ವಿಶ್ವದ ನಾಲ್ಕನೇ ಶ್ರೀಮಂತ ವ್ಯಕ್ತಿ ಮತ್ತು ಟೆಕ್ ದೈತ್ಯ ಮೈಕ್ರೋಸಾಫ್ಟ್‌ನ ಸಹ-ಸಂಸ್ಥಾಪಕರಾದ ಬಿಲ್‌ಗೇಟ್ಸ್ (Bill Gates) ಹಿಟ್ಟು ಕಲೆಸಿ, ಲಟ್ಟಣಿಗೆ ಹಿಡಿದು ರೊಟ್ಟಿ(Making Roti) ಮಾಡಿದ್ದಾರೆ. ಭಾರತೀಯರ ರುಚಿಯಾದ ಪಾಕವಿಧಾನ ರೊಟ್ಟಿಯನ್ನು ಹಾಗೋ ಹೀಗೋ ಮಾಡಿ ರುಚಿ ನೋಡಿದ್ದಾರೆ. ಬಿಲ್‌ಗೇಟ್ಸ್ ರೊಟ್ಟಿ ಮಾಡಿದ ವಿಡಿಯೋ (Video) ಸಾಮಾಜಿಕ ಜಾಲತಾಣದಲ್ಲಿ (Social Media) ಫುಲ್ ವೈರಲ್ ಆಗಿದೆ. ವಿಶ್ವದ ಶ್ರೀಮಂತ ವ್ಯಕ್ತಿ, ಖ್ಯಾತ ಉದ್ಯಮಿ ಹೇಗೆ ರೊಟ್ಟಿ ಮಾಡಿದ್ದಾರೆ ಎಂದು ನೆಟ್ಟಿಗರು ಕುತೂಹಲದಿಂದ ವೈರಲ್ ವಿಡಿಯೋ (Viral Video) ವೀಕ್ಷಿಸಿದ್ದಾರೆ.
ಬಿಲ್‌ಗೇಟ್ಸ್ ರೊಟ್ಟಿ ಮಾಡೋದನ್ನು ಪ್ರಸಿದ್ಧ ಬಾಣಸಿಗ ಈಟನ್ ಬರ್ನಾಥ್ ಹೇಳಿಕೊಟ್ಟಿದ್ದು, ಈ ವಿಡಿಯೋವನ್ನು ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಗೇಟ್ಸ್ ಪ್ರಸಿದ್ಧ ಬಾಣಸಿಗ ಈಟನ್ ಬರ್ನಾಥ್‌ರಿಂದ ಅಡುಗೆ ಕ್ಲಾಸ್
ಇತ್ತೀಚೆಗೆ ಬಿಹಾರ ಪ್ರವಾಸದಿಂದ ಹಿಂದಿರುಗಿದ ಪ್ರಸಿದ್ಧ ಬಾಣಸಿಗ ಈಟನ್ ಬರ್ನಾಥ್ ಗೇಟ್ಸ್‌ಗೆ ರೊಟ್ಟಿ ಮಾಡೋದನ್ನು ಹೇಳಿ ಕೊಡುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು.
"ನಾವಿಬ್ಬರೂ ಒಟ್ಟಿಗೆ ಭಾರತೀಯ ಜನಪ್ರಿಯ ತಿಂಡಿ ರೊಟ್ಟಿಯನ್ನು ತಯಾರಿಸಿದ್ದೇವೆ. ನಾನು ಇತ್ತೀಚೆಗೆ ಭಾರತದ ಬಿಹಾರಕ್ಕೆ ಹೋಗಿದ್ದೆ. ಅಲ್ಲಿ ಗೋಧಿ ಬೆಳೆಯುವ ರೈತರನ್ನು ಭೇಟಿ ಮಾಡಿದೆ.
ಹಾಗೆ ಉತ್ತಮವಾಗಿ ರೊಟ್ಟಿ ಮಾಡುವ "Didi Ki Rasoi" ಕ್ಯಾಂಟೀನ್‌ಗೆ ಭೇಟಿ ನೀಡಿದ್ದೆ" ಎಂದು ಪೋಸ್ಟ್ ಮಾಡುವ ಮೂಲಕ ಬರ್ನಾಥ್ ಈ ವಿಡಿಯೋ ಹಂಚಿಕೊಂಡಿದ್ದಾರೆ. ವಿಡಿಯೋ ಈಗಾಗ್ಲೇ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದು, ಕೇವಲ ಒಂದೇ ಒಂದು ದಿನದಲ್ಲಿ 1.3 ಲಕ್ಷ ವೀಕ್ಷಣೆಗಳನ್ನು ಗಳಿಸಿದೆ.
ಲಟ್ಟಣಿಗೆ ಹಿಡಿದು ರೊಟ್ಟಿ ಮಾಡಿದ ಗೇಟ್ಸ್
ಬಿಲ್‌ಗೇಟ್ಸ್ ಮತ್ತು ಬಾಣಸಿಗ ಈಟನ್ ಬರ್ನಾಥ್ ಇಬ್ಬರೂ ಒಟ್ಟಿಗೆ ಮಾತನಾಡುತ್ತಾ ರೊಟ್ಟಿ ತಯಾರಿಸಲು ಮುಂದಾದರು. ಹಿಟ್ಟು, ನೀರು, ಉಪ್ಪು ಹಾಕಿ ಹಿಟ್ಟನ್ನು ರೊಟ್ಟಿ ಹದಕ್ಕೆ ಬಿಲ್‌ಗೇಟ್ಸ್ ಬೆರೆಸುತ್ತಿರುವುದನ್ನು ನೋಡಬಹುದು.
ನಂತರ ಬರ್ನಾಥ್ ಲಟ್ಟಣಿಗೆ ಹಿಡಿದು ರೊಟ್ಟಿ ಮಾಡುವುದನ್ನು ತೋರಿಸಿಕೊಟ್ಟರು. ಪಾಪ ಕಂಪ್ಯೂಟರ್, ವ್ಯವಹಾರ ಅಂತಾನೇ ಯಾವಾಗಲೂ ನಿರತವಾಗಿರುವ ಬಿಲ್‌ಗೇಟ್ಸ್‌ಗೆ ರೊಟ್ಟಿ ಒರೆಯುವುದು ರಾಕೆಟ್ ಸೈನ್ಸ್ ಆಗಿತ್ತು. ಎಷ್ಟೇ ಪ್ರಯತ್ನಿಸಿ ಒರೆದರೂ ರೊಟ್ಟಿ ಅಮೀಬಾದಂತೆ ಚಿತ್ರ-ವಿಚಿತ್ರ ಆಕಾರಗಳನ್ನು ಪಡೆದುಕೊಂಡಿತು.
.@BillGates and I had a blast making Indian Roti together. I just got back from Bihar, India where I met wheat farmers whose yields have been increased thanks to new early sowing technologies and women from "Didi Ki Rasoi" canteens who shared their expertise in making Roti. pic.twitter.com/CAb86CgjR3
— Eitan Bernath (@EitanBernath) February 2, 2023
ಸೂಪ್ ಮಾತ್ರ ಬಿಸಿ ಮಾಡಿಕೊಳ್ತಾರಂತೆ ಗೇಟ್ಸ್
ಹೀಗೆ ಅಡುಗೆ ಮಾಡುತ್ತಾ ಪರಸ್ಪರ ಮಾತನಾಡುತ್ತಿರುವಾಗ ಬರ್ನಾಥ್ ಗೇಟ್ಸ್ ಅವರಿಗೆ ನೀವು ಕೊನೆಯ ಬಾರಿಗೆ ಅಡುಗೆ ಮಾಡಿದ್ದು ಯಾವಾಗ ಎಂದು ಕೇಳಿದರು. ಇದಕ್ಕೆ ಮಜವಾಗಿ ಉತ್ತರಿಸಿದ ಗೇಟ್ಸ್ ನಾನು ಅಡುಗೆ ಮಾಡದೇ ತುಂಬಾ ದಿನಗಳಾಯಿತು. ಸೂಪ್ ಅನ್ನು ಮಾತ್ರ ಬಿಸಿ ಮಾಡಿಕೊಳ್ಳುತ್ತೇನೆ ಎಂದರು.
ಬಿಲ್‌ಗೇಟ್ಸ್ ಕಾಲೆಳೆದ ನೆಟ್ಟಿಗರು
ಇನ್ನೂ ಬಿಲ್‌ಗೇಟ್ಸ್ ಈ ಪ್ರಯತ್ನಕ್ಕೆ ಹಲವರು ಮೆಚ್ಚುಗೆ ಸೂಚಿಸಿದರೆ, ಇನ್ನೂ ಕೆಲ ಬಳಕೆದಾರರು ಬಿಲ್‌ಗೇಟ್ಸ್ ಹೀಗೆ ರೊಟ್ಟಿ ಮಾಡಬಾರದು ಎಂಬುದನ್ನು ತೋರಿಸಿದ್ದಾರೆ ಎಂದು ಕಾಲೆಳೆದಿದ್ದಾರೆ. ಇನ್ನೋರ್ವ ಬಳಕೆದಾರ ರೊಟ್ಟಿಯನ್ನು ದುಂಡಾಗಿ ಮಾಡೋದು ಹೇಗೆ ಅಂತಾ ಸಲಹೆ ನೀಡಿದ್ದಾರೆ.
ಇದನ್ನೂ ಓದಿ: Viral Menu Card: ಜೇಬು ಖಾಲಿಯಾಗಿಸುವ ಚಿಕನ್, ಮಟನ್ ಬಿರಿಯಾನಿ ಬೆಲೆ ಆಗ ಎಷ್ಟಿತ್ತು? ವೈರಲ್ ಆಯ್ತು 2001ರ ರೆಸ್ಟೋರೆಂಟ್ ಬಿಲ್
ಇನ್ನೂ ಭಾರತದ ಬಗ್ಗೆ ವಿಶೇಷವಾಗಿ ಗೌರವ ಹೊಂದಿರುವ ಗೇಟ್ಸ್ ಕಳೆದ ವರ್ಷ ಫೆಬ್ರವರಿಯಲ್ಲಿ, ಕೋವಿಡ್-19 ಲಸಿಕೆಗಳ ಅಭಿವೃದ್ಧಿ, ಉತ್ಪಾದನೆ ಮತ್ತು ವಿತರಣೆಗಾಗಿ ಭಾರತವನ್ನು ಹೊಗಳಿದ್ದರು ಮತ್ತು ದೇಶದ ಲಸಿಕೆಯನ್ನು ಪ್ರಭಾವಶಾಲಿಯಾಗಿದೆ ಎಂದು ಹೇಳಿದ್ದರು.
ಕೋವಿಡ್ ವಿರುದ್ಧ ವ್ಯಾಕ್ಸಿನೇಷನ್ ಎಣಿಕೆ 200 ಕೋಟಿ ದಾಟಿದ ಸಂದರ್ಭದಲ್ಲಿ ಗೇಟ್ಸ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಭಿನಂದಿಸಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ