ಬ್ರಿಟನ್ (Britain) ರಾಜಮನೆತನಕ್ಕೆ ಅದ್ಯಾಕೋ ಮೊಟ್ಟೆ ಪ್ರತಿಭಟನೆಯ (Protest) ಸಂಕಷ್ಟ ಎದುರಾದಂತೆ ಕಾಣುತ್ತಿದೆ. ದಿವಂಗತ ರಾಣಿ ಎಲಿಜಬೆತ್ II (Queen Elizabeth II) ಮೇಲೂ ಹಿಂದೆ ಕೆಲವು ಬಾರಿ ಮೊಟ್ಟೆಯನ್ನು ಎಸೆದು ಜನ ವಿರೋಧ ವ್ಯಕ್ತಪಡಿಸಿದ್ದರು. ಈಗ ಕಿಂಗ್ ಚಾರ್ಲ್ಸ್ IIIಗೂ ಈ ಕಷ್ಟ (Problem) ಎದುರಾಗಿದೆ. ಯಾಕೆ ಮೊಟ್ಟೆ ಪ್ರತಿಭಟನೆ (Egg Protest) ಮಾಡುತ್ತಿದ್ದಾರೆ. ಇದರ ಸಂರ್ಪೂಣ ವಿಷಯವನ್ನು ತಿಳಿಯೋಣ ಬನ್ನಿ.
ಕಿಂಗ್ ಚಾರ್ಲ್ಸ್ III ಮೇಲೆ ಮತ್ತೆ ಮೊಟ್ಟೆ ದಾಳಿ
ಕಳೆದ ತಿಂಗಳು ಕಿಂಗ್ ಚಾರ್ಲ್ಸ್ III ಮೇಲೆ ವಿದ್ಯಾರ್ಥಿಯೊಬ್ಬ ನಾಲ್ಕು ಮೊಟ್ಟೆಗಳನ್ನು ಎಸೆದಿದ್ದು, ಆದಾಗಿ ತಿಂಗಳು ಕಳೆಯುವ ಮುನ್ನ ಮತ್ತೆ ಕಿಂಗ್ ಚಾರ್ಲ್ಸ್ III ಮೇಲೆ ಮೊಟ್ಟೆ ಎಸೆಯಲಾಗಿದೆ.
ಲುಟನ್ನಲ್ಲಿ ಕಿಂಗ್ ಚಾರ್ಲ್ಸ್ III ಮೇಲೆ ಮೊಟ್ಟೆ ಎಸೆತ, ವ್ಯಕ್ತಿಯ ಬಂಧನ
ಯುನೈಟೆಡ್ ಕಿಂಗ್ಡಮ್ನ ಲುಟನ್ನಲ್ಲಿ ಕಿಂಗ್ ಚಾರ್ಲ್ಸ್ III ಮೇಲೆ ಮೊಟ್ಟೆ ಎಸೆಯಲಾಗಿದ್ದು, ಆರೋಪಿಯನ್ನು ಪೊಲೀಸರು ತಕ್ಷಣ ಬಂಧಿಸಿದ್ದಾರೆ. ಸೇಂಟ್ ಜಾರ್ಜ್ ಸ್ಕ್ವೇರ್ನಲ್ಲಿ ಬಂಧಿಸಿದ ನಂತರ ಶಂಕಿತನನ್ನು ವಿಚಾರಣೆಗಾಗಿ ಕಸ್ಟಡಿಯಲ್ಲಿ ಇರಿಸಲಾಗಿದೆ ಎಂದು ಬೆಡ್ಫೋರ್ಡ್ಶೈರ್ ಪೊಲೀಸರು ತಿಳಿಸಿದ್ದಾರೆ. ಮಂಗಳವಾರ ಕಿಂಗ್ ಚಾರ್ಲ್ಸ್ ಲುಟನ್ನಲ್ಲಿರುವಾಗ ಈ ಘಟನೆ ನಡೆದಿದೆ ಎಂದು ದಿ ಗಾರ್ಡಿಯನ್ ವರದಿ ಮಾಡಿದೆ.
ಗುರುದ್ವಾರಕ್ಕೆ ಕಿಂಗ್ ಚಾರ್ಲ್ಸ್ III ಭೇಟಿ
ಹೊಸ ಕೇಬಲ್-ಡ್ರಾ ಡಾರ್ಟ್ ಮಾಸ್ ಪ್ಯಾಸೆಂಜರ್ ಟ್ರಾನ್ಸಿಟ್ ಸಿಸ್ಟಮ್ ನಲ್ಲಿ ಸಂಚರಿಸುವ ಸಲುವಾಗಿ ಕಿಂಗ್ ಚಾರ್ಲ್ಸ್ III ಲುಟ್ಗೆ ಆಗಮಿಸಿದ್ದರು. ಈ ವೇಳೆ ವ್ಯಕ್ತಿಯೊಬ್ಬ ರಾಜನ ಮೇಲೆ ಮೊಟ್ಟೆ ಎಸೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನೂ ಇದೇ ವೇಳೆ ಬೆಡ್ಫೋರ್ಡ್ಶೈರ್ ಪಟ್ಟಣಕ್ಕೆ ಭೇಟಿ ನೀಡಿದ ರಾಜ ಗುರುದ್ವಾರದ ಅಧಿಕೃತ ಉದ್ಘಾಟನೆಯ ಸ್ಮರಣಾರ್ಥ ಫಲಕವನ್ನು ಅನಾವರಣಗೊಳಿಸಲು ಗುರುನಾನಕ್ ಗುರುದ್ವಾರ ಮತ್ತು ಟೌನ್ ಹಾಲ್ಗೂ ಭೇಟಿ ನೀಡಿದರು.
ಭೇಟಿ ವೇಳೆ ರಾಜನು ಸಿಖದ ಧರ್ಮದ ನಿಯಮಗಳನ್ನು ಅನುಸರಿಸಿದರು, ಶೂ ತೆಗೆದು ತಲೆಗೆ ಸ್ಕಾರ್ಫ್ ಧರಿಸಿದರು. ನಂತರ ಸಿಖ್ಖರ ಪವಿತ್ರ ಗ್ರಂಥವಾದ ಗುರು ಗ್ರಂಥ ಸಾಹಿಬ್ಗೆ ನಮಸ್ಕರಿಸಿ ನೆಲದ ಮೇಲೆ ಕುಳಿತುಕೊಂಡರು.
ಕಳೆದ ತಿಂಗಳು ಕಿಂಗ್ ಚಾರ್ಲ್ಸ್ III ದಂಪತಿ ಮೇಲೆ ಮೊಟ್ಟೆ ಎಸೆತ
ಕಳೆದ ತಿಂಗಳು ಕೂಡ ಕಿಂಗ್ ಚಾರ್ಲ್ಸ್ III ದಂಪತಿ ಮೇಲೆ ಮೊಟ್ಟೆ ಎಸೆಯಲಾಗಿತ್ತು. ರಾಣಿ 2ನೇ ಎಲಿಜಬೆತ್ ಪ್ರತಿಮೆ ಅನಾವರಣ ಸೇರಿದಂತೆ ಅನೇಕ ಸಾಂಪ್ರದಾಯಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ಇಂಗ್ಲೆಂಡ್ನ ಯೋರ್ಕ್ ನಗರಕ್ಕೆ ದಂಪತಿ ಭೇಟಿ ನೀಡಿದ್ದರು.
ರಾಜ ದಂಪತಿಗಳನ್ನು ನೋಡಲು ಸಾಕಷ್ಟು ಮಂದಿ ಸಹ ನೆರೆದಿದ್ದರು. ಚಾರ್ಲ್ಸ್ ದಂಪತಿಯನ್ನು ಸ್ವಾಗತಿಸಲು ರಾಜಮನೆತನದ ಮಿಕ್ಲೆಗೇಟ್ ಬಾರ್ ಬಳಿ ಜನರು ಜಮಾಯಿಸಿದ್ದರು.
ಹೀಗಾಗಿ ಅಲ್ಲಿ ಬಿಗಿ ಪೊಲೀಸ್ ಭದ್ರತೆಯನ್ನು ಸಹ ಕಲ್ಪಿಸಲಾಗಿತ್ತು. ಆದಾಗ್ಯೂ ಕಿಂಗ್ ಚಾರ್ಲ್ಸ್ ಮತ್ತು ಕ್ಯಾಮಿಲ್ಲಾ ಮೇಲೆ ವ್ಯಕ್ತಿಯೊಬ್ಬ ನಾಲ್ಕು ಮೊಟ್ಟೆ ಎಸೆದಿದ್ದನು. ಆದರೆ ಅದೃಷ್ಟವಶಾತ್ ಚಾರ್ಲ್ಸ್ ದಂಪತಿ ಮೇಲೆ ಮೊಟ್ಟೆ ಬಿದ್ದಿರಲಿಲ್ಲ.
ಈ ವೇಳೆ ಬಂಧನಕ್ಕೊಳಗಾದ ವ್ಯಕ್ತಿ, 'ಈ ದೇಶವನ್ನು ಗುಲಾಮರ ರಕ್ತದಿಂದ ನಿರ್ಮಿಸಲಾಗಿದೆ' ಎಂದು ಘೋಷಣೆ ಕೂಗಿದ್ದರು.
ಇದನ್ನೂ ಓದಿ: Pyramid: ವಿಶ್ವದ ಅತಿ ದೊಡ್ಡ ಪಿರಮಿಡ್ ಮರೆಯಾಗುತ್ತಿದೆ ಅಂತೆ, ಯಾವ ಪಿರಮಿಡ್ ಅಂತ ನೀವು ತಿಳಿದುಕೊಳ್ಳಿ
ಈ ಹಿಂದೆಯೂ ರಾಜಮನೆತನದವರ ಮೇಲೆ ಮೊಟ್ಟೆ ಎಸೆತ
ಕಿಂಗ್ ಚಾರ್ಲ್ಸ್ III ಮುನ್ನ ಈ ಹಿಂದೆಯೂ ರಾಜಮನೆತನದ ಮೇಲೆ ಮೊಟ್ಟೆ ಎಸೆದು ಆಕ್ರೋಶ ವ್ಯಕ್ತಪಡಿಸಲಾಗಿದೆ. 1995 ರಲ್ಲಿ, ಮಧ್ಯ ಡಬ್ಲಿನ್ನಲ್ಲಿ ವಾಕ್ಬೌಟ್ನಲ್ಲಿದ್ದಾಗ ಬ್ರಿಟಿಷ್ ವಿರೋಧಿ ಪ್ರತಿಭಟನಾಕಾರರು ರಾಜನ ಮೇಲೆ ಮೊಟ್ಟೆಗಳನ್ನು ಎಸೆದಿದ್ದರು, ನಂತರ 2002ರಲ್ಲಿ, ರಾಣಿ ಎಲಿಜಬೆತ್ II ನಾಟಿಂಗ್ಹ್ಯಾಮ್ಗೆ ಭೇಟಿ ನೀಡಿದಾಗ, ಆಕೆಯ ರಾಜಮನೆತನದ ಕಾರಿನ ಮೇಲೆ ಮೊಟ್ಟೆಗಳನ್ನು ಎಸೆಯಲಾಗಿತ್ತು.
ಕಿಂಗ್ ಚಾರ್ಲ್ಸ್ III ಮೇಲೆ ಇದು ಎರಡನೇ ಬಾರಿಯಾಗಿದ್ದು, ಇತ್ತೀಚಿನ ದಿನಗಳಲ್ಲಿ ಬ್ರಿಟನ್ನಲ್ಲಿರುವ ರಾಜಪ್ರಭುತ್ವದ ವಿರುದ್ದ ನಾಗರಿಕರು ತಮ್ಮ ಅಸಮಾಧಾನವನ್ನು ಹೊರಹಾಕುತ್ತಿದ್ದಂತೆ ಕಾಣುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ