Viral News: ಊರಿಂದೂರಿಗೆ ತಿರುಗಾಡ್ತಾ ತಿಂಗಳಿಗೆ 75 ಸಾವಿರ ದುಡಿಯುತ್ತಂತೆ 1 ವರ್ಷದ ಮಗು, ನಾವೆಲ್ಲಾ ವೇಸ್ಟ್ ಅಂದ್ರಾ?

ಬ್ರಿಗ್ಸ್ ಕೇವಲ 9 ವಾರಗಳ ಶಿಶುವಾಗಿದ್ದಾಗ, ಮೊದಲ ಬಾರಿಗೆ ವಿಮಾನ ಪ್ರಯಾಣ ಮಾಡಿದ್ದ. ಉಟಾದಿಂದ ಹವಾಯಿಗೆ 8 ಗಂಟೆಗಳ ಪ್ರಯಾಣ ಮಾಡಿದ್ದು, ಅವನ ಈ ವರೆಗಿನ ಅತ್ಯಂತ ದೀರ್ಘ ವಿಮಾನ ಪ್ರಯಾಣ.

1 ವರ್ಷದ ಮಗು ಬ್ರಿಗ್ಸ್ ಡರಿಂಗ್ಟನ್

1 ವರ್ಷದ ಮಗು ಬ್ರಿಗ್ಸ್ ಡರಿಂಗ್ಟನ್

  • Share this:
ಟ್ರಾವೆಲ್ ಇನ್‍ಫ್ಲುಯೆನ್ಸರ್(Travel Influencer)‌ಗಳಲ್ಲಿ ಹೆಚ್ಚಿನವರು ಪ್ರವಾಸದ ಮಜದ ಜೊತೆಗೆ, ಒಳ್ಳೆಯ ಆದಾಯ(Income)ವನ್ನು ಕೂಡ ಗಳಿಸುತ್ತಾರೆ. ವಿಶ್ವ(World)ದ ಬಹಳಷ್ಟು ದೇಶಗಳ ಜನ ಟ್ರಾವೆಲ್ ಬ್ಲಾಗಿಂಗ್(Travel Blogging) ವೃತ್ತಿಗಳಲ್ಲಿ ತೊಡಗಿಕೊಂಡಿದ್ದಾರೆ. ಆದರೆ ಬ್ರಿಗ್ಸ್ ಡರಿಂಗ್ಟನ್ ಎಂಬ ಟ್ರಾವೆಲ್ ಇನ್‍ಫ್ಲುಯೆನ್ಸರ್ ಅವರೆಲ್ಲರಿಗಿಂತಲೂ ಭಿನ್ನ. ಏಕೆಂದರೆ ಆತನ ವಯಸ್ಸಿನ್ನೂ ಒಂದು ವರ್ಷ! ಅವನು ತನ್ನ ಹೆತ್ತವರ ಜೊತೆ ಯುಎಸ್‍ ಸುತ್ತಲೂ ಪ್ರಯಾಣಿಸುತ್ತಾ 1,000 ಡಾಲರ್ ಗಳಿಸುತ್ತಾನೆ. ಬಿಗ್ಸ್ ಈಗಾಗಲೇ 45 ಬಾರಿ ವಿಮಾನ ಪ್ರಯಾಣ ಮಾಡಿದ್ದಾನೆ.

45 ಸಲ ವಿಮಾನ ಪ್ರಯಾಣ ಮಾಡಿರುವ 1 ವರ್ಷದ ಮಗು, ಹಣವನ್ನೂ ಗಳಿಸುವ ಈ ಪುಟ್ಟ ಕಂದ ಯಾರು?

ಬ್ರಿಗ್ಸ್ ಯುಎಸ್‍ನ 16 ರಾಜ್ಯಗಳಿಗೆ ಭೇಟಿ ನೀಡಿದ್ದು, ಅಲಾಸ್ಕಾದ ಕರಡಿಗಳನ್ನು, ಯಲ್ಲೋ ಸ್ಟೋನ್ ನ್ಯಾಷನಲ್ ಪಾರ್ಕ್‍ನ ತೋಳಗಳನ್ನು , ಉಟಾದ ಸೂಕ್ಷ ಕಮಾನುಗಳನ್ನು ಮತ್ತು ಕ್ಯಾಲಿಫೋರ್ನಿಯಾದ ಕಡಲ ತೀರಗಳನ್ನು ನೋಡಿದ್ದಾನೆ.

3 ವಾರಗಳ ಮಗುವಾಗಿದ್ದಾಗಲೇ ಪ್ರವಾಸ ಆರಂಭ

2020ರ ಅಕ್ಟೋಬರ್ 14ರಂದು ಜನಿಸಿದ ಬ್ರಿಗ್ಸ್ ಕೇವಲ ಮೂರು ವಾರಗಳ ಮಗುವಾಗಿದ್ದಾಲೇ ಪ್ರವಾಸ ಹೋಗುವುದನ್ನು ಆರಂಭಿಸಿದನು. ಅವನು ಮೊದಲು ಪ್ರವಾಸ ಮಾಡಿದ್ದು ನೆಬ್ರಾಸ್ಕಾಗೆ. ಬಹುಶ: ಅವನು ವಿಶ್ವದ ಅತ್ಯಂತ ಕಿರಿಯ ಟ್ರಾವೆಲ್ ಇನ್‍ಫ್ಲುಯೆನ್ಸರ್.

ಮಗುವಿನ ತಾಯಿ ಹೇಳಿದ್ದೇನು?

“ನಾನು ಕೆಲವು ವರ್ಷಗಳಿಂದ ಪಾರ್ಟ್ ಟೈಮ್ ಟೂರಿಸ್ಟ್ಸ್ ಎಂಬ ಬ್ಲಾಗನ್ನು ನಿರ್ವಹಿಸುತ್ತಿದ್ದೆ, ಅದರಿಂದ ಜಗತ್ತಿನಾದ್ಯಂತ ಪ್ರಯಾಣಿಸುವುದಕ್ಕಾಗಿ ಹಣ ಪಡೆಯುತ್ತಿದ್ದೆ. ಆದರೆ 2020ರಲ್ಲಿ ನಾನು ಗರ್ಭಿಣಿಯಾದಾಗ, ನನ್ನ ವೃತ್ತಿಜೀವನ ಮುಗಿದೇ ಹೋಯಿತು ಎಂಬ ಆತಂಕಕ್ಕೆ ಒಳಗಾಗಿದ್ದೆ, ಏಕೆಂದರೆ ಮಗುವಿನ ಜೊತೆ ಅದನ್ನು ಮುಂದುವರೆಸುವುದು ಸಾಧ್ಯವೇ ಎಂಬುವುದು ನನಗೆ ತಿಳಿದಿರಲಿಲ್ಲ” ಎಂದು ಬ್ರಿಗ್ಸ್‌ ತಾಯಿ ಜೆಸ್ ಹೇಳಿಕೊಂಡಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಅನುಭವ ಹಂಚಿಕೆ

ಜೆಸ್ ಮತ್ತು ಆಕೆಯ ಪತಿ ಸ್ಟೀವ್‍ಗೆ ತಮ್ಮ ನವಜಾತ ಶಿಶುವಿನ ಜೊತೆ ಪ್ರಯಾಣಿಸುವ ಬಯಕೆಯಿತ್ತು. ಹಾಗಾಗಿ ಮಗುವಿನ ಜೊತೆ ಪ್ರಯಾಣಿಸುವ ಕುರಿತ ಮಾಹಿತಿ ನೀಡುವ ಸಾಮಾಜಿಕ ಮಾಧ್ಯಮ ಖಾತೆಗಳಿಗಾಗಿ ಹುಡುಕಾಡಿದರು, ಆದರೆ ಅವರಿಗೆ ಅಂತಹ ಒಂದೇ ಒಂದು ಖಾತೆಯೂ ಸಿಗಲಿಲ್ಲ. ಆಗ ಜೆಸ್ , ಮೊದಲ ಬಾರಿಗೆ ತಂದೆ ತಾಯಿ ಆಗುತ್ತಿರುವವರಿಗೆ ಸಹಾಯ ಆಗಲೆಂದು, ಮಗುವಿನೊಂದಿಗೆ ಪ್ರಯಾಣಿಸುವಾಗ ಕಲಿತ ಎಲ್ಲವನ್ನೂ ಹಂಚಿಕೊಳ್ಳಲು ಸಾಮಾಜಿಕ ಮಾಧ್ಯಮ ಖಾತೆಗಳನ್ನು ತೆರೆಯಲು ನಿರ್ಧರಿಸಿದರು.

ಬ್ರಿಗ್ಸ್ ಕೇವಲ 9 ವಾರಗಳ ಶಿಶುವಾಗಿದ್ದಾಗ, ಮೊದಲ ಬಾರಿಗೆ ವಿಮಾನ ಪ್ರಯಾಣ ಮಾಡಿದ್ದ. ಉಟಾದಿಂದ ಹವಾಯಿಗೆ 8 ಗಂಟೆಗಳ ಪ್ರಯಾಣ ಮಾಡಿದ್ದು, ಅವನ ಈ ವರೆಗಿನ ಅತ್ಯಂತ ದೀರ್ಘ ವಿಮಾನ ಪ್ರಯಾಣ.

ಇದನ್ನೂ ಓದಿ:Viral News: ಕೈ ಬಿಟ್ಟು ಹಿಂಬದಿ ಸೀಟ್​​ನಲ್ಲಿ ಕೂತು ಬೈಕ್​ ರೈಡಿಂಗ್​: ಟೆಸ್ಲಾಗೆ ಕಾಂಪಿಟೇಶನ್​ ಅಂದಿದ್ಯಾಕ್ಕೆ ನೆಟ್ಟಿಗರು?

ಮನೆಯೊಳಗೆ ಇರುವುದು ಕಷ್ಟ

“ಮನೆಯಿಂದ ಹೊರಗೆ ಹೋಗುವುದಕ್ಕಿಂತ ಮನೆಯೊಳಗೆ ಇರುವುದೇ ನನಗೆ ಹೆಚ್ಚು ಕಷ್ಟ ಎನಿಸತೊಡಗಿತ್ತು. ನನಗೆ ಹೆರಿಗೆಯ ನಂತರದ ಮಾನಸಿಕ ಏರಿಳಿತಗಳು ಕಂಡುಬಂದವು, ಮತ್ತು ಮನೆಯಿಂದ ಹೊರ ಬಂದಾಗ ನನಗೆ ಅಧಿಕ ಹಿತವೆನಿಸತೊಡಗಿತು ಹಾಗೂ ಅದರಲ್ಲಿ ಹೆಚ್ಚು ನನ್ನತನವಿತ್ತು. ಮತ್ತು ನಾನು ಅವನೊಂದಿಗೆ ಮಾಡಲು ಇಷ್ಟಪಡುವ ಕೆಲಸ ಹಂಚಿಕೊಳ್ಳುವುದು ಹೆಚ್ಚಿನ ಪುರಸ್ಕಾರದಂತಿದೆ” ಎನ್ನುತ್ತಾರೆ ಮಗುವಿನ ತಾಯಿ.

ಲಾಕ್​ಡೌನ್​ ನಡುವೆಯೂ ಪ್ರಯಾಣ

ಈ ಕುಟುಂಬ ಕೊರೋನಾ ವೈರಸ್ ಲಾಕ್‍ಡೌನ್ ನಡುವೆಯೂ ಪ್ರಯಾಣ ಮಾಡಿತ್ತು. ಅವರು ಹೆಚ್ಚಾಗಿ ರಸ್ತೆ ಪ್ರಯಾಣದ ಬಗ್ಗೆ ಗಮನ ಕೇಂದ್ರೀಕರಿಸಿದ್ದರು ಮತ್ತು ಸಾಮಾಜಿಕ ಅಂತರ ಕಾಪಾಡಿಕೊಳ್ಳಲಿಕ್ಕಾಗಿ ಸ್ಥಳೀಯ ಪ್ರವಾಸಗಳನ್ನೇ ಹೆಚ್ಚು ಆಯ್ಕೆ ಮಾಡಿಕೊಂಡರು.

“ವಿಮಾನ ನಿಲ್ದಾಣದಲ್ಲಿ, ಜನಜಂಗುಳಿ ಇರುವ ನಮ್ಮ ಗೇಟ್‍ಗೆ ಹೋಗುವ ಬದಲು, ಈಗಾಗಲೇ ಹೊರಟಿರುವ ಗೇಟ್‍ಗೆ ಹೋಗುತ್ತೇವೆ. ಅದು ಸಂಪೂರ್ಣ ಖಾಲಿ ಆಗಿರುತ್ತದೆ, ನಮಗೆ ಸಾಕಷ್ಟು ಜಾಗವಿರುತ್ತದೆ. ನಾವೆಲ್ಲವನ್ನೂ ಸೋಂಕು ರಹಿತಗೊಳಿಸಿದ್ದೇವೆ. ಮತ್ತು ಬ್ರಿಗ್ಸ್‌ನ ವಸ್ತುಗಳು ಕೆಳಗೆ ಬಿದ್ದರೆ ನಾವು ಅದನ್ನು ಅವನಿಗೆ ಮರಳಿ ಕೊಡುವುದಿಲ್ಲ” ಎನ್ನುತ್ತಾರೆ ಜೆಸ್.

ಸಣ್ಣ-ಪುಟ್ಟ ಹಾಗೂ ಗುಪ್ತ ಸ್ಥಳಗಳ ವೀಕ್ಷಣೆ

“ನಾವು ದೊಡ್ಡ ನಗರಗಳಿಗೆ ಪ್ರವಾಸ ಹೋಗುವುದನ್ನು ತಪ್ಪಿಸಿಕೊಳ್ಳುತ್ತೇವೆ, ಹಾಗಾಗಿ ನಾವು ನ್ಯೂಯಾರ್ಕ್‍ನಂತಹ ಸ್ಥಳಗಳನ್ನು ನೋಡಿಯೇ ಇಲ್ಲ. ಬದಲಾಗಿ, ನಾವು ಗುಪ್ತ ಸ್ಥಳಗಳನ್ನು ಹುಡುಕುವ ಮತ್ತು ಹೊರ ಸ್ಥಳಗಳಿಗೆ ಕೂಡ ಪ್ರಯಾಣ ಮಾಡುವುದರ ಕಡೆಗೆ ಹೆಚ್ಚು ಗಮನ ಹರಿಸಿದ್ದೇವೆ” ಎನ್ನುತ್ತಾರೆ ಅವರು.

ತನ್ನ ಮಗ ಯಾವ ಪ್ರವಾಸವನ್ನು ನೆನಪಿಟ್ಟುಕೊಳ್ಳದೇ ಇದ್ದರೂ ಕೂಡ, ವಿಭಿನ್ನ ಜನರು, ವಿಭಿನ್ನ ಸಂಸ್ಕೃತಿಗಳು, ವಿಭಿನ್ನ ವಾತಾರವರಣಗಳು ಮತ್ತು ವಿಭಿನ್ನ ಸ್ಥಳಗಳಿಗೆ ತೆರೆದುಕೊಳ್ಳುವುದು ಮಗುವಿನ ಬೆಳವಣಿಗೆಗೆ ನಿರ್ಣಾಯಕವಾಗಿದೆ ಎನ್ನುತ್ತಾರೆ ಜೆಸ್.

ಪ್ರವಾಸ ಕೈಬಿಡುವ ಯೋಚನೆ ಇಲ್ಲ

ಎಲ್ಲಾ ಪ್ರವಾಸಗಳು ಸಂಯೋಜಿಸಲ್ಪಟ್ಟವು, ಇಲ್ಲವೇ ಪ್ರವಾಸ ಬ್ಲಾಗಿಂಗ್‍ಗಾಗಿ ಹಣ ನೀಡಲ್ಪಟ್ಟಿರುತ್ತವೆ. ತಮಗೆ ಉಚಿತ ಡೈಪರ್ ಮತ್ತು ವೈಪ್ಸ್‌ಗಳನ್ನು ನೀಡುವ ಪ್ರಾಯೋಜಕರು ಕೂಡ ಇದ್ದಾರೆ ಎನ್ನುತ್ತಾರೆ ಜೆಸ್.ಬ್ರಿಗ್ಸ್‌ ಜೊತೆ ಪ್ರವಾಸ ಮಾಡುವುದನ್ನು ಬಿಟ್ಟು ಬಿಡುವ ಯೋಚನೆಯಂತೂ ಜೆಸ್‍ಗೆ ಇಲ್ಲ. ಈ ಕುಟುಂಬ ಮುಂದಿನ ಆರು ತಿಂಗಳಲ್ಲಿ ಯುರೋಪ್ ಪ್ರವಾಸ ಕೈಗೊಳ್ಳುವ ಯೋಜನೆಯಲ್ಲಿದೆ.
Published by:Latha CG
First published: