ಉಚಿತ ಕೊರೋನಾ ಟೆಸ್ಟ್ ಮಾಡ್ತೀವಿ ಅನ್ನೋ ಮೇಲ್ ಬಂದಿದೆಯೇ?; ಓಪನ್ ಮಾಡಿದ್ರೆ ತೊಂದರೆ ಖಚಿತ

ಉಚಿತ ಕೊರೋನಾ ಟೆಸ್ಟ್​ ಮಾಡಿಸಿಕೊಡ್ತೀವಿ ಎಂದು ಅನೇಕ ಮೇಲ್​ಗಳು ಬರುತ್ತಿವೆಯಂತೆ. ಒಂದೊಮ್ಮೆ ಇದನ್ನು ಓಪನ್​ ಮಾಡಿದರೆ, ಅದರಿಂದ ಸಮಸ್ಯೆ ಕಟ್ಟಿಟ್ಟಬುತ್ತಿ ಎನ್ನುತ್ತಾರೆ ವೈದ್ಯರು.

news18-kannada
Updated:June 23, 2020, 1:34 PM IST
ಉಚಿತ ಕೊರೋನಾ ಟೆಸ್ಟ್ ಮಾಡ್ತೀವಿ ಅನ್ನೋ ಮೇಲ್ ಬಂದಿದೆಯೇ?; ಓಪನ್ ಮಾಡಿದ್ರೆ ತೊಂದರೆ ಖಚಿತ
Coronavirus
  • Share this:
ದೇಶಾದ್ಯಂತ ನಿತ್ಯ ಕೊರೋನಾ ವೈರಸ್​ ಪ್ರಕರಣಗಳು ಹೆಚ್ಚುತ್ತಲೇ ಇವೆ. ದೇಶದಲ್ಲಿ ನಾಲ್ಕು ಹಂತದಲ್ಲಿ ಲಾಕ್​ಡೌನ್​ ಘೋಷಣೆ ಮಾಡಿದ ಹೊರತಾಗಿಯೂ ಯಾವುದೇ ಪ್ರಯೋಜನವಾಗಿಲ್ಲ. ಈ ಮಧ್ಯೆ ಸರ್ಕಾರ ನಿತ್ಯ ಕೊರೋನಾ  ಟೆಸ್ಟ್​ ಕೂಡ ಹೆಚ್ಚಿಸುತ್ತಿದೆ. ಈ ಮಧ್ಯೆ, ನಿಮ್ಮ ಇ-ಮೇಲ್​ ಬಾಕ್ಸ್​ಗೆ ಬರುವ ಫ್ರೀ ಕೊರೋನಾ ಟೆಸ್ಟ್​ ಮೇಲ್​​ ಬಗ್ಗೆ ಎಚ್ಚರಿಕೆಯಿಂದ ಇರಿ ಎನ್ನುತ್ತಿದ್ದಾರೆ ಸೈಬರ್​ ಪೊಲೀಸರು. ಏಕೆ ಅಂತೀರಾ? ಅದಕ್ಕೆ ಇಲ್ಲಿದೆ ಉತ್ತರ.

ಉಚಿತ ಕೊರೋನಾ ಟೆಸ್ಟ್​ ಮಾಡಿಸಿಕೊಡ್ತೀವಿ ಎಂದು ಅನೇಕ ಮೇಲ್​ಗಳು ಬರುತ್ತಿವೆಯಂತೆ. ಒಂದೊಮ್ಮೆ ಇದನ್ನು ಓಪನ್​ ಮಾಡಿದರೆ, ಕ್ಷಣ ಮಾತ್ರದಲ್ಲಿ ನಿಮ್ಮ ಬ್ಯಾಂಕ್​ ಮಾಹಿತಿಗಳು ಸೋರಿಕೆ ಆಗಿ ಬಿಡುತ್ತವೆ ಅನ್ನೋದು ಸೈಬರ್​ ಪೊಲೀಸರ ಸೂಚನೆ.

corona
ಸಾಂದರ್ಭಿಕ ಚಿತ್ರ.


ಹೌದು, ಈ ರೀತಿ ಮೇಲ್​ಗಳನ್ನು ಓಪನ್​ ಮಾಡಿದ ತಕ್ಷಣ ಅದು ಬೇರೆ ವೆಬ್​ಸೈಟ್​ಗೆ ನಿಮ್ಮನ್ನು ಕರೆದೊಯ್ಯುತ್ತದೆ. ಈ ಸೈಟ್​ಗೆ ನೀವು ಎಂಟ್ರಿ ಕೊಡುತ್ತಿದ್ದಂತೆ ನಿಮ್ಮ ಬ್ಯಾಂಕ್​ ಸಂಬಂಧಿತ ಮಾಹಿತಿಗಳಿಗೆ ಕನ್ನ ಬೀಳುತ್ತದೆ. ಈಗಾಗಲೇ 20 ಲಕ್ಷ ಮೇಲ್​ ಐಡಿಗಳಿಗೆ ಈ ರೀತಿ ಸಂದೇಶ ಬಂದಿದೆಯಂತೆ. ದೆಹಲಿ, ಹೈದರಾಬಾದ್​ ಸೇರಿ ಕೆಲ ಪ್ರಮುಖ ಪ್ರದೇಶಗಳಲ್ಲಿ ಉಚಿತ ಕೊರೋನಾ ಟೆಸ್ಟ್​ ಮಾಡಿಸುತ್ತೇವೆ ಅನ್ನೋ ಸಂದೇಶ ಇದರಲ್ಲಿ ಇರಲಿದೆಯಂತೆ.

coronavirus
coronavirus


 
ತಡೆಯೋದು ಹೇಗೆ?

ಈ ರೀತಿ ಮೇಲ್​ಗಳು ನಿಮ್ಮ ಇನ್​ ಬಾಕ್ಸ್​ಗೆ ಬಂದ ತಕ್ಷಣ ಅವುಗಳನ್ನು ಡಿಲೀಟ್​ ಮಾಡಿಬಿಡಬೇಕು. ಇನ್ನು, ನಿಮ್ಮ ಕಂಪ್ಯೂಟರ್​ಗೆ ಉತ್ತಮವಾದ ಆ್ಯಂಟಿ ವೈರಸ್​ ಇನ್​​ಸ್ಟಾಲ್​ ಮಾಡುವ ಮೂಲಕ ನಿಮ್ಮ ಮಾಹಿತಿ ರಕ್ಷಣೆ ಮಾಡಿಕೊಳ್ಳಬಹುದಾಗಿದೆ.
First published:June 23, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading