ್ಯೂಸ್ 18 ಕನ್ನಡ

ಪಾಕಿಸ್ತಾನದಲ್ಲಿ ಈಗ ಎಲ್ಲೂ ನೋಡಿದರೂ ಇಮ್ರಾನ್ ಖಾನ್​ರದ್ದೇ ಹವಾ ಕಾಣಿಸುತ್ತಿದೆ. 25 ವರ್ಷಗಳ ಹಿಂದೆ ಪಾಕ್ ಕ್ರಿಕೆಟ್ ತಂಡದಲ್ಲಿದ್ದಾಗ ಮೈದಾನದಲ್ಲಿ ಅಬ್ಬರಿಸಿದ್ದ ಇಮ್ರಾನ್ ಖಾನ್ ಇತ್ತೀಚೆಗೆ ನಡೆದ ಚುನಾವಣೆಯಲ್ಲೂ ವಿಜಯ ಪಾತಾಕೆ ಹಾರಿಸಿದ್ದರು. ಸಾರ್ವತ್ರಿಕ ಚುನಾವಣೆಯಲ್ಲಿ ಅತಿ ಹೆಚ್ಚು ಸೀಟು ಗೆದ್ದಿರುವ ತೆಹ್ರಿಕ್-ಇ-ಇನ್ಸಾಫ್ ಪಕ್ಷದ ಅಭಿಮಾನಿಗಳು ಈಗ ಇಮ್ರಾನ್ ಅಲೆಯಲ್ಲಿ ತೇಲುತ್ತಿದ್ದಾರೆ. ಇದಕ್ಕೆ ಒಂದು ಉದಾಹರಣೆ 22ರ ಹರೆಯದ ವರ್ದಾ ಝಾಹಿದ್. ಇಮ್ರಾನ್ ಖಾನ್ ರೂಪದಲ್ಲಿ ಝಾಹಿದ್ ತಯಾರಿಸಿದ ಕೇಕ್​ ಇಂದು ಈ ಯುವಕನನ್ನು ಪಾಕ್​ನಲ್ಲಿ ಖ್ಯಾತಿಯ ಉತ್ತುಂಗಕ್ಕೇರಿಸಿದೆ. ಆಗಸ್ಟ್​ 11ರಂದು ಪಾಕ್ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿರುವ ಇಮ್ರಾನ್ ಖಾನ್ ಅವರ ಕೇಕ್​ನ ಫೋಟೋಗಳು ಎಲ್ಲ ಕಡೆ ವೈರಲ್ ಆಗುತ್ತಿದೆ.

ಕರಾಚಿಯ 'ಒನ್ಸ್​ ಒಪನ್ ಎ ಕೇಕ್' ಬೇಕರಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಝಾಹಿದ್ ತಯಾರಿಸಿದ 4 ಕೆ.ಜಿ ತೂಕದ ಈ ಕೇಕ್​ನಲ್ಲಿ ಇಮ್ರಾನ್​ ಖಾನ್ ಕುರ್ತಾ ಧರಿಸಿ ನಿಂತಿರುವಂತೆ ವಿನ್ಯಾಸ ಮಾಡಲಾಗಿದೆ. ಸಾಮಾನ್ಯವಾಗಿ ಇಮ್ರಾನ್ ಖಾನ್ ಧರಿಸುವ ಹಸಿರು-ಕೆಂಪು ಬಣ್ಣದ ಪಕ್ಷದ ಶಾಲನ್ನೂ ಕೂಡ  ಕೇಕ್​ನಲ್ಲಿ ರೂಪಿಸಲಾಗಿದೆ.


ಈ ಕೇಕ್ ವೈರಲ್ ಆದ ಬಳಿಕ ಇಮ್ರಾನ್ ಖಾನ್ ವಿನ್ಯಾಸದ ಕೇಕ್​ಗಳ ಅರ್ಡರ್​ಗಳು ಹೆಚ್ಚಾಗಿದ್ದು, ಇದೇ ರೀತಿಯ ಕೇಕ್​ಗಾಗಿ ನಿರಂತರ ಕರೆಗಳು ಬರುತ್ತಿದೆ ಎಂದು ಝಾಹಿದ್ ತಿಳಿಸಿದ್ದಾರೆ. ಪ್ರಮಾಣ ವಚನಕ್ಕೂ ಮೊದಲು ಮತ್ತೊಂದು ಬಗೆಯ ಇಮ್ರಾನ್ ಖಾನ್ ಕೇಕ್ ತಯಾರಿಸಲು ಝಾಹಿದ್ ತಯಾರಿ ನಡೆಸಿದ್ದು, ಅದನ್ನು ಇಮ್ರಾನ್ ಖಾನ್​ಗೆ ಸಮರ್ಪಿಸಲು ನಿರ್ಧರಿಸಿದ್ದಾನೆ. ಅತ್ತಕಡೆ ಇಮ್ರಾನ್​ ಖಾನ್ ಪ್ರಧಾನಿ ಪಟ್ಟದತ್ತ ಮುನ್ನಡೆಯುತ್ತಿದ್ದರೆ, ಇತ್ತಕ ಕಡೆ ಬೇಕರಿಯಲ್ಲಿ ಭರ್ಜರಿ ವ್ಯವಹಾರವನ್ನು ​ಒನ್ಸ್​ ಒಪನ್ ಎ ಕೇಕ್ ಬೇಕರಿ ಕುದುರಿಸಿಕೊಂಡಿದೆ

ಈ ಹಿಂದೆ ಪಾಕ್ ಮಾಜಿ ಪ್ರಧಾನಿ ನವಾಜ್ ಶರೀಫ್ ಅವರ ಕೇಕ್ ಕೂಡ ವೈರಲ್ ಆಗಿತ್ತು. ಪಾಕ್ ಮಾಜಿ ಪ್ರಧಾನಿ ಭ್ರಷ್ಟಾಚಾರದ ಆರೋಪದಡಿಯಲ್ಲಿ ಬಂಧನವಾಗುತ್ತಿದ್ದಂತೆ ನವಾಜ್ ಶರೀಫ್ ರೂಪದ ಕೇಕ್​ನ್ನು ಖಾದಿಜಾ ಅಮ್ಮದ್ ತಯಾರಿಸಿದ್ದರು. ನವಾಜ್ ಶರೀಫ್ 'ಗಾನ್' ಎಂದು ಬರೆದು ಈ ಕೇಕ್​ನ ಫೋಟೋವನ್ನು ಸಾಮಾಜಿಕ ತಾಣದಲ್ಲಿ ಹರಿಬಿಡಲಾಗಿತ್ತು.  ಇದರ ಬಳಿಕ ಪ್ರಧಾನಿ ಪಟ್ಟಕ್ಕೇರಲಿರುವ  ಇಮ್ರಾನ್ ಖಾನ್ ಅವರ ಕೇಕ್ ವೈರಲ್ ಆಗುತ್ತಿದೆ. ಸದ್ಯ ಪಾಕಿಸ್ತಾನಿಗಳು ಸೋಲು-ಗೆಲುವನ್ನು ಕೇಕ್ ಮೂಲಕ ಆಚರಿಸಿಕೊಳ್ಳುತ್ತಿರುವುದು ವಿಶ್ವದ ಗಮನ ಸೆಳೆಯುತ್ತಿದೆ.
First published:August 6, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...