Viral Video: ಬೈಕ್​ ಕಂಟ್ರೋಲ್​ ಸಿಕ್ಲಿಲ್ಲ ಅಂತ ಅಂಗಡಿಯೊಳಗೇ ನುಗ್ಗಿಸಿ ಬಿಟ್ಟ, ವಿಡಿಯೋ ನೋಡಿ!

Viral Video : ಏನಾಗುತ್ತಿದೆ ಎಂದು ತಿಳಿದುಕೊಳ್ಳುವಷ್ಟರಲ್ಲಿ ಬೈಕ್​ ಬಂದು ಎಗರಿ ಬಿದ್ದಿದೆ. ಅತ್ತ ಬೈಕ್​ ಸವಾರ ಕೂಡ ಹಾರಿ ಕೌಂಟರ್​ನತ್ತ ಬಿದ್ದಿದ್ದಾನೆ. ಈ ಎಲ್ಲ ಸಂಪೂರ್ಣ ದೃಶ್ಯ ಸೀರೆ ಅಂಗಡಿಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ

ಅಂಗಡಿಯೊಳಗೆ ನುಗ್ಗಿದ ಬೈಕ್​

ಅಂಗಡಿಯೊಳಗೆ ನುಗ್ಗಿದ ಬೈಕ್​

  • Share this:
ವಾಹನ ಚಲಾಯಿ(Driving)ಸುವಾಗ ಎಷ್ಟೇ ಎಚ್ಚರದಿಂದ  ಇದ್ದರೂ ಕೆಲವೊಮ್ಮೆ ಯಡವಟ್ಟುಗಳು ಆಗುತ್ತವೆ. ಅದನ್ನು ಬ್ಯಾಡ್​ ಟೈಂ(Bad Time) ಅಂದುಕೊಳ್ಳಬಹುದು. ಕೆಲವೊಮ್ಮೆ ಮತ್ತೊಬ್ಬರ ತಪ್ಪಿನಿಂದ ಮತ್ಯಾರಿಗೋ ಶಿಕ್ಷೆ ಎಂಬಂತೆ ಆಗುತ್ತೆ. ಕಣ್ಣು ಮುಚ್ಚಿ ತೆಗೆಯುವಷ್ಟರಲ್ಲಿ ಅನಾಹುತಗಳು ನಡೆದುಹೋಗುತ್ತೆ. ಇದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ. ಕೆಲವೊಂದು ಘಟನೆಗಳನು ತುಂಬಾ ಫನ್ನಿ ಫೀಲ್(Funny Feel)​ ಕೊಟ್ಟರು, ಅದರ ತೀವ್ರತೆ ಹೆಚ್ಚಿರುತ್ತೆ. ಕೆಲವೊಂದು ವೈರಲ್​ ವಿಡಿಯೋ(Viral Video)ಗಳನ್ನು ನೋಡಿದಾಗ, ನಿಜಕ್ಕೂ ನಗು(Laugh) ಬರುತ್ತೆ. ಇದೆಲ್ಲಾ ಸಾಧ್ಯನಾ? ಹೀಗೆಲ್ಲಾ ನಿಜಕ್ಕೂ ಆಗುತ್ತಾ? ಅನ್ನುವ ಪ್ರಶ್ನೆ ನಿಮ್ಮಲ್ಲಿ ಹುಟ್ಟುತ್ತೆ.  ಪ್ರತಿದಿನ ಸಾಮಾಜಿಕ ಜಾಲತಾಣದಲ್ಲಿ ಹಲವು ವಿಡಿಯೋಗಳು ವೈರಲ್​ ಆಗುತ್ತಲೇ ಇರುತ್ತವೆ. ಕೆಲವೊಂದು ವಿಡಿಯೋಗಳನ್ನು ನೋಡಿದಾಗ ನಗಬೇಕೋ? ಅಳಬೇಕೋ? ಒಂದು ತಿಳಿಯುವುದಿಲ್ಲ ಅಂಥದ್ದೇ ಒಂದು ಈಗ  ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗುತ್ತಿದೆ. ಆ ವಿಡಿಯೋವನ್ನು ನೀವು ನೋಡಿದರೆ ನಿಮಗೂ ಅಳಬೇಕೋ? ನಗಬೇಕೋ? ಅನ್ನುವ ಗೊಂದಲ ಮೂಡುತ್ತೆ. 

ಅಂಗಡಿ ಒಳಗೆ  ಬೈಕ್ ನುಗ್ಗಿಸಿದ ಭೂಪ

ವೈರಲ್​ ಆಗಿರುವ ವಿಡಿಯೋದಲ್ಲಿ ಬೈಕ್​ ಸವಾರನೊಬ್ಬ ಸೀರೆ ಅಂಗಡಿಗೆ ಏಕಾಏಕಿ ತನ್ನ ಬೈಕ್​ ನುಗ್ಗಿಸಿದ್ದಾನೆ. ಗಾಳಿಯಲ್ಲಿ ಬೈಕ್​ ತೇಲಿ ಬಂದು ಅಂಗಡಿಯೊಳಗೆ ಬೀಳುತ್ತೆ. ಅಂಗಡಿಯಲ್ಲಿ ತಮ್ಮ ಪಾಡಿಗೆ ಕೂತಿದ್ದವರಿಗೆ ಒಂದು ಕ್ಷಣ ಭಯಗೊಂಡಿದ್ದಾರೆ. ಏನಾಗುತ್ತಿದೆ ಎಂದು ತಿಳಿದುಕೊಳ್ಳುವಷ್ಟರಲ್ಲಿ ಬೈಕ್​ ಬಂದು ಎಗರಿ ಬಿದ್ದಿದೆ. ಅತ್ತ ಬೈಕ್​ ಸವಾರ ಕೂಡ ಹಾರಿ ಕೌಂಟರ್​ನತ್ತ ಬಿದ್ದಿದ್ದಾನೆ. ಈ ಎಲ್ಲ ಸಂಪೂರ್ಣ ದೃಶ್ಯ ಸೀರೆ ಅಂಗಡಿಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ವಿಡಿಯೋ ಇದಿಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್​ ಆಗುತ್ತಿದೆ. ಸೀರೆ ತೆಗೆದುಕೊಳ್ಳಲು ಅಂಗಡಿಗೆ ಬಂದಿದ್ದವರು ಬೈಕ್​ ಸವಾರನಿಗೆ ಬೈಯುತ್ತಾ ಹೊರಬಂದಿದ್ದಾರೆ.


ಇದನ್ನು ಓದಿ : ಬಾತ್ರೂಂನಲ್ಲಿ ಬೆತ್ತಲಾಗಿ ಸಿಕ್ಕಿಕೊಂಡ ವ್ಯಕ್ತಿ, ಕಾಪಾಡೋಕೆ ಅಗ್ನಿಶಾಮಕ ದಳದವರೇ ಬರ್ಬೇಕಾಯ್ತು..!

ಸೀರೆ ಅಂಗಡಿಯಲ್ಲಿದ್ದ ಆಂಟಿ ಜಸ್ಟ್​​ ಮಿಸ್​​!

ಬೈಕ್​ ಏಕಾಏಕಿ ಅಂಗಡಿ ನುಗ್ಗಿದ್ದಕ್ಕೆ ಅಲ್ಲಿದ್ದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೈಕ್​ ನುಗ್ಗುವ ಮುನ್ನ ಅಂಡಿಯೊಳಗೆ ಇಬ್ಬರು ಮಹಿಳೆಯರು ಸೀರೆ ತೆಗೆದುಕೊಳ್ಳಲು ಬಂದಿದ್ದರು. ಬೈಕ್​ ಅಂಗಡಿಯೊಳಗೆ ನುಗ್ಗುವ ಒಂದು ಕ್ಷಣ ಹಿಂದೆ ನೋಡಿದ್ದಕ್ಕೆ ಆಂಟಿ ಬಚಾವಾಗಿದ್ದಾರೆ. ಚೇರ್​ ಮೇಲೆ ಕೂತು ಸ್ಯಾರಿ ಸೆಲೆಕ್ಟ್​ ಮಾಡುವಲ್ಲಿ ಇಬ್ಬರು ಮಹಿಳೆಯರು ನಿರತರಾಗಿದ್ದರು. ಜೋರಾಗಿ ಕೂಗುವ ಶಬ್ಧ ಕೇಳಿಸಿದ್ದಕ್ಕೆ, ಹಿಂದೆ ತಿರುಗಿ  ನೋಡಿದ್ದಾರೆ. ಕೂಡಲೇ ಆ ಚೇರ್​ನಿಂದ ಎದ್ದು ಪಕ್ಕಕ್ಕೆ ಹೋಗಿದ್ದಾರೆ. ಚೇರ್​ ಮೇಲೆ ಕೂತಿದ್ದರೆ, ಮಹಿಳೆಗೆ ಗಾಯವಾಗುವ ಸಾಧ್ಯತೆ ಹೆಚ್ಚಿತ್ತು.

ಬೈಕ್​ ವಶಕ್ಕೆ ಪಡೆದ ಪೊಲೀಸರು

ತೆಲಂಗಾಣದ ಖಮ್ಮಂ ಜಿಲ್ಲೆಯ ರಾವಿಚೆಟ್ಟು ಬಜಾರ್‌ನಲ್ಲಿ ಈ ಘಟನೆ ಸಂಭವಿಸಿದ್ದು, ಕ್ಲಿಪ್‌ನಲ್ಲಿರುವ ದ್ವಿಚಕ್ರ ವಾಹನವು ಬಜಾಜ್ ಪಲ್ಸರ್ ಏಕಾಏಕಿ ಸೀರೆ ಅಂಗಡಿಯೊಳಗೆ ನುಗ್ಗಿದೆ.  ಘಟನೆ ಕುರಿತು ಪೊಲೀಸರು ವಾಹನವನ್ನು ವಶಪಡಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಬ್ರೇಕ್ ವಿಫಲವಾದ ನಂತರ ವಾಹನದ ನಿಯಂತ್ರಣ ತಪ್ಪಿದೆ ಎಂದು ಬೈಕ್ ಸವಾರ ಹೇಳಿದ್ದಾರೆ. ನಾನು ರಸ್ತೆಯಲ್ಲಿ ಹೋಗುತ್ತಿದೆ. ನನ್ನ ಗಾಡಿಗೆ ಅಡ್ಡಬಂದಿದ್ದನ್ನು ತಪ್ಪಿಸಲು ಹೋಗಿ ಕಂಟ್ರೋಲ್​ ತಪ್ಪಿತು ಅಂತ ಪೊಲೀಸರ ಮುಂದೆ ಬೈಕ ಸವಾರ ಹೇಳಿದ್ದಾನೆ.

ಇದನ್ನು ಓದಿ : ಇನ್ಮೇಲೆ ಮದುವೆ ಪಾರ್ಟಿಯಲ್ಲಿ ಕೇಕ್ ಕತ್ತರಿಸುವಂತಿಲ್ಲ, ಮದುಮಗ ಗಡ್ಡ ಬಿಡುವಂತಿಲ್ಲ!

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್​

ಈ ವಿಡಿಯೋ ವೈರಲ್​ ಆಗುತ್ತಿದ್ದಂತೆ ನೆಟ್ಟಿಗರು ಬೈಕ್​ ಸವಾರನ ಕಾಲೆಳೆದಿದ್ದಾರೆ. ನೀವು ಸೂಪರ್​ ಮ್ಯಾನ್​, ಸ್ಫೈಡರ್​ ಮ್ಯಾನ್​ ನೋಡಿದ್ದೀರಾ. ಆದರೆ ಈತ ಸೂಪರ್​ ಬೈಕ್​ಮ್ಯಾನ್​ ಅಂತ ಕಮೆಂಟ್​ ಮಾಡುತ್ತಿದ್ದಾರೆ. ಮತ್ತೆ ಕೆಲವರು ಟೈಂ ಬ್ಯಾಡ್​ ಆದರೆ ಹೀಗೆ ಆಗುತ್ತೆ. ಇದನ್ನು ತಡೆಯಲು ಸಾಧ್ಯವಿಲ್ಲ ಎಂದಿದ್ದಾರೆ.
Published by:Vasudeva M
First published: