Mango: ಒಂದೇ ಮರದಲ್ಲಿ 121 ವೆರೈಟಿ ಮಾವಿನ ಹಣ್ಣು, ನಿಮ್ಮ ತೋಟದಲ್ಲೂ ಇದು ಸಾಧ್ಯ: ತೋಟಗಾರಿಕಾ ತಜ್ಞರು !

ಉತ್ತರ ಪ್ರದೇಶದ ಸಹರನ್‌ಪುರದಲ್ಲಿರುವಂತಹ ತೋಟಗಾರಿಕೆ ತಜ್ಞರು ಒಂದೇ ಮಾವಿನ ಮರದಲ್ಲಿ ಸುಮಾರು 121 ಪ್ರಭೇದದ ಮಾವಿನ ಹಣ್ಣುಗಳನ್ನು ಬೆಳೆದು ಎಲ್ಲರನ್ನು ಬೆರಗುಗೊಳಿಸುವುದಲ್ಲದೆ ದೇಶಾದ್ಯಂತ ಸುದ್ದಿಯಾಗುವಂತೆ ಮಾಡಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಒಂದು ಮಾವಿನ ಮರದಲ್ಲಿ ಒಂದು ಪ್ರಭೇದದ ಮಾವಿನ ಹಣ್ಣು ಬೆಳೆಯುವುದು ನಾವೆಲ್ಲಾ ಕೇಳಿರುವ ಸಂಗತಿ. ಆದರೆ ಉತ್ತರ ಪ್ರದೇಶದ ಸಹರನ್‌ಪುರದಲ್ಲಿರುವಂತಹ ತೋಟಗಾರಿಕೆ ತಜ್ಞರು ಒಂದೇ ಮಾವಿನ ಮರದಲ್ಲಿ ಸುಮಾರು 121 ಪ್ರಭೇದದ ಮಾವಿನ ಹಣ್ಣುಗಳನ್ನು ಬೆಳೆದು ಎಲ್ಲರನ್ನು ಬೆರಗುಗೊಳಿಸುವುದಲ್ಲದೆ ದೇಶಾದ್ಯಂತ ಸುದ್ದಿಯಾಗುವಂತೆ ಮಾಡಿದ್ದಾರೆ. ಇಂದು ಸಾಮಾಜಿಕ ಮಾಧ್ಯಮಗಳಲ್ಲಿ ಬಿಸಿ ಕೇಕ್‌ನಂತೆ ಈ ವಿಶೇಷ ಮರದ ಚಿತ್ರಗಳು ಹರಿದಾಡುತ್ತಿವೆ. ಸುಮಾರು 15 ವರ್ಷಗಳ ಹಳೆಯ ಮಾವಿನ ಮರವು ಸಹರನಪುರ್ ಕಂಪನಿ ಭಾಗ್ ಪ್ರದೇಶದಲ್ಲಿ ಬೆಳೆದಿದ್ದು, ಈ ಪ್ರದೇಶವು ಮಾವಿನ ಹಣ್ಣುಗಳು ಬೆಳೆಯುವಂತಹ ಪ್ರದೇಶ ಎಂದು ಹೆಸರುವಾಸಿಯಾಗಿದೆ. ಸುಮಾರು ಐದು ವರ್ಷಗಳ ಹಿಂದೆಯೇ ತೋಟಗಾರಿಕೆ ತಜ್ಞರು ಬೇರೆ ಬೇರೆ ಪ್ರಭೇದದ ಹಾಗೂ ಬೇರೆ ಬೇರೆ ವಿವಿಧ ರುಚಿಯುಳ್ಳಂತಹ ಮಾವಿನ ಹಣ್ಣುಗಳನ್ನು ಹೇಗೆ ಬೆಳೆಯಬೇಕು ಎಂಬುದರ ಬಗ್ಗೆ ಅನೇಕ ಸಂಶೋಧನೆಗಳು ನಡೆಸಿದ್ದರು. ಸಾಮಾಜಿಕ ಮಾಧ್ಯಮಗಳಲ್ಲಿ ಈಗಾಗಲೇ ಒಂದೇ ಮಾವಿನ ಮರದಲ್ಲಿ 121 ಮಾವಿನ ಪ್ರಭೇದಗಳನ್ನು ಬೆಳೆದ ಛಾಯಾಚಿತ್ರಗಳು ವೈರಲ್ ಆಗಿ ಹರಿದಾಡುತ್ತಿದ್ದು ನೆಟ್ಟಿಗರು ಬೆರಗುಗೊಳಿಸುವಂತೆ ಮಾಡಿದೆ.

ಈ ಮಾವಿನ ಮರವನ್ನು ಸಸಿಯಾಗಿರುವುದರಿಂದಲೇ ಅತ್ಯಂತ ಜಾಗರೂಕತೆಯಿಂದ ನೋಡಿಕೊಳ್ಳಲಾಗಿದ್ದು, ಇದನ್ನು ನೋಡಿಕೊಳ್ಳಲು ನರ್ಸರಿ ಇನ್ಚಾರ್ಜ್ ಅನ್ನು ಪ್ರತ್ಯೇಖವಾಗಿ ನೇಮಿಸಲಾಗಿದ್ದು 15 ವರ್ಷಗಳಿಂದ ವಿಶೇಷವಾದ ಕಾಳಜಿ ವಹಿಸಿ ಬೆಳೆಸಲಾಗಿದೆ ಎಂದು ತೋಟಗಾರಿಕೆ ತಜ್ಞರು ಹೇಳುತ್ತಾರೆ. ಹದಿನೈದು ವರ್ಷಗಳ ನಂತರ ಈಗ 121 ಪ್ರಭೇದದ ಮಾವಿನ ಹಣ್ಣುಗಳು ಈ ಮರದಲ್ಲಿ ಕಾಣಲು ಸಿಗುತ್ತಿರುವುದು ನಿಜಕ್ಕೂ ತೋಟಗಾರಿಕೆ ಕ್ಷೇತ್ರದಲ್ಲಿಯೇ ಅಚ್ಚರಿ ಮೂಡಿಸುವಂತಹ ಸಂಗಾತಿಯಾಗಿದ್ದು, ಅನೇಕ ಸಂಶೋಧಕರು ಹೇಗೆ ಒಂದೇ ಮಾವಿನ ಮರದಲ್ಲಿ ಇಷ್ಟೊಂದು ಪ್ರಭೇದಗಳು ಬೆಳೆದಿರುವುದರ ಬಗ್ಗೆ ಅಧ್ಯಯನ ನಡೆಸಿದ್ದಾರೆ.

Man made forest: ಬಂಜರು ಭೂಮಿ ಕೊಂಡು ಕಾಡು ಬೆಳೆದ ಉದ್ಯಮಿ, ಶಿವಮೊಗ್ಗದಲ್ಲಿ ಉಷಾಕಿರಣ !ಇದನ್ನೂ ಓದಿ: 

ಸುಮಾರು 10 ವರ್ಷದ ಮರವಿದ್ದಾಗಲೇ ಇದರ ಬಗ್ಗೆ ಅಧ್ಯಯನಗಳು ಶುರುವಾಗಿದ್ದು, ಈಗ ಮರದಲ್ಲಿರುವ ಪ್ರತಿಯೊಂದು ಕೊಂಬೆಗಳಲ್ಲೂ ಸಹ ವಿವಿಧ ಪ್ರಭೇದದ ಮಾವಿನ ಹಣ್ಣುಗಳನ್ನು ನಾವು ಕಾಣಬಹುದಾಗಿದೆ. ಈ ವಿಶೇಷವಾದಂತ ಮಾವಿನ ಮರದಲ್ಲಿ ನಾವು ದುಸ್ಸೇಹರಿ, ಲಾಂಗ್ರ, ಚೌಸ, ರಾಂಕೇಲಾ, ಆಮ್ರಪಾಲಿ, ಸಹರನ್ಪುರ ಅರುಣ್, ಸಹರನ್ಪುರ ವರುಣ್ , ಸಹರನ್ಪುರ ಸೌರಬ್, ಸಹರನ್ಪುರ ಗೌರವ್‌, ಸಹರನ್ಪುರ ರಾಜೀವ್,

ಸುಮಾರು ೧೦ ವರ್ಷದ ಮರವಿದ್ದಾಗಲೇ ಇದರ ಬಗ್ಗೆ ಅಧ್ಯಯನಗಳು ಶುರುವಾಗಿದ್ದು, ಈಗ ಮರದಲ್ಲಿರುವ ಪ್ರತಿಯೊಂದು ಕೊಂಬೆಗಳಲ್ಲೂ ಸಹ ವಿವಿಧ ಪ್ರಭೇದದ ಮಾವಿನ ಹಣ್ಣುಗಳನ್ನು ನಾವು ಕಾಣಬಹುದಾಗಿದೆ. ಈ ವಿಶೇಷವಾದಂತ ಮಾವಿನ ಮರದಲ್ಲಿ ನಾವು ದುಸ್ಸೇಹರಿ, ಲಾಂಗ್ರ, ಚೌಸ, ರಾಂಕೇಲಾ, ಅಮ್ರಾಪಾಲಿ, ಸಹರನ್ಪುರ್ ಅರುಣ್, ಸಹರನ್ಪುರ್ ವರುಣ್ , ಸಹರನ್ಪುರ್ ಸೌರಬ್, ಸಹರನ್ಪುರ್ ಗೌರವ್, ಸಹರನ್ಪುರ್ ರಾಜೀವ್, ಟಾಮಿ ಅಟ್ ಕಿಂಗ್ಸ್, ಪುಸಾ ಸೂರ್ಯ, ಲಕ್ನೋ ಸಫೇದಾ, ಸೆನ್ಸೇಷನ್, ರತಾವಲ್, ಕಲ್ಮಿ ಮಾಲ್ದಾ ಮಾವಿನಹಣ್ಣು, ಬಾಂಬೆ, ಸ್ಮಿತ್, ಮ್ಯಾಂಗಿಫೆರಾ ಜಲೋನಿಯ, ಗೋಲಾ ಬುಲಂದ್ ಶಹರ್, ಲಾರಾಂಕು, ಎಲ್ ಆರ್ ಸ್ಪೆಷಲ್, ಅಲಾಂಪುರ್ ಬೇನಿಷ ಮತ್ತು ಅಸೋಜಿಯೋ ಡಿಯೋಬ್ಯಾನ್ಡ್ ಪ್ರಭೇದಗಳ ಮಾವಿನ ಹಣ್ಣುಗಳನ್ನು ವಿವಿಧ ಕೊಂಬೆಗಳಲ್ಲಿ ಕಾಣಬಹುದಾಗಿದೆ.

ಇದನ್ನೂ ಓದಿ: ಅಣ್ಣ ತಮ್ಮ ಸೇರಿ 50 ವೆರೈಟಿ ಮಾವು ಬೆಳೆದಿದ್ದಾರೆ, ಇವರ ಬಳಿ ಇರುವ ಮಾವಿನ ಬಗೆಗಳನ್ನು ನೋಡಿದ್ರೇ ಆಶ್ಚರ್ಯವಾಗುತ್ತೆ !

ಈ ವಿಶೇಷವಾದ ಮಾವಿನ ಮರವು ತನ್ನ ಕೊಂಬೆಗಳಲ್ಲಿ ಅನೇಕ ಪ್ರಭೇದದ ಹಣ್ಣುಗಳನ್ನು ಹೊಂದಿದ್ದು, ಅನೇಕ ಮಾವಿನ ಮರವನ್ನೇ ನಂಬಿ ತಮ್ಮ ಗದ್ದೆಗಳಲ್ಲಿ ಅನೇಕ ರೀತಿಯ ಮಾವಿನ ಮರಗಳನ್ನು ಹಾಕಿರುವವರಿಗೆ ಇದೊಂದು ಮಾದರಿ ಮರವೆಂದೇ ಹೇಳಬಹುದಾಗಿದೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.
Published by:Soumya KN
First published: