News18 India World Cup 2019

ಆನ್​ಲೈನ್​ನಲ್ಲಿ ಭಿಕ್ಷೆ ಬೇಡಿದ ಮಹಿಳೆ 17 ದಿನಗಳಲ್ಲಿ ಗಳಿಸಿದ್ದೆಷ್ಟು ಗೊತ್ತಾ?

ತಮ್ಮ ಪೋಸ್ಟ್​ನಲ್ಲಿ ತಾನು ಹಾಗೂ ಮಗ ಕೌಟಿಂಬಿಕ ಹಿಂಸೆಯಿಂದ ಬಳಲುತ್ತಿದ್ದೇವೆ. ನಾನು ವಿಚ್ಛೇದಿತೆಯಾಗಿದ್ದು, ಮಗನ ಆರೈಕೆಗಾಗಿ ಸಹಾಯ ಮಾಡುವಂತೆ ಕೇಳಿಕೊಂಡಿದ್ದರು.

zahir | news18
Updated:June 11, 2019, 2:50 PM IST
ಆನ್​ಲೈನ್​ನಲ್ಲಿ ಭಿಕ್ಷೆ ಬೇಡಿದ ಮಹಿಳೆ 17 ದಿನಗಳಲ್ಲಿ ಗಳಿಸಿದ್ದೆಷ್ಟು ಗೊತ್ತಾ?
@BGR.com
zahir | news18
Updated: June 11, 2019, 2:50 PM IST
ಡಿಜಿಟಲ್ ಯುಗದಲ್ಲಿ ಪ್ರತಿಯೊಂದು ಡಿಜಿಟಲ್​ಮಯ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಸಾಮಾನ್ಯವಾಗಿ ಫೇಸ್​ಬುಕ್, ಇನ್​ಸ್ಟಾಗ್ರಾಂ, ಟ್ವಿಟರ್​ನಂತಹ ಸಾಮಾಜಿಕ ಜಾಲತಾಣಗಳನ್ನು ಟೈಂ ಪಾಸ್​ಗಾಗಿ ಬಳಸುವವರೇ ಹೆಚ್ಚು. ಆದರೆ ದುಬೈನ ಮಹಿಳೆಯೊಬ್ಬರು ಇದನ್ನೇ ಬಳಸಿ ಭಿಕ್ಷೆ ಬೇಡಿ ಭರ್ಜರಿ ಕಮಾಯಿ ಮಾಡಿದ್ದಾರೆ.

ನಗರದ ಪ್ರಮುಖ ಬೀದಿಯಲ್ಲಿ ಭಿಕ್ಷಾಟನೆ ಮಾಡುತ್ತಿದ್ದ ಈ ಸ್ತ್ರೀ ಭಾವನಾತ್ಮಕ ಕಥೆಯೊಂದಿಗೆ ಇನ್​ಸ್ಟಾಗ್ರಾಂ, ಟ್ವಿಟರ್ ಹಾಗೂ ಫೇಸ್​ಬುಕ್​ನಲ್ಲಿ ತನ್ನ ಮತ್ತು ಮಗ ಫೋಟೋವನ್ನು ಅಪ್​ಲೋಡ್ ಮಾಡಿದ್ದರು. ಈ ಪೋಸ್ಟ್​ ನೋಡಿದ ಸೋಷಿಯಲ್ ಮೀಡಿಯಾ ಬಳಕೆದಾರರ ಮನ ಕರಗಿದೆ. ಇದರಿಂದ ಹಲವರು ಈ ಮಹಿಳೆಗೆ ಸಹಾಯ ಹಸ್ತ ಚಾಚಿದ್ದರು. ಇದರಿಂದ ಕಳೆದ 17 ದಿನಗಳಲ್ಲಿ ಈಕೆಗೆ ಹರಿದು ಬಂದಿದ್ದು ಸುಮಾರು 50 ಸಾವಿರ ಡಾಲರ್. ಅಂದರೆ ಬರೋಬ್ಬರಿ 35 ಲಕ್ಷ ರೂ.

ತಮ್ಮ ಪೋಸ್ಟ್​ನಲ್ಲಿ ತಾನು ಹಾಗೂ ಮಗ ಕೌಟಿಂಬಿಕ ಹಿಂಸೆಯಿಂದ ಬಳಲುತ್ತಿದ್ದೇವೆ. ನಾನು ವಿಚ್ಛೇದಿತೆಯಾಗಿದ್ದು, ಮಗನ ಆರೈಕೆಗಾಗಿ ಸಹಾಯ ಮಾಡುವಂತೆ ಕೇಳಿಕೊಂಡಿದ್ದರು. ಈ ಸುದ್ದಿಯು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು. ಇದರಿಂದ ಮಹಿಳೆಗೆ ಮೂಲೆ ಮೂಲೆಯಿಂದ ಧನ ಸಹಾಯ ಹರಿದು ಬಂದಿದೆ.

ಎಲ್ಲೆಡೆ ಈ ಪೋಸ್ಟ್​ ಹರಿದಾಡುತ್ತಿದ್ದಂತೆ ಆಕೆಯ ಮಾಜಿ ಪತಿ ದುಬೈ ಇ-ಕ್ರೈಂ ವೇದಿಕೆ ಪೊಲೀಸರಿಗೆ ಅಸಲಿ ವಿಷಯ ತಿಳಿಸಿದ್ದರು. ಆಕೆ ಸುಳ್ಳು ಹೇಳಿದ್ದು, ಮಗ ನನ್ನೊಂದಿಗಿರುವುದಾಗಿ ಪೊಲೀಸರಿಗೆ ಮನದಟ್ಟು ಮಾಡಿಕೊಟ್ಟರು. ಇದರಿಂದ ಎಚ್ಚೆತ್ತು ಕೊಂಡ ಇ-ಕ್ರೈಂ ಅಧಿಕಾರಿಗಳು ಭಿಕ್ಷಾಟನೆ ಮಾಡಿದ ಮಹಿಳೆಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ಖಲೀಜ್ ಟೈಮ್ಸ್​ ವರದಿ ಮಾಡಿದೆ.

ಇದನ್ನೂ ಓದಿ: ಲೈಂಗಿಕ ಕ್ರಿಯೆಯಲ್ಲಿ ತೊಡಗುವ ಮುನ್ನ ನಿಮಗೆ ಈ ವಿಷಯ ತಿಳಿದಿರಲೇಬೇಕು..!

First published:June 11, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...