• Home
  • »
  • News
  • »
  • trend
  • »
  • Optical Illusion: ಈ ಚಿತ್ರದಲ್ಲಿರುವ 3ನೇ ಸಿಂಹವನ್ನು 10 ಸೆಕೆಂಡಿನಲ್ಲಿ ಹುಡುಕಿ ನೋಡೋಣ

Optical Illusion: ಈ ಚಿತ್ರದಲ್ಲಿರುವ 3ನೇ ಸಿಂಹವನ್ನು 10 ಸೆಕೆಂಡಿನಲ್ಲಿ ಹುಡುಕಿ ನೋಡೋಣ

ಆಪ್ಟಿಕಲ್ ಇಲ್ಯೂಶನ್

ಆಪ್ಟಿಕಲ್ ಇಲ್ಯೂಶನ್

ಯಾರಾದರೂ ನಮಗೆ ಈ ಚಿತ್ರದಲ್ಲಿ ಇಂತದ್ದೊಂದು ಇದೆ ಅಂತ ಹೇಳಿದಾಗ ಅದನ್ನು ಹುಡುಕಲು ಮುಂದಾಗುತ್ತೇವೆ. ಇಂತಹ ಚಿತ್ರಗಳನ್ನು ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ಅಂತ ಹೇಳಲಾಗುತ್ತದೆ.

  • Trending Desk
  • 4-MIN READ
  • Last Updated :
  • Share this:

ಈಗಂತೂ ಇಂಟರ್ನೆಟ್‌ನಲ್ಲಿ(Internet) ಈ ಆಪ್ಟಿಕಲ್ ಇಲ್ಯೂಷನ್(Optical Illusion) ಅಂದ್ರೆ ಆಪ್ಟಿಕಲ್ ಭ್ರಮೆ ಚಿತ್ರಗಳಿಂದಲೇ ತುಂಬಿದೆ ಅಂತ ಹೇಳಿದರೆ ತಪ್ಪಾಗುವುದಿಲ್ಲ ನೋಡಿ. ಏನಿದು ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ಅಂತ ಅನೇಕ ಮಂದಿ ಪ್ರಶ್ನೆಯೊಂದನ್ನು ಸಹ ಕೇಳಬಹುದು. ಒಂದು ಹಗ್ಗವನ್ನು ನೋಡಿ ಅದನ್ನು ಹಾವು(Snake) ಅಂತ ಅಂದು ಕೊಳ್ಳುವುದನ್ನು ನಾವು ಭ್ರಮೆ ಅಂತ ಹೇಳುತ್ತೇವೆ. ಆದರೆ ಆಪ್ಟಿಕಲ್ ಭ್ರಮೆ ಎಂದರೆ ಇಲ್ಲಿ ಒಂದು ಚಿತ್ರದಲ್ಲಿ ಇರುವ ಎಲ್ಲಾ ಸೂಕ್ಷ್ಮತೆಗಳು ನಮಗೆ ತಕ್ಷಣಕ್ಕೆ ಕಂಡು ಹಿಡಿಯಲು ಸಾಧ್ಯವಾಗುವುದಿಲ್ಲ.


ಯಾರಾದರೂ ನಮಗೆ ಈ ಚಿತ್ರದಲ್ಲಿ ಇಂತದ್ದೊಂದು ಇದೆ ಅಂತ ಹೇಳಿದಾಗ ಅದನ್ನು ಹುಡುಕಲು ಮುಂದಾಗುತ್ತೇವೆ. ಇಂತಹ ಚಿತ್ರಗಳನ್ನು ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ಅಂತ ಹೇಳಲಾಗುತ್ತದೆ. ಇಂತಹ ಚಿತ್ರಗಳು ವ್ಯಕ್ತಿಯ  ಬುದ್ದಿವಂತಿಕೆಗೆ ಮತ್ತು ಯೋಚನಾಶಕ್ತಿಗೆ ಒಂದು ಸವಾಲಿನಂತಿರುತ್ತದೆ ಅಂತ ಹೇಳಬಹುದು. ಜನರು ಸಹ ಇಂತಹ ಸವಾಲುಗಳನ್ನು ಪರಿಹರಿಸಲು ಇಷ್ಟಪಡುತ್ತಾರೆ.


ಆಪ್ಟಿಕಲ್ ಭ್ರಮೆಯು ನೀವು ಎಷ್ಟು ಬುದ್ಧಿವಂತರು ಮತ್ತು ಅವಲೋಕನ ಶೀಲರು ಎಂದು ಪರೀಕ್ಷಿಸಲು ಸುಲಭವಾದ ಮಾರ್ಗವಾಗಿದೆ. ಈ ಕೆಲವು ಆಪ್ಟಿಕಲ್ ಭ್ರಮೆಗಳು ದೀರ್ಘಕಾಲದವರೆಗೆ ನಿಮ್ಮಿಂದ ಮರೆಮಾಚಲ್ಪಟ್ಟಿರಬಹುದಾದ ವ್ಯಕ್ತಿತ್ವದ ಗುಣಲಕ್ಷಣಗಳನ್ನು ಸಹ ಬಹಿರಂಗಪಡಿಸುತ್ತವೆ.


ಇದನ್ನೂ ಓದಿ: Monkeys: ಕೋತಿಗಳು ಮನುಷ್ಯರಂತೆ ಸ್ಮಾರ್ಟ್​ ಆಗ್ತಿರೋದು ಜೀವವೈವಿಧ್ಯಕ್ಕೆ ಅಪಾಯವಂತೆ- ತಜ್ಞರ ಎಚ್ಚರಿಕೆ


ಹಿಂದೊಮ್ಮೆ ಇಂಟರ್ನೆಟ್ ನಲ್ಲಿ ಹರಿದಾಡಿತ್ತು ಇಂತಹದೇ ಒಂದು ಆಪ್ಟಿಕಲ್ ಇಲ್ಯೂಷನ್ ಚಿತ್ರ


ಈ ಹಿಂದೊಮ್ಮೆ ಈ ಇಸ್ಪೀಟ್ ಎಲೆಗಳಲ್ಲಿ ಡೈಮಂಡ್ 8 ರ ಕಾರ್ಡ್ ನಲ್ಲಿ ಮೇಲೆ ಮತ್ತು ಕೆಳಗೆ ಇರುವ ಎರಡು 8 ಸಂಖ್ಯೆಗಳನ್ನು ಹೊರತುಪಡಿಸಿ ಮೂರನೆಯ 8 ಸಹ ಈ ಎಲೆಯಲ್ಲಿ ಇದೆ ಅಂತ ಹೇಳಲಾಗಿತ್ತು. ಆ ಮೂರನೆಯ 8 ಮಧ್ಯದ ಚಿತ್ರದಲ್ಲಿ ಅಡಗಿತ್ತು. ಅದು ಸಹ ನಮಗೆ ಅವರು ಹೇಳಿದ ನಂತರವೇ ಅರ್ಥವಾಗಿದ್ದು ಅಂತ ಹೇಳಬಹುದು.


ಈಗ ಇಲ್ಲೊಂದು ಅಂತಹದೇ ಚಿತ್ರವಿದೆ ನೋಡಿ.. ಅದರಲ್ಲಿ ಈಗಾಗಲೇ ಎರಡು ಸಿಂಹಗಳು ಚಿತ್ರ ನೋಡಿದ ಒಂದೆರಡು ಸೆಕೆಂಡುಗಳಲ್ಲಿ ಕಣ್ಣಿಗೆ ಕಾಣಿಸುತ್ತದೆ. ಆದರೆ ಇಲ್ಲಿ ಮೂರನೆಯ ಸಿಂಹ ಸಹ ಇದೆಯಂತೆ ಎಂಬುದು ಕುತೂಹಲ ಹುಟ್ಟಿಸುವ ವಿಷಯವಾಗಿದೆ ಅಂತ ಹೇಳಬಹುದು.


ಈ ಕಾಡಿನ ಚಿತ್ರದಲ್ಲಿ ಮೂರನೆಯ ಸಿಂಹವನ್ನು ಹುಡುಕಿ ನೋಡೋಣ


ಈಗ ಇಲ್ಲಿರುವ ಒಂದು ದಟ್ಟವಾದ ಕಾಡಿನ ಚಿತ್ರದಲ್ಲಿ ಮೂರು ಸಿಂಹಗಳು ಇವೆ ಅನ್ನೋ ಆಪ್ಟಿಕಲ್ ಭ್ರಮೆ ಚಿತ್ರವೊಂದು ಅಂತರ್ಜಾಲದಲ್ಲಿ ಕಾಣಿಸಿಕೊಂಡಿದೆ ಮತ್ತು ತೀಕ್ಷ್ಣವಾದ ಕಣ್ಣುಗಳು ಮತ್ತು ಹೆಚ್ಚಿನ ಐಕ್ಯೂ ಹೊಂದಿರುವ ಜನರು ಮಾತ್ರ ಮೂರನೆಯ ಸಿಂಹವನ್ನು ತಕ್ಷಣವೇ ಕಂಡು ಹಿಡಿಯಲು ಸಾಧ್ಯವಾಗುತ್ತದೆ ಅಂತ ಹೇಳಬಹುದು.




ಈ ಚಿತ್ರವು ಸಾಕಷ್ಟು ಮರಗಳು, ಹಸಿರು ಹುಲ್ಲು ಮತ್ತು ನೆಲದ ಮೇಲೆ ರಾಶಿ ರಾಶಿಯಾಗಿ ಬಿದ್ದಿರುವ ಎಲೆಗಳನ್ನು ಹೊಂದಿರುವ ದೊಡ್ಡ ಕಾಡಿನ ಚಿತ್ರವಾಗಿದೆ. ಮೂರು ಸಿಂಹಗಳನ್ನು ಕಂಡು ಹಿಡಿಯಲು ಸಾಧ್ಯವಾಗುವುದರಿಂದ ಪ್ರೇಕ್ಷಕರನ್ನು ವಿಚಲಿತಗೊಳಿಸಲು ಆಕಾಶದ ಸೂಚನೆಗಳೊಂದಿಗೆ ಸೊಂಪಾದ ಹಸಿರು ಮತ್ತು ಆಕಾಶದ ಸುಳಿವುಗಳು ಇವೆ.


ಇದನ್ನೂ ಓದಿ: Comet: ಭೂಮಿಯತ್ತ ಬರುತ್ತಿದೆ ಈ ವಿಶೇಷ ಧೂಮಕೇತು, ಈಗ ಮಿಸ್ ಮಾಡ್ಕೊಂಡ್ರೆ ನೋಡೋಕೆ ಇನ್ನೂ 50 ವರ್ಷ ಕಾಯ್ಬೇಕು!


ಚಿತ್ರದಲ್ಲಿ ಎಲ್ಲಿದೆ ಆ ಮೂರನೇ ಸಿಂಹ?


ಮೂರು ಸಿಂಹಗಳನ್ನು ಕಂಡು ಹಿಡಿಯಲು ಸಮಯದ ಮಿತಿ ಕೇವಲ 10 ಸೆಕೆಂಡುಗಳು ಮಾತ್ರವೇ ನೀಡಲಾಗಿದೆ. ಈ ಚಿತ್ರದಲ್ಲಿ ಅಂತಹ ದೊಡ್ಡ ಪ್ರಾಣಿಯನ್ನು ಕಂಡು ಹಿಡಿಯುವುದು ಸುಲಭ ಎಂದು ಬಹುತೇಕರು ಭಾವಿಸಬಹುದು, ಏಕೆಂದರೆ ಸಿಂಹವು ದೊಡ್ಡದಾಗಿರುತ್ತವೆ. ಆದರೆ ಇಲ್ಲಿ ಸಿಂಹಗಳನ್ನು ವೀಕ್ಷಕರಿಗೆ ನೋಡಿದ ತಕ್ಷಣವೇ ಗುರುತಿಸಲು ಸಾಧ್ಯವಾಗದಷ್ಟು ಚಿಕ್ಕದಾಗಿರುವ ರೀತಿಯಲ್ಲಿ ಇರಿಸಲಾಗಿದೆ ಅಂತ ಹೇಳಬಹುದು.




ನೀವು 10 ಸೆಕೆಂಡುಗಳಲ್ಲಿ ಆ ಮೂರನೆಯ ಸಿಂಹವನ್ನು ಕಂಡು ಹಿಡಿಯಲು ಸಾಧ್ಯವಾದರೆ, ನೀವು ತುಂಬಾನೇ ಚುರುಕಾಗಿದ್ದೀರಿ ಅಂತ ಹೇಳಬಹುದು. ಒಂದು ಸಿಂಹವು ತೀವ್ರ ಎಡಕ್ಕೆ ಮತ್ತು ಇನ್ನೊಂದು ತುದಿಯ ಬಲಭಾಗದಲ್ಲಿದೆ. ಮೂರನೇ ಸಿಂಹವು ಮರದ ಕಾಂಡದ ಪಕ್ಕದಲ್ಲಿ ಮಧ್ಯದಲ್ಲಿದೆ.

Published by:Latha CG
First published: