Viral Video: ಸಾಲ ಮಾಡಿ ಇಷ್ಟಪಟ್ಟು ಖರೀದಿಸಿದ Carಗೆ  ಬೆಂಕಿ ಇಟ್ಟ ಮಾಲೀಕ: ಯಾಕೆ ಗೊತ್ತಾ?

ಕಾರ್ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ವಿನಯ್ ಶರ್ಮಾ, ಈಗ ನೀವು ಕಾರ್ ತೆಗೆದುಕೊಂಡು ಹೋಗಬಹುದು ಎಂದು ಹೇಳಿದ್ದಾನೆ. ಕಾರ್ ಗೆ ಬೆಂಕಿಗೆ ತಗಲುತ್ತಿದ್ದಂತೆ ಅಗ್ನಿಶಾಮಕದಳ ಮತ್ತು ಪೊಲೀಸರಿಗೆ ಮಾಹಿತಿ ನೀಡಿದರು ಯಾವುದೇ ಪ್ರಯೋಜನವಾಗಿಲ್ಲ.

ಕಾರ್ ಗೆ ಬೆಂಕಿ

ಕಾರ್ ಗೆ ಬೆಂಕಿ

  • Share this:
ಕಾರ್ (Car) ಅಂದ್ರೆ ಯಾರಿಗೆ ಇಷ್ವವಿಲ್ಲ ಹೇಳಿ. ಮಧ್ಯಮ ವರ್ಗದ ಜನರಿಗೆ (Middle Class People) ಅದು ಸುಂದರ ಕನಸು, ಪ್ರತಿ ತಿಂಗಳು ಹಣ ಸೇರಿಸಿ ಸ್ವಂತಕ್ಕೆ ಕಾರ್ ಖರೀದಿ ಮಾಡಬೇಕು ಅನ್ನೋದು ಅವರ ಬಹುದಿನಗಳ ಕನಸು (Dream) ಆಗಿರುತ್ತದೆ. ಕೆಲವೊಮ್ಮೆ ಹಣ ಇರದಿದ್ರೂ ಸಾಲ (Loan) ಮಾಡಿಯಾದ್ರೂ ಕಾರ್ ಖರೀದಿಸಿ , ಪ್ರತಿ ತಿಂಗಳು ಇಎಂಐ (EMI - Equated Monthly Instalment) ತುಂಬಲು ಕಷ್ಟಪಡುತ್ತಾರೆ. ಇನ್ನೂ ಕೆಲವರಿಗೆ ಕಾರ್ ಅಂದ್ರೆ ಜೀವನ. ಅದರ ಬಾಡಿಗೆ (Rent) ಹಣದಿಂದಲೇ ಜೀವನ ನಡೆಸುತ್ತಾರೆ. ಶ್ರೀಮಂತರಿಗೆ ಕಾರ್ ಕಲೆಕ್ಷನ್ (Car Collection) ಮಾಡಿಕೊಳ್ಳೋದು ಹವ್ಯಾಸ. ಆದ್ರೆ ಇಲ್ಲೊಬ್ಬ ಯುವಕ ಪ್ರೀತಿಸಿ, ಸಾಲ ಮಾಡಿಕೊಂಡು ಖರೀದಿಸಿದ ಕಾರ್ ಗೆ ಬೆಂಕಿ (Fire)  ಹಚ್ಚಿದ್ದಾನೆ. ಸದ್ಯ ಈ ವಿಡಿಯೋ ಸ್ಥಳೀಯ ಮಟ್ಟದಲ್ಲಿ ವೈರಲ್ (Viral Video) ಆಗಿದೆ. ಯುವಕ (Youth) ಕಾರ್ ಗೆ ಬೆಂಕಿ ಹಚ್ಚಿದ್ದು ಯಾಕೆ ಅನ್ನೋದರ ಮಾಹಿತಿ ಇಲ್ಲಿದೆ.

ಮಧ್ಯ ಪ್ರದೇಶದ ಗ್ವಾಲಿಯರ್ ನಗರದ ಗೋಲಾ ದೇವಸ್ಥಾನ ಮುಂಭಾಗದ ಭಿಂಡ್ ರಸ್ತೆಯಲ್ಲಿ ನಡೆದಿದೆ. ವಿನಯ್ ಶರ್ಮಾ ಕಾರಿಗೆ ಬೆಂಕಿ ಹಚ್ಚಿದ ಮಾಲೀಕ. ವಿನಿಯ್ ಶರ್ಮಾ ಖಾಸಗಿ ಫೈನಾನ್ಸ್ ಸಾಲ ಮಾಡಿ ಕಾರ್ ಖರೀದಿಸಿದ್ದನು, ಆದ್ರೆ ವಿನಯ್ ಶರ್ಮಾಗೆ  ಸಾಲದ ಕಂತುಗಳನ್ನು ಪಾವತಿಸಲು ಆಗಿರಲಿಲ್ಲ.ಈ ಹಿನ್ನೆಲೆ ಕಾರ್ ಜಪ್ತಿ ಮಾಡಲು ರಿಕವರಿ ಟೀ ಬಂದಿತ್ತು.

ನೋಡ ನೋಡುತ್ತಿದ್ದಂತೆ ಬೆಂಕಿ ಹಚ್ಚಿದ

ರಿಕವರಿ ಟೀಂ ಬರುತ್ತಿದ್ದಂತೆ ಪೆಟ್ರೋಲ್ ತುಂಬಿದ ಬಾಟೆಲ್ ತಂದ ವಿನಯ್ ಶರ್ಮಾ ಕಾರ್ ಮೇಲೆ ಸುರಿದಿದ್ದಾನೆ. ನೋಡ ನೋಡುತ್ತಿದ್ದಂತೆ ಕಾರ್ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ವಿನಯ್ ಶರ್ಮಾ ನಡೆ ಕಂಡ ರಿಕವರಿ ಟೀಂ ಮತ್ತು ಸಾರ್ವಜನಿಕರು ಶಾಕ್ ಆಗಿದ್ದರು. ಕೂಡಲೇ ಅಗ್ನಿಶಾಮಕದಳಕ್ಕೆ ಫೋನ್ ಮಾಡಿ ವಿಷಯ ತಿಳಿಸಲಾಗಿದೆ. ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ವೇಳೆಗಾಗಲೇ ಕಾರ್ ಸಂಪೂರ್ಣ ಬೆಂಕಿಗಾಹುತಿ ಆಗಿತ್ತು.

ಇದನ್ನೂ ಓದಿ:  Office Hours: ಕೆಲಸದ ಅವಧಿ ನಂತರ ಉದ್ಯೋಗಿಗಳಿಗೆ ಮೆಸೇಜ್ ಕಳಿಸೋದು ಸರಿ ಅಲ್ಲ; ಹೀಗೊಂದು ಹೊಸ ಕಾನೂನು

EMI ತುಂಬದ ವಿನಯ್ ಶರ್ಮಾ

ಕಾರ್ ಜಪ್ತಿ ಮಾಡಲು ಬಂದಾಗ ರಿಕವರಿ ಟೀಂ ಮತ್ತು ವಿನಯ್ ಶರ್ಮಾ ನಡುವೆ ಗಲಾಟೆ ನಡೆದಿದೆ. ಜನರು ಸಹ ಈ ಗಲಾಟೆ ನೋಡಿದ್ದಾರೆ. ಕೆಲವರು ಈ ಎಲ್ಲ ದೃಶ್ಯಗಳನ್ನು ಮೊಬೈಲ್ ನಲ್ಲಿ ಸೆರೆ ಹಿಡಿದುಕೊಂಡಿದ್ದಾರೆ. ಕಾರ್ ಮಾಲೀಕ ವಿನಯ್ ಶರ್ಮಾ ರಿಕವರಿ ಟೀಂ  ಮೇಲೆ ಕೋಪಗೊಂಡು ಜೋರು ಧ್ವನಿಯಲ್ಲಿ ಜಗಳ ಮಾಡುತ್ತಿದ್ದನು. ಅಧಿಕಾರಿಗಳು ಆತನಿಗೆ ಪರಿಸ್ಥಿತಿಯನ್ನು ತಿಳಿಹೇಳುವ ಪ್ರಯತ್ನ ಮಾಡುತ್ತಿದ್ದರು ಎಂದು ಸಾರ್ವಜನಿಕರು ಹೇಳಿದ್ದಾರೆ.



ಕಾರ್ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ವಿನಯ್ ಶರ್ಮಾ, ಈಗ ನೀವು ಕಾರ್ ತೆಗೆದುಕೊಂಡು ಹೋಗಬಹುದು ಎಂದು ಹೇಳಿದ್ದಾನೆ. ಕಾರ್ ಗೆ ಬೆಂಕಿಗೆ ತಗಲುತ್ತಿದ್ದಂತೆ ಅಗ್ನಿಶಾಮಕದಳ ಮತ್ತು ಪೊಲೀಸರಿಗೆ ಮಾಹಿತಿ ನೀಡಿದರು ಯಾವುದೇ ಪ್ರಯೋಜನವಾಗಿಲ್ಲ.

ಪರಾರಿಯಾದ ಕಾರ್ ಮಾಲೀಕ ವಿನಯ್ ಶರ್ಮಾ

ಸದ್ಯ ವಿನಯ್ ಶರ್ಮಾ ತಾನೇ ಕಾರಿಗೆ ಬೆಂಕಿ ಹಚ್ಚಿರುವ ವಿಡಿಯೋ ಪೊಲೀಸರಿಗೂ ಸಹ ಲಭ್ಯವಾಗಿವೆ. ಈ ಸಂಬಂಧ ಗ್ವಾಲಿಯರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಹ ದಾಖಲಾಗಿದೆ. ಕಾರ್ ಗೆ ಬೆಂಕಿ ಹಚ್ಚಿದ ಬಳಿಕ ವಿನಯ್ ಶರ್ಮಾ ನಾಪತ್ತೆಯಾಗಿದ್ದಾನೆ.

ಇದನ್ನೂ ಓದಿ:  Viral News: 6 ಯುವತಿಯರ ಜೊತೆ ಯುವಕನ ಡೇಟಿಂಗ್: ವಿಷಯ ತಿಳಿದ ಮೂರು ಹುಡುಗಿಯರು ಹೊರಟ್ರು ಟ್ರಿಪ್

ಬೆಂಗಳೂರಿನಲ್ಲಿ ಕಾರ್ ಗೆ ಬೆಂಕಿ

ಬೆಂಗಳೂರಿನ ಮಾಗಡಿ ರಸ್ತೆಯ ಬಳಿ ಹೋಗುತ್ತಿದ್ದ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದರಿಂದ ಚಾಲಕ ಕಾರನ್ನು ನಿಲ್ಲಿಸಿ ಕೆಳಗೆ ಇಳಿದಿದ್ದ. ಈ ವೇಳೆ ನೋಡನೋಡುತ್ತಿದ್ದಂತೆ ನಡುರಸ್ತೆಯಲ್ಲಿ ಕಾರು ಹೊತ್ತಿ ಉರಿದಿದೆ.
Published by:Mahmadrafik K
First published: