ವಿಕೆಟ್​ ಕಿತ್ತ ಸಂಭ್ರಮದಲ್ಲಿ ಕತ್ತು ಉಳುಕಿಸಿಕೊಂಡ ಪಾಕ್​ ಬೌಲರ್!: ವಿಡಿಯೋ ವೈರಲ್


Updated:July 17, 2018, 5:27 PM IST
ವಿಕೆಟ್​ ಕಿತ್ತ ಸಂಭ್ರಮದಲ್ಲಿ ಕತ್ತು ಉಳುಕಿಸಿಕೊಂಡ ಪಾಕ್​ ಬೌಲರ್!: ವಿಡಿಯೋ ವೈರಲ್

Updated: July 17, 2018, 5:27 PM IST
ನ್ಯೂಸ್​ 18 ಕನ್ನಡ

ಪಾಕ್​ನ ವೇಗಿ ಬೌಲರ್​ ಹಸನ್​ ಅಲಿಯ ವಿಡಿಯೋ ಒಂದು ಭಾರೀ ವೈರಲ್​ ಆಗುತ್ತಿದ್ದು, ಹಾಸ್ಯಕ್ಕೀಡಾಗಿದೆ. ಫೇಸ್​ಬುಕ್​ ಹಾಗೂ ಟ್ವಿಟರ್​ನಲ್ಲಿ ಈ ವಿಡಿಯೋವನ್ನು ಬಹಳಷ್ಟು ಮಂದಿ ಶೇರ್ ಮಾಡಿದ್ದಾರೆ.

ಜಿಂಬಾಬ್ವೆ ಹಾಗೂ ಆಸ್ಟ್ರೇಲಿಯಾ ನಡುವೆ ನಡೆದ ತ್ರಿಕೋನ ಸರಣಿ ಗೆದ್ದ ಬಳಿಕ ಇದೀಗ ಪಾಕಿಸ್ತಾನ ಜಿಂಬಾಬ್ವೆಯೊಂದಿಗೆ 5 ಪಂದ್ಯಗಳ ಏಕದಿನ ಸರಣಿಯನ್ನಾಡುತ್ತಿದೆ. ಇದರಲ್ಲಿ ಪಾಕಿಸ್ತಾನ 2-0 ಅಂತರದಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಆದರೆ ಎರಡನೇ ಪಂದ್ಯದಲ್ಲಿ ನಡೆದ ಘಟನೆಯು ಪಾಕ್​ ತಂಡವನ್ನು ಒಂದು ಬಾರಿ ಬೆಚ್ಚಿ ಬೀಳುವಂತೆ ಮಾಡಿದೆ. ವಿಕೆಟ್​ ಕಿತ್ತ ಸಂಭ್ರಮವನ್ನಾಚರಿಸುತ್ತಿದ್ದ ಬೌಲರ್​ ಹಸನ್​ ಅಲಿಯ ಕತ್ತು ಉಳುಕಿದ್ದೇ ಇದಕ್ಕೆಲ್ಲಾ ಕಾರಣವಾಗಿತ್ತು.


ಜುಲೈ 16 ರಂದು ಬುಲಾವಾಯೊದಲ್ಲಿ ಎರಡಣೆ ಏಕದಿನ ಪಂದ್ಯ ನಡೆಯುತ್ತಿದ್ದು, ಮೊದಲ ಪಂದ್ಯದಂತೆ ಎರಡಣೆ ಪಂದ್ಯದಲ್ಲೂ ಪಾಕ್​ ಜಿಂಬಾಬ್ವೆಯನ್ನು ಒತ್ತಡಕ್ಕೀಡು ಮಾಡಿತ್ತು. 37 ಓವರ್​ಗಳಲ್ಲಿ 140 ರನ್​ಗಳನ್ನು ಗಳಿಸಿದ್ದು, ಜಿಂಬಾಬ್ವೆ ಇನ್ನಷ್ಟು ಸ್ಕೋರ್​ ಕಲೆ ಹಾಕಲು ಹರಸಾಹಸ ಪಡುತ್ತಿತ್ತು. ಇದೇ ಸಂದರ್ಭದಲ್ಲಿ ಪಅಕ್​ನ ಅತ್ಯಂತ ಅಪಾಯಕಾರಿ ಬೌಲರ್​ ಎಂದೇ ಕರೆಸಿಕೊಳ್ಳಲಾಗುವ ಹಸನ್​ ಅಲಿ ಬೌಲಿಂಗ್ ಮಾಡಲು ಬಂದಿದ್ದಾರೆ. ಬೌಲಿಂಗ್ ಮಾಡಿದ ಅವರು ವಿಕೆಟ್​ ಪಡೆದಿದ್ದು, ಎಂದಿನಂತೆ ಸಂಭ್ರಮಿಸಲಾರಂಭಿಸಿದ್ದಾರೆ. ಇದಕ್ಕಾಗಿ ಕೈ ಎತ್ತುತ್ತಿದ್ದಂತೆಯೇ, ಅವರ ಕತ್ತು ಉಳುಕಿದೆ. ಮರುಕ್ಷಣವೇ ನೋವಿನಿಂದ ಕುಸಿದು ಬಿದ್ದಿದ್ದಾರೆ. ಇತರ ಆಟಗಾರರು ಅವರ ಸಹಾಯಕ್ಕೆ ಧಾವಿಸಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗಿದೆ.
First published:July 17, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ