ವಾಘಾ ಗಡಿಯಲ್ಲಿ ಭಾರತೀಯ ಸೈನಿಕರಿಗೆ ತೊಡೆ ತಟ್ಟಿ ಅವಮಾನಿಸಿದ ಪಾಕ್​ ಕ್ರಿಕೆಟಿಗ!


Updated:April 22, 2018, 1:38 PM IST
ವಾಘಾ ಗಡಿಯಲ್ಲಿ ಭಾರತೀಯ ಸೈನಿಕರಿಗೆ ತೊಡೆ ತಟ್ಟಿ ಅವಮಾನಿಸಿದ ಪಾಕ್​ ಕ್ರಿಕೆಟಿಗ!

Updated: April 22, 2018, 1:38 PM IST
ಲಾಹೋರ್​: ಕ್ರಿಕೆಟ್​ ಮೈದಾನದಲ್ಲಿ ಮಿಂಚುತ್ತಿರುವ ಪಾಕಿಸ್ತಾನದ ಯುವ ಕ್ರಿಕೆಟರ್​ ವಾಘಾಗಡಿಯಲ್ಲಿ ಭಾರತೀಯ ಸೈನಿಕರನ್ನು ಹಂಗಿಸಲು ಹೋಗಿ ಹೊಸ ವಿವಾದವನ್ನು ಎಳೆದುಕೊಂಡಿದ್ದಾರೆ.

ಭಾರತ ಹಾಗೂ ಪಾಕ್​ನ ಪ್ರತಿಷ್ಠೆಯ ಸ್ಥಳವಾಗಿರುವ ವಾಘಾ ಗಡಿಯಲ್ಲಿ ನಡೆಯುವ ಉಭಯ ದೇಶಗಳ ಸೈನಿಕರ ಧ್ವಜಗೌರವ ಕಾರ್ಯಕ್ರಮಕ್ಕೆ ಪಾಕ್​ ಕ್ರಿಕೆಟ್​ ತಂಡ ಪಾಲ್ಗೊಂಡಿತ್ತು. ಈ ವೇಳೆ ಹಸನ್​ ಅಲಿ ವೀಕ್ಷಕರ ಗ್ಯಾಲರಿಯಿಂದ ಒಮ್ಮೆಲೆ ಸೈನಿಕರು ನಡೆಸುವ ಪೆರೇಡ್​ ಸ್ಥಳಕ್ಕೆ ಓಡಿ ಬಂದಿದ್ದಾರೆ. ಬಳಿಕ ಭಾರತೀಯ ಸೈನಿಕರುನ್ನು ಉದ್ಧೇಶಿಸಿ ವಾಘಾ ಗಡಿಯಲ್ಲಿ ನಡೆಯುವ ಸೈನಿಕರ ನಡೆಯನ್ನು ನಕಲು ಮಾಡಿದ್ದಾರೆ. ಈ ವೀಡಯೋ ಕೂಡಾ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.ಎದುರಾಳಿ ಭಾರತೀಯ ಸೈನಿಕರ ಸ್ಟೈಲ್​ನ್ನೇ ಕಾಪಿ ಮಾಡಿದ ಅಲಿ, ಕೈಗಳನ್ನು ಎತ್ತಿ ಪ್ರಚೋಧನಾತ್ಮಕವಾಗಿ ಬೀಸಿದ್ದಾರೆ. ಅಲ್ಲದೇ ತೊಡೆ ತಟ್ಟಿ ದರ್ಪ ತೋರಿಸಿದ್ದಾರೆ. ವಾಘಾ ಗಡಿ ನಿಯಮದ ಪ್ರಕಾರ ಧ್ವಜಾ ಅವರೋಹಣದ ಸಂದರ್ಭದಲ್ಲಿ ಈ ಎಲ್ಲಾ ಚೇಷ್ಟೆಗಳಿಗೆ ಅವಕಾಶವಿಲ್ಲ. ಹೀಗಾಗಿ ಹಸನ್ ಅಲಿ ಮಾಡಿದ್ದು ಸರಿಯಲ್ಲ, ಸೈನಿಕರನ್ನು ಆತ ಅವಮಾನಿಸುತ್ತಿದ್ದರೂ ಆತನನ್ನು ಯಾರೂ ತಡೆದಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ.
Loading...

'ಹಸನ್​ ವರ್ತನೆಯಿಂದ ಈ ಸಮಾರಂಭದ ಮಹತ್ವಕ್ಕೆ ಧಕ್ಕೆಯಾಗಿದೆ, ಈ ರೀತಿ ಸೈನಿಕರಿಗೆ ಅವಮಾನಿಸುವುದು ರಾಷ್ಟ್ರದ ಗೌರವಕ್ಕೂ ಶ್ರೇಯಸ್ಸಲ್ಲ, ಹೀಗಾಗಿ ಪಾಕಿಸ್ತಾನಕ್ಕೆ ನಮ್ಮ ಪ್ರತಿಭಟನೆಯನ್ನು ಸೂಚಿಸಿರುವುದಾಗಿ' ಬಿಎಸ್‍ಎಫ್ ಇನ್ಸ್ ಪೆಕ್ಟರ್ ಜನರಲ್ ಮುಕುಲ್ ಗೋಯಲ್ ಹೇಳಿದ್ದಾರೆ.
First published:April 22, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ