ಬ್ರಿಟನ್ ದೊರೆ ಬಹುಮುಖ ಪ್ರತಿಭೆ (Talent) ಎಂದರೆ ತಪ್ಪಾಗಲಾರದು. ಉತ್ತಮ ಹಾಸ್ಯಪ್ರಜ್ಞೆ, ಚಿತ್ರಕಲೆ ಹೀಗೆ ಹಲವು ಚಾಕಚಕ್ಯತೆಗಳನ್ನು ಮೈಗೂಡಿಸಿಕೊಂಡಿದ್ದಾರೆ. ಇದಕ್ಕೆ ಸಾಕ್ಷಿ (Evidence) ಎನ್ನುವಂತೆ ಕಿಂಗ್ ಚಾರ್ಲ್ಸ್ III ರ ವರ್ಣಚಿತ್ರದ (Painting) ಮುದ್ರಣವೊಂದು £ 5,737.50 (535,310 ರೂ)ಕ್ಕೆ ಹರಾಜಿನಲ್ಲಿ ಮಾರಾಟವಾಗಿದೆ. ಕಿಂಗ್ ಚಾರ್ಲ್ಸ್ III ರ ಚಿತ್ರಕಲೆ ಗುರುವಾರ ಹರಾಜಿನಲ್ಲಿ ಅದರ ಮೂಲ ಬೆಲೆ £600 ಗಿಂತ ಅಂದಾಜು ಸುಮಾರು 10 ಪಟ್ಟು ಹೆಚ್ಚಿನ ಬೆಲೆಗೆ ಮಾರಾಟವಾಗಿದೆ ಎಂದು ವರದಿಯೊಂದು ತಿಳಿಸಿದೆ.
2001ರಲ್ಲಿ ʼಬಾಲ್ಮೋರಲ್ ಕ್ಯಾಸಲ್ʼ ಅರಮನೆಯನ್ನು ಚಿತ್ರಿಸಿದ್ದ ಕಿಂಗ್
ಕಿಂಗ್ ಚಾರ್ಲ್ಸ್ III ರ ಚಿತ್ರಕಲೆ ಗುರುವಾರ ಹರಾಜಿನಲ್ಲಿ ಅದರ ಮೂಲ ಬೆಲೆ £600 ಗಿಂತ ಅಂದಾಜು ಸುಮಾರು 10 ಪಟ್ಟು ಹೆಚ್ಚಿನ ಬೆಲೆಗೆ ಮಾರಾಟವಾಗಿದೆ ಎಂದು ವರದಿಯೊಂದು ತಿಳಿಸಿದೆ. 2001 ರಲ್ಲಿ ಕಿಂಗ್ ಬಿಡಿಸಿರುವ ಚಿತ್ರಕಲೆ ʼಬಾಲ್ಮೋರಲ್ ಕ್ಯಾಸಲ್ʼ ಅರಮನೆಯ ಚಿತ್ರವು 100 ವರ್ಣಚಿತ್ರಗಳಲ್ಲಿ ಒಂದಾಗಿದ್ದು, 18 ನೇ ಸ್ಥಾನದಲ್ಲಿತ್ತು. ಮತ್ತು ಬೋನ್‌ಹ್ಯಾಮ್ಸ್‌ನ "ದಿ ಸ್ಕಾಟಿಷ್ ಹೋಮ್" ಹರಾಜಿನ ಭಾಗವಾಗಿದೆ ಎಂದು ಸುದ್ದಿ ಮಾಧ್ಯಮಗಳು ವರದಿ ಮಾಡಿವೆ.
ಆಳ್ವಿಕೆಯ ರಾಜನಿಂದ ಹರಾಜಾದ ಮೊದಲ ಮುದ್ರಣ ಎಂಬ ಖ್ಯಾತಿ ಪಡೆದಿರುವ ಈ ಪೇಟಿಂಗ್ ರಾಜನ ಮೂಲ ಸಹಿ ಮತ್ತು ದೃಢೀಕರಣದ ಪ್ರಮಾಣಪತ್ರವನ್ನು ಹೊಂದಿದೆ.
ಹರಾಜನ್ನು ಬೋನ್‌ಹ್ಯಾಮ್ಸ್ (Bonhams) ವೆಬ್‌ಸೈಟ್‌ನಲ್ಲಿ ಲೈವ್-ಸ್ಟ್ರೀಮ್ ಮಾಡಲಾಯಿತು ಮತ್ತು £3,000 ಬೆಲೆಯೊಂದಿಗೆ ಬಿಡ್ಡಿಂಗ್ ಪ್ರಾರಂಭವಾಯಿತು. "ಈ ಆಕರ್ಷಕ ಮುದ್ರಣವು ಚಿತ್ರಕಲೆಯ ಮೇಲಿನ ರಾಜನ ಉತ್ಸಾಹ ಮತ್ತು ಸ್ಕಾಟ್ಲೆಂಡ್‌ನ ಮೇಲಿನ ಆಳವಾದ ಪ್ರೀತಿಯನ್ನು ತೋರಿಸುತ್ತದೆ" ಎಂದು ಬೋನ್‌ಹ್ಯಾಮ್ಸ್‌ನ ಹಿರಿಯ ಮೌಲ್ಯಮಾಪಕ ಹ್ಯಾಮಿಶ್ ವಿಲ್ಸನ್ ಅವರು ಹೇಳಿದರು.
ಈ ಬಗ್ಗೆ ಮತ್ತಷ್ಟು ಮಾಹಿತಿ ಹಂಚಿಕೊಂಡ ವಿಲ್ಸನ್ "ಹರಾಜುಗಾರನಾಗಿದ್ದ ನನ್ನ ಕಾಲದಲ್ಲಿ ಹರಾಜಿಗೆ ಮುಂಚಿತವಾಗಿ ಸಲ್ಲಿಸಲಾದ ಹೆಚ್ಚಿನ ಕಮಿಷನ್ ಬಿಡ್‌ಗಳನ್ನು ನಾನು ನೋಡಿಲ್ಲ" ಎಂದು ಅವರು ತಿಳಿಸಿದರು.
ಹರಾಜು ಶುಲ್ಕ ಸೇರಿ £5,737.50ಕ್ಕೆ ಪೇಟಿಂಗ್ ಮಾರಾಟ
"ಈ ಆಕರ್ಷಕ ಮುದ್ರಣವು ಚಿತ್ರಕಲೆಯ ಮೇಲಿನ ರಾಜನ ಉತ್ಸಾಹ ಮತ್ತು ಸ್ಕಾಟ್ಲೆಂಡ್‌ನ ಮೇಲಿನ ಆಳವಾದ ಪ್ರೀತಿಯನ್ನು ಸಂಯೋಜಿಸಿತು" ಎಂದು ವಿಲ್ಸನ್ ಹೇಳಿದರು.ಚಿತ್ರಕಲೆಯನ್ನು ಹರಾಜು ಶುಲ್ಕ ಸೇರಿದಂತೆ £5,737.50 (ಸುಮಾರು $6,500) ಗೆ ಮಾರಾಟ ಮಾಡಲಾಯಿತು ಎಂದು ಅವರು ತಿಳಿಸಿದರು.
A print of a painting by King Charles III is up for auction! It shows Balmoral Castle in Scotland. The King, then Prince of Wales, painted it in 2001. pic.twitter.com/KV37iLLxtF
— Royal Watcher (@WindsorDynasty) October 19, 2022
ರಾಣಿ ಎಲಿಜಬೆಥ್ ಅವರ ಹಲವಾರು ಮೆಚ್ಚಿನ ಅರಮನೆಯಗಳಲ್ಲಿ ಈ ಬಾಲ್ಮೋರಲ್ ಕ್ಯಾಸಲ್ ಕೂಡ ಒಂದಾಗಿತ್ತು. ಬೇಸಿಗೆಯ ಕಾಲದಲ್ಲಿ ರಾಣಿಯು ಇದೇ ಎಸ್ಟೇಟ್‌ನಲ್ಲಿ ಉಳಿಯಲು ಇಲ್ಲಿಗೆ ಬರುತ್ತಿದ್ದರು. ಈ ಸುಂದರ ಅರಮನೆಯು ಸ್ಕಾಟಿಷ್ ಬ್ಯಾರೋನಿಯಲ್ ವಾಸ್ತುಶೈಲಿಗೆ ಅತ್ಯುತ್ತಮ ಉದಾಹರಣೆಯಾಗಿದೆ. ಪೋರ್ಬ್ಸ್ ನಿಯತಕಾಲಿಕೆಯ ಮಾಹಿತಿಯ ಪ್ರಕಾರ ಈ ಆಸ್ತಿ 1,120 ಕೋಟಿ ಮೌಲ್ಯ ಹೊಂದಿದೆ.
ಚಿತ್ರಕಲೆಯಲ್ಲಿ ಹೆಚ್ಚು ಆಸಕ್ತಿ ಇರುವ ರಾಜ ಚಾರ್ಲ್ಸ್ ರಾಜಮನೆತನದ ಅನೇಕ ಎಸ್ಟೇಟ್‌ಗಳನ್ನು, ಅರಮನೆಗಳ ಚಿತ್ರಗಳನ್ನು ಅದ್ಭುತವಾಗಿ ಚಿತ್ರಿಸಿದ್ದಾರೆ. ಕಿಂಗ್ ಚಾರ್ಲ್ಸ್ ಈ ಹಿಂದೆ ಕಲಾ ಪ್ರಕಾರವು ನನ್ನನ್ನು ಮತ್ತೊಂದು ಆಯಾಮಕ್ಕೆ ಕೊಂಡೊಯ್ಯುತ್ತದೆ ಎಂದು ಹೇಳುವ ಮೂಲಕ ಕಲೆ ಮೇಲಿನ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ