Post Office scheme: ಅಂಚೆ ಕಚೇರಿಯ ಈ ಯೋಜನೆಯಲ್ಲಿ ಒಮ್ಮೆ ಹೂಡಿಕೆ ಮಾಡಿದ್ರೆ ಪ್ರತಿ ತಿಂಗಳು ಆದಾಯ ಬರುತ್ತೆ

guarantees monthly income: ಈ ಸ್ಕೀಮ್‌ನ ಮೆಚ್ಯೂರಿಟಿ ಅವಧಿ 5 ವರ್ಷಗಳು ಮತ್ತು ನೀವು ನಿಮ್ಮ ಐದು ವರ್ಷಗಳನ್ನು ಪೂರ್ಣಗೊಳಿಸಿದ ನಂತರ ಮಾಸಿಕ ಆದಾಯವನ್ನು ಪಡೆಯಲು ಪ್ರಾರಂಭಿಸುತ್ತೀರಿ. ಇದು ಸರ್ಕಾರಿ ಬೆಂಬಲಿತ ಯೋಜನೆಯಾಗಿರುವುದರಿಂದ ನಿಮ್ಮ ಹಣದ ಬಗ್ಗೆ ಚಿಂತಿಸುವ ಅಗತ್ಯವಿಲ್ಲ.

ಪೋಸ್ಟ್​​ ಆಫೀಸ್​​ ಬ್ಯಾಂಕ್​

ಪೋಸ್ಟ್​​ ಆಫೀಸ್​​ ಬ್ಯಾಂಕ್​

  • Share this:
superhit Post Office scheme: ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಸುರಕ್ಷಿತ ಹೂಡಿಕೆ ಮೂಲಕ ದುಪ್ಪಟ್ಟಾಗಿಸುವ, ನಿರಂತರವಾಗಿ ಬಡ್ಡಿ-ಲಾಭ ಬರುವಂತೆ ಹೂಡಿಕೆ ಮಾಡುವ ಕನಸು ಪ್ರತಿಯೊಬ್ಬರಲ್ಲೂ ಇರುತ್ತೆ. ಹಣ ಹಣವನ್ನು ದುಡಿಯಬೇಕು ಅನ್ನೋದು ಎಲ್ಲರ ಆಸೆ. ಅದಕ್ಕಾಗಿ ಸರಿಯಾದ ಯೋಜನೆಯಲ್ಲಿ ಹಣವನ್ನು ತೊಡಗಿಸುವುದು ಮುಖ್ಯ. ಸುರಕ್ಷಿತ ಹಣ ಹೂಡಿಕೆ ಎಂದೊಡನೆ ಭಾರತೀಯರಿಗೆ ನೆನಪಾಗೋದು ಫೋಸ್ಟ್​​ ಆಫೀಸ್​ ಸ್ಕೀಮ್​​. ಅಂಚೆ ಕಚೇರಿ ಯೋಜನೆಗಳಲ್ಲಿ ಖಾತರಿ ರಿಟರ್ನ್ಸ್​​​ ಇರುವುದರಿಂದ ಸೇಫ್​ ಆಯ್ಕೆ ಆಗಿದೆ. ಅಂತಹ ಒಂದು ಸುರಕ್ಷಿತ ಯೋಜನೆ ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ (Post Office MIS). ಮಾರುಕಟ್ಟೆಯಲ್ಲಿ ಉಳಿತಾಯದ ಎಲ್ಲ ಯೋಜನೆಗಳ ನಡುವೆ ಇದು ಭಾರೀ ಹಿಟ್ ಆಗಿದೆ. ಈ ಸ್ಕೀಮ್‌ನ ಮೆಚ್ಯೂರಿಟಿ ಅವಧಿ 5 ವರ್ಷಗಳು ಮತ್ತು ನೀವು ನಿಮ್ಮ ಐದು ವರ್ಷಗಳನ್ನು ಪೂರ್ಣಗೊಳಿಸಿದ ನಂತರ ಮಾಸಿಕ ಆದಾಯವನ್ನು ಪಡೆಯಲು ಪ್ರಾರಂಭಿಸುತ್ತೀರಿ. 

ಯೋಜನೆಯನ್ನು ಆರಂಭಿಸುವುದು ಮಾಡುವುದು ಹೇಗೆ? 

ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆಯನ್ನು ಹೊಂದಿರಬೇಕು. ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆಗಾಗಿ ಮೊದಲು ಅರ್ಜಿ ಅನ್ನು ಭರ್ತಿ ಮಾಡಬೇಕು. ಅರ್ಜಿಯನ್ನು ಅಧಿಕೃತ ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಲು ಹತ್ತಿರದ ಅಂಚೆ ಕಚೇರಿಗೆ ಭೇಟಿ ನೀಡಬೇಕು. ನಿಮ್ಮ ಆಧಾರ್ ಕಾರ್ಡ್ ಅಥವಾ ಪಾಸ್‌ಪೋರ್ಟ್ ಅಥವಾ ವೋಟರ್ ಕಾರ್ಡ್ ಅಥವಾ ಚಾಲನಾ ಪರವಾನಗಿಯನ್ನು ನಿಮ್ಮ ಐಡಿ ಪ್ರೂಫ್ ಆಗಿ ನೀಡಬೇಕು. ಜೊತೆಗೆ 2 ಪಾಸ್‌ಪೋರ್ಟ್ ಫೋಟೋಗಳನ್ನು ನೀಡಬೇಕಾಗುತ್ತದೆ. ಅರ್ಜಿದಾರರು ನಾಮಿನಿಯ ಹೆಸರನ್ನು ಸಹ ನಮೂದಿಸಬೇಕು. ಈ ಖಾತೆಯನ್ನು ತೆರೆಯಲು ಕನಿಷ್ಟ ಬ್ಯಾಲೆನ್ಸ್ 1,000 ರೂ. ಆಗಿದ್ದು ಅದನ್ನು ನೀವು ನಗದು ಅಥವಾ ಚೆಕ್ ಮೂಲಕ ಪಾವತಿಸಬಹುದು.

ಯೋಜನೆಯ ಮುಕ್ತಾಯ ಅವಧಿ ಐದು ವರ್ಷವಾಗಿದ್ದು, ಒಮ್ಮೆ ನೀವು ಅದನ್ನು ಪೂರ್ಣಗೊಳಿಸಿದರೆ, ಮುಕ್ತಾಯ ಅವಧಿಯನ್ನು ಮತ್ತೆ ಮತ್ತೆ ಐದೈದು ವರ್ಷಗಳಿಗೆ ವಿಸ್ತರಿಸಬಹುದು. ಇದು ಸರ್ಕಾರಿ ಬೆಂಬಲಿತ ಯೋಜನೆಯಾಗಿರುವುದರಿಂದ ನಿಮ್ಮ ಹಣದ ಬಗ್ಗೆ ಚಿಂತಿಸುವ ಅಗತ್ಯವಿಲ್ಲ.

ಬೇಕಾದಾಗ ಹಣ ಹಿಂತೆಗೆಯಬಹುದು..

ಯಾರಿಗಾದರೂ ಹಣದ ಅಗತ್ಯವಿದ್ದರೆ, ಹಣವನ್ನು ಹಿಂತೆಗೆದುಕೊಳ್ಳಬೇಕಾದರೆ ತೆಗೆದುಕೊಳ್ಳಬಹುದು ಆದರೆ ಒಂದು ವರ್ಷದ ನಂತರ ವಾಪಸಾತಿ ಮಾಡಬೇಕಾಗುತ್ತದೆ. ನಿಯಮಗಳ ಪ್ರಕಾರ ಒಂದು ವರ್ಷದಿಂದ ಮೂರು ವರ್ಷಗಳವರೆಗೆ ಹಣವನ್ನು ಹಿಂಪಡೆದರೆ, ನಂತರ ಠೇವಣಿ ಮೊತ್ತದ 2 ಪ್ರತಿಶತವನ್ನು ಮರುಪಾವತಿಸಲಾಗುತ್ತದೆ. ಖಾತೆ ತೆರೆದ 3 ವರ್ಷಗಳ ನಂತರ ನೀವು ಯಾವುದೇ ಸಮಯದಲ್ಲಿ ಹಣವನ್ನು ಹಿಂಪಡೆದರೆ, ನಂತರ ನಿಮ್ಮ ಠೇವಣಿಯ 1 ಪ್ರತಿಶತವನ್ನು ಮರುಪಾವತಿ ಮಾಡಲಾಗುತ್ತದೆ.

ಜಂಟಿ ಖಾತೆ ಮಾಡಬಹುದು

ಮಾಸಿಕ ಆದಾಯ ಯೋಜನೆಯು ವಾರ್ಷಿಕವಾಗಿ ಶೇ 6.6  ಬಡ್ಡಿಯನ್ನು ನೀಡುತ್ತಿದೆ.  MIS ಜಂಟಿ ಖಾತೆ ಸೌಲಭ್ಯವನ್ನು ಸಹ ಒದಗಿಸುತ್ತದೆ. ಅಲ್ಲಿ ಇಬ್ಬರಿಂದ ಮೂವರು ಒಟ್ಟಿಗೆ ಖಾತೆ ತೆರೆಯಬಹುದು. ಈ ಖಾತೆಗೆ ಬದಲಾಗಿ ಪಡೆದ ಆದಾಯವನ್ನು ಪ್ರತಿಯೊಬ್ಬ ಸದಸ್ಯರಿಗೂ ಸಮಾನವಾಗಿ ನೀಡಲಾಗುತ್ತದೆ. ನೀವು ಯಾವುದೇ ಸಮಯದಲ್ಲಿ ಜಂಟಿ ಖಾತೆಯನ್ನು ಒಂದೇ ಖಾತೆಗೆ ಪರಿವರ್ತಿಸಬಹುದು. ಒಂದೇ ಖಾತೆಯನ್ನು ಜಂಟಿ ಖಾತೆಯಾಗಿಯೂ ಪರಿವರ್ತಿಸಬಹುದು.

ಇದನ್ನೂ ಓದಿ: Atal Pension Yojana: ದಿನಕ್ಕೆ ಕೇವಲ 7 ರೂ. ಉಳಿತಾಯ ಮಾಡಿ ತಿಂಗಳಿಗೆ 5,000 ರೂ. ಪಿಂಚಣಿ ಪಡೆಯಿರಿ

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by:Kavya V
First published: