Bhagavad Gita: ಅರಬ್ ರಾಷ್ಟ್ರಗಳಲ್ಲಿ ಮಾರಾಟವಾಯಿತು 15 ಕೋಟಿ ಭಗವದ್ಗೀತೆ ಪ್ರತಿ

Iskcon: ಇಸ್ಕಾನ್ ಸಂಸ್ಥೆ ಭಗವದ್ಗೀತೆಯನ್ನು ಅರೇಬಿಕ್ ಭಾಷೆಗೆ ಭಾಷಾಂತರ ಮಾಡಿದ್ದು,ಈಗಾಗಲೇ 15 ಕೋಟಿಗೂ ಅಧಿಕ ಪ್ರತಿಗಳು ಅರಬ್ ದೇಶದಲ್ಲಿ ಮಾರಾಟವಾಗಿದೆ ಎಂದು ಇಸ್ಕಾನ್ ಸಂಸ್ಥೆ ಮಾಹಿತಿ ನೀಡಿದೆ.

ಭಗವದ್ಗೀತೆ

ಭಗವದ್ಗೀತೆ

 • Share this:
  ಕೃಷ್ಣನು(Sri Krishna) ಅರ್ಜುನನಿಗೆ(Arjuna) ಉಪದೇಶ ಮಾಡಿದ, ಗೀತಾ ರೂಪದಲ್ಲಿರುವ ತತ್ವಬೋಧೆಯೇ ಭಗವದ್ಗೀತೆ(Bhagavad-Gita). ಇದು ಜೀವನದ(Life) ಸಾರವನ್ನು ವಿವರಿಸುತ್ತದೆ. ಭಗವದ್ಗೀತೆಯು ಒಂದು ಮತಕ್ಕೆ ಸೀಮಿತವಾದ ಗ್ರಂಥವಲ್ಲ.ಈ ಗ್ರಂಥವನ್ನು ಓದಿದರೆ, ಜೀವನವೇ ಬದಲಾಗುತ್ತದೆ. ಆಧ್ಯಾತ್ಮದ(Spiritual) ಕಡೆಗೆ ಒಲವಾಗುತ್ತದೆ. ಎಲ್ಲರಿಗೂ ಒಳ್ಳೆಯದನ್ನೇ ಬಯಸುವ ಗುಣ ನಮ್ಮದಾಗುತ್ತದೆ. ನಮ್ಮ ಜೀವನ ಉದ್ಧಾರವಾಗಲು ಇದು ಸಹಕಾರಿಯಾಗಿದೆ. ಭಗವದ್ಗೀತೆ ವ್ಯಕ್ತಿತ್ವ ವಿಕಸನದ ಸಂಜೀವಿನಿ. ವ್ಯಕ್ತಿ ಸಮಾಜಕ್ಕೆ ತನ್ನನ್ನು ತಾನು ತೆರೆದುಕೊಂಡಾಗ ಅವನಿಗೆ ಗೌರವಾದರಗಳಿಂದ ಬರಬಹುದಾದ ಸಹಜ ಅಹಂಕಾರವನ್ನು ಮೆಟ್ಟಿ ನಿಂತಾಗ ಮಾತ್ರ ಬೆಳೆಯಲು ಸಾಧ್ಯ. ಹೀಗಾಗಿ ಇಂತಹ ಮಹತ್ವದ ಗ್ರಂಥ ಭಗವದ್ಗೀತೆಯನ್ನು ಹಿಂದೂಗಳು ಮಾತ್ರವಲ್ಲ ವಿಶ್ವದ ಅನೇಕ ಧರ್ಮದ ಜನರು ಆರಾಧಿಸುತ್ತಾರೆ.. ಇದಕ್ಕೆ ಸ್ಪಷ್ಟ ಉದಾಹರಣೆ ಎಂದರೆ ಪಾಕಿಸ್ತಾನದ ವ್ಯಕ್ತಿ ಕೂಡ ಭಗವದ್ಗೀತೆ ಪ್ರತಿಯನ್ನು ಆತನಲ್ಲಿ ಇಟ್ಟುಕೊಂಡಿದ್ದು.

  ಭಗವದ್ಗೀತೆ ಖರೀದಿಸಿ ಪಾಕಿಸ್ತಾನಕ್ಕೆ ತೆಗೆದುಕೊಂಡು ಹೋದ ವ್ಯಕ್ತಿ

  ಅನುಮಾನಾಸ್ಪದವಾಗಿ ದಾಖಲೆಗಳನ್ನು ಹೊಂದಿದ ಪ್ರಕರಣದಲ್ಲಿ ಪಾಕಿಸ್ತಾನದ ವ್ಯಕ್ತಿಯೊಬ್ಬನಿಗೆ 16 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲಾಗಿತ್ತು.. ಆದರೆ ಕೆಲವು ವರ್ಷಗಳ ಹಿಂದೆ ಆತ ಜೈಲಿನಿಂದ ಬಿಡುಗಡೆಯಾದ.. ಹೀಗೆ ಜೈಲಿನಿಂದ ಬಿಡುಗಡೆಯಾದ ಜಲಾಲುದ್ದೀನ್ ಮರಳಿ ತನ್ನ ದೇಶಕ್ಕೆ ಹೋಗುವಾಗ ಭಗವದ್ಗೀತೆಯನ್ನು ಖರೀದಿ ಮಾಡಿ ತೆಗೆದುಕೊಂಡು ಹೋಗಿದ್ದಾನೆ..

  ಇದನ್ನೂ ಓದಿ: ಜೀವನದ ಯಶಸ್ಸಿಗೆ ಕೃಷ್ಣನ ಭಗವದ್ಗೀತೆಯ ಈ 5 ಸಾಲು ನೆನಪಿರಲಿ

  ಅಕ್ರಮ ಅನುಮಾನಸ್ಪದ ದಾಖಲೆ ಇಟ್ಟುಕೊಂಡಿದ್ದಾರೆ ಜಲಾಲುದ್ದೀನ್ ಬಂಧನವಾದಾಗ ಆತನಿಗೆ ಕೇವಲ ಪ್ರೌಢಶಿಕ್ಷಣ ಲಭಿಸಿತ್ತು. ಗಾಗಿ ಜೈಲಿನಲ್ಲಿದ್ದಾಗಲೇ 10ನೇ ತರಗತಿ ತೇರ್ಗಡೆಯಾಗಿ ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯದಲ್ಲಿ ಎಂಎ ಪದವಿ ಪಡೆದು, ಜೈಲಿನಲ್ಲಿಯೇ ಎಲೆಕ್ಟ್ರಿಷಿಯನ್ ತರಬೇತಿಯನ್ನೂ ಮುಗಿಸಿ, ಜೈಲಿನ ಕ್ರಿಕೆಟ್ ಪಂದ್ಯಾವಳಿಯಲ್ಲಿ ಅಂಪೈರ್ ಆಗಿ ಕಾರ್ಯನಿರ್ವಹಿಸಿದ್ದ. ಜೈಲಿನಲ್ಲಿ ಇದ್ದರೂ ಸಹ ತನ್ನ ಮನಸ್ಸನ್ನು ಏಕಾಗ್ರತೆ ಯಾಗಿಟ್ಟುಕೊಂಡು ನನ್ನ ವ್ಯಕ್ತಿತ್ವ ವಿಕಸನ ಮಾಡಿಕೊಳ್ಳಲು ಆತನಿಗೆ ಸಹಾಯ ವಾದದ್ದು ಭಗವದ್ಗೀತೆ.. ಇದನ್ನ ಎಲ್ಲರ ಬಳಿ ಹೇಳಿಕೊಂಡಿದ್ದ ಭಗವದ್ಗೀತೆಯನ್ನು ತನ್ನೊಂದಿಗೆ ಇಟ್ಟುಕೊಳ್ಳಲು ಬಯಸುವುದಾಗಿ ಹೇಳಿ, ಅದನ್ನು ಜೈಲು ಅಧಿಕಾರಿಗಳ ಮೂಲಕ ಖರೀದಿಸಿ ತನ್ನೊಂದಿಗೆ ತೆಗೆದುಕೊಂಡು ಪಾಕಿಸ್ತಾನಕ್ಕೆ ತೆರಳಿದ್ದಾನೆ.

  ಉರ್ದುವಿನಲ್ಲಿ ಭಾಷಾಂತರ ವಾಗಿರುವ ಭಗವದ್ಗೀತೆ

  ವಿಶ್ವದ ಅದೆಷ್ಟೋ ಜನಗಳ ಪಾಲಿಗೆ ಬದುಕಿನ ಮಹತ್ವದ ಸಾರುತಿರುವ ಭಗವದ್ಗೀತೆ ಇಂದು ಅನೇಕ ಭಾಷೆಗಳಿಗೆ ಭಾಷಾಂತರವಾಗಿದೆ. ಉರ್ದು ಭಾಷೆಗೂ ಭಗವದ್ಗೀತೆ ಭಾಷಾಂತರಗೊಂಡಿದೆ ಪಾಕಿಸ್ತಾನದ ಪ್ರಜೆಗಳು ಭಗವದ್ಗೀತೆಯನ್ನು ಓದುತ್ತಿದ್ದಾರೆ. ಪಾಕಿಸ್ತಾನದ ಹಿಂದುಗಳು ಮಾತ್ರವಲ್ಲ ಮುಸ್ಲಿಮರೂ ಸಹ ಭಗವದ್ಗೀತೆಯನ್ನು ಪವಿತ್ರಗ್ರಂಥವೆಂದು ಆರಾಧಿಸುತ್ತಿದ್ದು, ಅದನ್ನು ಓದಿರುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅನುಭವ ಹಂಚಿಕೊಳ್ಳುತ್ತಿದ್ದಾರೆ..ಇನ್ನು . ಈ ಗ್ರಂಥ ತಮ್ಮ ಕಠೋರ ಮನಸ್ಥಿತಿಯನ್ನು ಹೇಗೆ ಪರಿವರ್ತನೆ ಮಾಡಿದೆ ಎಂಬ ಬಗ್ಗೆ ಹಲವರು ತನ್ನ ಅನುಭವ ಹಂಚಿಕೊಂಡಿದ್ದಾರೆ.

  ಇದನ್ನೂ ಓದಿ: ಜೈಲಿನಿಂದ ಹೊರಹೋಗುವಾಗ ಪಾಕ್​ ಪ್ರಜೆಯ ಕೈಯಲ್ಲಿತ್ತು ಭಗವದ್ಗೀತೆ!

  ಅರಬ್ ರಾಷ್ಟ್ರಗಳಲ್ಲಿ 15ಕೋಟಿ ಭಗವದ್ಗೀತೆ ಪ್ರತಿ ಮಾರಾಟ

  ಇನ್ನು ಆಶ್ಚರ್ಯ ಪಡುವ ವಿಷಯ ಏನೆಂದರೆ ಇಸ್ಕಾನ್ ಸಂಸ್ಥೆ ಭಗವದ್ಗೀತೆಯನ್ನು ಅರೇಬಿಕ್ ಭಾಷೆಗೆ ಭಾಷಾಂತರ ಮಾಡಿದ್ದು,ಈಗಾಗಲೇ 15 ಕೋಟಿಗೂ ಅಧಿಕ ಪ್ರತಿಗಳು ಅರಬ್ ದೇಶದಲ್ಲಿ ಮಾರಾಟವಾಗಿದೆ ಎಂದು ಇಸ್ಕಾನ್ ಸಂಸ್ಥೆ ಮಾಹಿತಿ ನೀಡಿದೆ. ಇನ್ನು ಹಿಂದೊಮ್ಮೆ ಇದೇ ವಿಷಯದ ಕುರಿತಾಗಿ ಅಂದರೆ ಭಗವದ್ಗೀತೆಯು ಅರೇಬಿಕ್‌ ಭಾಷೆಯಲ್ಲಿ ತರ್ಜುಮೆಗೊಂಡಿದೆ ಎಂದಾಗ ಇದು ಸುಳ್ಳು ಸುದ್ದಿ ಎಂದು ಕೆಲವು ವೆಬ್‌ಸೈಟ್‌ಗಳು ಪ್ರಕಟಿಸಿದ್ದವು. ಆದರೆ ಇದೀಗ ಖುದ್ದು ಇಸ್ಕಾನ್‌ ಸಂಸ್ಥೆ ಈ ಬಗ್ಗೆ ಟ್ವಿಟರ್‌ನಲ್ಲಿ ಮಾಹಿತಿ ನೀಡಿದೆ. ಜತೆಗೆ ಕೆಲವು ಫೋಟೋಗಳನ್ನು ಹಂಚಿಕೊಂಡಿದೆ. ಈ ಕುರಿತು ಟ್ವೀಟ್‌ ಮಾಡಿರುವ ಇಸ್ಕಾನ್‌ನ ರಾಧಾರಾಮನ್‌ ದಾಸ್‌ ಈ ಬಗ್ಗೆ ಬರೆದುಕೊಂಡಿದ್ದಾರೆ.
  Published by:ranjumbkgowda1 ranjumbkgowda1
  First published: