• Home
  • »
  • News
  • »
  • trend
  • »
  • ಒಂದು ಮೀನಿಗಾಗಿ 5,600ಕ್ಕೂ ಹೆಚ್ಚು ಬಾರಿ ಸಮುದ್ರದಾಳದಲ್ಲಿ ಹುಡುಕಾಟ ನಡೆಸಿದ್ರು, ಅಂತೂ ಸಿಕ್ತು!

ಒಂದು ಮೀನಿಗಾಗಿ 5,600ಕ್ಕೂ ಹೆಚ್ಚು ಬಾರಿ ಸಮುದ್ರದಾಳದಲ್ಲಿ ಹುಡುಕಾಟ ನಡೆಸಿದ್ರು, ಅಂತೂ ಸಿಕ್ತು!

ಬ್ಯಾರೆಲ್‌ಐ ಮೀನು

ಬ್ಯಾರೆಲ್‌ಐ ಮೀನು

Barreleye Fish: ಇದುವರೆಗೂ ಯಾವ ಪ್ರಾಣಿ ಪಕ್ಷಿ ಯನ್ನು ಹುಡುಕಾಡದಷ್ಟು ಬಾರಿ ಮೀನಿಗಾಗಿ ಹುಡುಕಾಟ ನಡೆಸಲಾಗಿದೆ. ಅಂದರೆ ಬರೋಬ್ಬರಿ 5600 ಹೆಚ್ಚುಬಾರಿ ಆಳ ಸಮುದ್ರಕ್ಕೆ ಡೈವ್ ಮಾಡಿ, ಮೀನಿಗಾಗಿ ಹುಡುಕಾಟ ನಡೆಸಲಾಗಿದೆ.ಇನ್ನು ಮೀನಿಗಾಗಿ ತನ್ನ ಸಿಬ್ಬಂದಿ 5,600ಕ್ಕೂ ಹೆಚ್ಚು ಬಾರಿ ಆಳ ಸಾಗರಕ್ಕೆ ಡೈವ್ ಮಾಡಿ, 27,600+ ಗಂಟೆಗಳ ವಿಡಿಯೋ ಮಾಡಿದರೂ ಅದು ಕಣ್ಣಿಗೆ ಕಂಡಿರುವುದು ಬರೀ 9 ಬಾರಿ ಮಾತ್ರ

ಮುಂದೆ ಓದಿ ...
  • Share this:

    ಪ್ರಕೃತಿ(Nature)ಎಂದರೆ ಪ್ರಶ್ನಾತೀತವಾದ ವಿಸ್ಮಯ. ಸುತ್ತಲೂ ಹಚ್ಚ ಹಸುರಿನ ಕಾನನ,(Forest) ಗಿಡ ಬಳ್ಳಿಯ ಸೆರಗಿನಲ್ಲಿ ಚಿಲಿಪಿಲಿಗುಟ್ಟುವ ಹಕ್ಕಿಗಳು(Birds), ಕಲ್ಲು ಬಂಡೆಗಳ ಮೇಲೆ ದೇಹವನ್ನು ಚಾಚಿ ಗರ್ಜಿಸುವ ಹುಲಿ(Tiger) ಸಿಂಹಗಳು(Lion), ಸೊಂಡಿಲಾಡಿಸುತ್ತಾ ಘೀಳಿಡುವ ಆನೆ (Elephant)ಒಂದು ಕಡೆಯಾದರೆ, ಕೋಗಿಲೆಗಳ ಇಂಪು, ನವಿಲುಗಳ (Peacock,)ನರ್ತನ, ಮತ್ತೂಂದೆಡೆ. ನದಿ(River), ತೊರೆ, ಝರಿಗಳ ಝುಳು ಝುಳು ನಿನಾದ ಮತ್ತೊಂದು ಕಡೆ.. ಇದಕ್ಕೂ ಮೀರಿ ಇರುವ ಪ್ರಾಕೃತಿಕ ಸೊಬಗು ಅಂದರೆ ಅದು ಸಮುದ್ರ(Sea).. ಗುರುತು ಪರಿಚಯವೇ ಇಲ್ಲದ ಅಸಂಖ್ಯಾತ ಪ್ರಾಣಿಗಳು, ನೋಡಿದಷ್ಟು ದೂರಕ್ಕೂ ಕಾಣಸಿಗುವ ನೀರು. ಎಂಥವರ ಎದೆಯನ್ನೂ ಝಲ್ಲೆಂದು ನಡುಗಿಸುವ ಅಲೆಗಳ ಆರ್ಭಟ, ವಿಸ್ಮಯಗಳ ರಾಶಿಯನ್ನೇ ತನ್ನೊಡಲೊಳಗೆ ಇಟ್ಟುಕೊಂಡಿರುವ ಸಮುದ್ರ..ಹೀಗಾಗಿ ಇಂತಹ ಪ್ರಾಕೃತಿಕ ಸೊಬಗಿನಲ್ಲಿ ಅಡಗಿರುವ ಜೀವವೈವಿದ್ಯಗಳ ವೈಶಿಷ್ಟವನ್ನು ತಿಳಿದುಕೊಳ್ಳಲು ಮನುಷ್ಯ ನಿರಂತರವಾಗಿ ಪ್ರಯತ್ನ ಮಾಡುತ್ತಲೇ ಬಂದಿದ್ದಾನೆ.. ಮತ್ತು ಪ್ರಯತ್ನ ಮಾಡುತ್ತಲೇ ಇದ್ದಾನೆ.


    ಅದರಲ್ಲೂ ಸಾಗರದಾಳದಲ್ಲಿ ಇರುವ ಮೀನುಗಳು ಮನುಷ್ಯನಿಗೆ ಒಂದು ಪ್ರಶ್ನೆಯಾಗಿದೆ.. ಚಿತ್ರ ವಿಚಿತ್ರ ಮೀನುಗಳು, ಅವುಗಳ ಆಕಾರ ಅವುಗಳ ಗುಣಲಕ್ಷಣಗಳ ಬಗ್ಗೆ ಅಧ್ಯಯನ ಮಾಡಲು ನಿರಂತರವಾಗಿ ಮನುಷ್ಯ ಇಂದಿಗೂ ಪ್ರಯತ್ನ ಪಡುತ್ತಲೇ ಇದ್ದಾನೆ. ಅದೆಷ್ಟೇ ಆಧುನಿಕ ತಂತ್ರಜ್ಞಾನ ಬಳಸಿ ಇವುಗಳ ಅಧ್ಯಯನಕ್ಕೆ ಮುಂದಾದರೂ ಸಹ ಇನ್ನೂ ಸಮುದ್ರದ ಆಳದಲ್ಲಿರುವ ಜೀವಸಂಕುಲಗಳು ಮನುಷ್ಯನ ಜೊತೆಗೆ ಕಣ್ಣಾಮುಚ್ಚಾಲೆ ಆಡುತ್ತಾ ಇದೆ.. ಈ ರೀತಿ ಕಣ್ಣಾಮುಚ್ಚಾಲೆ ಆಡುತ್ತಿರುವ ಪ್ರಾಣಿಗಳಲ್ಲಿ ಸಮುದ್ರದಾಳದಲ್ಲಿ ಇರುವ ಭಾರಿ ಗಾತ್ರದ ಮೀನು ಕೂಡ ಸೇರಿದೆ..


    ಇದನ್ನೂ ಓದಿ: 13 ವರ್ಷದ ಬಾಲಕಿಯ ಕಾಲ್ಬೆರಳು ತಿಂದ ಪಿರಾನ್ಹಾ ಮೀನು..!


    ವಿಚಿತ್ರ ಮೀನಿಗಾಗಿ ನಡೆಯುತ್ತಲೇ ಇದೆ ಸಂಶೋಧನೆ..


    ಸಮುದ್ರಾಳದಲ್ಲಿ ಕಂಡುಬಂದಿರುವ ವಿಚಿತ್ರ ಮೀನಿಗಾಗಿ ಹಿಂದಿಗೂ ಮನುಷ್ಯ ಸಂಶೋಧನೆ ನಡೆಯುತ್ತಲೇ ಇದ್ದಾನೆ.. ಈ ಮೀನಿನ ಕಣ್ಣುಗಳು ಹಸಿರಾಗಿದ್ದು, ಹಣೆಯಿಂದ ಹೊರಬಂದಂತೆ ಕಾಣುತ್ತಿದ್ದು, ಭಾರಿ ಗಾತ್ರದ ತಲೆಯ ಹೊಂದಿದೆ. ಪೆಸಿಫಿಕ್ ಸಾಗರದ ಸಾವಿರಾರು ಅಡಿ ಆಳದಲ್ಲಿ ಕಂಡು ಬಂದಿರುವ ಈ ಮೀನಿಗೆ ಬ್ಯಾರೆಲ್‌ಐ ಮೀನು ಎಂದು ಸಹ ಹೆಸರಿಡಲಾಗಿದೆ. ಅಲ್ಲದೆ ಈ ಜೀವಿಯು ಇದುವರೆಗೆ ಆಳ ಸಾಗರದಲ್ಲಿ ಒಂಬತ್ತು ಬಾರಿ ಮಾತ್ರವೇ ಕಾಣಿಸಿಕೊಂಡಿದೆ ಎಂದು ಸಂಶೋಧಕರು ತಿಳಿಸಿದ್ದಾರೆ. ಇನ್ನು . ಮೀನಿನ ಕಣ್ಣುಗಳು ಬೆಳಕಿಗೆ ಸೂಕ್ಷ್ಮ ಸಂವೇದನೆ ಹೊಂದಿದ್ದು, ಅವುಗಳು ತಲೆಯ ಮೇಲೆ, ನೇರವಾಗಿ ಕಂಡುಬರುತ್ತವೆ ಎಂದು ಸಂಶೋಧಕರು ತಿಳಿಸುತ್ತಾರೆ.


    ಬ್ಯಾರೆಲ್‌ಐ ಮೀನಿಗಾಗಿ 5,600ಕ್ಕೂ ಹೆಚ್ಚು ಭಾರಿ ಹುಡುಕಾಟ


    ಸಾಮಾನ್ಯವಾಗಿ ಸಮುದ್ರದಲ್ಲಿ ಅಡಗಿರುವ ರಹಸ್ಯಗಳನ್ನು ಪತ್ತೆಹಚ್ಚಲು ದಿನಗಟ್ಟಲೇ ತಿಂಗಳುಗಟ್ಟಲೆ ಗಳ ಕಾಲ ಸಂಶೋಧಕರು ಹುಡುಕುತ್ತಲೇ ಇರುತ್ತಾರೆ.. ಆದರೆ ಯಾವಾಗ ನಾವು ಅಂದುಕೊಂಡಿದ್ದು ಸಿಗುವುದಿಲ್ಲವೋ ಅಲ್ಲಿ ತಮ್ಮ ಸಂಶೋಧನೆಯನ್ನು ಸಾಕಷ್ಟು ಜನರು ನಿಲ್ಲಿಸಿಬಿಡುತ್ತಾರೆ.. ಆದರೆ ಮನುಷ್ಯ ರೊಟ್ಟಿಗೆ ಕಣ್ಣಾಮುಚ್ಚಾಲೆ ಆಡುತ್ತಿರುವ ಬ್ಯಾರೆಲ್‌ಐ ಮೀನಿಗಾಗಿ ಅದೆಷ್ಟು ಬಾರಿ ಹುಡುಕಾಟ ನಡೆದಿದೆ ಎಂದು ನಿಮಗೆ ಗೊತ್ತಾದರೆ ನೀವು ಆಶ್ಚರ್ಯ ಪಡುವುದು ಖಂಡಿತ..



    ಇದನ್ನೂ ಓದಿ: ಹಂಪಿಯಲ್ಲಿ ಮನುಷ್ಯರಂತೆ ಹಲ್ಲುಗಳಿರುವ ಮೀನು ಪತ್ತೆ.. ಏನಿದರ ನಿಗೂಢ ರಹಸ್ಯ?


    ಇದುವರೆಗೂ ಯಾವ ಪ್ರಾಣಿ ಪಕ್ಷಿ ಯನ್ನು ಹುಡುಕಾಡದಷ್ಟು ಬಾರಿ ಮೀನಿಗಾಗಿ ಹುಡುಕಾಟ ನಡೆಸಲಾಗಿದೆ. ಅಂದರೆ ಬರೋಬ್ಬರಿ 5600 ಹೆಚ್ಚುಬಾರಿ ಆಳ ಸಮುದ್ರಕ್ಕೆ ಡೈವ್ ಮಾಡಿ, ಮೀನಿಗಾಗಿ ಹುಡುಕಾಟ ನಡೆಸಲಾಗಿದೆ.ಇನ್ನು ಮೀನಿಗಾಗಿ ತನ್ನ ಸಿಬ್ಬಂದಿ 5,600ಕ್ಕೂ ಹೆಚ್ಚು ಬಾರಿ ಆಳ ಸಾಗರಕ್ಕೆ ಡೈವ್ ಮಾಡಿ, 27,600+ ಗಂಟೆಗಳ ವಿಡಿಯೋ ಮಾಡಿದರೂ ಅದು ಕಣ್ಣಿಗೆ ಕಂಡಿರುವುದು ಬರೀ 9 ಬಾರಿ ಮಾತ್ರ ಎಂದು ಎಂಬಿಎಆರ್‌ಐ ಟ್ವಿಟರ್‌ನಲ್ಲಿ ಹೇಳಿಕೊಂಡು, ವಿಡಿಯೋ ಪೋಸ್ಟ್ ಮಾಡಿದೆ.

    Published by:ranjumbkgowda1 ranjumbkgowda1
    First published: