HOME » NEWS » Trend » OWNER OF BENGAL TIGER SPOTTED IN UNITED STATES NEIGHBOURHOOD ARRESTED BUT BIG CAT REMAINS ON THE LOSE STG SCT

ಅಮೆರಿಕದಲ್ಲಿ ಮಾಲೀಕನ ಮನೆಯಿಂದ ಬಂಗಾಳ ಹುಲಿ ಪರಾರಿ; ಮಾಲೀಕನ ಬಂಧನ

ಹುಲಿಯನ್ನು ಸಾಕುಪ್ರಾಣಿಯಾಗಿ ಇಡುವುದು ಟೆಕ್ಸಾಸ್‌ನಲ್ಲಿ ಕಾನೂನುಬಾಹಿರವಾಗಿದೆ. ಅಲ್ಲದೆ, ವಿಕ್ಟರ್ ಮನೆಯಲ್ಲಿ ಕೋತಿಗಳು ಇವೆ ಎಂದು ನೆರೆಹೊರೆಯವರು ದೂರಿದ್ದು, ಆದರೆ ಕೋತಿಗಳನ್ನು ಸಾಕುವುದು ಕಾನೂನು ಬಾಹಿರವಲ್ಲ ಎಂದು ಪೊಲೀಸರು ವರದಿ ಮಾಡಿದ್ದಾರೆ.

news18-kannada
Updated:May 13, 2021, 12:35 PM IST
ಅಮೆರಿಕದಲ್ಲಿ ಮಾಲೀಕನ ಮನೆಯಿಂದ ಬಂಗಾಳ ಹುಲಿ ಪರಾರಿ; ಮಾಲೀಕನ ಬಂಧನ
ಹುಲಿಯನ್ನು ಸಾಕುಪ್ರಾಣಿಯಾಗಿ ಇಡುವುದು ಟೆಕ್ಸಾಸ್‌ನಲ್ಲಿ ಕಾನೂನುಬಾಹಿರವಾಗಿದೆ. ಅಲ್ಲದೆ, ವಿಕ್ಟರ್ ಮನೆಯಲ್ಲಿ ಕೋತಿಗಳು ಇವೆ ಎಂದು ನೆರೆಹೊರೆಯವರು ದೂರಿದ್ದು, ಆದರೆ ಕೋತಿಗಳನ್ನು ಸಾಕುವುದು ಕಾನೂನು ಬಾಹಿರವಲ್ಲ ಎಂದು ಪೊಲೀಸರು ವರದಿ ಮಾಡಿದ್ದಾರೆ.
  • Share this:
ಅಮೆರಿಕದ ಟೆಕ್ಸಾಸ್‌ನ ಪಶ್ಚಿಮ ಹ್ಯೂಸ್ಟನ್‌ನ ಪ್ರದೇಶದ ನಿವಾಸಿಗಳು ಸೋಮವಾರ ಬಂಗಾಳ ಹುಲಿ ಆರಾಮಾಗಿ ನಾಡಿನಲ್ಲಿ ಓಡಾಡುತ್ತಿರುವುದನ್ನು ನೋಡಿದ ನಂತರ ಆಶ್ಚರ್ಯಚಕಿತರಾದರು. ಹುಲಿಯಂತಹ ಕಾಡು ಪ್ರಾಣಿಗಳನ್ನು ಸಾಕುಪ್ರಾಣಿಗಳಾಗಿ ಇಟ್ಟುಕೊಳ್ಳುವುದಕ್ಕೂ ನೆಟ್ಟಿಗರು ಟೀಕೆ ಮಾಡಿದ್ದು, ಈ ಘಟನೆಯ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್‌ ಆಗಿದ್ದು, ವೈರಲ್‌ ಆಗಿದೆ. ಇನ್ನು, ಈ ಘಟನೆಗೆ ಸಂಬಂಧಪಟ್ಟ ಇತ್ತೀಚಿನ ಬೆಳವಣಿಗೆಯೊಂದರಲ್ಲಿ, ಹೂಸ್ಟನ್ ಪೊಲೀಸರು ಆ ಹುಲಿಯ ಮಾಲೀಕರನ್ನು ಸೆರೆಹಿಡಿದಿರುವುದಾಗಿ ಟ್ವೀಟ್‌ ಮಾಡಿದ್ದಾರೆ. ಆದರೆ, ಹುಲಿ ಎಲ್ಲಿದೆ ಎಂಬ ಬಗ್ಗೆ ಅವರು ಇನ್ನೂ ಮಾಹಿತಿ ನೀಡಿಲ್ಲ.

ಈ ಹುಲಿಯ ಮಾಲೀಕನನ್ನು 26 ವರ್ಷದ ವಿಕ್ಟರ್ ಹ್ಯೂಗೋ ಕ್ಯೂವಾಸ್ ಎಂದು ಗುರುತಿಸಲಾಗಿದ್ದು, ಸೋಮವಾರ ಈತ HPD ಗಸ್ತು ಅಧಿಕಾರಿಗಳಿಂದ ಪರಾರಿಯಾಗಿದ್ದಕ್ಕಾಗಿ ಬಂಧನದಿಂದ ತಪ್ಪಿಸಿಕೊಳ್ಳುವ ಆರೋಪ ಹೊರಿಸಲಾಗಿದೆ.

ಇನ್ನು, ವಿಕ್ಟರ್ ಮೇಲೆ ಈ ಹಿಂದೆಯೇ ಕೊಲೆ ಆರೋಪವಿದೆ. ಫೋರ್ಟ್ ಬೆಂಡ್ ಕೌಂಟಿಯಲ್ಲಿ ನಡೆದ ಕೊಲೆಯ ಆರೋಪವಿದ್ದು, ಜಾಮೀನಿನ ಮೇಲೆ ಹೊರಗಿದ್ದಾನೆ. ಅವರ ಮನೆಯಲ್ಲಿ ಹುಲಿಯನ್ನು ನೆರೆಹೊರೆಯವರು ಗುರುತಿಸಿದ್ದರು ಎಂದು ಪತ್ರಿಕಾಗೋಷ್ಠಿಯಲ್ಲಿ, ಹೂಸ್ಟನ್ ಪೊಲೀಸ್ ಕಮಾಂಡರ್ ರಾನ್ ಬೊರ್ಜಾ ಹೇಳಿದ್ದಾರೆ.

ಹುಲಿಯನ್ನು ಸಾಕುಪ್ರಾಣಿಯಾಗಿ ಇಡುವುದು ಟೆಕ್ಸಾಸ್‌ನಲ್ಲಿ ಕಾನೂನುಬಾಹಿರವಾಗಿದೆ. ಅಲ್ಲದೆ, ವಿಕ್ಟರ್ ಮನೆಯಲ್ಲಿ ಕೋತಿಗಳು ಇವೆ ಎಂದು ನೆರೆಹೊರೆಯವರು ದೂರಿದ್ದು, ಆದರೆ ಕೋತಿಗಳನ್ನು ಸಾಕುವುದು ಕಾನೂನು ಬಾಹಿರವಲ್ಲ ಎಂದು ಪೊಲೀಸರು ವರದಿ ಮಾಡಿದ್ದಾರೆ.ಹುಲಿಯ ಬಗ್ಗೆ ಯಾರಾದರೂ ಮಾಹಿತಿ ಹೊಂದಿದ್ದರೆ, ಅವರು HPD ಮೇಜರ್‌ ಅಫೆಂಡರ್ಸ್‌ 713-308-3100ಗೆ ಸಂಪರ್ಕಿಸಬೇಕು ಎಂದು ಹ್ಯೂಸ್ಟನ್‌ ಪೊಲೀಸ್ ಇಲಾಖೆ ಟ್ವೀಟ್ ಮಾಡಿದೆ. ಹ್ಯೂಸ್ಟನ್‌ನಲ್ಲಿ ಹುಲಿಯನ್ನು ಹೊಂದುವುದು ವರ್ಗ ಸಿ ಅಡಿ ದುಷ್ಕರ್ಮಿಗಳಿಗೆ ಗರಿಷ್ಠ 500 ಡಾಲರ್‌ ದಂಡ ವಿಧಿಸಲಾಗುವುದು ಎಂದು ಬೊರ್ಜಾ ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ್ದಾರೆ. ಅಲ್ಲದೆ, ವಿಕ್ಟರ್ ವಿದೇಶಿ ಪ್ರಾಣಿಗಳನ್ನು ಸಾಕಲು ಪರವಾನಗಿ ಹೊಂದಿದ್ದರೂ ಸಹ, ಟೆಕ್ಸಾಸ್‌ನಲ್ಲಿ ಇದು ಕಾನೂನುಬದ್ಧವಲ್ಲದ ಕಾರಣ ಇದು ಕಾನೂನಿನ ಉಲ್ಲಂಘನೆಯಾಗಿದೆ ಎಂದು ಬೊರ್ಜಾ ಉಲ್ಲೇಖಿಸಿದ್ದಾರೆ.ಹುಲಿಯನ್ನು ಕೊನೆಯದಾಗಿ ಬಿಳಿ ಜೀಪ್‌ನಲ್ಲಿ ಚೆರೋಕಿಯಲ್ಲಿ ಕರೆದೊಯ್ಯಲಾಯಿತು ಎಂದು HPD ಮಾಹಿತಿ ನೀಡಿದೆ. ಇನ್ನು, ಈ ಹುಲಿಯನ್ನು ಹಿಡಿಯಲು ಪ್ರಯತ್ನಿಸುವಾಗ ಅಧಿಕಾರಿಗಳು ಗುಂಡು ಹಾರಿಸುವುದಿಲ್ಲ ಅಥವಾ ಹಾನಿ ಮಾಡುವುದಿಲ್ಲ ಎಂಬ ಬಗ್ಗೆ ನೆಟ್ಟಿಗರು ಆಶಿಸುತ್ತಿದ್ದಾರೆ.

ಇನ್ನೊಂದೆಡೆ, ಮನೆಯ ಮುಂಭಾಗದ ಅಂಗಳದಲ್ಲಿ ಹುಲಿ ಸುತ್ತಾಡುತ್ತಿದ್ದದ್ದನ್ನು ನೆರೆಹೊರೆಯವರು ನೋಡಿದ್ದಾರೆ. ವಸತಿ ಪ್ರದೇಶದಲ್ಲಿ ಈ ರೀತಿ ಹುಲಿ ಓಡಾಡುತ್ತಿದ್ದದ್ದನ್ನು ನೋಡಿ ಹಲವರು ಗಾಬರಿಗೊಂಡಿದ್ದಾರೆ. ಇನ್ನು, ಗೊಂದಲಕ್ಕೊಳಗಾದ ಪ್ರಾಣಿಗೆ ಸ್ಥಳೀಯ ವ್ಯಕ್ತಿಯೊಬ್ಬರು ಗನ್‌ ತೋರಿಸಿದ್ದು, ಹುಲಿ ಅವರ ಬಳಿಯಲ್ಲೇ ನಿಂತಿತ್ತು. ಇದನ್ನು ಸ್ಥಳೀಯರು ವಿಡಿಯೋ ಮಾಡಿ, ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್‌ನಲ್ಲಿ ಅಪ್ಲೋಡ್‌ ಮಾಡಿದ್ದಾರೆ. ಈ ವಿಡಿಯೋವನ್ನು 3.3 ಮಿಲಿಯನ್‌ಗೂ ಅಧಿಕ ಬಾರಿ ವೀಕ್ಷಣೆ ಮಾಡಲಾಗಿದೆ.ಆದರೆ, ಆ ಹುಲಿಯ ಮಾಲೀಕರು ಸಮಯಕ್ಕೆ ಸರಿಯಾಗಿ ಬಂದು ಪರಿಸ್ಥಿತಿಯನ್ನು ಶಾಂತಗೊಳಿಸಿದಂತೆ ಕಾಣುತ್ತದೆ. ಆಗ ಹುಲಿಯನ್ನು ಬಿಳಿ ಜೀಪಿನಲ್ಲಿ ಕರೆದೊಯ್ಯಲಾಯಿತು ಎಂದು ತಿಳಿದುಬಂದಿದೆ.
Published by: Sushma Chakre
First published: May 13, 2021, 12:35 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories