Optical Illusion- ಫೋಟೋದಲ್ಲಿರುವುದು ಹುಡುಗಿಯೋ, ವೃದ್ಧೆಯೋ? ವಯಸ್ಸು ಹೇಳುತ್ತೆ ನಿಮ್ಮ ನೋಟ

Psychology Study- ಚಿತ್ರದಲ್ಲಿ ನಿಮಗೆ ವಯಸ್ಸಾದ ಹೆಂಗಸು ಕಾಣಿಸುತ್ತಾರಾ ಅಥವಾ ಸಣ್ಣ ವಯಸ್ಸಿನ ಯುವತಿ ಕಾಣಿಸುತ್ತಾರಾ? ನಿಮಗ್ಯಾರು ಮೊದಲು ಕಾಣಿಸುತ್ತಾರೆ ಎಂಬುದು ನಿಮ್ಮ ವಯಸ್ಸಿನ ಸ್ಥಿತಿಗೆ ಅವಲಂಬಿತವಾಗಿರುತ್ತದಂತೆ.

ಆಪ್ಟಿಕಲ್ ಇಲ್ಯೂಶನ್​ನ ಒಂದು ಚಿತ್ರ

ಆಪ್ಟಿಕಲ್ ಇಲ್ಯೂಶನ್​ನ ಒಂದು ಚಿತ್ರ

  • News18
  • Last Updated :
  • Share this:
    ದೃಷ್ಟಿ ಭ್ರಮೆ (Optical Illusion) ಚಿತ್ರಗಳು ಸೋಷಿಯಲ್ ಮೀಡಿಯಾದಲ್ಲಿ ಅಗಾಗ ವೈರಲ್ ಆಗುತ್ತಿರುತ್ತವೆ. ವಿಭಿನ್ನ ವಸ್ತುಗಳು ಅಥವಾ ವ್ಯಕ್ತಿಗಳ ಚಿತ್ರಗಳನ್ನ ಒಂದೇ ಚಿತ್ರದಲ್ಲಿ ಅಡಕ ಮಾಡಲಾಗಿರುತ್ತದೆ. ಮೊದಲ ಸಲ ನೋಡಿದಾಗ ಒಂದು ಚಿತ್ರ ಕಾಣಿಸುತ್ತದೆ. ಮತ್ತೊಂದು ಸಲ ನೋಡಿದಾಗ ಬೇರೆ ಚಿತ್ರ ಕಾಣುತ್ತದೆ. ಬಣ್ಣಗಳ ವ್ಯತ್ಯಾಸವಾಗಬಹುದು. ವಸ್ತುಗಳ ವ್ಯತ್ಯಾಸವಾಗಬಹುದು. ಇಂಥದ್ದೊಂದು ಕುತೂಹಲಕಾರಿ ಆಪ್ಟಿಕಲ್ ಇಲ್ಯೂಶನ್ ಇರುವ ಚಿತ್ರ ವೈರಲ್ ಆಗಿದೆ. ಇದು ಬಾಲಕಿ ಮತ್ತು ವೃದ್ಧೆಯರಿಬ್ಬರ ಮಿಶ್ರಣ ಇರುವ ಚಿತ್ರ. ಈ ಚಿತ್ರದಲ್ಲಿ ನೀವು ಮೊದಲ ನೋಟಕ್ಕೆ ಏನನ್ನು ನೋಡುತ್ತೀರಿ ಎಂಬುದು ನಿಮ್ಮ ವಯಸ್ಸನ್ನು ತೋರಿಸುತ್ತದೆಯಂತೆ. ಈ ಚಿತ್ರ ಇಟ್ಟುಕೊಂಡು ಸಂಶೋಧಕರು ವ್ಯಕ್ತಿಗಳ ಮಾನಸಿಕತೆಯನ್ನ ಅಧ್ಯಯನ ಮಾಡಿ ಕುತೂಹಲಕಾರಿ ಅಂಶವನ್ನ ಹೊರಗೆಡವಿದ್ದಾರೆ. ವಾಸ್ತವದಲ್ಲಿ ಈ ಚಿತ್ರ ಹಾಗೂ ಅಧ್ಯಯನ ಎರಡೂ ಕೂಡ ಮೂರು ವರ್ಷಗಳ ಹಿಂದಿನದ್ದು. ಆಸಕ್ತಿ ಕೆರಳಿಸುವ ಈ ಚಿತ್ರ ಈಗ ಸೋಷಿಯಲ್ ಮೀಡಿಯಾದಲ್ಲಿ ಮತ್ತೊಮ್ಮೆ ವೈರಲ್ ಆಗಿದೆ ಅಷ್ಟೇ.

    ಅಂದಹಾಗೆ, “ನನ್ನ ಹೆಂಡತಿಯಾ ಅಥವಾ ಅತ್ತೆಯಾ?” (My Wife or My Mother-in-Law) ಹೆಸರಿನ ಈ ಒಂದು ಚಿತ್ರದಲ್ಲಿ ಇಬ್ಬರು ವ್ಯಕ್ತಿಗಳನ್ನ ನೀವು ಕಾಣಬಹುದು. ಒಂದು ನೋಟದಲ್ಲಿ ವೃದ್ಧ ಹೆಂಗಸು ನಿಮಗೆ ಕಾಣಿಸಬಹುದು. ಮತ್ತೊಂದು ನೋಟದಲ್ಲಿ ನಿಮಗೆ ಯುವತಿ ಕಾಣಿಸಬಹುದು. ಅಥವಾ ಮೊದಲಿಗೆ ನಿಮಗೆ ಯುವತಿಯ ಚಿತ್ರ ಕಾಣಬಹುದು, ನಂತರ ವೃದ್ಧೆಯ ಚಿತ್ರ ತೋರಬಹುದು. ಆಸ್ಟ್ರೇಲಿಯಾದ ಫ್ಲಿಂಡರ್ಸ್ ಯೂನಿವರ್ಸಿಟಿಯ ಇಬ್ಬರು ಸೈಕಾಲಜಿ ಪ್ರೊಫೆಸರ್​ಗಳು ಇದೇ ಚಿತ್ರವಿಟ್ಟು ಮಾನಸಿಕತೆಯ ಅಧ್ಯಯನ ನಡೆಸಿದ್ದಾರೆ. 18ರಿಂದ 68 ವರ್ಷದವರೆಗಿನ 393 ಜನರನ್ನ ಸಂಶೋಧನೆಗೆ ಬಳಸಿಕೊಳ್ಳಲಾಯಿತು. ಈ ಚಿತ್ರವನ್ನು ಮೊದಲು ನೋಡಿದಾಗ ಕಣ್ಣಿಗೆ ಬೀಳುವ ವ್ಯಕ್ತಿಯ ವೃದ್ಧರೋ ಅಥವಾ ಚಿಕ್ಕ ವಯಸ್ಸಿನವರೋ ಎಂಬುದನ್ನು ಹೇಳುವಂತೆ ತಿಳಿಸಲಾಯಿತು.

    ಇದನ್ನೂ ಓದಿ: Viral Video: ಕೆಣಕಿದ ಯುವಕನನ್ನ ಬೆನ್ನಟ್ಟಿದ ಹುಂಜ- ನೆಟ್ಟಿಗರಲ್ಲಿ ನಗು ಮೂಡಿಸಿದ ವೈರಲ್ ವಿಡಿಯೋ

    ಚಿಕ್ಕ ವಯಸ್ಸಿನ ವ್ಯಕ್ತಿಗಳ ಕಣ್ಣಿಗೆ ಚಿತ್ರದಲ್ಲಿ ಮೊದಲು ಕಾಣಿಸುವುದು ಹೆಚ್ಚಾಗಿ ಹುಡುಗಿಯೇ. ಹಿರಿಯ ವಯಸ್ಸಿನವರಿಗೆ ಮೊದಲು ಕಾಣಿಸುವುದು ಹೆಚ್ಚಾಗಿ ವೃದ್ಧೆಯೇ ಆಗಿದ್ದರು ಎಂದು ಈ ಅಧ್ಯಯನದಲ್ಲಿ ಭಾಗಿಯಾಗಿದ್ದ ಮೈಕ್ ನಿಕೋಲ್ಸ್ ಅವರು ತಿಳಿಸುತ್ತಾರೆ. ನಮ್ಮ ವಯಸ್ಸಿಗೆ ಅನುಗುಣವಾಗಿ ನಾವು ನೋಡುವ ರೀತಿಯನ್ನ ಈ ಅಧ್ಯಯನದಿಂದ ಕಂಡುಕೊಳ್ಳಬಹುದು. ಪ್ರತಿಯೊಬ್ಬ ವ್ಯಕ್ತಿಯೂ ಅವರದ್ದೇ ಆದ ಇನ್-ಗ್ರೂಪ್ ಮತ್ತು ಔಟ್-ಗ್ರೂಪ್ ಇರುತ್ತದೆ. ಚಿಕ್ಕವಯಸ್ಸಿನವರು ತಮ್ಮ ಸಮವಯಸ್ಕರ ಮೇಲೆ ಹೆಚ್ಚು ಗಮನ ಕೊಡುತ್ತಾರೆ. ವಯಸ್ಸಾದವರ ಮನಸ್ಸಿನಲ್ಲಿ ಅವರ ವಯಸ್ಸಿಗೆ ಅನುಗುಣವಾದವರೇ ಇರುತ್ತಾರೆ. ನಮಗ್ಯಾವ ವಯಸ್ಸಿನ ಭೇದ ಇಲ್ಲವೆಂದು ಮೇಲ್ನೋಟಕ್ಕೆ ಅಂದುಕೊಂಡರೂ ಸುಪ್ತಮನಸ್ಸಿನಲ್ಲಿ ಇದು ನಡೆಯುತ್ತಿರುತ್ತದೆ. ಈ ಅಧ್ಯಯನದಲ್ಲಿ ಈ ಅಂಶ ದೃಢಪಟ್ಟಿದೆ. ಹೆಚ್ಚು ವಯಸ್ಸಾದವರ ಕಣ್ಣಿಗೆ ಮೊದಲು ಬಿದ್ದದ್ದು ವೃದ್ಧೆ. ಸಣ್ಣ ವಯಸ್ಸಿನವರ ಕಣ್ಣಿಗೆ ಮೊದಲು ಬಿದ್ದದ್ದು ಹುಡುಗಿಯೇ ಎಂದು ಮೈಕ್ ನಿಲಾಲ್ಸ್ ಹೇಳುತ್ತಾರೆ.

    (ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ಕರ್ನಾಟಕ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಅನಗತ್ಯವಾಗಿ ಯಾರೂ ಮನೆಯಿಂದ ಹೊರಗೆ ಬಾರದೆ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕಿದೆ. ಹಾಗೂ ಗುಂಪುಗೂಡುವುದನ್ನು ಆದಷ್ಟು ನಿಯಂತ್ರಿಸಬೇಕಿದೆ. ಸರ್ಕಾರ ಕಾಲಕಾಲಕ್ಕೆ ಹೊರಡಿಸುತ್ತಿರುವ ಕೊರೋನಾ ಮಾರ್ಗಸೂಚಿಗಳನ್ನು ಪ್ರತಿಯೊಬ್ಬರೂ ಕಡ್ಡಾಯವಾಗಿ ಪಾಲಿಸಬೇಕಿದೆ.)
    Published by:Vijayasarthy SN
    First published: