'ಪಂತ್ ಪಂಚ್': ಆಸೀಸ್​ ನಾಯಕನ ಪತ್ನಿ-ಮಕ್ಕಳೊಂದಿಗೆ ರಿಷಭ್, ಫೋಟೋ ವೈರಲ್

ಪಂದ್ಯ ಮುಗಿದ ಬಳಿಕ ಪಂತ್ ಅವರು ನೇರವಾಗಿ ಟಿಮ್ ಪೇಯ್ನ್ ಅವರ ಮನೆಗೆ ತೆರಳಿ ಪತ್ನಿ ಬೊನೀ ಪೇಯ್ನ್ ಹಾಗೂ ಮಕ್ಕಳನ್ನು ಭೇಟಿಮಾಡಿದ್ದಾರೆ. ಇದರ ಜೊತೆಗೆ ಫೋಟೋಕ್ಕೆ ಪೋಸ್ ಕೊಟ್ಟಿದ್ದು ಸಖತ್ ವೈರಲ್ ಆಗುತ್ತಿದೆ.

Vinay Bhat | news18
Updated:January 1, 2019, 4:25 PM IST
'ಪಂತ್ ಪಂಚ್': ಆಸೀಸ್​ ನಾಯಕನ ಪತ್ನಿ-ಮಕ್ಕಳೊಂದಿಗೆ ರಿಷಭ್, ಫೋಟೋ ವೈರಲ್
Pic: Twitter
Vinay Bhat | news18
Updated: January 1, 2019, 4:25 PM IST
ಮೆಲ್ಬೋರ್ನ್​​: ಇತ್ತೀಚೆಗಷ್ಟೆ ಮುಕ್ತಾಯಗೊಂಡ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್​ ಪಂದ್ಯದಲ್ಲಿ ಭಾರತ ಭರ್ಜರಿ ಜಯ ಸಾಧಿಸಿ ಟೂರ್ನಿಯಲ್ಲಿ ಮುನ್ನಡೆ ಪಡೆದುಕೊಂಡಿತು.

ಈ ಪಂದ್ಯದ ಮಧ್ಯೆ ರಿಷಭ್ ಪಂತ್ ಹಾಗೂ ಆಸ್ಟ್ರೇಲಿಯಾ ತಂಡದ ನಾಯಕ ಟಿಮ್ ಪೇಯ್ನ್ ಅವರ ಸ್ಲೆಡ್ಜಿಂಗ್ ವಿಚಾರ ಸಾಕಷ್ಟು ಸುದ್ದಿಮಾಡಿತ್ತು. ಮೊದಲು ಪಂತ್ ಬ್ಯಾಟ್ ಮಾಡುವ ವೇಳೆ ವಿಕೆಟ್ ಹಿಂದೆ ನಿಂತು ಪೇಯ್ನ್ ಅವರು ಸ್ಲೆಡ್ಜಿಂಗ್ ಮಾಡಿದ್ದರು.

'ಮುಂದಿನ ಏಕದಿನ ಪಂದ್ಯಕ್ಕೆ ಧೋನಿ ವಾಪಾಸ್ಸಾಗಿದ್ದಾರೆ. ನೀನು ಬಿಗ್​ಬ್ಯಾಶ್​ನಲ್ಲಿ ಆಡು. ಊಟಕ್ಕೆ ನಮ್ಮ ಮನೆಗೆ ಬಾ, ನಾನು ಹಾಗೂ ನನ್ನ ಹೆಂಡತಿ ಫಿಲ್ಮ್​​ ನೋಡಲು ಹೊರಗಡೆ ಹೋದಾಗ ಮನೆಯಲ್ಲಿ ನನ್ನ ಮಕ್ಕಳನ್ನು ನೋಡ್ಕೊಂಡಿರು' ಎಂದು ಕಾಲೆಳೆದಿದ್ದರು. ಬಳಿಕ ಇದಕ್ಕೆ ತಿರುಗೇಟು ಎಂಬಂತೆ 'ಪೇಯ್ನ್ ಬ್ಯಾಟ್ ಮಾಡುವಾಗ ಪಂತ್ ಅವರು 'ತಾತ್ಕಾಲಿಕ ನಾಯಕ' ಎಂದು ಹೇಳಿ ಸೇಡು ತೀರಿಸಿಕೊಂಡಿದ್ದರು.

ಇದನ್ನೂ ಓದಿ: (VIDEO): ಹೆಂಡತಿ ಜೊತೆ ಫಿಲ್ಮ್​ಗೆ ಹೋದಾಗ ನನ್ನ ಮಗು ನೋಡ್ಕೊ: ಪಂತ್​ ಕಾಲೆಳೆದ ಆಸೀಸ್ ನಾಯಕ

ಸದ್ಯ ಪಂದ್ಯ ಮುಗಿದ ಬಳಿಕ ಪಂತ್ ಅವರು ನೇರವಾಗಿ ಟಿಮ್ ಪೇಯ್ನ್ ಅವರ ಮನೆಗೆ ತೆರಳಿ ಪತ್ನಿ ಬೊನೀ ಪೇಯ್ನ್ ಹಾಗೂ ಮಕ್ಕಳನ್ನು ಭೇಟಿಮಾಡಿದ್ದಾರೆ. ಇದರ ಜೊತೆಗೆ ಫೋಟೋಕ್ಕೆ ಪೋಸ್ ಕೊಟ್ಟಿದ್ದು ಸಖತ್ ವೈರಲ್ ಆಗುತ್ತಿದೆ.

ಪಂತ್ ಅವರು ಮೈದಾನದಲ್ಲಿ ನಡೆದ ಎಲ್ಲ ವಿಷಯಗಳನ್ನು ಮರೆತು ಪೇಯ್ನ್ ಅವರ ಮನೆಗೆ ತೆರಳಿ ಟಿಮ್ ಪೇಯ್ನ್​​, ಬೊನೀ ಪೇಯ್ನ್ ಹಾಗೂ ಮಕ್ಕಳ ಜೊತೆ ಕಾಲ ಕಳೆದಿರುವುದು ಅಭಿಮಾನಿಗಳಿಗೆ ಖುಷಿ ನೀಡಿದೆ.

(Image: GultiGrinch/ Twitter)

Loading...

  

First published:January 1, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ