Motivation Story | ಅಂದು ನಯಾಪೈಸೆ ಇಲ್ಲದೇ ಪರದಾಟ!; 1 ವೆಬ್​ ಸೀರಿಸ್​ನಿಂದ ಬದಲಾಯ್ತು ಈ ನಟನ ಬದುಕು!

Geoffrey Giuliano: 2021 ಜನವರಿಯಲ್ಲಿ ಹರಸಾಹಸ ಪಟ್ಟು ಜೆಫ್ರಿ ಗಿಯುಲಿಯಾನೊ ತಮ್ಮ ದೇಶಕ್ಕೆ ಮರಳಿದ್ದರು. ಮೊದಲೇ ಕೆಲ ಸಿನಿಮಾಗಳಲ್ಲಿ ನಟಿಸಿದ್ದ ಜೆಫ್ರಿಗೆ ಅವಕಾಶಗಳು ಸಿಗುತ್ತಿರಲಿಲ್ಲ. ತಮ್ಮ ದೇಶಕ್ಕೆ ಮರಳಿದ ನಂತರ ಸ್ಕ್ವಿಡ್​ ಗೇಮ್​ ವೆಬ್​ ಸೀರಿಸ್​ನಲ್ಲಿ ಒಂದು ಪಾತ್ರದಲ್ಲಿ ನಟಿಸುವಂತೆ ಜೆಫ್ರಿಗೆ ಕರೆಬಂದಿತ್ತು.

Squid Game-Geoffrey Giuliano

Squid Game-Geoffrey Giuliano

  • Share this:
    OTT ಪ್ಲಾಟ್​ಫಾರ್ಮ್​ನಲ್ಲಿ ಹೆಚ್ಚು ಸಿನಿಮಾ, ವೆಬ್​ ಸೀರಿಸ್ ನೋಡುವವರಿಗೆ, ಕೆಲ ದಿನಗಳಿಂದ ನೆಟ್​ಫ್ಲಿಕ್ಸ್​ (Netflix)ನಲ್ಲಿ ಸಖತ್​ ಸೌಂಡ್​ ಮಾಡ್ತಿತ್ತಿರುವ ಸ್ಕ್ವಿಡ್​ ಗೇಮ್​ (Squid Game) ವೆಬ್​ ಸೀರಿಸ್​ ಬಗ್ಗೆ ಗೊತ್ತಿರುತ್ತೆ. ಕೊರಿಯನ್​ ಮೇಡ್ ( Korea Made)​ ಸ್ಕ್ವಿಡ್​ ಗೇಮ್​ ವೆಬ್​ ಸೀರಿಸ್​ ಬಿಡುಗಡೆಗೊಂಡು, ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಈ ಸೀರಿಸ್​ನಲ್ಲಿ ನಟಿಸಿರುವ ವಿಲನ್​ ಜೆಫ್ರಿ ಗಿಯುಲಿಯಾನೊ (Geoffrey Giuliano) ಎಂಬಾತನ ಬಗ್ಗೆ ನೀವು ತಿಳಿದುಕೊಂಡರೇ ಒಂದು ಕ್ಷಣ ದಾಂಗಾಗುವುದು ಗ್ಯಾರಂಟಿ. ಯಾಕೆಂದರೆ ಅದೃಷ್ಟ ಅನ್ನುವುದು ಹಾಗೆ ಒಂದು ಸಲ ಬಂದರೆ, ಬೇಡ ಬೇಡ ಎಂದರೂ ಸಾಕಷ್ಟ ಹಣ, ಹೆಸರು ತಂದುಕೊಡುತ್ತೆ. ಆದರೆ ಅಷ್ಟು ಸುಲಭವಾಗಿ ಅದೃಷ್ಟ ನಮ್ಮನ್ನ ಹುಡುಕಿಕೊಂಡು ಬರಲ್ಲ. ಈತನ ಜೀವನದಲ್ಲೂ ಇದೇ ಆಗಿದೆ. ಒಂದೇ ಒಂದು ವೆಬ್​ ಸೀರಿಸ್​ನಿಂದ ಈತನ ಬದುಕೆ ಬದಲಾಗಿದೆ. ನಯಾಪೈಸೆ ಇಲ್ಲದೇ ಒದ್ದಾಡಿದ್ದ ಈತ ಈಗ ಕೋಟಿ ಕೋಟಿ ಹಣಗಳಿಸಿದ್ದಾನೆ, ಜತೆಗೆ ಹೆಸರು ಕೂಡು ಸಂಪಾದಿಸಿದ್ದಾನೆ.

    ಭಾರತದಲ್ಲಿ ಲಾಕ್​ ಆಗಿದ್ದ ಜೆಫ್ರಿ ಗಿಯುಲಿಯಾನೊ !

    ಕಳೆದ ವರ್ಷ ಜೆಫ್ರಿ ಗಿಯುಲಿಯಾನೊ ಹಾಗೂ ಆತನ ಪುತ್ರ ಥೈಲ್ಯಾಂಡ್​​ನಿಂದ ಭಾರತಕ್ಕೆ ಬಂದಿದ್ದರು. ಆಪರೇಷನ್​ವೊಂದರ ಕೆಲಸದ ಹಿನ್ನೆಲೆ ಆತ ದೇಶಕ್ಕೆ ಬಂದಿದ್ದ. ಆಗ ದೇಶದಲ್ಲಿ ಕೊರೋನಾ ತನ್ನ ಆರ್ಭಟವನ್ನು ಶುರು ಮಾಡಿತ್ತು. ಅಂತಾರಾಷ್ಟ್ರೀಯ ವಿಮಾನ ಹಾರಾಟವನ್ನು ಕೇಂದ್ರ ಸರ್ಕಾರ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು. ಇತ್ತ ಜೈಪುರದ ಹೋಟೆಲ್​ವೊಂದರಲ್ಲಿ ಜೆಫ್ರಿ ಗಿಯುಲಿಯಾನೊ ಹಾಗೂ ಆತನ ಪುತ್ರ ವಾಸ್ತವ್ಯ ಹೂಡಿದ್ದರು. ದಿನ ಕಳೆದಂತೆಲ್ಲ ಅವರ ಬಳಿ ಇದ್ದ ಹಣವೆಲ್ಲ ಖಾಲಿಯಾಗಿತ್ತು. ಹೋಟೆಲ್ ರೂಂ ಬಿಲ್​ ಕೊಡಲು ಹಣ ವಿಲ್ಲದಂತ ಪರಿಸ್ಥಿತಿ ಎದುರಾಯಿತು. ಏಕಾಏಕಿ ಹೋಟೆಲ್​ ಖಾಲಿ ಮಾಡಿ ಅಪ್ಪ- ಮಗ ಇಬ್ಬರು ಹೊರ ಬಂದರು.

    ಬಾಳೆಹಣ್ಣು ತಿಂದು ಹೊಟ್ಟೆ ತುಂಬಿಸಿಕೊಂಡಿದ್ದ ನಟ

    ಇನ್ನೂ ಏಕಾಏಕಿ ಹೊರಗೆ ಬಂದ ನಟ ಜೆಫ್ರಿ ಗಿಯುಲಿಯಾನೊಗೆ ಏನು ಮಾಡಬೇಕೆಂದು ತೋಚಲಿಲ್ಲ. ಅತ್ತ ತಮ್ಮ ದೇಶಕ್ಕೆ ಹೋಗಲು ಆಗದೇ, ಇಲ್ಲೂ ಇರಲು ಆಗದೇ ಪರದಾಡಿದ್ದರು. ಒಂದು ಹೊತ್ತಿನ ಊಟಕ್ಕೂ ದುಡ್ಡಿಲ್ಲದೇ ಬೀದಿ ಬೀದಿ ಅಲೆದಾಡಿದ್ದರು. ಈ ಬಗ್ಗೆ ಆಗ ನಟ ವಿಡಿಯೋವೊಂದನ್ನ ಮಾಡಿದ್ದರು. ತಾನು ಅನುಭವಿಸುತ್ತಿರುವ ಕಷ್ಟಗಳನ್ನ ಹೇಳಿಕೊಂಡಿದ್ದರು. ಈ ವಿಡಿಯೋ ಆತ ಸ್ಟಾರ್ ಆದ ಬಳಿಕ ಸಖತ್​ ವೈರಲ್​ ಆಗುತ್ತಿದೆ. ವಿಡಿಯೋದಲ್ಲಿ ಜೆಫ್ರಿ ಗಿಯುಲಿಯಾನೊ ನಾವು ಭಾರತದಲ್ಲಿ ಸಿಲುಕಿಕೊಂಡಿದ್ದೇವೆ. ನಮ್ಮ ಬಳಿ ಇದ್ದ ಹಣವೆಲ್ಲ ಖಾಲಿಯಾಗಿದೆ. ಬಾಳೆಹಣ್ಣು ಹಾಗೂ ಉಳಿದ ಡ್ರೈ ಫ್ರೂಟ್​ ತಿಂದು ಕಾಲ ಕಳೆಯುತ್ತಿದ್ದೇವೆ. ವಾಸ್ತವ್ಯಕ್ಕಾಗಿ ಪ್ರತಿ ದಿನ ಆಶ್ರಮಗಳನ್ನ ಹುಡುಕಿಕೊಂಡು ಹೋಗುತ್ತಿದ್ದೇವೆ ಅಂತ ಹೇಳಿಕೊಂಡಿದ್ರು.

    Read Also: ನನ್ನೊಂದಿಗೆ ಒಂದು ರಾತ್ರಿ ಕಳೆದರೆ 43 ಲಕ್ಷ ಕೊಡ್ತೇನೆ! ಖ್ಯಾತ ಫುಟ್​ಬಾಲ್ ತಾರೆಯ ಹಣೆಬರಹ ಬಿಚ್ಚಿಟ್ಟ ಮಾಡೆಲ್



    2021 ಜನವರಿಯಲ್ಲಿ ಹರಸಾಹಸ ಪಟ್ಟು ಜೆಫ್ರಿ ಗಿಯುಲಿಯಾನೊ ತಮ್ಮ ದೇಶಕ್ಕೆ ಮರಳಿದ್ದರು. ಮೊದಲೇ ಕೆಲ ಸಿನಿಮಾಗಳಲ್ಲಿ ನಟಿಸಿದ್ದ ಜೆಫ್ರಿಗೆ ಅವಕಾಶಗಳು ಸಿಗುತ್ತಿರಲಿಲ್ಲ. ತಮ್ಮ ದೇಶಕ್ಕೆ ಮರಳಿದ ನಂತರ ಸ್ಕ್ವಿಡ್​ ಗೇಮ್​ ವೆಬ್​ ಸೀರಿಸ್​ನಲ್ಲಿ ಒಂದು ಪಾತ್ರದಲ್ಲಿ ನಟಿಸುವಂತೆ ಜೆಫ್ರಿಗೆ ಕರೆಬಂದಿತ್ತು. ಅಲ್ಲಿಂದ ಅವರ ಬದುಕೆ ಬದಲಾಗಿ ಹೋಗಿದೆ. ಪೆನಿನ್​ಸುಲಾ (Peninsula) ಎಂಬ ಸಿನಿಮಾದಲ್ಲಿ ಜೆಫ್ರಿ ನಟಿಸಿದ್ದನ್ನ ನೋಡಿದ್ದ ಸ್ಕ್ವಿಡ್​ ಗೇಮ್​ ನಿರ್ದೇಶಕ ಹ್ವಾಂಗ್ ಡಾಂಗ್-ಹ್ಯೂಕ್ (Hwang Dong-hyuk) ಜೆಫ್ರಿಗೆ ಕರೆ ಮಾಡಿ ಆಫರ್​ ಮಾಡಿದ್ದರು. ಸ್ವ್ಕಿಡ್​ ಗೇಮ್​ ವೆಬ್​ ಸೀರಿಸ್​ ರಿಲೀಸ್ ಬಳಿಕ ಜೆಫ್ರಿ ಬದುಕು ಬದಲಾಗಿದೆ. ಈ ಪಾತ್ರಕ್ಕಾಗಿ ಅವರಿಗೆ ದೊಡ್ಡ ಮೊತ್ತದ ಸಂಭಾವನೆ ಕೂಡ ಬಂದಿದೆ.

    ಅಂದು ಭಾರತದಲ್ಲಿ ಸಿಲುಕಿ ನಯಾಪೈಸೆಗೂ ಒದ್ದಾಡಿದ್ದ ಜೆಫ್ರಿ, ಈಗ ವಿಶ್ವದಾದ್ಯಂತ ಸಖತ್​ ಫೇಮಸ್​ ಆಗಿದ್ದಾರೆ.

    ವರದಿ - ವಾಸುದೇವ್​.ಎಂ
    Published by:Harshith AS
    First published: