Hindu God: ಒಳ ಉಡುಪುಗಳ ಮೇಲೆ ಹಿಂದೂ ದೇವರು! ಮಾಡೆಲ್‌ ಹುಚ್ಚಾಟದ ವಿರುದ್ಧ ನೆಟ್ಟಿಗರು ಗರಂ

ಮಾಡೆಲ್ ಒಬ್ಬಳ ಕಂಪನಿಯು ಬಿಕಿನಿ ಹೊರ ತಂದಿದ್ದು, ಅದರಲ್ಲಿ ಹಿಂದೂ ದೇವರಾದ ಶ್ರೀ ಮಹಾವಿಷ್ಣುವಿನ ಫೋಟೋ ಮುದ್ರಿಸಲಾಗಿದೆ. ಇದೇ ಬಿಕಿನಿ ತೊಟ್ಟ ಮಾಡೆಲ್, ಪೋಸ್ ಕೊಟ್ಟಿದ್ದು, ಸೋಶಿಯಲ್ ಮೀಡಿಯಾಗಳಲ್ಲಿ ಫೋಟೋ ವೈರಲ್ ಆಗಿದೆ.

ವಿವಾದಾತ್ಮಕ ಉಡುಗೆ ರಿಲೀಸ್ ಮಾಡಿದ ಸಹಾರಾ ರೇ

ವಿವಾದಾತ್ಮಕ ಉಡುಗೆ ರಿಲೀಸ್ ಮಾಡಿದ ಸಹಾರಾ ರೇ

  • Share this:
ಭಾರತ (India) ಎಲ್ಲಾ ಕ್ಷೇತ್ರಗಳಲ್ಲಿ ಅದೆಷ್ಟೆ ಮುಂದುವರೆದಿದ್ದರೂ, ಅಂದೆಂಥದ್ದೇ ಸಾಧನೆ ಮಾಡಿದ್ದರೂ ಈ ವಿದೇಶಿಯರು ಭಾರತೀಯರನ್ನು (Indians), ಭಾರತೀಯತೆಯನ್ನು, ಭಾರತೀಯ ಸಂಸ್ಕೃತಿ (Indian Culture), ಸಂಪ್ರದಾಯವನ್ನು (Traditional) ಟೀಕಿಸುತ್ತಲೇ (Criticize) ಇರುತ್ತಾರೆ. ಈ ಹಿಂದೆ ಅದೆಷ್ಟೋ ಪ್ರತಿಷ್ಠಿತ ಮಾಡೆಲ್‌ಗಳು (Models), ಪ್ರತಿಷ್ಠಿತ ಕಂಪನಿಗಳು (Companies) ಹಿಂದೂ ದೇವರನ್ನು (Hindu Gods) ಅವಮಾನ ಮಾಡಿದೆ. ಬಿಕಿನಿ, ಒಳಉಡುಪು (Innerwear), ಟಾಯ್ಲೆಟ್ ಕಮೋಡ್ (Toilet kamod), ಕಾಲು ಒರೆಸುವ ಮ್ಯಾಟ್ (Mat) ಇತ್ಯಾದಿಗಳ ಮೇಲೆ ಹಿಂದೂ ದೇವರ ಚಿತ್ರ ಮುದ್ರಿಸಿ, ವಿಕೃತಿ ಮೆರೆದಿದೆ. ಇದೀಗ ವಿದೇಶಿ ಮಾಡೆಲ್ ಒಬ್ಬಳು ತನ್ನದೇ ಮಾಲೀಕತ್ವದ ಬಿಕಿನಿ ಕಂಪನಿಯಿಂದ ಬಿಕಿನಿಯನ್ನು ಹೊರ ತಂದಿದ್ದು, ಅದರ ಮೇಲೆ ಶ್ರೀ ಮಹಾವಿಷ್ಣು (Sri Maha Vishnu) ಫೋಟೋ ಮುದ್ರಿಸಿದ್ದಾಳೆ. ಅಲ್ಲದೇ ಅದನ್ನು ಹಾಕಿಕೊಂಡು ಪೋಸ್ ಬೇರೆ ಕೊಟ್ಟಿದ್ದಾಳೆ.

 ಬಿಕಿನಿ ಮೇಲೆ ಮಹಾವಿಷ್ಣು ಫೋಟೋ

ಸಹಾರಾ ರೇ ಎಂಬ ಪ್ರತಿಷ್ಠಿತ ವಿದೇಶಿ ಮಾಡೆಲ್ ಒಬ್ಬಳು, ಸಹಾರಾ ರೇ ಸ್ವಿಮ್ ಎಂಬ ಬಟ್ಟೆ ಬ್ರಾಂಡ್‌ನ ಉಡುಗೆಯ ಕಂಪನಿ ಹೊಂದಿದ್ದಾಳೆ. ಒಳ ಉಡುಪು, ಬಿಕಿನಿ, ಈಜುಡುಗೆ ಇತ್ಯಾದಿಗಳು ಈ ಕಂಪನಿಯ ಪ್ರಾಡೆಕ್ಟ್ ಗಳು. ಇದೀಗ ಇದೇ ಕಂಪನಿಯಿಂದ ಬಿಕಿನಿ ಹೊರ ತಂದಿದ್ದು, ಅದರಲ್ಲಿ ಹಿಂದೂ ದೇವರಾದ ಶ್ರೀ ಮಹಾವಿಷ್ಣುವಿನ ಫೋಟೋ ಮುದ್ರಿಸಲಾಗಿದೆ. ಇದೇ ಬಿಕಿನಿ ತೊಟ್ಟ ಮಾಡೆಲ್, ಪೋಸ್ ಕೊಟ್ಟಿದ್ದು, ಸೋಶಿಯಲ್ ಮೀಡಿಯಾಗಳಲ್ಲಿ ಫೋಟೋ ವೈರಲ್ ಆಗಿದೆ.

ಬಿಕಿನಿ ಮೇಲೆ ವಿಷ್ಣುವಿನ ಚಿತ್ರ


ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ಆಕ್ರೋಶ

ಸಹಾರಾ ರೇ ಕಂಪನಿ ಬ್ರ್ಯಾಂಡ್ 'ಔರಾ ಕಲೆಕ್ಷನ್ 2022' ಎಂಬ ಹೊಸ ಸಾಲಿನ ಈಜುಡುಗೆಯನ್ನು ಬಿಡುಗಡೆ ಮಾಡಿದೆ. ಹೆಚ್ಚಾಗಿ ಥಾಂಗ್ಸ್ ಮತ್ತು ಮೈಕ್ರೋ ಸ್ಟ್ರಿಂಗ್ ಟಾಪ್‌ಗಳನ್ನು ಒಳಗೊಂಡಿರುವ ಹೊಸ ಸಂಗ್ರಹವು ಅವುಗಳ ಮೇಲೆ ಹಿಂದೂ ದೇವತೆಗಳ ಚಿತ್ರಗಳನ್ನು ಒಳಗೊಂಡಿದೆ. ವಿವಾದಾತ್ಮಕ ಚಿತ್ರಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಇದಕ್ಕೆ ಸಾಕಷ್ಟು ಟೀಕೆ ವ್ಯಕ್ತವಾಗಿದ್ದು, ನೆಟ್ಟಿಗರು ಸೋಶಿಯಲ್ ಮೀಡಿಯಾದಲ್ಲಿ ಮಾಡೆಲ್‌ ವಿರುದ್ಧ ಕಾಮೆಂಟ್ ಹಾಕುತ್ತಿದ್ದಾರೆ.

ಇದನ್ನೂ ಓದಿ: Street Venders: ಈ ವಿಡಿಯೋ ನೋಡಿದ್ರೆ ರಸ್ತೆ ಬದಿ ವ್ಯಾಪಾರಿಗಳ ಹತ್ತಿರವೇ ನೀವು ಖರೀದಿಸ್ತೀರಿ! ಅಷ್ಟಕ್ಕೂ ಏನಿದೆ ಇದರಲ್ಲಿ?

ನಿಮಗೆ ಹಿಂದೂ ದೇವರುಗಳೇ ಏಕೆ ಬೇಕು?

ಆಕ್ಷೇಪಾರ್ಹ ಈಜುಡುಗೆಯನ್ನು ಪ್ರದರ್ಶಿಸುತ್ತಿರುವ ಮಾಡೆಲ್‌ಗಳ ಚಿತ್ರಗಳನ್ನು ಹಂಚಿಕೊಳ್ಳುವಾಗ, ಟ್ವಿಟರ್ ಬಳಕೆದಾರರು ಕಿಡಿಕಾರಿದ್ದಾರೆ. ಈಗ ಸೌಂದರ್ಯಶಾಸ್ತ್ರದ ಹೆಸರಿನಲ್ಲಿ, ಅವರು ಬಿಕಿನಿ ಬಾಟಮ್ಸ್ ಮತ್ತು ಟಾಪ್ಸ್‌ನಲ್ಲಿ ಹಿಂದೂ ದೇವರುಗಳನ್ನು ಪ್ರಿಂಟ್‌ಗಳಾಗಿ ಬಳಸುತ್ತಿದ್ದಾರೆ. ಇದು ಸಹಾರಾ ರೇ ಅವರ ಈಜುಡುಗೆಯ ಕಂಪನಿ, ಜಸ್ಟಿನ್ ಮಾಜಿ ಗರ್ಲ್ ಫ್ರೆಂಡ್. ಇದು ಕೇವಲ ವಿನ್ಯಾಸಕ್ಕಾಗಿಯೇ ಅಥವಾ ಅವರ ಹಿಂದೆ ಉದ್ದೇಶವಿದೆಯೇ? ಅಥವಾ ಅವರು ತುಂಬಾ ಧಾರ್ಮಿಕರಾಗಿದ್ದರೆ ಅವರು ಅದನ್ನು ಯೇಸುವಿನ ಚಿತ್ರ ಮುದ್ರಿಸಬಹುದಲ್ಲವೇ ಅಂತ ಪ್ರಶ್ನಿಸಿದ್ದಾರೆ.ಯೇಸು ಚಿತ್ರ ಬಳಸಿ ಎಂದ ನೆಟ್ಟಿಗರು

ಮತ್ತೊಬ್ಬ ಟ್ವಿಟ್ಟರ್ ಬಳಕೆದಾರರು ತಮ್ಮ ಬಿಕಿನಿ ಟಾಪ್ ಮತ್ತು ಬಾಟಮ್‌ಗಳಿಗೆ 'ಫ್ಯಾಶನ್ ಡಿಸೈನ್' ಮತ್ತು 'ಸೌಂದರ್ಯದ ವಸ್ತು' ಎಂದು ಪಾಶ್ಚಿಮಾತ್ಯರು ಹಿಂದೂ ದೇವರು ಮತ್ತು ದೇವತೆಗಳನ್ನು ಹೇಗೆ ಬಳಸುತ್ತಿದ್ದಾರೆ ಎಂಬುದನ್ನು ಗಮನಸೆಳೆದಿದ್ದಾರೆ. "ಅವರು ತಮ್ಮ ಸೌಂದರ್ಯದ ವಿನ್ಯಾಸವಾಗಿ ಯೇಸುವನ್ನು ಏಕೆ ಹಾಕಲು ಪ್ರಯತ್ನಿಸುವುದಿಲ್ಲ?" ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: Friendship: ಕ್ಯಾನ್ಸರ್ ಚಿಕಿತ್ಸೆ ಶುರುಮಾಡಿದ ಫ್ರೆಂಡ್​ಗಾಗಿ ತಲೆಬೋಳಿಸಿಕೊಂಡ ಗೆಳೆಯರು!

ಹಿಂದೂ ದೇವರ ಅವಹೇಳನ ಇದೇ ಮೊದಲಲ್ಲ

ಹೀಗೆ ಹಿಂದೂ ದೇವರಗಳ ಅವಹೇಳನ ಮಾಡುತ್ತಿರುವುದು ಇದೇ ಮೊದಲೇನಲ್ಲ. 2019 ರಲ್ಲಿ, ಅಮೆಜಾನ್‌ನಲ್ಲಿ ಪವಿತ್ರ ಹಿಂದೂ ದೇವರು ಮತ್ತು ದೇವತೆಗಳ ಚಿತ್ರಗಳನ್ನು ಹೊಂದಿರುವ ಕಾಲೊರೆಸುವ ನೆಲದ ಮ್ಯಾಟ್, ಟಾಯ್ಲೆಟ್‌ ಕವರ್‌ಗಳನ್ನು ಮಾರಾಟಕ್ಕೆ ಇಡಲಾಗಿತ್ತು.
Published by:Annappa Achari
First published: